ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ೮೧ ನೇ ಜನ್ಮೋತ್ಸವದ ನಿಮಿತ್ತ…
‘ಶ್ರೀವಿಷ್ಣುವಿನ ದ್ವಾಪರ ಯುಗದಲ್ಲಿನ ಅವತಾರ ಶ್ರೀಕೃಷ್ಣ ಮತ್ತು ಕಲಿಯುಗದಲ್ಲಿನ ಅವತಾರ ‘ಶ್ರೀ ಜಯಂತ ಇವರಲ್ಲಿನ ಹೋಲಿಕೆಗಳು ಗುರುದೇವರ (ಪರಾತ್ಪರ ಗುರು ಡಾ. ಆಠವಲೆಯವರ) ಕೃಪೆಯಿಂದ ನನ್ನ ಗಮನಕ್ಕೆ ಬಂದವು. ಅವುಗಳನ್ನು ಇಲ್ಲಿ ಕೊಡುತ್ತಿದ್ದೇನೆ.
೧. ಪೃಥ್ವಿಯಲ್ಲಿ ದುರಾಚಾರ ಮತ್ತು ರಜ-ತಮಗಳು ಹೆಚ್ಚಾಗಿರುವುದರಿಂದ ಶ್ರೀವಿಷ್ಣುವು ದ್ವಾಪರಯುಗದಲ್ಲಿ ‘ಶ್ರೀಕೃಷ್ಣ ಮತ್ತು ಕಲಿಯುಗದಲ್ಲಿ ‘ಶ್ರೀ ಜಯಂತ ಅವತಾರವನ್ನು ತಾಳುವುದು : ದ್ವಾಪರಯುಗದಲ್ಲಿ ಪೃಥ್ವಿಯಲ್ಲಿ ದುರಾಚಾರ ಮತ್ತು ರಜ-ತಮಗಳು ಹೆಚ್ಚಾದಾಗ ಶ್ರೀವಿಷ್ಣುವು ತನ್ನ ಎಂಟನೇ ಅವತಾರ, ಅಂದರೆ ಶ್ರೀಕೃಷ್ಣಾವತಾರವನ್ನು ಧರಿಸಿದನು. ಅದೇ ರೀತಿ ಈಗ ಕಲಿಯುಗದಲ್ಲಿ ಕಲಿಯ ಪ್ರಭಾವದಿಂದ ಸಮಾಜದಲ್ಲಿ ದುರಾಚಾರ ಮತ್ತು ರಜ-ತಮ ಇವುಗಳು ಬಹಳ ಹೆಚ್ಚಾಗಿವೆ. ಇದರಿಂದ ಈಶ್ವರನೊಂದಿಗೆ ಅನುಸಂಧಾನ ಸಾಧಿಸಲು ಕಠಿಣವಾಗಿದೆ. ಇಂತಹ ಸಮಯದಲ್ಲಿ ‘ಸಂಪೂರ್ಣ ಸಮಾಜವು ಈಶ್ವರನೊಂದಿಗೆ ಏಕರೂಪವಾಗಲು ಸಾಧ್ಯವಾಗಿ ಮೋಕ್ಷಪ್ರಾಪ್ತಿಯಾಗಬೇಕು, ಎಂದು ಮತ್ತು ಧರ್ಮಸಂಸ್ಥಾಪನೆ ಗಾಗಿ ಶ್ರೀವಿಷ್ಣುವು ‘ಶ್ರೀ ಜಯಂತ ಅವತಾರವನ್ನು ತಾಳಿದ್ದಾನೆ.
