ಪೊಲೀಸರಿಂದ ಮಕ್ಕಳ ಬಿಡುಗಡೆ !
ನಾಶಿಕ – ಬಿಹಾರ ರಾಜ್ಯದ ಪೂರ್ಣಿಯಾ ಜಿಲ್ಲೆಯಿಂದ ಮಹಾರಾಷ್ಟ್ರದ ಮುಸಲ್ಮಾನ ಮಕ್ಕಳ ಕಳ್ಳ ಸಾಗಾಣಿಕೆ ಮಾಡುವವರ ಜಾಲವನ್ನು ಪೊಲೀಸರು ಬಯಲುಗೊಳಿಸಿದ್ದಾರೆ. ಕಳ್ಳ ಸಾಗಾಣಿಕೆ ಬಯಲಾಗಬಾರದೆಂದು ಈ ಮಕ್ಕಳಿಗೆ ಮದರಸಾದ ವಸ್ತ್ರವನ್ನು ಹಾಕಿ ಅವರ ಕಳ್ಳ ಸಾಗಾಣಿಕೆ ಮಾಡಲಾಗುತ್ತಿತ್ತು. ಈ ಚಿಕ್ಕ ಮಕ್ಕಳಿಗೆ ಪುಣೆ ಅಥವಾ ಸಾಂಗಲಿಯ ಮದರಸಾಕ್ಕೆ ಒಯ್ಯುವ ಷಡ್ಯಂತ್ರವಿತ್ತೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಪೊಲೀಸರು ಆಳವಾಗಿ ಈ ಪ್ರಕರಣದ ವಿಚಾರಣೆಯನ್ನು ಮಾಡುತ್ತಿದ್ದಾರೆ. ಈ 59 ಮಕ್ಕಳನ್ನು ಪೊಲೀಸರು ಬಿಡುಗಡೆಗೊಳಿಸಿದ್ದು, ಅವರ ಗುರುತು ಕಂಡು ಹಿಡಿಯುವ ಕಾರ್ಯ ಪ್ರಾರಂಭವಾಗಿದೆ. ಈ ರೀತಿ ಕಳ್ಳ ಸಾಗಾಣಿಕೆಯ ದೊಡ್ಡ ಜಾಲ ಬಹಿರಂಗವಾಗಲಿದೆ.
Nashik Child Trafficking : बिहारमधून (Bihar) महाराष्ट्रात (Maharashtra) लहान मुलांच्या संशयीत (Child Trafficking) तस्करीचं एक मोठं प्रकरण उघडकीस आलं आहे.https://t.co/EKHJJwnAgS#Nashik #NashikNews
— ABP माझा (@abpmajhatv) May 31, 2023
ಜಳಗಾಂವ ಮತ್ತು ಮನಮಾಡ ರೈಲು ನಿಲ್ದಾಣದಲ್ಲಿ ಈ ಕಾರ್ಯಾಚರಣೆ ಮಾಡಲಾಯಿತು. ದಾನಾಪುರ-ಪುಣೆ ಎಕ್ಸಪ್ರೆಸ್ ನಲ್ಲಿ ಈ ಮಕ್ಕಳು ಕಂಡು ಬಂದರು. ಈ ಪ್ರಕರಣದಲ್ಲಿ 4 ಕಳ್ಳ ಸಾಗಾಣಿಕೆದಾರರನ್ನು ವಶಕ್ಕೆ ಪಡೆಯಲಾಗಿದೆ. ಕಳ್ಳಸಾಗಾಣಿಕೆದಾರರ ಮೇಲೆ ವಿವಿಧ ಕಲಂಗಳ ಅಡಿಯಲ್ಲಿ ದೂರನ್ನು ದಾಖಲಿಸಲಾಗಿದೆ. ವಿಚಾರಣೆಯಲ್ಲಿ ಆರೋಪಿಗಳು ಪೂರ್ಣಿಯಾ ಜಿಲ್ಲೆಯಿಂದ ಸಾಂಗಲಿಯಲ್ಲಿ ಈ ಮಕ್ಕಳ ಕಳ್ಳಸಾಗಾಣಿಕೆಯಾಗುತ್ತಿದೆಯೆಂದು ಮಾಹಿತಿಯನ್ನು ನೀಡಿದರು. ಯಾರಿಗೂ ಸಂಶಯ ಬರಬಾರದೆಂದು, ಮಕ್ಕಳಿಗೆ ಮದರಸಾದ ಬಟ್ಟೆಗಳನ್ನು ಹಾಕಲಾಗಿತ್ತು. 29 ಮಕ್ಕಳನ್ನು ಜಳಗಾವಗೆ ಹಾಗೂ ಮನಮಾಡಕ್ಕೆ ಬಿಡುಗಡೆ ಹೊಂದಿದ 30 ಮಕ್ಕಳನ್ನು ನಾಶಿಕಗೆ ಕಳುಹಿಸಲಾಗಿದೆ.