ಜನರೇ, ಉತ್ಪಾದನೆಗಳ ಮೇಲೆ ಮುದ್ರಿಸಲಾದ ದೇವತೆಗಳ ಚಿತ್ರಗಳ ಅಥವಾ ಶುಭಚಿಹ್ನೆಗಳಿಗೆ ಅವಮಾನ ಆಗಬಾರದೆಂದು ಅವುಗಳನ್ನು ಎಲ್ಲಿಯೂ ಎಸೆಯದೇ ಅಗ್ನಿಯಲ್ಲಿ ವಿಸರ್ಜಿಸಿರಿ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

‘ಸದ್ಯ ಅನೇಕ ಉತ್ಪಾದಕರು ತಮ್ಮ ಉತ್ಪಾದನೆಗಳ ಮೇಲೆ ಜನತೆಯ ಶ್ರದ್ಧಾಸ್ಥಾನದಲ್ಲಿರುವ ದೇವತೆಯ ಹೆಸರು, ಚಿತ್ರ ಅಥವಾ ಶುಭಚಿಹ್ನೆಗಳನ್ನು ಮುದ್ರಿಸುತ್ತಾರೆ. ಉತ್ಪಾದನೆಗಳ ಮೇಲೆ ದೇವತೆಯ ಹೆಸರನ್ನು ಶ್ರದ್ಧೆಯಿಂದ ಮುದ್ರಣ ಮಾಡಿದ್ದರೂ, ಸಹ ಅವುಗಳ ಬಳಕೆಯಾದ ನಂತರ ಅನೇಕಬಾರಿ ದೇವತೆಯ ಹೆಸರು ಕಾಲಡಿ ಬಿದ್ದು ತುಳಿಯಲ್ಪಡುವುದರಿಂದ  ಅಥವಾ ಕಸದಬುಟ್ಟಿಯಲ್ಲಿ ಹಾಕಿದ್ದರಿಂದ ಆ ದೇವತೆಯ ಅವಮಾನವಾಗುತ್ತದೆ. ದೇವತೆಗಳ ಚಿತ್ರದಲ್ಲಿ, ಹಾಗೆಯೇ ಹೆಸರಿನಲ್ಲಿ ಅವರ ಶಕ್ತಿ ಕಾರ್ಯನಿರತವಾಗಿರುತ್ತದೆ. ನಮ್ಮ ದೇವತೆಗಳ, ಶ್ರದ್ಧಾಸ್ಥಾನಗಳಿಗೆ ಈ ರೀತಿ ಅವಮಾನವಾಗಬಾರದೆಂದು ಇದಕ್ಕಾಗಿ ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕು. ಇಂತಹ ವಸ್ತುಗಳ ಬಳಕೆಯಾದ ನಂತರ ಆ ವಸ್ತುವಿನ ಮೇಲಿನ ದೇವತೆಯ ಹೆಸರಿನ ‘ಸ್ಟಿಕರ್’ ಅಥವಾ ಚಿತ್ರವನ್ನು ಅಗ್ನಿಯಲ್ಲಿ ವಿಸರ್ಜನೆ ಮಾಡಬೇಕು. ಆ ಸಮಯಕ್ಕೆ ಸಂಬಂಧಿತ ದೇವತೆಗೆ ‘ನನ್ನ ಮೂಲಕ ನಿನ್ನ ಅವಮಾನವಾಗಬಾರದೆಂದು ನಿನ್ನ ಚಿತ್ರವನ್ನು ಅಗ್ನಿಯಲ್ಲಿ ವಿಸರ್ಜನೆ ಮಾಡುತ್ತಿದ್ದೇನೆ ,’ ಎಂದು ಪ್ರಾರ್ಥನೆ ಮಾಡಬೇಕು. ಒಂದುವೇಳೆ ಯಾವುದಾದರೊಂದು ವಸ್ತುವನ್ನು ಅಗ್ನಿಯಲ್ಲಿ ವಿಸರ್ಜಿಸಲು ಆಗುವುದಿಲ್ಲವೋ, ಆಗ ದೇವತೆಯ ಹೆಸರಿಗೆ ಅಥವಾ ಚಿತ್ರಕ್ಕೆ ಅವಮಾನವಾಗದಂತೆ, ಸಂಪೂರ್ಣ ಕಾಳಜಿ ವಹಿಸಬೇಕು.’

– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ.(೨೪.೩.೨೦೨೩)