೨. ದ್ವಾಪರಯುಗದಲ್ಲಿ ಶ್ರೀಕೃಷ್ಣ ಮತ್ತು ಕಲಿಯುಗದಲ್ಲಿ ಶ್ರೀ ಜಯಂತ, ಅಂದರೆ ಪರಾತ್ಪರ ಗುರು ಡಾ. ಆಠವಲೆಯವರ ಸಹವಾಸ ಲಭಿಸಲು ಋಷಿಮುನಿಗಳು ಮತ್ತು ಪುಣ್ಯಾತ್ಮರು ಪೃಥ್ವಿಯ ಮೇಲೆ ಜನ್ಮ ತಾಳುವುದು : ದ್ವಾಪರಯುಗದಲ್ಲಿ ಶ್ರೀಕೃಷ್ಣನು ಜನಿಸಿದ ನಂತರ ಅನೇಕ ಋಷಿಮುನಿಗಳು ಮತ್ತು ಪುಣ್ಯಾತ್ಮರು ಕೃಷ್ಣನ ಸಹವಾಸದ ಲಾಭ ಪಡೆಯಲು ಹಾಗೂ ಅನುಭವಿಸಲು ಪೃಥ್ವಿಯ ಮೇಲೆ ಗೋಪ-ಗೋಪಿಯರ ರೂಪದಲ್ಲಿ ಜನ್ಮ ಪಡೆದರು. ಅದೇ ರೀತಿ ಶ್ರೀ ಜಯಂತ ಅವತಾರದಲ್ಲಿ ಪ.ಪೂ. ಗುರುದೇವರ (ಪರಾತ್ಪರ ಗುರು ಡಾ. ಆಠವಲೆಯವರ) ಸಹವಾಸದಲ್ಲಿದ್ದು ಅವರ ಛತ್ರದಡಿಯಲ್ಲಿ ಸಾಧನೆ ಮತ್ತು ಸೇವೆಯನ್ನು ಮಾಡಲು ವಿವಿಧ ಪುಣ್ಯಾತ್ಮಗಳು ಹಾಗೂ ದೈವೀ ಜೀವಗಳು ಮನುಷ್ಯರೂಪದಲ್ಲಿ ಪೃಥ್ವಿಯಲ್ಲಿ ಜನ್ಮ ಪಡೆದಿವೆ.
೩. ದ್ವಾಪರಯುಗದಲ್ಲಿ ಶ್ರೀಕೃಷ್ಣ ಮತ್ತು ಕಲಿಯುಗದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ವಿಷ್ಣುಲೋಕದ ಅನುಭೂತಿಯನ್ನು ಪಡೆಯುವ ಅವಕಾಶವನ್ನು ನೀಡುವುದು : ಶ್ರೀಕೃಷ್ಣನು ಪೃಥ್ವಿಯ ಮೇಲೆ ವೃಂದಾವನ, ಗೋಕುಲ, ಮಥುರಾ ಮತ್ತು ದ್ವಾರಕಾದಂತಹ ವಿವಿಧ ಸ್ಥಳಗಳಲ್ಲಿ ತನ್ನ ಲೀಲೆಯನ್ನು ಮಾಡಿ ಅಲ್ಲಿನ ಜನರಿಗೆ ವಿಷ್ಣುಲೋಕದ ಅನುಭವವನ್ನು ನೀಡಿದನು. ಅದೇ ರೀತಿ ಪರಮ ಪೂಜ್ಯರು ಜಗತ್ತಿನಾದ್ಯಂತ ವಿವಿಧ ಆಶ್ರಮಗಳನ್ನು ಸ್ಥಾಪಿಸಿ ಎಲ್ಲ ಸಾಧಕರಿಗೆ ಭೂವೈಕುಂಠವಾಗಿರುವ ಆಶ್ರಮಗಳಲ್ಲಿದ್ದು ವಿಷ್ಣುಲೋಕದ ಅನುಭೂತಿಯನ್ನು ಪಡೆಯುವ ಅವಕಾಶವನ್ನು ನೀಡಿದ್ದಾರೆ.
