ಪುಂಛ್‌ನಲ್ಲಿನ (ಜಮ್ಮು-ಕಾಶ್ಮೀರ) ಭಯೋತ್ಪಾದಕ ಆಕ್ರಮಣಕ್ಕೆ ಪ್ರತ್ಯುತ್ತರ ನೀಡಬೇಕು !

ಭಾರತೀಯ ಸೈನ್ಯದ ಒಂದು ವಾಹನ ಭಿಂಬರಗಲೀಯಿಂದ (ರಾಜೌರೀ) ಪುಂಛ್‌ನ ಕಡೆಗೆ ಬರುತ್ತಿತ್ತು. ಆಗ ಭಯೋತ್ಪಾದಕರು ವಾಹನದ ಮೇಲೆ ‘ಗ್ರೆನೇಡ್ನಿಂದ ದಾಳಿ ನಡೆಸಿದರು. ಇದರಿಂದ ವಾಹನಕ್ಕೆ ಬೆಂಕಿ ತಾಗಿತು. ಈ ಆಕ್ರಮಣದಲ್ಲಿ ಭಾರತೀಯ ಸೈನ್ಯದ ೫ ಜನ ಸೈನಿಕರು ಹುತಾತ್ಮರಾದರು ಮತ್ತು ಒಬ್ಬ ಸೈನಿಕ ಗಂಭೀರವಾಗಿ ಗಾಯಗೊಂಡಿದ್ದಾನೆ.

೧. ಕಾಶ್ಮೀರದಲ್ಲಿ ಭಯೋತ್ಪಾದನೆ ಇದೆ ಎಂದು ತೋರಿಸಲು ಪಾಕಿಸ್ತಾನದಿಂದಾದ ಪ್ರಯತ್ನ !

ಭಿಂಬರಗಲೀ (ರಾಜೌರಿ) ಹಾಗೂ ಪುಂಛ್‌ನಲ್ಲಿನ ಈ ಭಾಗ ‘ಸೌತ್ ಆಫ್ ಪಿರ್ ಪಂಜಾಲ ಅಂದರೆ ಪುಂಛ್, ಅಖನೌರ, ರಾಜೌರಿ, ಜಮ್ಮು ಈ ಪ್ರದೇಶದಲ್ಲಿ ಬರುತ್ತದೆ. ಈ ಪ್ರದೇಶದಲ್ಲಿ ಕಳೆದ ವರ್ಷವಿಡೀ ಯಾವುದೇ ಭಯೋತ್ಪಾದಕ ಆಕ್ರಮಣ ಆಗಿರಲಿಲ್ಲ. ಕಾಶ್ಮೀರದಲ್ಲಿನ ಭಯೋತ್ಪಾದನೆಯೂ ಕಡಿಮೆಯಾಗಿದ್ದು, ಈಗ ಅದು ಕೇವಲ ಕಾಶ್ಮೀರ ಕಣಿವೆಯ ವರೆಗೆ ಮಾತ್ರ ಸೀಮಿತವಾಗಿದೆ. ಈ ಪ್ರದೇಶದಲ್ಲಿಯೂ ಕೇವಲ ‘ಸಾಫ್ಟ್ ಟಾರ್ಗೆಟ್ಸ್ (ಕಾಶ್ಮೀರಿ ಹಿಂದೂಗಳು ಅಥವಾ ಅಲ್ಲಿನ ಕಾರ್ಮಿಕರ ಮೇಲೆ) ಗಳ ಮೇಲೆ ಆಕ್ರಮಣಗಳು ಆಗುತ್ತವೆ. ಈ ಆಕ್ರಮಣಗಳ ಮೂಲಕ ಪಾಕಿಸ್ತಾನಕ್ಕೆ ಪುಂಛ್-ರಾಜೌರಿ ಈ ಪ್ರದೇಶದಲ್ಲಿಯೂ ಭಯೋತ್ಪಾದನೆ ಇದೆ ಎಂದು ತೋರಿಸಲಿಕ್ಕಿತ್ತು. ‘ಜೀ ೨೦ಯ (ವಿಕಸಿತ ಹಾಗೂ ವಿಕಸನಶೀಲ ೨೦ ದೇಶಗಳ ಹಣಕಾಸು ಸಚಿವರು ಮತ್ತು ಮಧ್ಯವರ್ತಿ ಬ್ಯಾಂಕುಗಳ ಗವರ್ನರ್‌ಗಳ ಸಂಘಟನೆಗಳು) ಒಂದು ಸಭೆ ಮೇ ತಿಂಗಳಲ್ಲಿ ಶ್ರೀನಗರದಲ್ಲಿ ನಡೆಯಲಿಕ್ಕಿದೆ. ಶ್ರೀನಗರದಲ್ಲಿ ಮೊದಲ ಬಾರಿಯೇ ಇಂತಹ ಅಂತರರಾಷ್ಟ್ರೀಯ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ‘ಕಾಶ್ಮೀರದಲ್ಲಿನ ಭಯೋತ್ಪಾದನೆ ಇನ್ನೂ ಮುಗಿದಿಲ್ಲ. ಕಾಶ್ಮೀರದ ಬಗ್ಗೆ ಸಂಯುಕ್ತ ರಾಷ್ಟ್ರ ಚರ್ಚೆ ಮಾಡುವುದು ಆವಶ್ಯಕವಾಗಿದೆ, ಎಂದು ತೋರಿಸಲಿಕ್ಕಾಗಿ ಪಾಕಿಸ್ತಾನ ಮಾಡಿದ ಧೂರ್ತತನ ಇದಾಗಿದೆ.

