ವಿವಿಧ ಕ್ಷೇತ್ರಗಳಲ್ಲಿನ ಗೌರವಾನ್ವಿತರೊಂದಿಗೆ ಆಧ್ಯಾತ್ಮಿಕ ಬೆಸುಗೆಯಿಂದ ಜೋಡಿಸಲ್ಪಟ್ಟಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

(ಪರಾತ್ಪರ ಗುರು) ಡಾ. ಜಯಂತ ಬಾಳಾಜಿ ಆಠವಲೆ

‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜೀವನವು ವಿಭಿನ್ನ ಕಾರ್ಯಗಳಿಂದ ತುಂಬಿ ಹೋಗಿದೆ. ಸನಾತನದ ಸಾಧಕರಿಗೆ ಅವರ ಮೇಲೆ ಅಪಾರ ಶ್ರದ್ಧೆ ಇದ್ದೇ ಇದೆ; ಅದರೊಂದಿಗೆ ಅನೇಕ ಕ್ಷೇತ್ರಗಳಲ್ಲಿನ ಅನೇಕ ಜಿಜ್ಞಾಸುಗಳು ಮತ್ತು ಗೌರವಾನ್ವಿತರು ಅವರೊಂದಿಗೆ ಆತ್ಮೀಯತೆಯಿಂದ ಜೊತೆಗೂಡಿದ್ದಾರೆ. ಈ ಲೇಖನದಲ್ಲಿ ವಿವಿಧ ಕ್ಷೇತ್ರಗಳ ಗೌರವಾನ್ವಿತರು ಗುರುದೇವರ ವಿಷಯದಲ್ಲಿ ತೆಗೆದ ಗೌರವೋದ್ಗಾರಗಳನ್ನು ಕೊಡಲಾಗಿದೆ.

ಕು. ಸಾಯಲಿ ದಿಲೀಪ ಡಿಂಗರೆ

ಅನೇಕ ಗೌರವಾನ್ವಿತರು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವಿಷಯದಲ್ಲಿ ತೆಗೆದಿರುವ ಉದ್ಗಾರ, ಅವರ ಮಹಾನತೆಯ ಬಗ್ಗೆ ಹೇಳಿದ ವಿಷಯಗಳು, ಗೌರವಾನ್ವಿತರಿಗೆ ಬಂದಂತಹ ಅನುಭವ-ಅನುಭೂತಿ ಮುಂತಾದ ವಿಷಯಗಳು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಅಲೌಕಿಕತೆಯನ್ನು ತೋರಿಸುತ್ತದೆ. ಇವರಲ್ಲಿನ ಕೆಲವು ಗೌರವಾನ್ವಿತರು ತಮ್ಮ ಕ್ಷೇತ್ರದಲ್ಲಿ ಉತ್ತುಂಗ ಶಿಖರಕ್ಕೆ ತಲುಪಿದ್ದಾರೆ. ಹೀಗಿದ್ದರೂ ‘ಪ್ರತ್ಯಕ್ಷ ದೇವರನ್ನು ನೋಡಿದೆನು ಮತ್ತು ಜೀವನದ ಉದ್ಧಾರವಾಯಿತು ಎಂದು ಗೌರವಾನ್ವಿತರು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವಿಷಯದಲ್ಲಿ ತಮ್ಮ ಮನೋಗತವನ್ನು ಮಂಡಿಸಿದ್ದಾರೆ. ‘ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ (ಗುರುದೇವರ) ಅಧ್ಯಾತ್ಮ ಪ್ರಸಾರದ ಕಾರ್ಯದಲ್ಲಿ ಸಹಭಾಗಿಯಾಗಿರುವ ಸಾಧಕರಲ್ಲಿ ಗುರುದೇವರ ಬಗ್ಗೆ ಭಾವ ಅಥವಾ ಶ್ರದ್ಧೆ ಎಷ್ಟು ಇದೆಯೋ, ಅದಕ್ಕಿಂತ ಸ್ವಲ್ಪ ಅಧಿಕವೇ ಗುರುದೇವರು ಪ್ರಾರಂಭಿಸಿರುವ ವಿವಿಧ ಕಾರ್ಯಗಳಲ್ಲಿ ಭಾಗವಹಿಸುವ ನಿಮಿತ್ತದಿಂದ ಅವರನ್ನು ಭೇಟಿಯಾಗಿರುವ ಗೌರವಾನ್ವಿತರಲ್ಲಿದೆ. ಬಹಳಷ್ಟು ಗೌರವಾನ್ವಿತರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಶ್ರೇಷ್ಠತೆಯನ್ನು ಪ್ರಥಮ ಭೇಟಿಯಲ್ಲಿಯೇ ಅರಿಯುತ್ತಾರೆ. ಇದು ಗುರುದೇವರನ್ನು ಭೇಟಿಯಾಗುವ ಗೌರವಾನ್ವಿತರ ವೈಶಿಷ್ಠ್ಯವೆಂದೇ ಹೇಳಬೇಕಾಗುವುದು ! ಸಚ್ಚಿದಾನಂದ ಪರಬ್ರಹ್ಮ ಗುರುದೇವರಲ್ಲಿ ಇಂತಹ ಯಾವುದಾದರೊಂದು ವಿಷಯವಿದೆ, ಏಕೆಂದರೆ ಅವರ ಬಳಿ ಹೋದ ವ್ಯಕ್ತಿ ಆತ್ಮೀಯನಾಗಿ ಬಿಡುತ್ತಾನೆ ! ಅವನಿಗೆ ಪುನಃ ಪುನಃ ಗುರುದೇವರನ್ನು ಭೇಟಿಯಾಗಬೇಕೆಂದು ಅನಿಸುತ್ತದೆ, ಇದುವೇ ಎಲ್ಲರ ಮೇಲಿರುವ ಗುರುದೇವರ ನಿರಪೇಕ್ಷ ಪ್ರೀತಿ. ಇದೇ ನಿರಪೇಕ್ಷ ಪ್ರೀತಿಯಿಂದಲೇ ಜಿಜ್ಞಾಸುಗಳು ಅಥವಾ ಗೌರವಾನ್ವಿತರು ಮೊದಲ ಭೇಟಿಯಲ್ಲಿಯೇ ಅವರೊಂದಿಗೆ ಯಾವ ರೀತಿ ಜೊತೆಗೂಡುತ್ತಾರೆ ಎನ್ನುವುದನ್ನು ಈಗ ನೋಡೋಣ.

