`ಮೊಗಲರು ಭಾರತದಲ್ಲಿ ಬಂದು ದೇವಸ್ಥಾನಗಳನ್ನು ಧ್ವಂಸಗೊಳಿಸಿದ್ದಾರೆ ಎನ್ನುವುದು ತಪ್ಪಾದ ಮಾಹಿತಿ ! – ನಟ ನಸೀರುದ್ದೀನ ಶಾಹ

ಮುಂಬಯಿ – ಮೊಗಲರ ಇತಿಹಾಸವನ್ನು ತಿಳಿದುಕೊಳ್ಳುವುದು ಮಹತ್ವದ್ದಾಗಿದೆ. ಮೊಗಲರು ಭಾರತವನ್ನು ತಮ್ಮ ಮಾತೃಭೂಮಿಯನ್ನು ಮಾಡಿಕೊಳ್ಳಲು ಬಂದಿದ್ದರು. ಅವರು ಭಾರತವನ್ನು ಲೂಟಿ ಮಾಡಲು ಬಂದಿರಲಿಲ್ಲ. ಮೊಗಲರು ಭಾರತದಲ್ಲಿ ಲೂಟಿ ಮಾಡಲು ಬಂದರು ಮತ್ತು ಅವರು ದೇವಸ್ಥಾನವನ್ನು ಧ್ವಂಸಗೊಳಿಸಿದರು ಎನ್ನುವ ಮಾಹಿತಿ ತಪ್ಪಾಗಿದೆ ಎಂದು ನಟ ನಸೀರುದ್ದೀನ ಶಾಹ ಇವರು `ಬಾಲಿವುಡ್ ಹಂಗಾಮಾ’ ಸಂಕೇತಸ್ಥಳಕ್ಕೆ ನೀಡಿರುವ ಸಂದರ್ಶನದಲ್ಲಿ ಬುರುಡೆ ಬಿಟ್ಟಿದ್ದಾರೆ. ಶಾಹ ಇವರು ತಮ್ಮ ಮಾತನ್ನು ಮುಂದುವರೆಸಿ, ‘`ಎಲ್ಲ ಮುಸಲ್ಮಾನರನ್ನು ಒಂದೇ ತಕ್ಕಡಿಯಲ್ಲಿ ಅಳೆಯುವ ಸಧ್ಯದ ಸರಕಾರದ ಪ್ರಯತ್ನವಾಗಿದೆ. `ಹುಮಾಯೂನನಿಗೆ ಅಫೀಮ್ ನ ಚಟ ಇತ್ತು. ಅವನು ಒಂದು ದಿನ ಮೆಟ್ಟಿಲಿನಿಂದ ಕೆಳಗೆ ಬಿದ್ದನು. ಅಕ್ಬರ ಹೀಗೆ ಮಾಡಿದನು’ ಎಂದು ಹೇಳಲಾಗುತ್ತದೆ.

ಔರಂಗಜೇಬ ಈ ಎಲ್ಲರಿಗಿಂತ ದೊಡ್ಡ ಖಳನಾಯಕನಾಗಿದ್ದನು. ಆದರೆ ಮೊಗಲರ ವಿಷಯದಲ್ಲಿ ಮಾತನಾಡುವವರು ಮೊದಲು ಇಲ್ಲಿದ್ದ ಇತರೆ ಮನೆತನಗಳ ವಿಷಯದಲ್ಲಿ ಮಾತನಾಡುವುದಿಲ್ಲ. ಮೊಗಲರ ರಾಜಮನೆತನದ ಮೊದಲೂ ಇಲ್ಲಿ ತುರ್ಕಿಯವರ ಅನೇಕ ಮನೆತನಗಳಿದ್ದವು. ಎಲ್ಲ ಮೊಗಲರನ್ನು ಕೀಳಾಗಿ ಪರಿಗಣಿಸುವುದು ಸಧ್ಯದ ಸರಕಾರಕ್ಕೆ ಸುಲಭವಾಗಿದೆ. `ಮೊಗಲರು ದೇಶವನ್ನು ಲೂಟಿಮಾಡಿದರು, ಅವರು ದೇವಸ್ಥಾನಗಳನ್ನು ಧ್ವಂಸಗೊಳಿಸಿದರು. ಅವರಿಗೆ ಅನೇಕ ಮಡದಿಯರಿದ್ದರು’ ಹೀಗೆ ಅನೇಕ ದಾವೆಗಳನ್ನು ವ್ಯಕ್ತಪಡಿಸಲಾಗುತ್ತಿದೆ. ಪರಿವರ್ತನೆಯ ಸಿದ್ಧಾಂತ ಪಠ್ಯಪುಸ್ತಕದಿಂದ ತೆಗೆದು ಹಾಕಲಾಗಿದೆ. ನನಗೆ ಅನ್ನಿಸುವುದೇನೆಂದರೆ, ಐನ್ ಸ್ಟೈನ್ ವಿಜ್ಞಾನದ ಪಾಠವನ್ನೂ ಪುಸ್ತಕದಿಂದ ತೆಗೆದುಹಾಕಬಹುದು ಮತ್ತು ಎಲ್ಲ ವೈಜ್ಞಾನಿಕ ಶೋಧಗಳು ವೇದದಲ್ಲಿವೆ, ಪಾಶ್ಚಿಮಾತ್ಯ ದೇಶ ಈ ಎಲ್ಲ ಸಂಶೋಧನೆಗಳ ಶ್ರೇಯಸ್ಸನ್ನು ತೆಗೆದುಕೊಳ್ಳುತ್ತಿದೆ ಎಂದು ಇಸ್ರೋ ಪ್ರಮುಖರು ಹೇಳುತ್ತಿರುವುದು ಕಂಡು ಬರಲಿದೆ’. ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಮೊಗಲರ ಈ ವಂಶಜರನ್ನು ಮೊಗಲರು ಯಾವ ದೇಶದಿಂದ ಭಾರತಕ್ಕೆ ಬಂದರೋ, ಆ ದೇಶಕ್ಕೆ ಸರಕಾರ ಕಳುಹಿಸಿಕೊಡಬೇಕು ಎಂದು ಯಾರಾದರೂ ಕೋರಿದರೆ ಆಶ್ಚರ್ಯ ಪಡಬಾರದು !
  • ಇಂತಹ ಮೊಗಲಪ್ರೇಮಿ ನಾಳೆ `ಮೊಗಲರು ಭಾರತದಲ್ಲಿ ಅನೇಕ ದೇವಸ್ಥಾನಗಳನ್ನು ಕಟ್ಟಿದರು, ಆದರೆ ಹಿಂದೂಗಳು ಅಸಂಖ್ಯಾತ ಮಶೀದಿಗಳನ್ನು ಕೆಡವಿದರು’, ಇಂತಹ ಸುಳ್ಳು ಇತಿಹಾಸವನ್ನು ದೃಢವಾಗಿ ಮಂಡಿಸಲು ಹಿಂದೆ-ಮುಂದೆ ನೋಡುವುದಿಲ್ಲ ! ಇಂತಹ ಮೊಗಲ ಪ್ರೇಮಿಗಳ ಚಲನಚಿತ್ರಗಳ ಮೇಲೆ ಹಿಂದೂಗಳು ಬಹಿಷ್ಕಾರ ಹಾಕಿದರೆ ಆಶ್ಚರ್ಯ ಪಡಬಾರದು !