ಹಿರಿಯರಿಗೆ ವಿಮಾನದಲ್ಲಿ ಉಚಿತವಾಗಿ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಲು ಮಧ್ಯಪ್ರದೇಶ ಸರಕಾರದಿಂದ ಸೌಲಭ್ಯ !

ಭೋಪಾಲ್ (ಮಧ್ಯಪ್ರದೇಶ) – ರಾಜ್ಯದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮೇ ೨೧ ರಂದು ‘ಮುಖ್ಯಮಂತ್ರಿ ತೀರ್ಥ ದರ್ಶನ ಯೋಜನೆ’ ಅಡಿಯಲ್ಲಿ ‘ತೀರ್ಥ ಯಾತ್ರೆ’ (ವಿಮಾನದ ಮೂಲಕ ತೀರ್ಥಯಾತ್ರೆ) ಉಪಕ್ರಮವನ್ನು ಪ್ರಾರಂಭಿಸಿದರು. ಇದರಿಂದ, ಹಿರಿಯ ನಾಗರಿಕರು ದೇಶದ ಪ್ರಯಾಗರಾಜ, ಶಿರಡಿ, ಮಥುರಾ-ವೃಂದಾವನ ಮತ್ತು ಗಂಗಾಸಾಗರ ಧಾಮಕ್ಕೆ ಉಚಿತವಾಗಿ ಭೇಟಿ ನೀಡಲು ಸಾಧ್ಯವಾಗುತ್ತದೆ. ಮೇ ೨೧ ರಂದು, ಮುಖ್ಯಮಂತ್ರಿ ಚೌಹಾಣ್ ಅವರ ಸಮ್ಮುಖದಲ್ಲಿ, ಹಿರಿಯ ನಾಗರಿಕರ ಮೊದಲ ಗುಂಪು ಭೋಪಾಲ್ ವಿಮಾನ ನಿಲ್ದಾಣದಿಂದ ಪ್ರಯಾಗರಾಜ್‌ಗೆ ತೆರಳಿತು. ಇದರಲ್ಲಿ ೩೨ ಹಿರಿಯ ನಾಗರಿಕರು ಸೇರಿದ್ದಾರೆ. ಇದೇ ರೀತಿ ಜುಲೈ 19, 2023 ರೊಳಗೆ ರಾಜ್ಯದ ೨೫ ಜಿಲ್ಲೆಗಳ ಹಿರಿಯ ನಾಗರಿಕರನ್ನು ೨೫ ವಿಮಾನಗಳ ಮೂಲಕ ಯಾತ್ರಾಸ್ಥಳಕ್ಕೆ ಕರೆದೊಯ್ಯಲಾಗುತ್ತದೆ.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಹಿರಿಯ ನಾಗರಿಕರನ್ನು ಉದ್ದೇಶಿಸಿ, ”ವ್ಯಕ್ತಿಗೆ ಆಧ್ಯಾತ್ಮಿಕ ಶಾಂತಿ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಾನು ಮಾಡಿದ ಸಂಕಲ್ಪ ಇಂದು ನೆರವೇರಿದೆ. ಶ್ರೀರಾಮನ ಕೃಪೆಯಿಂದ ನೀವು ತೀರ್ಥಕ್ಷೇತ್ರಗಳ ದರ್ಶನ ಮಾಡುವಿರಿ ಮತ್ತು ನಿಮ್ಮ ಆಶೀರ್ವಾದವು ಮಧ್ಯಪ್ರದೇಶಕ್ಕೆ ಸಿಗಲಿದೆ.” ಎಂದು ಚೌಹಾಣ್ ಅವರು ಹೇಳಿದರು.

ಸಂಪಾದಕೀಯ ನಿಲುವು

ಮಧ್ಯಪ್ರದೇಶ ಸರಕಾರದ ಶ್ಲಾಘನಿಯ ಉಪಕ್ರಮ ! ಈ ಉಪಕ್ರಮದ ಬಗ್ಗೆ ಜಾತ್ಯತೀತರು ‘ಕೇಸರಿಕರಣ’ ನಡೆಯುತ್ತಿದೆ ಎಂದು ಕೂಗಿದರೆ ಆಶ್ಚರ್ಯಪಡಬೇಡಿ !