ಎಡದಿಂದ ಶ್ರೀಲಂಕಾದ ಹಿಂದುತ್ವನಿಷ್ಠ ಶ್ರೀ ಮರವನ್ಪುಲಾವೂ ಸಚ್ಚಿದಾನಂದನ, ಬಾಂಗ್ಲಾದೇಶದ ‘ಬಾಂಗ್ಲಾದೇಶ ಮೈನಾರಿಟಿ ವಾಚ್ ಅಧ್ಯಕ್ಷರಾದ ಪೂ. (ನ್ಯಾಯವಾದಿ) ರವೀಂದ್ರ ಘೋಷ ಮತ್ತು ನೇಪಾಳದ ಶ್ರೀ. ಮಾಧವ ಭಟ್ಟರಾಯ ಇವರೊಂದಿಗೆ ಸಂಭಾಷಣೆ ನಡೆಸುತ್ತಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು

೧. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸರಳತೆ

ಎಲ್ಲರಿಗೂ ಅವರ ಪ್ರಥಮ ಭೇಟಿಯಲ್ಲಿಯೇ ಒಳ್ಳೆಯ ದೆನಿಸುವುದೆಂದರೆ ಅವರ ಸರಳತೆ ಮತ್ತು ಸಹಜತೆ ! ಸಾಧಾರಣ ಗುರು ಅಥವಾ ಸಂತರ ಬಗ್ಗೆ ಅನೇಕ ಜನರ ಮನಸ್ಸಿನಲ್ಲಿ ಮೂಡಿರುವ ಪ್ರತಿಮೆಯು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ದರ್ಶನದಿಂದ ಬದಲಾಗುತ್ತದೆ. ಈ ಸಂದರ್ಭದಲ್ಲಿ ಹಿಂದುತ್ವನಿಷ್ಠ ಮುರಳಿ ಮನೋಹರ ಶರ್ಮಾ ಇವರು ‘ಗುರುಗಳನ್ನು ಭೇಟಿ ಯಾಗುವುದು ಎಂದಾಗ ನನ್ನ ಕಣ್ಣೆದುರಿಗೆ ಒಂದು ಚಿತ್ರ ಬಂದಿತು, ದೊಡ್ಡ ಸಭಾಗೃಹವಿರಬಹುದು, ಅದರ ಮಧ್ಯಭಾಗದಲ್ಲಿ ಎತ್ತರದ ಸಿಂಹಾಸನವಿರಬಹುದು. ಭಗವಾ ವಸ್ತ್ರ, ಕೊರಳಿನಲ್ಲಿ ಮಾಲೆಯನ್ನು ಧರಿಸಿರುವ ವ್ಯಕ್ತಿ ಅದರ ಮೇಲೆ ವಿರಾಜಮಾನರಾಗಿ ನಮಗೆ ಮಾರ್ಗದರ್ಶನ ಮಾಡಬಹುದು. ಅವರ ಅಕ್ಕಪಕ್ಕದಲ್ಲಿ ಸೇವಕರು ಇರಬಹುದು ಎಂದು ಅನಿಸಿತ್ತು. ಆದರೆ ಪ್ರತ್ಯಕ್ಷದಲ್ಲಿ ಮಾತ್ರ ಪರಾತ್ಪರ ಗುರು ಡಾ. ಆಠವಲೆಯವರ ಭೇಟಿಯಲ್ಲಿ ನಾನು ಆಶ್ಚರ್ಯಚಕಿತ ನಾದೆನು. ಒಂದು ಶುಭ್ರ ಬಿಳಿ ವಸ್ತ್ರಗಳಲ್ಲಿರುವ ತೇಜಸ್ವಿ ವ್ಯಕ್ತಿ ಎದುರಿಗೆ ಬಂದು ನಮ್ಮೊಂದಿಗೆ ಕುಳಿತು ಸಹಜವಾಗಿ ಚರ್ಚೆಯನ್ನು ಮಾಡುತ್ತಿದ್ದರು. ಇದೊಂದು ಅತ್ಯಂತ ಅಪರೂಪದ ದೃಶ್ಯವಾಗಿತ್ತು. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಅತ್ಯಂತ ಸಹಜವಾಗಿ ಸಂಭಾಷಣೆಯನ್ನು ಮಾಡುವುದರಿಂದ ಅವರ ಆಧ್ಯಾತ್ಮಿಕ ಶ್ರೇಷ್ಠತೆಯ ಕುರಿತು ಯಾರಿಗೂ ಒತ್ತಡ ಬರುವುದಿಲ್ಲ. ಕೆಲವೊಮ್ಮೆ ಅವರೊಂದಿಗೆ ಮಾತನಾಡುವ ವ್ಯಕ್ತಿ ‘ಅನೇಕ ವರ್ಷಗಳಿಂದ ಅವರ ಪರಿಚಯವಿದೆ ಎನ್ನುವಂತೆ ಎಲ್ಲವನ್ನೂ ಮನಸ್ಸು ಬಿಚ್ಚಿ ಹೇಳಲು ಪ್ರಾರಂಭಿಸುತ್ತಾನೆ. ಆಗ ‘ಇದು ಅವರೊಂದಿಗೆ ನಡೆದಿರುವ ಮೊದಲ ಭೇಟಿಯಾಗಿದೆ ಎಂದು ಹೇಳಿದರೂ ಸತ್ಯವೆನಿಸುವುದಿಲ್ಲ.

