ಬಂಗಾಳದಲ್ಲಿ ‘ದಿ ಕೇರಳ ಸ್ಟೋರಿ’ ಮೇಲಿನ ನಿಷೇಧಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ !

ತಮಿಳುನಾಡು ರಾಜ್ಯದಲ್ಲಿನ ಚಿತ್ರಮಂದಿರಗಳಿಗೆ ರಕ್ಷಣೆ ನೀಡಲು ರಾಜ್ಯ ಸರಕಾರಕ್ಕೆ ಆದೇಶ !

ನವದೆಹಲಿ – ‘ದಿ ಕೇರಳ ಸ್ಟೋರಿ’ ಚಿತ್ರದ ಪ್ರದರ್ಶನದ ಮೇಲೆ ಕಾನೂನು ಮತ್ತು ಸುವ್ಯವಸ್ಥೆಯ ಕಾರಣ ನೀಡುತ್ತಾ ಬಂಗಾಳದ ತೃಣಮೂಲ ಕಾಂಗ್ರೆಸ್ ಸರಕಾರ ವಿಧಿಸಿದ್ದ ನಿಷೇಧವನ್ನು ಹಿಂತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಸರಕಾರಕ್ಕೆ ಛೀಮಾರಿ ಹಾಕುತ್ತಾ ಆದೇಶ ನೀಡಿದೆ. ಇದರೊಂದಿಗೆ ತಮಿಳುನಾಡು ಸರಕಾರವೂ ಚಿತ್ರ ವೀಕ್ಷಿಸಲು ಭದ್ರತೆ ನೀಡುವಂತೆ ಆದೇಶಿಸಿದೆ. ಚಿತ್ರವನ್ನು ನಿಷೇಧಿಸುವ ಸಂದರ್ಭದಲ್ಲಿ ಬಂಗಾಳ ಸರಕಾರವು ‘ಈ ಚಿತ್ರವು ಜನರ ಭಾವನೆಗಳನ್ನು ಕೆರಳಿಸುವ ಸಾಧ್ಯತೆಯಿದೆ’ ಎಂದು ಹೇಳಿತ್ತು. ಈ ಪ್ರಕರಣದ ಮುಂದಿನ ವಿಚಾರಣೆ ಜುಲೈ 18 ರಂದು ನಡೆಯಲಿದೆ.

ದೇಶದೆಲ್ಲೆಡೆ ಬಿಡುಗಡೆಯಾದ ಚಿತ್ರ ಬಂಗಾಳದಲ್ಲಿ ಬ್ಯಾನ್ ಮಾಡಲು ಹೇಗೆ ಸಾಧ್ಯ ?

ಮುಖ್ಯ ನ್ಯಾಯಮೂರ್ತಿ ಧನಂಜಯ್ ಚಂದ್ರಚೂಡ್ ಇವರು, ಭಾವನೆಗಳ ಆಧಾರದ ಮೇಲೆ ಜನರ ಮೂಲಭೂತ ಹಕ್ಕಿನಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ರಾಜ್ಯ ಸರಕಾರದ ಮೇಲಿದೆ. ವಿಶೇಷ ಪರಿಸ್ಥಿತಿಗಳಿಂದಾಗಿ ಜಿಲ್ಲೆಯಲ್ಲಿ ನಿಷೇಧಾಜ್ಞೆ ಹೇರಿದ್ದರೆ ಅದು ಬೇರೆಯದೇ ಆಗಿರುತ್ತಿತ್ತು; ಆದರೆ ನೀವು ಈ ಚಿತ್ರವನ್ನು ಇಡೀ ರಾಜ್ಯದಲ್ಲಿ ನಿಷೇಧಿಸಿದ್ದೀರಿ. ಬಂಗಾಳ ಸರಕಾರವು ಚಿತ್ರದ ಮೇಲೆ ನಿಷೇಧ ಹೇರಿರುವುದು ಸರಿಯಾದ ಆಧಾರವನ್ನು ತೋರುತ್ತಿಲ್ಲ. ದೇಶದೆಲ್ಲೆಡೆ ಬಿಡುಗಡೆಯಾದ ಈ ಸಿನಿಮಾವನ್ನು ಕಾನೂನು ಸುವ್ಯವಸ್ಥೆಯ ನೆಪದಲ್ಲಿ ಒಂದೇ ರಾಜ್ಯದಲ್ಲಿ ಬ್ಯಾನ್ ಮಾಡಿದರೆ ಹೇಗೆ ? ಎಂದುಉ ಮುಖ್ಯ ನ್ಯಾಯಮೂರ್ತಿಗಳು ಪ್ರಶ್ನೆ ಕೇಳಿದ್ದಾರೆ.

ನಿಮಗೆ ಚಿತ್ರ ಇಷ್ಟವಾಗದಿದ್ದರೆ, ಅದನ್ನು ನೋಡಬೇಡಿ !