೪. ಶ್ರೀಕೃಷ್ಣ ಮತ್ತು ಪರಾತ್ಪರ ಗುರು ಡಾ. ಆಠವಲೆಯವರ ಸಂಪರ್ಕಕ್ಕೆ ಬರುವ ವ್ಯಕ್ತಿಗಳ ಹಾಗೂ ವಸ್ತುಗಳ ಉದ್ಧಾರವಾಗುವುದು : ಶ್ರೀವಿಷ್ಣುವು ತನ್ನ ಕೃಷ್ಣಾವತಾರದಲ್ಲಿ ಅನೇಕ ಲೀಲೆಗಳನ್ನು ಮಾಡಿದನು. ಶ್ರೀಕೃಷ್ಣನು ತನ್ನ ಸಂಪರ್ಕದಲ್ಲಿ ಬಂದ ಎಲ್ಲರ ವಿವಿಧ ಲೀಲೆಗಳ ಮಾಧ್ಯಮದಿಂದ ಉದ್ಧರಿಸಿದನು. ಆ ಪ್ರತಿಯೊಂದು ಜೀವವನ್ನು ಅವನು ಮುಕ್ತಗೊಳಿಸಿದನು. ಅದೇರೀತಿ ಶ್ರೀ ಜಯಂತ ಅವತಾರದಲ್ಲಿ ಪರಮ ಪೂಜ್ಯರ ಸಂಪರ್ಕಕ್ಕೆ ಬರುವ ಪ್ರತಿಯೊಬ್ಬ ವ್ಯಕ್ತಿಗೆ ಸಾಧನೆಯನ್ನು ಹೇಳುತ್ತಿದ್ದಾರೆ. ಎಲ್ಲರಿಗೂ ಸಾಧನೆಯನ್ನು ಹೇಳುವುದಕ್ಕಾಗಿಯೇ ಅವರು ‘ಸನಾತನ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಈ ಸಂಸ್ಥೆಯಲ್ಲಿ ಸಾವಿರಾರು ಸಾಧಕರು ಸಾಧನೆಯನ್ನು ಮಾಡುತ್ತಿದ್ದಾರೆ. ಪರಮ ಪೂಜ್ಯರು ಅವರಿಗೆ ಮೋಕ್ಷಪ್ರಾಪ್ತಿ ಮಾಡಿಸಿ ಅವರನ್ನು ಉದ್ಧರಿಸಲಿದ್ದಾರೆ. ಪ.ಪೂ. ಗುರುದೇವರು ತಾವು ದಿನನಿತ್ಯ ಬಳಸುತ್ತಿರುವ ಅಥವಾ ಅವರ ಸಂಪರ್ಕದಲ್ಲಿ ಬರುವ ವಸ್ತುಗಳನ್ನೂ ಉದ್ಧರಿಸುತ್ತಿದ್ದಾರೆ, ಉದಾ. ಅವರು ಬಳಸುತ್ತಿರುವ ವಸ್ತುಗಳ ಬಣ್ಣ ಬದಲಾಗುತ್ತಿದೆ. ಆ ವಸ್ತುಗಳಲ್ಲಿ ಆಗುವ ಬದಲಾವಣೆಯ ಮಾಧ್ಯಮದಿಂದ ಆ ವಸ್ತುಗಳೂ ಉದ್ಧಾರವಾಗುತ್ತಿವೆ.
೫. ಶ್ರೀಕೃಷ್ಣನ ಲೀಲೆಗಳಿಂದ ಮತ್ತು ಪರಾತ್ಪರ ಗುರು ಡಾಕ್ಟರರು ಸಾಧಕರೊಂದಿಗೆ ತಮಾಷೆ ಮಾಡುತ್ತ ಮಾತನಾಡುವುದರಿಂದ ಸಾಧಕರಿಗೆ ಅವರ ಅಪಾರ ಪ್ರೀತಿ ಹಾಗೂ ಆನಂದವನ್ನು ಅನುಭವಿಸಲು ಸಾಧ್ಯವಾಗುವುದು : ಶ್ರೀಕೃಷ್ಣನು ಸತತವಾಗಿ ಗೋಪಿಕೆಯರೊಂದಿಗೆ ಚೇಷ್ಟೆಯನ್ನು ಮಾಡುತ್ತಿದ್ದನು. ಅವನು ಗೋಪಿಗಳ ಬೆಣ್ಣೆಯ ಮಡಕೆಗಳನ್ನು ಒಡೆಯುತ್ತಿದ್ದನು. ಅವನು ತನ್ನ ಗೋಪಗೆಳೆಯರೊಂದಿಗೆ ಗೋಪಿಗಳ ಮನೆಯಲ್ಲಿನ ಬೆಣ್ಣೆಯನ್ನು ಕದ್ದು ತಿನ್ನುತ್ತಿದ್ದನು. ಈ ಎಲ್ಲ ಲೀಲೆಗಳ ಮಾಧ್ಯಮದಿಂದ ಅವನು ಎಲ್ಲರಿಗೂ ಆನಂದವನ್ನು ಅನುಭವಿಸಲು ಕೊಡುತ್ತಿದ್ದನು. ಇದರಿಂದ ಗೋಪಿಯರಿಗೆ ಶ್ರೀಕೃಷ್ಣನ ಪ್ರೀತಿಯನ್ನು ಅನುಭವಿಸಲು ಸಾಧ್ಯವಾಯಿತು. ಗುರುದೇವರೂ ತಮ್ಮನ್ನು ಭೇಟಿಯಾಗಲು ಬಂದ ಸಾಧಕರೊಂದಿಗೆ ತಮಾಷೆಯಿಂದ ಮಾತನಾಡುತ್ತ ಆ ಸಾಧಕರಿಗೆ ತುಂಬಾ ಆನಂದವನ್ನು ಕೊಡುತ್ತಾರೆ. ಇದರಿಂದ ಸಾಧಕರಿಗೆ ಗುರುದೇವರ ಅಪಾರ ಪ್ರೀತಿಯನ್ನು ಅನುಭವಿಸಲು ಬರುತ್ತದೆ.
