ಶೇವಗಾಂವ್‌ನಲ್ಲಿ (ಜಿಲ್ಲಾ ನಗರ) ಛತ್ರಪತಿ ಸಂಭಾಜಿ ಮಹಾರಾಜರ ಜಯಂತಿ ಸಂದರ್ಭದಲ್ಲಿ ತೆಗೆದ ಮೆರವಣಿಗೆಯ ಮೇಲೆ ಕಲ್ಲುತೂರಾಟ !

ಶೇವಗಾಂವ್ (ಜಿಲ್ಲಾ ನಗರ) – ಮೇ 14 ರಂದು ಛತ್ರಪತಿ ಸಂಭಾಜಿ ಮಹಾರಾಜರ ಜಯಂತಿಯಂದು ಶೇವಗಾಂವ್ ನಗರದಲ್ಲಿ ನಡೆದ ಮೆರವಣಿಗೆಯಲ್ಲಿ ಮೆರವಣಿಗೆ ಮತ್ತು ಪ್ರಾರ್ಥನಾ ಸ್ಥಳದ ಮೇಲೆ ಕಲ್ಲು ತೂರಾಟ ನಡೆಸಲಾಯಿತು. ಸಮೂಹವು ಅಂಗಡಿಗಳು ಮತ್ತು ವಾಹನಗಳನ್ನು ಹಾನಿಗೊಳಿಸಿತು ಮತ್ತು ಕೆಲವುಕಡೆಗಳಲ್ಲಿ ಬೆಂಕಿ ಹಚ್ಚಲಾಯಿತು. ಪೊಲೀಸರಿಗೆ ಲಾಠಿಚಾರ್ಜ್ ಮಾಡಬೇಕಾಯಿತು. ಈ ಎಲ್ಲಾ ಪ್ರಕರಣಗಳಲ್ಲಿ 4 ಪೊಲೀಸರು ಗಾಯಗೊಂಡಿದ್ದಾರೆ. ಮುಂದಿನ 4 ದಿನಗಳ ಕಾಲ ಸಭೆ-ಸಮಾರಂಭಗಳ ಮೇಲೆ ನಿಷೇಧ ಹೇರಲು ಆಡಳಿತವು ಚಿಂತನೆ ನಡೆಸಿದೆ.

ಉದ್ವಿಗ್ನತೆಯಿಂದಾಗಿ ಆ ಭಾಗದ ಅಂಗಡಿಕಾರರು ತಕ್ಷಣ ತಮ್ಮ ಅಂಗಡಿಗಳನ್ನು ಮುಚ್ಚಿದರು. ಕೆಲವು ಅಂಗಡಿಗಳ ಮೇಲೂ ದಾಳಿ ನಡೆಸಿ ಧ್ವಂಸಗೊಳಿಸಲಾಗಿದೆ. ಈ ವೇಳೆ ಗುಂಪು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ಪರಿಸ್ಥಿತಿಯನ್ನು ಹತೋಟಿಗೆ ತರಲು ಆಡಳಿತವು ಕ್ರಮ ಕೈಗೊಳ್ಳುತ್ತಿದೆ ಎಂದು ಜಿಲ್ಲಾಧಿಕಾರಿ ಪ್ರಸಾದ ಮತೆ ಹಾಗೂ ಉಪಾಧೀಕ್ಷಕ ಸಂದೀಪ ಮಿಟಕೆ ಇವರು ತಿಳಿಸಿದ್ದಾರೆ.

ಸಂಪಾದಕರ ನಿಲುವು

ಹಿಂದೂಗಳ ದೇಶದಲ್ಲಿ ಹಲವು ವರ್ಷಗಳಿಂದ ಹಿಂದೂಗಳ ಮೆರವಣಿಗೆಗಳ ಮೇಲೆಯೇ ದಾಳಿ ಮಾಡುವ ಧೈರ್ಯ ಮಾಡಲಾಗುತ್ತಿದೆ. ಈ ಪರಿಸ್ಥಿತಿಯನ್ನು ಬದಲಾಯಿಸಲು ಹಿಂದೂಗಳು ಈಗ ಕಾನೂನಿನ ಮಾರ್ಗದಿಂದ ಮಾಡಬೇಕು. ಇನ್ಮುಂದೆ ಇಂತಹ ಕೃತ್ಯ ಮಾಡಲು ಯಾರಿಗೂ ಧೈರ್ಯ ಮಾಡದಂತೆ ಹಿಂದೂಗಳು ವಾತಾವರಣ ಸೃಷ್ಟಿಸಬೇಕು !