೨. ಮೊದಲು ಭೇಟಿಯಲ್ಲಿಯೇ ಎಲ್ಲರೊಂದಿಗೆ ಆತ್ಮೀಯತೆಯಿಂದ ಮಾತನಾಡುವುದು

ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಅತ್ಯಂತ ಉಚ್ಚ ಆಧ್ಯಾತ್ಮಿಕ ಸ್ಥಿತಿ ಇದ್ದರೂ ಅವರು ಎಲ್ಲರೊಂದಿಗೆ ಎಷ್ಟು ಆತ್ಮೀಯತೆಯಿಂದ ಮಾತನಾಡುತ್ತಾರೆಂದರೆ, ಮೊದಲ ಭೇಟಿಯಲ್ಲಿಯೇ ಆ ವ್ಯಕ್ತಿ ಅವರೊಂದಿಗೆ ಜೊತೆಗೂಡುತ್ತಾನೆ. ಗೌರವಾನ್ವಿತರೊಂದಿಗೆ ಬಂದಿರುವ ಅವರ ಕುಟುಂಬದವರು ಮತ್ತು ಸಹಕಾರಿಗಳೊಂದಿಗೆ ಕೂಡ ಗುರುದೇವರು ಮಾತನಾಡುತ್ತಾರೆ. ಅವರ ಚಿಕ್ಕ ಮಕ್ಕಳು ಬಂದಿದ್ದರೆ, ಅವರೊಂದಿಗೂ ಮಾತನಾಡುತ್ತಾರೆ, ಅವರೊಂದಿಗೆ ಛಾಯಾಚಿತ್ರಗಳನ್ನು ತೆಗೆದುಕೊಳ್ಳುತ್ತಾರೆ. ‘ವಾಸ್ತವದಲ್ಲಿ ಭಗವಂತನ ಎದುರಿಗೆ ಯಾರೂ ಚಿಕ್ಕವರು-ದೊಡ್ಡವರು ಇರುವುದಿಲ್ಲ. ಅವನು ಪ್ರತಿಯೊಬ್ಬರ ಅಂತರಂಗದ ಭಾವವನ್ನು ನೋಡುತ್ತಾನೆ ಇದು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಹವಾಸದಲ್ಲಿ ಪ್ರಖರವಾಗಿ ಅರಿವಾಗುತ್ತದೆ !

೩. ಎದುರು ಇರುವ ವ್ಯಕ್ತಿಗೆ ಮಾತನಾಡಲು ಪ್ರೋತ್ಸಾಹಿಸುವುದು, ಅವನ ಸಂಕೋಚವನ್ನು ದೂರಗೊಳಿಸುವುದು ಹಾಗೆಯೇ ಅವನು ಹೇಳುವುದೆಲ್ಲವನ್ನೂ ಕೇಳಿಸಿಕೊಳ್ಳುವುದು

