ಬರೇಲಿ (ಉತ್ತರಪ್ರದೇಶ) ಇಲ್ಲಿ ಆನಂದ ಅಲಿಯಾಸ್ ಮಹಮ್ಮದ ಆಲಿಮ್ ನಿಂದ ಹಿಂದೂ ಹುಡುಗಿಯ ವಿರುದ್ಧ ಲವ್ ಜಿಹಾದ

ತಾನು ಹಿಂದೂ ಎಂದು ಹೇಳಿ ಸಂತ್ರಸ್ತೆಗೆ ಮೋಸ

ಬರೇಲಿ (ಉತ್ತರಪ್ರದೇಶ) – ಇಲ್ಲಿ ಕಂಪ್ಯೂಟರ್ ಕಲಿಯಲು ಬಂದ ಓರ್ವ ಹಿಂದೂ ಹುಡುಗಿಯನ್ನು `ಆನಂದ‘ ಹೆಸರಿನ ಪರಿಚಯಿಸಿಕೊಂಡಿದ್ದ ಮಹಮ್ಮದ್ ಆಲಿಮ್ ಲವ್ ಜಿಹಾದ ಷಡ್ಯಂತ್ರ್ಯದಲ್ಲಿ ಸಿಲುಕಿಸಿದನು. ತನ್ನ ಹೆಸರು ಆನಂದ ಎಂದು ಹೇಳಿ, ಹಾಗೆಯೇ ಕೈಗೆ ದೇವರ ದಾರವನ್ನು ಕಟ್ಟಿಕೊಂಡು ಅವನು ಹುಡುಗಿಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿದನು. ಅವಳನ್ನು ದೇವಸ್ಥಾನಕ್ಕೆ ಕರೆದೊಯ್ದು ಅವಳ ಬೈತಲೆಯಲ್ಲಿ ಕುಂಕುಮವನ್ನು ತುಂಬಿದನು. ತದನಂತರ ಅವನು ಅವಳೊಂದಿಗೆ ಶಾರೀರಿಕ ಸಂಬಂಧವನ್ನು ಬೆಳೆಸಿದನು. ಅದನ್ನು ಅವನು ಚಿತ್ರೀಕರಿಸಿ ಮುಂದೆ ಅವಳನ್ನು ನಿರಂತರವಾಗಿ ಬೆದರಿಕೆ ಹಾಕಿ, ಅವಳ ಮೇಲೆ ಅನೇಕ ಬಾರಿ ಬಲಾತ್ಕಾರ ಮಾಡಿದನು. ಸಂತ್ರಸ್ತೆ ಗರ್ಭಿಣಿಯಾದಾಗ ಅವನ ಮನೆಗೆ ಹೋದಾಗ ಅವಳಿಗೆ ಆತ ಆನಂದ ಆಗಿಲ್ಲ ಮಹಮ್ಮದ ಆಲಿಮ್ ಎಂದು ತಿಳಿಯಿತು. ತದನಂತರ ಮಹಮ್ಮದನು ಅವಳಿಗೆ ಗರ್ಭಪಾತ ಮಾಡಿಸಿಕೊಳ್ಳುವಂತೆ ಮಾಡಿದನು ಮತ್ತು ಅವಳ ಮೇಲೆ ಮತಾಂತರಗೊಳ್ಳುವಂತೆ ಒತ್ತಡ ಹೇರಿದನು. ಹಾಗೂ ನಡೆದಿರುವ ಘಟನೆಯನ್ನು ಯಾರಿಗಾದರೂ ತಿಳಿಸಿದರೆ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದನು. ಇದೆಲ್ಲವನ್ನೂ ನೋಡಿ ಬೇಸರಗೊಂಡ ಸಂತ್ರಸ್ತೆಯು ಪೊಲೀಸರಲ್ಲಿ ದೂರು ದಾಖಲಿಸಿದಳು. ತದನಂತರ ಪೊಲೀಸರು ಅವನ ವಿರುದ್ಧ ದೂರನ್ನು ದಾಖಲಿಸಿಕೊಂಡು ತನಿಖೆಯನ್ನು ಪ್ರಾರಂಭಿಸಿದ್ದಾರೆ.

ಸಂಪಾದಕರ ನಿಲುವು

ಉತ್ತರಪ್ರದೇಶ ಸರಕಾರ ಲವ್ ಜಿಹಾದ ವಿರುದ್ಧ ಕಾನೂನು ರಚಿಸಿದ್ದರೂ, ಅಲ್ಲಿಯ ಮತಾಂಧ ಮುಸಲ್ಮಾನರಿಗೆ ಆ ಕಾನೂನಿನ ಬಗ್ಗೆ ಭಯವಿಲ್ಲ ಎನ್ನುವುದು ಮೇಲಿಂದ ಮೇಲೆ ನಡೆಯುತ್ತಿರುವ ಇಂತಹ ಘಟನೆಗಳಿಂದ ಕಂಡು ಬರುತ್ತದೆ. ಈ ಕಾರಣದಿಂದ ಈಗ ಇಂತಹ ಘಟನೆಗಳಿಗೆ ರಾಜ್ಯ ಸರಕಾರವು ಗಲ್ಲು ಶಿಕ್ಷೆಯಂತಹ ಕಠಿಣ ಶಿಕ್ಷೆಯ ವಿಚಾರ ಮಾಡುವುದು ಆವಶ್ಯಕವಾಗಿದೆ !