ಪಾಕಿಸ್ತಾನದ ಜೈಲಿನಲ್ಲಿದ್ದ ಇಸ್ಲಾಮಿಕ್ ಸ್ಟೇಟ್ ನೊಂದಿಗೆ ನಂಟು ಹೊಂದಿದ್ದ ಕೇರಳದ ಮುಸಲ್ಮಾನನ ಸಾವು

ಶವ ಭಾರತಕ್ಕೆ ಹಸ್ತಾಂತರಿಸಲಿದೆ

ಜುಲ್ಫಿಕಾರ್

ಕರಾಚಿ (ಪಾಕಿಸ್ತಾನ) – ಇಲ್ಲಿನ ಜೈಲಿನಲ್ಲಿ ಬಂಧಿತನಾಗಿದ್ದ ಕೇರಳದ ಪಾಲಕ್ಕಾಡ್‌ನಲ್ಲಿನ ಜುಲ್ಫಿಕಾರ್ (೪೮ ವರ್ಷ) ಮೃತಪಟ್ಟಿದ್ದಾನೆ. ಅವನ ಶವವನ್ನು ಭಾರತಕ್ಕೆ ಹಸ್ತಾಂತರಿಸಲಾಗುವುದು. ಪಾಕಿಸ್ತಾನದ ಕಡಲ ಗಡಿಯೊಳಗೆ ನುಸುಳಿದ್ದಕ್ಕಾಗಿ ಮೀನುಗಾರರೊಂದಿಗೆ ಜುಲ್ಫಿಕರ್‌ನನ್ನು ಬಂಧಿಸಲಾಗಿತ್ತು. ಈತ ಇಸ್ಲಾಮಿಕ್ ಸ್ಟೇಟ್ ಜೊತೆ ಸಂಬಂಧ ಹೊಂದಿದ್ದ ಎಂದು ವರದಿಯಾಗಿತ್ತು. ಈ ಮೋದಲು ಸಂಯುಕ್ತ ಅರಬ ಅಮೀರಾತನಲ್ಲಿ ವಾಸಿಸುತ್ತಿದ್ದ. ಇಸ್ಲಾಮಿಕ್ ಸ್ಟೇಟ್ ಜೊತೆಗಿನ ಸಂಬಂಧವನ್ನು ತಿಳಿದ ನಂತರ ಅವನ ಪತ್ನಿ ಅವನನ್ನು ತೊರೆದಿದ್ದಳು. ಕೇರಳದಲ್ಲಿರುವ ಆತನ ಸಂಬಂಧಿಕರು ಕೂಡ ಸಂಬಂಧ ಕಡಿದುಕೊಂಡಿದ್ದರು. ಇದೀಗ ಜುಲ್ಫಿಕರ್ ಶವವನ್ನು ಪಾಕಿಸ್ತಾನ ಭಾರತಕ್ಕೆ ಹಸ್ತಾಂತರಿಸುತ್ತಿದ್ದು, ಆತನ ಸಂಬಂಧಿಕರು ಶವವನ್ನು ಸ್ವೀಕರಿಸಲು ಒಪ್ಪಿದ್ದಾರೆ.

ಸಂಪಾದಕರ ನಿಲುವು

‘ದಿ ಕೇರಳ ಸ್ಟೋರಿ’ ಸಿನಿಮಾದ ನೈಜ ಘಟನೆಗಳನ್ನು ಸುಳ್ಳು ಎಂದು ಹೇಳುವವರು ಈ ಬಗ್ಗೆ ಚಕಾರವೆತ್ತುತ್ತಾರೆಯೇ ?