‘ಲವ್ ಜಿಹಾದ್’ ಬಗ್ಗೆ ಹಿಂದೂಗಳನ್ನು ಜಾಗೃತರಾಗುವರೆಂಬ ಭಯದಿಂದ ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ವಿರೋಧ ! – ನ್ಯಾಯವಾದಿ ಮಣಿ ಮಿತ್ತಲ್

‘ದಿ ಕೇರಳ ಸ್ಟೋರಿ : ನಿಷೇಧ ಚಿತ್ರದ ಮೇಲೋ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೋ ?’ ವಿಶೇಷ ಸಂವಾದ

ನ್ಯಾಯವಾದಿ ಮಣಿ ಮಿತ್ತಲ್

‘ಲವ್ ಜಿಹಾದ್’ ಎಂಬ ಸೂಕ್ಷ್ಮ ವಿಷಯದ ಮೇಲೆ ‘ದಿ ಕೇರಳ ಸ್ಟೋರಿ’ ಸಿನಿಮಾ ಮಾಡಿದ್ದಕ್ಕೆ ನಿರ್ಮಾಪಕರು ಮತ್ತು ನಿರ್ದೇಶಕರನ್ನು ಅಭಿನಂದಿಸಲೇಬೇಕು. ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಸರಕಾರಗಳು ‘ದಿ ಕೇರಳ ಸ್ಟೋರಿ’ಯನ್ನು ನಿಷೇಧಿಸಿದವು. ಕಮ್ಯುನಿಸ್ಟರು ಮತ್ತು ಮುಸ್ಲಿಮರನ್ನು ಓಲೈಸುವ ಈ ರಾಜ್ಯ ಸರಕಾರಗಳಿಗೆ ನ್ಯಾಯಾಲಯ ಛೀಮಾರಿ ಹಾಕಿದ ನಂತರವೂ ಹಿಂದೂಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿದ್ದಾರೆ. ಈ ರಾಜ್ಯಗಳಲ್ಲ್ಲಿ ಚಿತ್ರಕ್ಕೆ ನಿಷೇಧ ಹೇರಲಾಗಿದ್ದರೂ ಇದೀಗ ಈ ಚಿತ್ರ ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಹಲವು ದೇಶಗಳಲ್ಲಿ ಬಿಡುಗಡೆಯಾಗಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ‘ಲವ್ ಜಿಹಾದ್’ ಮಾಡುವವರ ಹುನ್ನಾರ ಈಗ ಬಯಲಾಗಿದ್ದು, ‘ದಿ ಕೇರಳ ಸ್ಟೋರಿ’ಯಂತಹ ಚಿತ್ರಗಳನ್ನು ನೋಡಿ ಹಿಂದೂಗಳು ಎಚ್ಚೆತ್ತುಕೊಳ್ಳುತ್ತಾರೆ, ಈ ಭಯದಿಂದ ‘ದಿ ಕೇರಳ ಸ್ಟೋರಿ’ಗೆ ವಿರೋಧವಾಗುತ್ತಿದೆ ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಮಣಿ ಮಿತ್ತಲ್ ಇವರು ಪ್ರತಿಪಾದಿಸಿದರು. ಅವರು ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ್ದ ‘ದಿ ಕೇರಳ ಸ್ಟೋರಿ : ನಿಷೇಧವು ಚಿತ್ರದ ಮೇಲೋ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೋ ?’ ಈ ವಿಷಯದ ಆನ್‌ಲೈನ್ ‘ವಿಶೇಷ ಸಂವಾದ’ದಲ್ಲಿ ಮಾತನಾಡುತ್ತಿದ್ದರು.

ನ್ಯಾಯವಾದಿ ಮಣಿ ಮಿತ್ತಲ್ ತಮ್ಮ ಮಾತನ್ನು ಮುಂದುವರೆಸುತ್ತಾ, ವಾಸ್ತವದಲ್ಲಿ, ‘ದಿ ಕೇರಳ ಸ್ಟೋರಿ’ಯಲ್ಲಿ ‘ಲವ್ ಜಿಹಾದ್’ ಬಗ್ಗೆ ಸ್ವಲ್ಪವೇ ತೋರಿಸಿದೆ ಪ್ರತ್ಯಕ್ಷದಲ್ಲಿ ಅದು ತುಂಬಾ ಭಯಾನಕವಾಗಿದೆ. ‘ಓ ಮೈ ಗಾಡ್’, ‘ಪಿಕೆ’ಯಂತಹ ಅನೇಕ ಹಿಂದೂವಿರೋಧಿ ಚಿತ್ರಗಳು ಬಿಡುಗಡೆಯಾಗಿವೆ ಮತ್ತು ‘ಆಶ್ರಮ’ದಂತಹ ವೆಬ್‌ಸೀರೀಸ್‌ಗಳು ಹಿಂದೂ ಧರ್ಮ ಮತ್ತು ಋಷಿಗಳನ್ನು ಅವಮಾನಿಸಿದವು. ‘ದಿ ಕೇರಳ ಸ್ಟೋರಿ’ಯನ್ನು ವಿರೋಧಿಸುವವರು ಆಗ ಸುಮ್ಮನಿದ್ದರು. ‘ದಿ ಕೇರಳ ಸ್ಟೋರಿ’ ಚಿತ್ರವನ್ನು ಹಿಂದೂಗಳು ದೊಡ್ಡ ಮಟ್ಟದಲ್ಲಿ ಬೆಂಬಲಿಸಬೇಕು ಎಂದು ಹೇಳಿದರು.

ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ರಾಜ್ಯ ಸಂಘಟಕ ಶ್ರೀ. ಸುನಿಲ್ ಘನವಟ್ ಇವರು ಮಾತನಾಡುತ್ತಾ, ‘ದಿ ಕೇರಳ ಸ್ಟೋರಿ’ ಈ ಸಿನಿಮಾ ಕೇರಳಕ್ಕೆ ಮಾತ್ರ ಸೀಮಿತವಾಗಿರದೆ ದೇಶ ವಿದೇಶಗಳಲ್ಲಿ ‘ಲವ್ ಜಿಹಾದ್’ ಸಂಚು ನಡೆಯುತ್ತಿದೆ. ಈ ಚಿತ್ರದ ಮೂಲಕ ಭಯೋತ್ಪಾದಕ ಸಂಘಟನೆ ‘ಐಸಿಸ್’ನ ನೈಜತೆ ಬೆಳಕಿಗೆ ಬಂದಿದೆ. ಕೆಲವು ಪಕ್ಷಗಳ ರಾಜಕೀಯ ಮುಖಂಡರು ಈ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸುತಿದ್ದಾರೆ, ಅಲ್ಪಸಂಖ್ಯಾತರಿಗೆ ಮಾತ್ರ ಅಭಿವ್ಯಕ್ತಿ ಸ್ವಾತಂತ್ರ್ಯವಿದೆಯೇ ? ‘ಲವ್ ಜಿಹಾದ್’ ಮತ್ತು ‘ಭಯೋತ್ಪಾದನೆ’ಯ ವಾಸ್ತವವನ್ನು ಒಪ್ಪಿಕೊಳ್ಳದೆ, ‘ಈ ಸಿನಿಮಾ ಮುಸ್ಲಿಮರ ವಿರುದ್ಧವಾಗಿದೆ’ ಎಂದು ತಪ್ಪು ಪ್ರಚಾರ ಮಾಡಲಾಗುತ್ತಿದೆ. ಈ ಚಿತ್ರವನ್ನು ಮಾಡುವವರು ಮತ್ತು ನಿರ್ಮಾಪಕರು ತೋರಿದ ಧೈರ್ಯಕ್ಕೆ ಎಲ್ಲರಿಗೂ ಹಿಂದೂ ಜನಜಾಗೃತಿ ಸಮಿತಿ ಅಭಿನಂದನೆ ಸಲ್ಲಿಸುತ್ತದೆ. ಹಿಂದೂ ಸಮಾಜ ಈಗ ಎಚ್ಚೆತ್ತುಕೊಂಡಿದ್ದು, ಹೆಚ್ಚಿನ ಜನರು ‘ದಿ ಕೇರಳ ಸ್ಟೋರಿ’ ಸಿನಿಮಾ ವೀಕ್ಷಿಸಲು ಸೋಶಿಯಲ್ ಮೀಡಿಯಾ ಸೇರಿದಂತೆ ಹಲವು ಮಾಧ್ಯಮಗಳ ಮೂಲಕ ಪ್ರಚಾರ ಮಾಡುತ್ತಿದ್ದಾರೆ, ಅವರಿಗೂ ಅಭಿನಂದನೆ ತಿಳಿಸಬೇಕಿದೆ. ‘ದಿ ಕಾಶ್ಮೀರ್ ಫೈಲ್ಸ್’, ‘ದಿ ಕೇರಳ ಸ್ಟೋರಿ’ ಇಂತಹ ಹಿಂದೂಗಳನ್ನು ಜಾಗೃತಗೊಳಿಸುವ ಹಲವು ಸಿನಿಮಾಗಳನ್ನು ಮಾಡಬೇಕಿದೆ ಎಂದು ಹೇಳಿದರು.