‘ಜಮಿಯತ ಉಲೇಮಾ ಹಿಂದ’ನ ಅಧ್ಯಕ್ಷ ಮೌಲಾನಾ ಅರ್ಶದ ಮದನಿ ವಿಷಕಕ್ಕಿದ !
ಸಹಾರನಪುರ (ಉತ್ತರಪ್ರದೇಶ) – `ಜಮಿಯತ ಉಲೇಮಾ ಹಿಂದ’ನ ಅಧ್ಯಕ್ಷ ಮೌಲಾನಾ ಅರ್ಶದ ಮದನಿ ಒಂದು ವಾರ್ತಾವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ವಿಷಯಗಳ ಕುರಿತು ಹೇಳುವಾಗ ಸಮಾನ ನಾಗರಿಕ ಕಾನೂನಿನ ಕುರಿತು ಟೀಕೆ ಮಾಡಿದ್ದಾರೆ. `ಸಮಾನ ನಾಗರಿಕ ಕಾನೂನು’ ಮುಸಲ್ಮಾನರ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆ’ ಎಂದು ಅವರು ಹೇಳಿದ್ದಾರೆ.
(ಸೌಜನ್ಯ – ABP NEWS)
ಮೌಲಾನಾ ಮದನಿ,
1. ನರೇಂದ್ರ ಮೋದಿಯವರು ದೇಶದ ಪ್ರಧಾನಮಂತ್ರಿಯಾಗಿದ್ದಾರೆ. ಅವರೊಂದಿಗೆ ನನ್ನದು ಯಾವುದೇ ಶತ್ರುತ್ವವಿಲ್ಲ. ಅವರು ನನಗೆ 10 ಸಲ ಭೇಟಿಯಾಗಲು ಕರೆದರೂ, ನಾನು 10 ಸಲ ಹೋಗುತ್ತೇನೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮುಸಲ್ಮಾನ ಭಾರತೀಯ ಜನತಾ ಪಕ್ಷದೊಂದಿಗೆ ಹೋಗುವರು; ಆದರೆ ಭಾಜಪ ತನ್ನ ಧೋರಣೆಯನ್ನು ಬದಲಾಯಿಸಬೇಕು.
2. ಕರ್ನಾಟಕದಲ್ಲಿ ಶೇ. 95 ರಿಂದ 100 ರಷ್ಟು ಮುಸಲ್ಮಾನರು ಕೇವಲ ಕಾಂಗ್ರೆಸ್ಸಿಗೆ ಮತದಾನ ಮಾಡಿದ್ದಾರೆ. ಈಗ ಕಾಂಗ್ರೆಸ್ಸ ಬಜರಂಗ ದಳದ ಮೇಲೆ ನಿರ್ಬಂಧವನ್ನು ವಿಧಿಸುವ ವಿಷಯದಲ್ಲಿ ಘೋಷಣಾ ಪತ್ರದಲ್ಲಿ ನೀಡಿರುವ ಆಶ್ವಾಸನೆಯನ್ನು ಪೂರ್ಣಗೊಳಿಸಬೇಕು. ಹಾಗೆ ಆಗದಿದ್ದರೆ, ಭವಿಷದ್ಯದಲ್ಲಿ ಯಾವುದೇ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಘೋಷಣಾಪತ್ರದ ಮೇಲೆ ಮುಸಲ್ಮಾನರು ಎಂದಿಗೂ ವಿಶ್ವಾಸವಿಡುವುದಿಲ್ಲ.
Jamiat Ulama-i-Hind chief Maulana Arshad Madani urged the Congress government in Karnataka to restore the 4% quota for Muslims in the state.#Karnataka #News https://t.co/xwnX7bPhKl
— IndiaToday (@IndiaToday) May 22, 2023
3. ಜಮಿಯತನ ಕಾಂಗ್ರೆಸ್ ನೊಂದಿಗೆ ಸಂಬಂಧ ಮೊದಲಿನಿಂದಲೂ ಚೆನ್ನಾಗಿದೆ. ಡಾ. ಮನಮೋಹನ ಸಿಂಹ ಇವರು ಇದ್ದಾಗಿನಿಂದಲೂ ಸೋನಿಯಾ ಗಾಂಧಿಯವರೆಗೆ ಎಲ್ಲ ಮುಖಂಡರು ಜಮಿಯತನ ಮುಖಂಡರ ಮಾತನನ್ನು ಕೇಳುತ್ತಿದ್ದರು. (ಕಾಂಗ್ರೆಸ ಮುಸಲ್ಮಾನರ ತಾಳಕ್ಕೆ ತಕ್ಕಂತೆ ಕುಣಿಯುತ್ತಿತ್ತು, ಎನ್ನುವುದು ಮೇಲಿಂದ ಮೇಲೆ ಸಿದ್ಧವಾಗಿದೆ. ಇಂತಹ ಪಕ್ಷ ದೇಶದ ಹಿತವನ್ನು ಹೇಗೆ ರಕ್ಷಿಸುವುದು ! – ಸಂಪಾದಕರು)
ಸಂಪಾದಕೀಯ ನಿಲುವುಸಮಾನ ನಾಗರಿಕ ಕಾನೂನು ಜಾರಿಗೊಂಡರೆ ಮುಸಲ್ಮಾನರಿಗೆ 4 ವಿವಾಹವಾಗಲು ಸಾಧ್ಯವಾಗುವುದಿಲ್ಲ. ಅಲ್ಪಸಂಖ್ಯಾತರು ಎಂದು ಹೇಳುತ್ತಾ ಪ್ರತ್ಯೇಕ ಸೌಲಭ್ಯಗಳನ್ನು ಲಪಟಾಯಿಸಲು ಸಾಧ್ಯವಾಗುವುದಿಲ್ಲ, ಆದ್ದರಿಂದ ಮದನಿ ಕೂಗಾಡುತ್ತಿದ್ದಾರೆ ಎನ್ನುವುದನ್ನು ಅರಿಯಿರಿ ! |