‘೨೦೦೩ ರಲ್ಲಿ ನಾನು ನಾಶಿಕದಿಂದ ಸನಾತನ ಸಂಸ್ಥೆಯ ಮೀರಜ ಆಶ್ರಮಕ್ಕೆ ಹೋಗಿದ್ದಾಗ ಪರಾತ್ಪರ ಗುರು ಡಾ. ಆಠವಲೆ ಯವರು ಗೋವಾದಿಂದ ಮೀರಜ ಆಶ್ರಮಕ್ಕೆ ಬಂದಿದ್ದರು. ಪರಾತ್ಪರ ಗುರು ಡಾಕ್ಟರರಿಗೆ ತಮ್ಮ ಹುಟ್ಟು ಹಬ್ಬವನ್ನು ಆಚರಿಸಲು ಇಷ್ಟವಾಗುವುದಿಲ್ಲ. ಅದರ ಬದಲು ‘ಸಾಧಕರು ಸಾಧನೆಗೆ ಸಮಯ ನೀಡಬೇಕು’, ಎಂದು ಅವರಿಗೆ ಅನಿಸುತ್ತಿತ್ತು. ಅದೇ ದಿನಗಳಲ್ಲಿ ಒಮ್ಮೆ ಪರಾತ್ಪರ ಗುರು ಡಾಕ್ಟರರ ತಿಥಿಗನುಸಾರ ಹುಟ್ಟುಹಬ್ಬವಿತ್ತು; ಆದುದರಿಂದ ಒಬ್ಬ ಸಾಧಕನು ಒಂದು ಕಾಗದದಲ್ಲಿ ಪರಾತ್ಪರ ಗುರು ಡಾಕ್ಟರರ ಬಗ್ಗೆ ಕವಿತೆಯನ್ನು ಬರೆದನು ಮತ್ತು ಅವನು ಅದನ್ನು ಯಾರಿಗೂ ತಿಳಿಯದಂತೆ ಅವರ ಕೋಣೆಯ ಹೊರಗಿನ ಕೊಂಡಿಗೆ ಕೆಂಪು ರಿಬ್ಬನ್‌ನಲ್ಲಿ ಸುತ್ತಿಟ್ಟನು. ‘ಕಾವ್ಯ ರಚಿಸಲು ಸಮಯ ನೀಡಿದೆನೆಂದು ಪರಾತ್ಪರ ಗುರು ಡಾಕ್ಟರರು ಕೋಪಿಸಬಹುದು’, ಎಂದು ಅವನು ಕವಿತೆಯ ಕೆಳಗೆ ತನ್ನ ಹೆಸರನ್ನು ಬರೆದಿರಲಿಲ್ಲ.
ಆ ದಿನ ಮಧ್ಯಾಹ್ನ ಆಶ್ರಮದಲ್ಲಿ ‘ಸ್ವಭಾವದೋಷ ಮತ್ತು ಅಹಂ’ ಇವುಗಳ ನಿರ್ಮೂಲನೆಗಾಗಿ ಒಂದು ಸತ್ಸಂಗವಿತ್ತು. ಪರಾತ್ಪರ ಗುರು ಡಾಕ್ಟರರು ಆ ಕವಿತೆಯ ಕಾಗದವನ್ನು ಸತ್ಸಂಗದಲ್ಲಿ ತಂದರು ಮತ್ತು ಅವರು ಸಾಧಕರನ್ನು ಉದ್ದೇಶಿಸಿ, “ಈ ಕವಿತೆಯನ್ನು ಯಾರು ಬರೆದರು ? ಕೆಳಗೆ ಅವರ ಹೆಸರು ಇಲ್ಲ. ಈ ಕವಿತೆಯಲ್ಲಿ ವ್ಯಾಕರಣದ ಅನೇಕ ತಪ್ಪುಗಳಿವೆ. ಸೇವೆಯನ್ನು ಸರಿಯಾಗಿ ಮತ್ತು ಪರಿಪೂರ್ಣವಾಗಿ ಮಾಡಿದಾಗಲೇ ಸಾಧಕನ ಸಾಧನೆಯಾಗುತ್ತದೆ” ಎಂದರು. ಇದೆಲ್ಲ ಆದನಂತರ ಕವಿತೆಯನ್ನು ರಚಿಸಿದ ಸಾಧಕನಿಗೆ ಕೆಡುಕೆನಿಸಬಾರದೆಂದು “ಕವಿತೆಯಲ್ಲಿ ಅನೇಕ ತಪ್ಪುಗಳಿದ್ದರೂ, ಸಾಧಕನು ಕವಿತೆಯನ್ನು ಚೆನ್ನಾಗಿ ರಚಿಸಿದ್ದಾನೆ.” ಎಂದು ಹೇಳಿದರು.
ಇಲ್ಲಿ ಪರಾತ್ಪರ ಗುರು ಡಾಕ್ಟರರಿಗೆ ಆ ಸಾಧಕನ ಜೊತೆಗೆ ಎಲ್ಲ ಸಾಧಕರಿಗೆ ಸಾಧನೆಯಲ್ಲಿ ಸಹಾಯ ಮಾಡುವ ಉದ್ದೇಶವಿತ್ತು. ಅವರು ಆ ಸಾಧಕನಿಗೆ ತಪ್ಪುಗಳನ್ನು ತತ್ತ್ವನಿಷ್ಠೆಯಿಂದ ಹೇಳಿ ಅವನ ಗುಣವನ್ನು ಸಹ ಪ್ರಶಂಸಿಸಿದರು. ಇದರಿಂದ ಪರಾತ್ಪರ ಗುರು ಡಾಕ್ಟರರಲ್ಲಿನ ‘ತತ್ತ್ವನಿಷ್ಠೆ’ ಮತ್ತು ಪ್ರೇಮಭಾವ’ ಈ ಗುಣಗಳ ಸಮನ್ವಯವಿರುವುದು ಕಂಡುಬರುತ್ತದೆ.’
– ಶ್ರೀ. ರಾಮ ಹೊನಪ, ಸನಾತನ ಆಶ್ರಮ, ರಾಮನಾಥಿ, ಗೋವಾ.