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಅಧ್ಯಾತ್ಮದಲ್ಲಿನ ಅತ್ಯಂತ ಉಚ್ಚಮಟ್ಟದ ಪದವಿಯಲ್ಲಿನ ಓರ್ವ ಅಧಿಕಾರಯುತ ವ್ಯಕ್ತಿಗಳಾಗಿದ್ದರೂ ಅವರು ಮೊದಲು ಎದುರಿಗಿರುವ ವ್ಯಕ್ತಿಗೆ ತಾವು ಏನನ್ನೂ ಹೇಳದೇ ಅವನಿಗೆ ಮಾತನಾಡಲು ಪ್ರೋತ್ಸಾಹಿಸುತ್ತಾರೆ. ಅವನ ಮನಸ್ಸಿನಲ್ಲಿರುವುದನ್ನು ಅರಿತುಕೊಂಡು ಎಂತಹ ಪ್ರಶ್ನೆ ಯನ್ನು ಕೇಳುತ್ತಾರೆಂದರೆ, ಆ ವ್ಯಕ್ತಿಗೆ ಆ ವಿಷಯದ ಬಗ್ಗೆಯೇ ಮಾತನಾಡುವುದಿರುತ್ತದೆ ಅಥವಾ ಆ ವಿಷಯದ ಬಗ್ಗೆಯೇ ಅವನಿಗೆ ಯಾವುದಾದರೊಂದು ಪ್ರಶ್ನೆಯನ್ನು ಕೇಳುವುದಿರುತ್ತದೆ. ಇದರಿಂದ ಎದುರಿನ ವ್ಯಕ್ತಿಗೆ ಮನಸ್ಸು ಬಿಚ್ಚಿ ಮಾತನಾಡಲು ಸಾಧ್ಯವಾಗುತ್ತದೆ. ಅವನ ಪ್ರಶ್ನೆಗಳಿಗೆ ಉತ್ತರಗಳು ಗುರುದೇವರಿಂದ ಸಹಜವಾಗಿ ಸಿಗುತ್ತವೆ. ಇದರಿಂದ ಎದುರಿನ ವ್ಯಕ್ತಿಯು ಮತ್ತೆ ಮತ್ತೆ ಮಾತನಾಡಲು ಉತ್ಸುಕನಾಗುತ್ತಾನೆ. ಅವನ ಮನಸ್ಸಿನಲ್ಲಿನ ‘ಏನು ಮಾತನಾಡಬೇಕು ಮತ್ತು ಹೇಗೆ ಮಾತನಾಡಬೇಕು ? ಎಂಬ ಪ್ರಶ್ನೆ ದೂರವಾಗುತ್ತದೆ. ಅವನ ಸಂಕೋಚ ದೂರವಾಗುತ್ತದೆ ಮತ್ತು ಅವನಿಗೆ ಸಹಜವಾಗಿ ಮಾತನಾಡಲು ಸಾಧ್ಯವಾಗುತ್ತದೆ. ಗುರುದೇವರ ಸರ್ವಜ್ಞತೆ ಅವನ ಗಮನಕ್ಕೆ ಬರುತ್ತದೆ. ಕೆಲವೊಂದು ವ್ಯಕ್ತಿಗಳು ಬಹಳ ಮಾತನಾಡುತ್ತಾರೆ. ಅವರನ್ನು ಕೂಡ ಮಧ್ಯದಲ್ಲಿ ತಡೆಯದೇ ಗುರುದೇವರು ಅವರು ಹೇಳುವುದೆಲ್ಲ ಕೇಳಿಸಿಕೊಳ್ಳುತ್ತಾರೆ. ಹಾಗೆಯೇ ಅವರು ಮಾತನಾಡುತ್ತಿರುವಾಗ ಮಧ್ಯ ಮಧ್ಯದಲ್ಲಿ ಪ್ರತಿಸ್ಪಂದಿಸುತ್ತಾರೆ.