೨. ಪಾಕಿಸ್ತಾನಕ್ಕೆ ಪಾಠ ಕಲಿಸಲು ಪುನಃ ‘ಸರ್ಜಿಕಲ್ ಸ್ಟ್ರೈಕ್  ಮಾಡಬೇಕು !

ಇಂತಹ ಭಯೋತ್ಪಾದಕ ಆಕ್ರಮಣಗಳನ್ನು ತಡೆಯಲು ‘ಎಂಟೀ ಇನ್ಫಿಲ್ಟ್ರೇಶನ್ ಆಪರೇಶನ್ಸ್ (ನುಸುಳುಕೋರರನ್ನು ತಡೆಯಲು ಮಾಡುವ ಆಕ್ರಮಣಗಳು) ಹಾಗೂ ‘ಎಂಟೀ ಟೆರರಿಸ್ಟ್ ಆಪರೇಶನ್ಸ್ (ಭಯೋತ್ಪಾದಕರನ್ನು ತಡೆಯಲು ಮಾಡಲಾಗುವ ಆಕ್ರಮಣಗಳು) ಇವುಗಳನ್ನು ಪ್ರಾಧಾನ್ಯತೆಯಿಂದ ಸೈನಿಕರಿಂದ ಹಮ್ಮಿಕೊಳ್ಳಲಾಗುವುದು. ಇದರಲ್ಲಿ ಯಾವ ಭಯೋತ್ಪಾದಕರು ಭಾರತದ ಸರಹದ್ದಿನಲ್ಲಿ ಬಂದಿರುತ್ತಾರೆಯೋ ಅವರನ್ನು ಸಾಯಿಸಲು ಸಾಧ್ಯವಾಗಲಿದೆ. ಇದರ ಬಗ್ಗೆ ಯಾರ ಮನಸ್ಸಿನಲ್ಲಿಯೂ ಸಂಶಯಬೇಡ. ಆದರೆ ಪಾಕಿಸ್ತಾನಕ್ಕೆ ಪಾಠ ಕಲಿಸುವುದು ಹೆಚ್ಚು ಮಹತ್ವದ್ದಾಗಿದೆ. ‘ಪಾಕಿಸ್ತಾನ ಭಯೋತ್ಪಾದಕ ಆಕ್ರಮಣ ಮಾಡಿದರೆ ಅದು ದೊಡ್ಡ ಬೆಲ ತೆರಬೇಕಾಗುವುದು, ಎಂಬ ಅರಿವನ್ನು ಮೂಡಿಸಲು ಮತ್ತೊಮ್ಮೆ ‘ಸರ್ಜಿಕಲ್ ಸ್ಟ್ರೈಕ್ (ಒಂದು ವಿಶಿಷ್ಟ ಸ್ಥಳದ ಮೇಲೆ ಮಾಡುವ ಆಕ್ರಮಣ) ಮಾಡಬೇಕು ಹಾಗೂ ಅದನ್ನು ಭಾರತೀಯ ಸೈನ್ಯ, ವಾಯು ಅಥವಾ ನೌಕಾ ದಳವೂ ಮಾಡಬಹುದು.

– ಬ್ರಿಗೇಡಿಯರ್ ಹೇಮಂತ ಮಹಾಜನ (ನಿವೃತ್ತ), ಪುಣೆ.