೬. ದ್ವಾಪರಯುಗದಲ್ಲಿ ಶ್ರೀಕೃಷ್ಣನು ದುಷ್ಟ ಶಕ್ತಿಗಳನ್ನು ನಾಶ ಮಾಡುವುದು ಮತ್ತು ಪರಾತ್ಪರ ಗುರು ಡಾ. ಆಠವಲೆಯವರೂ ಕಲಿಯುಗದಲ್ಲಿ ಸಮಾಜಕ್ಕೆ ಸಾಧನೆಯನ್ನು ಕಲಿಸಿ ಸ್ವಭಾವದೋಷ ಮತ್ತು ಅಹಂರೂಪಿ ದುಷ್ಟಶಕ್ತಿಗಳನ್ನು (ದುಷ್ಪ್ರವೃತ್ತಿಯ) ನಾಶ ಮಾಡುವುದು : ಶ್ರೀಕೃಷ್ಣನು ದ್ವಾಪರಯುಗದಲ್ಲಿ ಜನ್ಮಪಡೆದು ಪೃಥ್ವಿಯ ಮೇಲಿನ ಎಲ್ಲ ದುರ್ಜನರ, ದುಷ್ಟಶಕ್ತಿಗಳ ಮತ್ತು ರಾಕ್ಷಸರನ್ನು ನಾಶಮಾಡಿದನು. ಕಾಲಕ್ಕನುಸಾರ ಸ್ವಭಾವದೋಷ ಮತ್ತು ಅಹಂರೂಪಿ ದುಷ್ಟಶಕ್ತಿಗಳು ಕಲಿಯುಗದಲ್ಲಿ ಎಲ್ಲರಲ್ಲಿಯೂ ಇವೆ. ಅವುಗಳನ್ನು ನಾಶ ಮಾಡಲು ಸಾಧನೆಯೊಂದೇ ಉಪಾಯವಾಗಿದೆ. ಪ.ಪೂ. ಗುರುದೇವರು ಸಹ ಸಮಾಜಕ್ಕೆ ಸಾಧನೆಯನ್ನು ಹೇಳಿ ಅವರಲ್ಲಿನ ಸ್ವಭಾವದೋಷ ಮತ್ತು ಅಹಂರೂಪಿ ದುಷ್ಟಶಕ್ತಿಗಳ, ಅಂದರೆ ದುಷ್ಪ್ರವೃತ್ತಿಗಳನ್ನು ನಾಶಮಾಡಲು ಕಲಿಸುತ್ತಿದ್ದಾರೆ.
ಪ.ಪೂ. ಗುರುದೇವರ ಕೃಪೆಯಿಂದ ನನ್ನ ಗಮನಕ್ಕೆ ಬಂದಿರುವ ‘ಶ್ರೀಕೃಷ್ಣ ಮತ್ತು ‘ಶ್ರೀ ಜಯಂತ ಇವರ ಶ್ರೀವಿಷ್ಣುವಿನ ಅವತಾರದಲ್ಲಿನ ಹೋಲಿಕೆಯನ್ನು ಗುರುಚರಣಗಳಲ್ಲಿ ಅರ್ಪಿಸು ತ್ತೇನೆ.
– ಕು. ಸಾಯಲಿ ರವೀಂದ್ರ ದೇಶಪಾಂಡೆ (ವಯಸ್ಸು ೧೪), ಸನಾತನ ಆಶ್ರಮ, ರಾಮನಾಥಿ, ಗೋವಾ.