೪. ಇತರರ ಒಳ್ಳೆಯ ಕಾರ್ಯವನ್ನು ಪ್ರೋತ್ಸಾಹಿಸುವುದು

ಗಣ್ಯರು ಮಾಡಿರುವ ಒಳ್ಳೆಯ ಕಾರ್ಯಗಳನ್ನು ಗುರುದೇವರು ತುಂಬಾ ಮೆಚ್ಚಿಕೊಳ್ಳುತ್ತಾರೆ. ತಳಮಳದಿಂದ ಕಾರ್ಯವನ್ನು ಮಾಡುವವರಿಗೆ ಅವರು ಸ್ವತಃ ಪ್ರಸಾದ ಅಥವಾ ಇನ್ನಿತರ ಏನಾದರೂ ಉಡುಗೊರೆ ಕೊಟ್ಟು ಪ್ರೋತ್ಸಾಹಿಸುತ್ತಾರೆ. ಕೆಲವೊಮ್ಮೆ ಹೀಗೆ ಮಾಡಲು ಅವರ ಅನಾರೋಗ್ಯದ ಕಾರಣದಿಂದ ಅವರಿಗೆ ಸಾಧ್ಯವಾಗ ದಿದ್ದರೆ, ಇನ್ನಿತರ ಸಂತರ ಹಸ್ತದಿಂದ ಕೊಡಿಸುತ್ತಾರೆ; ಆದರೆ ಸಮಷ್ಟಿ ಕಲ್ಯಾಣಕ್ಕಾಗಿ ಯಾರಾದರೂ ನಿಃಸ್ವಾರ್ಥ ಭಾವದಿಂದ ಕಾರ್ಯವನ್ನು ಮಾಡುತ್ತಿದ್ದರೆ ಗುರುದೇವರು ಅವರ ತ್ಯಾಗ, ಸಮರ್ಪಣೆಯನ್ನು ಗಮನಿಸಲಿಲ್ಲ ಎಂದು ಎಂದಿಗೂ ಆಗುವುದಿಲ್ಲ. ಮಹತ್ವದ ವಿಷಯ ವೆಂದರೆ ಅವರು ಎಲ್ಲ ಕ್ಷೇತ್ರಗಳ ಗಣ್ಯರೊಂದಿಗೆ ಅವರ ಆಸಕ್ತಿಯ ವಿಷಯದ ಬಗ್ಗೆಯೇ ಮಾತನಾಡುತ್ತಾರೆ. ಪ್ರತಿಯೊಂದು ಕ್ಷೇತ್ರದ ಗಣ್ಯರಿಗೂ ಅವರೊಂದಿಗೆ ಮಾತನಾಡುವಾಗ ಅಷ್ಟೇ ಸಹಜತೆಯ ಅರಿವಾಗುತ್ತದೆ, ಇದು ಒಂದು ದೊಡ್ಡ ವೈಶಿಷ್ಟ್ಯವೇ ಆಗಿದೆ.

