ಇರಾನ್ ನಲ್ಲಿ ಹಿಜಾಬ ವಿರೋಧಿ ಆಂದೋಲನದಿಂದ 9 ಸಾವಿರ ಮಹಿಳೆಯರ ಬಂಧನ !

(ಹಿಜಾಬ ಎಂದರೆ ಮುಸಲ್ಮಾನ ಮಹಿಳೆಯರ ತಲೆ ಮತ್ತು ಕುತ್ತಿಗೆಯನ್ನು ಮುಚ್ಚುವ ವಸ್ತ್ರ)

ಟೆಹರಾನ (ಇರಾನ) – ಇರಾನ್ ನಲ್ಲಿ ಹಿಜಾಬ ವಿರುದ್ಧ ಕಳೆದ 9 ತಿಂಗಳುಗಳಿಂದ ಆಂದೋಲನಗಳು ನಡೆಯುತ್ತಿದೆ. ಆಂದೋಲನದ ಪ್ರಕರಣದಲ್ಲಿ 9 ಸಾವಿರ ಮಹಿಳೆಯರನ್ನು ಬಂಧಿಸಲಾಗಿದೆ. ಹಾಗೂ ಇದುವರೆಗೆ 500 ಜನರು ಸಾವನ್ನಪ್ಪಿದ್ದಾರೆ ಮತ್ತು 10 ಜನರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಲಾಗಿದೆ. ಮಹಸಾ ಅಮಿನಿ ಹೆಸರಿನ ಮಹಿಳೆ ಪೊಲೀಸ ಕಸ್ಟಡಿಯಲ್ಲಿ ಸಾವನ್ನಪ್ಪಿದ ಬಳಿಕ ಈ ಆಂದೋಲನ ಪ್ರಾರಂಭವಾಗಿದೆ. ಮಹಸಾ ಹಿಜಾಬ ಧರಿಸದೇ ಇದ್ದರಿಂದ ಪೊಲೀಸರು ಅವಳನ್ನು ಬಂಧಿಸಿದ್ದರು ಮತ್ತು ಪೊಲೀಸ ಕಸ್ಟಡಿಯಲ್ಲಿ ಪೊಲೀಸರ ಥಳಿತದಿಂದ ಆಕೆ ಸಾವನ್ನಪ್ಪಿದ್ದಳು.

ಟೆಹರಾನ್ ನಲ್ಲಿ ಹೊರ್ಡಿಂಗಗಳನ್ನು ಅಳವಡಿಸಿ ಹಿಜಾಬ ಧರಿಸುವಂತೆ ಹೇಳಲಾಗುತ್ತಿದೆ. ಸಿ.ಸಿ.ಟಿವಿ. ಕ್ಯಾಮೆರಾ ಮತ್ತು ಕೃತಕ ಬುದ್ಧಿಮತ್ತೆಯ ಮೂಲಕ ಹಿಜಾಬ ಧರಿಸದೇ ಇರುವವರ ಮೇಲೆ ಕಣ್ಗಾವಲು ಇಡಲಾಗುತ್ತಿದೆಯೆಂದು ಪೊಲೀಸರು ಹೇಳಿದ್ದಾರೆ ಉತ್ತರ ಟೆಹರಾನಿನ 23 ಮಹಡಿಯ ವ್ಯಾಪಾರಿ ಮಳಿಗೆಯನ್ನು ಮುಚ್ಚಲಾಗಿದೆ. ಕಾರಣ, ಅಲ್ಲಿ ಹಿಜಾಬ ಧರಿಸದಿರುವ ಮಹಿಳೆಯರಿಗೆ ಅನುಮತಿಯನ್ನು ನೀಡಲಾಗಿತ್ತು.