ಜುನಾಗಢ (ಗುಜರಾತ್) ನಲ್ಲಿ ಅಕ್ರಮ ಮಜಾರ್ ಮತ್ತು ದರ್ಗಾಗಳ ತೆರವು ಮುಸ್ಲಿಮರ ವಿರೋಧ !

  • ರಸ್ತೆಗಿಳಿದ 2 ಸಾವಿರ ಮುಸ್ಲಿಮರು!

  • 178 ಮಜಾರ್ ಸಹಿತ 11 ದೇವಸ್ಥಾನಗಳ ಮೇಲೆ ಕ್ರಮ !

ಜುನಾಗಢ (ಗುಜರಾತ್) – ಇಲ್ಲಿಯ ಉಪರಕೋಟ್ ಕೋಟೆಯ ಸುತ್ತಲಿನ ಪ್ರದೇಶವನ್ನು ಅತಿಕ್ರಮಣ ಮುಕ್ತಗೊಳಿಸಲು ಆಡಳಿತವು ಅಭಿಯಾನವನ್ನು ಪ್ರಾರಂಭಿಸಿದೆ. ಇದರ ಅಡಿಯಲ್ಲಿ ಅನೇಕ ಅಕ್ರಮ ದೇವಾಲಯಗಳು, ಮಜಾರ್ ಗಳು (ಪೀರುಗಳು ಅಥವಾ ಫಕೀರರ ಗೋರಿಗಳು) ಮತ್ತು ದರ್ಗಾಗಳನ್ನು ಕೆಡವಲಾಗಿದೆ; ಆದರೆ ಸ್ಥಳೀಯ ಮುಸ್ಲಿಮರು ಇದಕ್ಕೆ ಧಾರ್ಮಿಕ ಬಣ್ಣ ನೀಡಲು ಯತ್ನಿಸುತ್ತಿದ್ದಾರೆ. ಈ ಅಭಿಯಾನವನ್ನು ಪ್ರಾರಂಭಿಸಿದ ನಂತರ, 2 ಸಾವಿರ ಮುಸ್ಲಿಮರು ಒಟ್ಟುಗೂಡಿ ಅದನ್ನು ವಿರೋಧಿಸಲು ಪ್ರಯತ್ನಿಸಿದರು.

ಮೇ 26, 2023 ರಂದು, ಆಡಳಿತವು ಅತಿಕ್ರಮಣಗಳನ್ನು ಕೆಡವುವ ಬಗ್ಗೆ ಚಾಲನೆಯನ್ನು ಪ್ರಾರಂಭಿಸಿತು. ಮೇ 26 ರಂದು ಮಧ್ಯರಾತ್ರಿ 2 ಗಂಟೆಗೆ ಜುನಾಗಢ ಕಾರ್ಪೊರೇಟರ್ ಅದ್ರೆಮಾನ ಪಂಜಾ, ಆಸಿಫ್ ಸ್ಯಾಂದ್, ವಹಾಬ್ ಖುರೇಷಿ ಸೇರಿ ಸುಮಾರು 2 ಸಾವಿರ ಮುಸ್ಲಿಮರು ಜಮಾಯಿಸಿದ್ದರು. ಇವರಲ್ಲಿ ಸ್ಥಳೀಯ ಮೌಲ್ವಿಗಳು (ಇಸ್ಲಾಮಿಕ್ ಧಾರ್ಮಿಕ ಮುಖಂಡರು), ಮುಫ್ತಿಗಳು (ಶರಿಯಾ ಕಾನೂನಿನ ವಿದ್ವಾಂಸರು) ಮತ್ತು ಮೌಲಾನಾಗಳು (ಇಸ್ಲಾಮಿಕ್ ವಿದ್ವಾಂಸರು) ಸೇರಿದ್ದರು. ಅವರು ಆಡಳಿತದ ಕ್ರಮವನ್ನು ತಡೆಯಲು ಪ್ರಯತ್ನಿಸಿದರು; ಆದರೆ ಆಡಳಿತವು ಪೊಲೀಸರ ಸಮ್ಮುಖದಲ್ಲಿ ಕಾರ್ಯಾಚರಣೆಯನ್ನು ಮುಂದುವರೆಸಿತು.

178 ಮಜಾರ್ ಸಹಿತ 11 ದೇವಸ್ಥಾನಗಳ ಮೇಲೆ ಕ್ರಮ !

ರಾಜ್ಯ ಸರಕಾರವು ಜುನಾಗಢದ ಉಪರಕೋಟ್ ಕೋಟೆಯನ್ನು 70 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಿಸಿದೆ. ಈ ಕೋಟೆಯನ್ನು ಈಗ ಸಾರ್ವಜನಿಕರಿಗೆ ತೆರೆಯಲಾಗುವುದು. ಇದಕ್ಕಾಗಿ ಕೋಟೆಯ ಸುತ್ತಲಿನ ಪ್ರದೇಶವನ್ನು ಅಕ್ರಮ ಒತ್ತುವರಿಯಿಂದ ಮುಕ್ತಗೊಳಿಸಲು ಆಡಳಿತವು ಅಭಿಯಾನವನ್ನು ಕೈಗೊಂಡಿತ್ತು, ಇದರ ಅಡಿಯಲ್ಲಿ 11 ದೇವಾಲಯಗಳು ಮತ್ತು 178 ಮಜಾರ್ ಗಳನ್ನು ನೆಲಸಮ ಮಾಡಲಾಗಿದೆ.

ಕ್ರಮದ ವಿರುದ್ಧ ಮುಸ್ಲಿಮರಿಂದ ನ್ಯಾಯಾಲಯದಲ್ಲಿ ಅರ್ಜಿ !

ಉಪರ್‌ಕೋಟ್‌ನಲ್ಲಿ ಅತಿಕ್ರಮಣದ ವಿರುದ್ಧ ನಡೆಯುತ್ತಿರುವ ಅಭಿಯಾನದ ಕುರಿತು ಮುಸ್ಲಿಂ ಗುಂಪು ಗುಜರಾತ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ತುರ್ತು ವಿಚಾರಣೆಗೆ ಒತ್ತಾಯಿಸಿದೆ.

ಸಂಪಾದಕೀಯ ನಿಲುವು

ದೇವಸ್ಥಾನಗಳ ಮೇಲಿನ ಕ್ರಮಕೈಗೊಂಡಿರುವ ಬಗ್ಗೆ ಹಿಂದೂಗಳು ಒಂದೇ ಒಂದು ಪದಗಳಲ್ಲಿ ವಿರೋಧಿಸುವುದಿಲ್ಲ, ಇದಕ್ಕೆ ವಿರುದ್ಧವಾಗಿ, ಸಾವಿರಾರು ಕಾನೂನುಬಾಹಿರ ಮುಸ್ಲಿಮರು ಮಜಾರ್ ಗಳ ಮತ್ತು ದರ್ಗಾಗಳ ಮೇಲಿನ ಕ್ರಮದ ವಿರುದ್ಧ ನೇರವಾಗಿ ಬೀದಿಗಿಳಿಯುತ್ತಾರೆ ! ಇನ್ನೂ, ಪ್ರಗತಿ(ಅಧೋ)ಪರರು ಯಾವಾಗಲೂ ಹಿಂದೂಗಳನ್ನು ಆಕ್ರಮಣಕಾರಿ ಮತ್ತು ಹಿಂಸಾತ್ಮಕ ಎಂದು ಹೇಳುತ್ತಾರೆ !