೫. ಪ್ರತಿಯೊಬ್ಬರಿಗೂ ಅವರ ಕ್ಷಮತೆಗನುಸಾರ ‘ಇದ್ದ ಪರಿಸ್ಥಿತಿಯಲ್ಲಿ ಸಾಧನೆ ಮಾಡಲು ಪ್ರೇರಣೆಯನ್ನು ನೀಡುವುದು

ಯಾವುದೇ ಗೌರವಾನ್ವಿತರು ಆಧ್ಯಾತ್ಮಿಕ ಸಾಧನೆ ಮಾಡುತ್ತಿದ್ದರೆ, ಅವರ ಸಾಧನೆಯ ಪ್ರಯತ್ನಗಳಿಗೆ ಅವರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಹಾಗೆಯೇ ಸಾಧನೆಯಲ್ಲಿ ಹೆಚ್ಚು ಮುಂದೆ ಹೋಗಲು ಅವರಿಗೆ ಮಾರ್ಗದರ್ಶನ ಮಾಡುತ್ತಾರೆ. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರಲ್ಲಿರುವ ಇತರರಿಗೆ ಮೆಚ್ಚುಗೆಯಾಗುವ ಗುಣವೆಂದರೆ ಅವರು ಎದುರಿನ ವ್ಯಕ್ತಿಯ ಮಾತುಗಳನ್ನು ಸಂಪೂರ್ಣ ಕೇಳಿಕೊಳ್ಳುವುದು.

ವಾಸ್ತವದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಪ್ರೇರಣೆಯಿಂದ ಬಹಳ ದೊಡ್ಡ ಕಾರ್ಯ ನಡೆದಿದೆ. ಅನೇಕ ಸಾಧಕರು ಅಧ್ಯಾತ್ಮದಲ್ಲಿ ಉನ್ನತಿಯನ್ನು ಮಾಡಿಕೊಳ್ಳುತ್ತ್ತಿದ್ದಾರೆ; ಆದರೆ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಇತರರ ಎದುರಿಗೆ ಇದರ ಬಗ್ಗೆ ಏನನ್ನೂ ಹೇಳುವುದಿಲ್ಲ. ಅವರು ಕೇವಲ ಎದುರಿನ ವ್ಯಕ್ತಿ ಹೇಳುವುದನ್ನು ಸಂಪೂರ್ಣ ಕೇಳಿಕೊಂಡು ಇರುವ ಪರಿಸ್ಥಿತಿಯಲ್ಲಿ ಅವರ ಇಚ್ಛೆಯಂತೆ ಮತ್ತು ಕೌಶಲ್ಯಕ್ಕನುಗುಣವಾಗಿ ಅವರು ಯಾವ ರೀತಿಯ ಸಾಧನೆ ಮಾಡಬಹುದು, ಈ ಬಗ್ಗೆ ಮಾರ್ಗದರ್ಶನ ಮಾಡುತ್ತಾರೆ.

೬. ಎದುರಿನ ವ್ಯಕ್ತಿಗೆ ರಾಷ್ಟ್ರ ಮತ್ತು ಧರ್ಮಕಾರ್ಯದಲ್ಲಿ ಸಹಭಾಗಿ ಮಾಡಿಕೊಂಡು ಅವನಿಂದ ಸಮಷ್ಟಿ ಸಾಧನೆಯನ್ನು ಮಾಡಿಸಿಕೊಳ್ಳುವುದು

ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಸ್ವತಃ ಸತತ ಕಲಿಯುವ ಸ್ಥಿತಿಯಲ್ಲಿರುತ್ತಾರೆ. ಸಾಧಕರಿಗೂ ಅವರು ಅದನ್ನೇ ಕಲಿಸಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿನ ಗೌರವಾನ್ವಿತರೊಂದಿಗೆ ಮಾತನಾಡುವಾಗ ಅವರಿಗೆ ಏನಾದರೂ ಬೇರೆ ವಿಷಯ ತಿಳಿದರೆ ‘ಇದು ನಿಮ್ಮಿಂದ ನನಗೆ ಕಲಿಯಲು ಸಿಕ್ಕಿತು ಎಂದು ಅವರು ಅತ್ಯಂತ ನಮ್ರತೆಯಿಂದ ಹೇಳುತ್ತಾರೆ. ಆಗ ಮಾತನಾಡುವವರು ಅವರಿಗೆ ಅರಿವಿಲ್ಲದೆಯೇ ಕೈ ಮುಗಿಯುತ್ತಾರೆ. ಗೌರವಾನ್ವಿತರ ಕಾರ್ಯಕ್ಷಮತೆ, ಅವರ ಕೌಶಲ್ಯ ರಾಷ್ಟ್ರ ಮತ್ತು ಧರ್ಮ ಕಾರ್ಯಕ್ಕೆ ಉಪಯೋಗವಾಗಬೇಕು ಮತ್ತು ಆ ಮಾಧ್ಯಮದಿಂದ ಅವರ ಸಮಷ್ಟಿ ಸಾಧನೆಯಾಗಬೇಕು, ಎಂದು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ವಿವಿಧ ಕ್ಷೇತ್ರಗಳಲ್ಲಿನ ಗೌರವಾನ್ವಿತರನ್ನು ಭೇಟಿಯಾಗುತ್ತಾರೆ. ಆಗ ಅತ್ಯಂತ ನಮ್ರತೆಯಿಂದ ‘ನಮ್ಮ ಸಾಧಕರಿಗೂ ಈ ಕ್ಷೇತ್ರದ ಕುರಿತು ಮಾರ್ಗದರ್ಶನ ಮಾಡಿರಿ ಎಂದು ವಿನಂತಿಸುತ್ತಾರೆ. ಇದರ ಹಿಂದಿನ ಉದ್ದೇಶ ‘ನಮ್ಮ ಕಾರ್ಯದಲ್ಲಿ ಅವರು ಸಹಕರಿಸಬೇಕು ಎನ್ನುವ ಸಂಕುಚಿತ ಭಾವನೆ ಖಂಡಿತವಾಗಿಯೂ ಇರುವುದಿಲ್ಲ, ಬದಲಾಗಿ ‘ಆ ವ್ಯಕ್ತಿಯ ಕೈಯಿಂದಲೂ ಏನಾದರೂ ಸಾಧನೆಯಾಗಿ ಅವರ ಉದ್ಧಾರವಾಗಬೇಕು ಎನ್ನುವ ವ್ಯಾಪಕ ಉದ್ದೇಶವಿರುತ್ತದೆ. ಗುರುದೇವರ ಈ ಕೃಪಾವಾತ್ಸಲ್ಯದಿಂದಲೇ ಆ ಜೀವಗಳು ಯಾವುದೇ ಬಾಹ್ಯ ಕಾರಣವಿಲ್ಲದಿರುವಾಗಲೂ ಒಳಗಿನಿಂದಲೇ ಅವರ ಸಂಪರ್ಕಕ್ಕೆ ಬರುತ್ತವೆ.

೭. ತಮಗೆ ತುಂಬಾ ಶಾರೀರಿಕ ತೊಂದರೆಗಳು ಆಗುತ್ತಿದ್ದರೂ, ಇತರರ ಆಧ್ಯಾತ್ಮಿಕ ಉನ್ನತಿಗಾಗಿ ಪ್ರಾಮುಖ್ಯತೆಯನ್ನು ನೀಡುವುದು