ಯಾವುದೇ ರೀತಿಯ ಅಸಹಿಷ್ಣುತೆಯನ್ನು ಸಹಿಸಲಾಗುವುದಿಲ್ಲ; ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಯಾರೊಬ್ಬರ ಭಾವನೆಗಳು ಅಥವಾ ಸಾರ್ವಜನಿಕ ಆಂದೋಲನಗಳಿಂದ ನಿರ್ಧರಿಸಲಾಗುವುದಿಲ್ಲ. ಭಾವನೆಗಳ ಸಾರ್ವಜನಿಕ ಪ್ರದರ್ಶನವನ್ನು ಸಹ ನಿಯಂತ್ರಿಸಬೇಕು. ಒಂದು ವೇಳೆ ನಿಮಗೆ ಚಿತ್ರ ಇಷ್ಟವಾಗದಿದ್ದರೆ ನೋಡಬೇಡಿ ಎಂದು ಮುಖ್ಯ ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದರು.

ತಮಿಳುನಾಡಿನ ಚಿತ್ರಮಂದಿರದ ಮಾಲೀಕರ ಮೇಲೆ ಒತ್ತಡ ಹೇರಬೇಡಿ !

ನ್ಯಾಯಮೂರ್ತಿಗಳು, ತಮಿಳುನಾಡು ಸರಕಾರ ಚಿತ್ರಕ್ಕೆ ನಿಷೇಧ ಹೇರಿಲ್ಲ. ಅಲ್ಲಿ ಚಿತ್ರ ಪ್ರದರ್ಶನ ಮಾಡದಿರಲು ಚಿತ್ರಮಂದಿರದ ಮಾಲೀಕರು ನಿರ್ಧರಿಸಿದ್ದಾರೆ. ಅವರ ಮೇಲೆ ಯಾವುದೇ ಒತ್ತಡವಿಲ್ಲ ಎಂದೂ ಹೇಳಿದ್ದಾರೆ. ತಮಿಳುನಾಡು ಸರಕಾರವು ಚಿತ್ರಮಂದಿರಗಳಿಗೆ ಭದ್ರತೆ ನೀಡಬೇಕು. ಚಿತ್ರಮಂದಿರಗಳ ಮಾಲೀಕರ ಮೇಲೆ ಸರಕಾರ ಅಥವಾ ಸರಕಾರಕ್ಕೆ ಸಂಬಂಧಿಸಿದವರು ಯಾವುದೇ ಒತ್ತಡ ತರಬಾರದು. ‘ಚಿತ್ರದ ಆರಂಭದಲ್ಲಿ ಚಿತ್ರದಲ್ಲಿ ಉಲ್ಲೇಖಿಸಿರುವ 32 ಸಾವಿರ ಯುವತಿಯರ ಅಂಕಿಅಂಶ ಅಧಿಕೃತವಲ್ಲ ಎಂದು ಸೂಚನೆ ತೋರಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿಗಳು ಚಿತ್ರದ ನಿರ್ಮಾಪಕರಿಗೆ ಆದೇಶ ನೀಡಿದ್ದಾರೆ.

(ಸೌಜನ್ಯ : Republic Bharat)

ಬಂಗಾಳ ಸರಕಾರವು ಮೇ 8 ರಂದು ನಿಷೇಧ ಹೇರಿತ್ತು !

ಮಮತಾ ಬ್ಯಾನರ್ಜಿಯವರ ಸರಕಾರ ಮೇ 8 ರಂದು ‘ದಿ ಕೇರಳ ಸ್ಟೋರಿ’ಯನ್ನು ನಿಷೇಧಿಸಿತ್ತು. ಚಿತ್ರ ಮೇ 5 ರಂದು ದೇಶಾದ್ಯಂತ ಬಿಡುಗಡೆಯಾಗಿತ್ತು. ಈ ಕುರಿತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ಸಮುದಾಯವನ್ನು ಕೆಟ್ಟದಾಗಿ ಕಾಣುವಂತೆ ಮಾಡಲಾಗಿದೆ ಎಂದು ಹೇಳಿದ್ದರು. ‘ದಿ ಕೇರಳ ಸ್ಟೋರಿ ಚಿತ್ರದ ಮೂಲಕ ಕೇರಳವನ್ನು ಕೆಟ್ಟದಾಗಿ ತೋರಿಸುವ ಪ್ರಯತ್ನ ನಡೆದಿದೆ ಎಂದು ಹೇಳಿದರು. (ಸುಪ್ರೀಂ ಕೋರ್ಟ್ ಆದೇಶದ ನಂತರ, ಮಮತಾ ಬ್ಯಾನರ್ಜಿಯವರ ನಿರ್ಧಾರವು ಕೇವಲ ಹಿಂದೂದ್ವೇಷಿ ಆಗಿತ್ತು! – ಸಂಪಾದಕರು)

ಸಂಪಾದಕೀಯ ನಿಲುವು

ಸುಪ್ರೀಂ ಕೋರ್ಟ್‌ನ ತೀರ್ಪು ಶ್ಲಾಘನೀಯವಾಗಿದೆ. ಇದರೊಂದಿಗೆ, ಮುಸ್ಲಿಮರನ್ನು ಮೆಚ್ಚಿಸಲು ಹಿಂದೂಗಳ ಮೇಲಿನ ದಬ್ಬಾಳಿಕೆಯನ್ನು ಹತ್ತಿಕ್ಕುವ ಈ ಅನ್ಯಾಯಯುತ ನಿಷೇಧವನ್ನು ಹೇರಿದ ಬಂಗಾಳ ಸರಕಾರವನ್ನು ಶಿಕ್ಷಿಸಬೇಕೆಂದು ಹಿಂದೂಗಳು ಭಾವಿಸುತ್ತಾರೆ !