ಯಾದಗಿರಿಯಲ್ಲಿ ವಾದ ತಾರಕಕ್ಕೆ ಏರಿ ಭಾಜಪ ಕಾರ್ಯಕರ್ತನ ಹತ್ಯೆ

ಯಾದಗಿರಿ – ಇಲ್ಲಿಯ `ರಾಯಲ್ ಗಾರ್ಡನ’ ಉಪಹಾರಗೃಹದಲ್ಲಿ ರಾತ್ರಿ ಸ್ನೇಹಿತರೊಂದಿಗೆ ಊಟಕ್ಕೆ ಹೋಗಿದ್ದ ಶ್ರೀನಿವಾಸ ಹೆಸರಿನ ಭಾಜಪ ಕಾರ್ಯಕರ್ತನನ್ನು ಉಪಹಾರಗೃಹದ ಮುಸಲ್ಮಾನ ನೌಕರ ಮತ್ತು ಇತರೆ ಕೆಲವು ಜನರು ಸೇರಿ ಬರ್ಬರವಾಗಿ ಹತ್ಯೆ ಮಾಡಿದರು. ಶ್ರೀನಿವಾಸನು ಜಗಳವನ್ನು ಬಿಡಿಸಲು ಹೋಗಿದ್ದಾಗ ಅವನನ್ನು ಬರ್ಬರವಾಗಿ ಹತ್ಯೆ ಮಾಡಲಾಯಿತು. ಈ ಘಟನೆಯನ್ನು ನಿಧೀಸಲು ಭಾಜಪ ಮತ್ತು ಹಿಂದುತ್ವನಿಷ್ಠ ಸಂಘಟನೆಯ ಕಾರ್ಯಕರ್ತರು ಆಂದೋಲನ ನಡೆಸಿದರು.

ರಾಯಲ ಗಾರ್ಡನ ಉಪಹಾರಗೃಹದ ಮಾಲೀಕ ಮತ್ತು ಶ್ರೀನಿವಾಸ ಇವರು ಊಟವನ್ನು ಮುಗಿಸಿ ಮರಳುತ್ತಿರುವಾಗ ನಿಲ್ಲಿಸಲಾಗಿದ್ದ ವಾಹನವನ್ನು ತೆಗೆಯುವುದರ ಮೇಲೆ ಅವರ ಸ್ನೇಹಿತರಲ್ಲಿ ಜಗಳ ಪ್ರಾರಂಭವಾಯಿತು. ಶ್ರೀನಿವಾಸನು ಈ ಗದ್ದಲವನ್ನು ನೋಡಿ ಜಗಳವನ್ನು ಬಿಡಿಸಲು ಹೋದನು. ಆ ಸಮಯದಲ್ಲಿ ಉಪಹಾರಗೃಹದಲ್ಲಿ ಕೆಲಸ ಮಾಡುತ್ತಿದ್ದ ಮಹಮ್ಮದ ಅನಸ ಮತ್ತು ಇತರೆ 4-5 ಜನರು ಅಕಸ್ಮಿಕವಾಗಿ ಬಂದು ಶ್ರೀನಿವಾಸನ ಹೊಟ್ಟೆಗೆ ಚಾಕುವಿನಿಂದ ತಿವಿದರು. ಶ್ರೀನಿವಾಸನು ಕೆಳಗೆ ಕುಸಿದು ಬಿದ್ದು ಸ್ಥಳದಲ್ಲಿಯೇ ಮರಣ ಹೊಂದಿದನು. ಪೊಲೀಸರು ಈ ಹತ್ಯೆಯ ಪ್ರಕರಣದಲ್ಲಿ 6 ಜನರನ್ನು ಬಂಧಿಸಿದ್ದಾರೆ.

ಸಂಪಾದಕರ ನಿಲುವು

ಕರ್ನಾಟಕದಲ್ಲಿ ಭಾಜಪ ಆಡಳಿತವಿರಲಿ ಅಥವಾ ಕಾಂಗ್ರೆಸ್ಸಿನದ್ದಾಗಿರಲಿ ಹಿಂದೂ ಕಾರ್ಯಕರ್ತರ ಹತ್ಯೆ ನಿಂತಿಲ್ಲ, ಈ ಸ್ಥಿತಿ ಹಿಂದೂ ರಾಷ್ಟ್ರ ಅನಿವಾರ್ಯಗೊಳಿಸುತ್ತದೆ !