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಲ್ಲಿರುವ ಆತ್ಮೀಯತೆ, ಪ್ರೀತಿ, ನಿರಪೇಕ್ಷತೆ ಮತ್ತು ಅವರ ದಿವ್ಯತೇಜ ಇವುಗಳಿಂದಾಗಿ ಅವರನ್ನು ಒಮ್ಮೆ ಭೇಟಿಯಾದ ವ್ಯಕ್ತಿಯೂ ಕಾಯಂ ಸ್ವರೂಪಿ ಅವರವನಾಗಿಯೇ ಹೋಗುತ್ತಾನೆ. ಅವರ ಸಹವಾಸ ದಿವ್ಯ ಆನಂದಮಯ ಉತ್ಸವವೇ ಆಗಿರುತ್ತದೆ. ಅವರೊಂದಿಗೆ ಮಾತನಾಡಿದ ಬಳಿಕ ವ್ಯಕ್ತಿಯ ಮುಖದ ಮೇಲೆ ಹರಡಿರುವ ಮಂದಹಾಸ, ಸಮಾಧಾನ ಮತ್ತು ತೃಪ್ತಿಯ ಭಾವವು ‘ಆ ಕೆಲವು ನಿಮಿಷಗಳ ಮಾತುಗಳು ಆ ಜೀವಕ್ಕೆ ಎಷ್ಟೊಂದು ಆಧ್ಯಾತ್ಮಿಕ ಲಾಭವನ್ನು ಮಾಡಿಕೊಟ್ಟಿವೆ ಎಂಬುದು ಅರಿವಾಗುತ್ತದೆ. ಸಚ್ಚಿದಾನಂದ ಪರಬ್ರಹ್ಮ ಗುರುದೇವರಿಗೆ ಕೆಲವೊಮ್ಮೆ ಕೆಲವು ನಿಮಿಷಗಳೂ ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ. ಅತ್ಯಧಿಕ ಶಾರೀರಿಕ ತೊಂದರೆಯನ್ನು ಅನುಭವಿಸುತ್ತಿದ್ದರೂ ಕೇವಲ ಎದುರಿನ ವ್ಯಕ್ತಿಗೆ ಆನಂದ ಸಿಗಬೇಕೆಂದು ಅವರು ತಮ್ಮ ಸ್ಥಿತಿಯ ವಿಚಾರವನ್ನೂ ಮಾಡದೇ ಅವರೊಂದಿಗೆ ಮಾತನಾಡುತ್ತಾ ಕುಳಿತುಕೊಳ್ಳುತ್ತಾರೆ. ತಮ್ಮ ಸ್ಥಿತಿಗಿಂತ ಆ ಜೀವದ ಆಧ್ಯಾತ್ಮಿಕ ಉದ್ಧಾರವಾಗಲು ಗುರುದೇವರು ಯಾವಾಗಲೂ ಪ್ರಾಧಾನ್ಯತೆಯನ್ನು ಕೊಡುತ್ತಾರೆ. ಎದುರಿಗಿರುವ ವ್ಯಕ್ತಿಯ ಮುಖದ ಮೇಲೆ ಮೂಡಿರುವ ಮಂದಹಾಸ, ಅವನ ಸಾಧನೆಗೆ ದೊರಕಿದ ವೇಗ, ಇದೇ ಗುರುದೇವರು ತಮ್ಮ ಅತ್ಯಂತ ಕಠಿಣ ಶಾರೀರಿಕ ಸ್ಥಿತಿಯಲ್ಲಿಯೂ ಸಾಧಿಸಿದ ಸಂಭಾಷಣೆಯ ನಿಜವಾದ ಫಲವಾಗಿರುತ್ತದೆ. ಸೂರ್ಯಕಾಂತಿ ಹೂಗಳು ಸೂರ್ಯನ ದಿಕ್ಕಿಗೆ ತಿರುಗುತ್ತವೆ. ಅದೇ ರೀತಿ ಎಲ್ಲ ಸಾತ್ತ್ವಿಕ ಜೀವಗಳು ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಕಡೆಗೆ ತಾವಾಗಿಯೇ ಆಕರ್ಷಿಸಲ್ಪಡುತ್ತವೆ. ಅವರ ದಿವ್ಯತ್ವವನ್ನು ಅರಿಯುತ್ತವೆ ಮತ್ತು ಅವರು ಹೇಳಿರುವ ಸಾಧನೆಯ ಮಾರ್ಗದಲ್ಲಿ ಮುಂದುವರಿಯುತ್ತವೆ. ವಿವಿಧ ಕ್ಷೇತ್ರಗಳ, ವಿವಿಧ ಸಮಾಜದ ಘಟಕಗಳ ಗೌರವಾನ್ವಿತರಿಗೆ ಸಚ್ಚಿದಾನಂದ ಪರಬ್ರಹ್ಮ ಗುರುದೇವರ ವಿಷಯದಲ್ಲಿ ಅನಿಸುವ ಭಾವ, ಗೌರವ ಅವರಲ್ಲಿರುವ ಚೈತನ್ಯಶಕ್ತಿಯ ಪ್ರತೀಕವಾಗಿದೆ.

ತಮ್ಮಲ್ಲಿನ ದಿವ್ಯತ್ವದಿಂದ ಎಲ್ಲರಿಗೂ ಈಶ್ವರಪ್ರಾಪ್ತಿಯ ದಿಶೆಯಲ್ಲಿ ಮಾರ್ಗಕ್ರಮಣಮಾಡುವ ಗುರುದೇವ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ದಿವ್ಯ ಮತ್ತು ಪಾವನ ಚರಣಗಳಿಗೆ ಕೋಟಿ ಕೋಟಿ ಪ್ರಣಾಮಗಳು. – ಕು. ಸಾಯಲಿ ದಿಲೀಪ ಡಿಂಗರೆ, ಸನಾತನ ಆಶ್ರಮ, ರಾಮನಾಥಿ, ಗೋವಾ (೫.೫.೨೦೨೩)