ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ
‘ಇತ್ತೀಚೆಗೆ ಬಹಳಷ್ಟು ಜನರು ಸಾಕಷ್ಟು ಆಹಾರವನ್ನು ಸೇವಿಸಿದರೂ ರಕ್ತದಲ್ಲಿನ ‘ಹಿಮೊಗ್ಲೋಬಿನ್, ಕ್ಯಾಲ್ಸಿಯಮ್ ಇಂತಹ ಘಟಕಗಳು ಕಡಿಮೆ ಇರುವುದು, ಹಾಗೆಯೇ ದಣಿವಾಗುವುದು, ನಿರುತ್ಸಾಹ, ಶರೀರ ಕೃಶವಾಗುವುದು ಮುಂತಾದ ಲಕ್ಷಣಗಳು ಕಂಡು ಬರುತ್ತವೆ. ಶರೀರದಲ್ಲಿನ ಆಹಾರವು ಉತ್ತಮ ರೀತಿಯಲ್ಲಿ ಜೀರ್ಣವಾಗುವ ಸಿದ್ಧತೆ ಇಲ್ಲದಿರುವಾಗ ತಿಂದರೆ ಆಹಾರವು ಸರಿಯಾಗಿ ಜೀರ್ಣವಾಗುವುದಿಲ್ಲ ಮತ್ತು ಆಹಾರದ ಪೋಷಕಾಂಶವು ಶರೀರಕ್ಕೆ ಸಿಗುವುದಿಲ್ಲ. ಆದ್ದರಿಂದ ಹೀಗಾಗುತ್ತದೆ. ಆಹಾರದಲ್ಲಿನ ಪೋಷಕಾಂಶವು ಶರೀರಕ್ಕೆ ಸಂಪೂರ್ಣವಾಗಿ ಲಭ್ಯವಾಗಲು ಬೆಳಗಿನ ಮೊದಲನೇ ಆಹಾರವನ್ನು ಜಠರಾಗ್ನಿಯು ಪ್ರಜ್ವಲವಾದ ನಂತರವೇ (ಆಹಾರವು ಜೀರ್ಣವಾಗುವ ಕ್ಷಮತೆ ಉತ್ಪನ್ನವಾದರೆ ಮಾತ್ರ) ತೆಗೆದುಕೊಳ್ಳಬೇಕು. ಬೆಳಗ್ಗೆ ಶೌಚಕ್ಕೆ, ಹಾಗೆಯೇ ಮೂತ್ರವಿಸರ್ಜನೆ ಸ್ವಚ್ಛವಾಗುವುದು, ಕೆಳಗಿನಿಂದ (ಗುದದ್ವಾರದಿಂದ) ವಾತ ಹಾದುಹೋಗುವುದು, ತೇಗು ಬಂದರೆ ಅದಕ್ಕೆ ಅನ್ನದ ವಾಸನೆ ಇರದಿರುವುದು, ಶರೀರವು ಹಗುರವಾಗುವುದು, ಗಂಟಲು ಸ್ವಚ್ಛವಾಗುವುದು ಮತ್ತು ತುಂಬಾ ಹಸಿವಾಗುವುದು, ಇವುಗಳು ಜಠರಾಗ್ನಿಯು ಪ್ರಜ್ವಲಿತವಾಗಿರುವ ಲಕ್ಷಣಗಳಿವೆ. (ಕೇವಲ ‘ಹಸಿವಾಗುವುದು ಇದು ಜಠರಾಗ್ನಿಯು ಪ್ರಜ್ವಲಿತವಾಗಿರುವ ಲಕ್ಷಣವಲ್ಲ.) ಈ ಲಕ್ಷಣಗಳು ಕಂಡುಬರದಿದ್ದರೆ, ರಾತ್ರಿ ೮ ಗಂಟೆಯ ಮೊದಲು, ಹಾಗೆಯೇ ಕಡಿಮೆ ಪ್ರಮಾಣದಲ್ಲಿ ಊಟ ಮಾಡಬೇಕು. ಹೀಗೆ ಮಾಡುವುದರಿಂದ ಬೆಳಗಿನವರೆಗೆ ಅದು ಸರಿಯಾಗಿ ಜೀರ್ಣವಾಗಿ ಜಠರಾಗ್ನಿಯು ಪ್ವಜ್ವಲಿತವಾಗುತ್ತದೆ.
ಜಠರಾಗ್ನಿಯು ಪ್ರಜ್ವಲಿತವಾದರೆ ಮಾತ್ರ ಬೆಳಗಿನ ಮೊದಲ ಆಹಾರವನ್ನು ತೆಗೆದುಕೊಳ್ಳುವ ನಿಯಮವನ್ನು ಪಾಲಿಸಿದರೆ ಮಧುಮೇಹ, ಉಚ್ಚ ರಕ್ತದೊತ್ತಡ, ಸಂಧಿವಾತ ಇವುಗಳಂತಹ ಕಾಯಿಲೆಗಳಿಗೂ ಒಳ್ಳೆಯ ಲಾಭವಾಗುವುದು ಕಂಡುಬರುತ್ತದೆ.
– ವೈದ್ಯ ಮೇಘರಾಜ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೪.೪.೨೦೨೩)