ಸನಾತನ ಸಂಸ್ಥೆಯ ಶ್ರೀ ಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗಿಳ ಅವರ ಮಹಾಕುಂಭ ತೀರ್ಥಯಾತ್ರೆ!

ಪ್ರಯಾಗರಾಜ್, ಜನವರಿ 23 (ಸುದ್ದಿ.) – ಆನಂದ ಅಖಾಡಾದ ಪೀಠಾಧೀಶ್ವರ ಆಚಾರ್ಯ ಮಹಾಮಂಡಲೇಶ್ವರ ಅನಂತ ಶ್ರೀ ವಿಭೂಷಿತ ಶ್ರೀ ಶ್ರೀ 1008 ಶ್ರೀ ಸ್ವಾಮಿ ಬಾಲಕಾನಂದ ಗಿರಿ ಮಹಾರಾಜ ಅವರಿಗೆ ಸನಾತನ ಸಂಸ್ಥೆಯ ವತಿಯಿಂದ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀ ಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗಿಳ ಅವರು ಹೂವಿನ ಹಾರ ಹಾಕಿ ಹಾಗೂ ಸನಾತನದ ಗ್ರಂಥಗಳನ್ನು ಮತ್ತು ಸನಾತನದ ಬೆಳ್ಳಿ ಮಹೋತ್ಸವದ ಸ್ಮರಣಿಕೆಯನ್ನು ನೀಡುವ ಮೂಲಕ ಗೌರವಿಸಲಾಯಿತು. ಈ ಸಂದರ್ಭದಲ್ಲಿ, ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ ರಾಜಹಂಸ ಇವರು ಸ್ವಾಮಿ ಬಾಲಕಾನಂದ ಗಿರಿ ಮಹಾರಾಜ್ ಅವರಿಗೆ ದೇಶದಾದ್ಯಂತ ಸನಾತನ ಸಂಸ್ಥೆಯ ವತಿಯಿಂದ ನಡೆಯುತ್ತಿರುವ ಅಧ್ಯಾತ್ಮಪ್ರಸಾರದ ಕಾರ್ಯದ ಬಗ್ಗೆ ಮಾಹಿತಿ ನೀಡಿದರು.
ಶ್ರೀ ಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗಿಳ ಅವರು ಸ್ವಾಮಿ ಬಾಲಕಾನಂದ ಗಿರಿ ಮಹಾರಾಜರನ್ನು ಗೋವಾದಲ್ಲಿರುವ ಸನಾತನ ಸಂಸ್ಥೆಯ ಆಶ್ರಮಕ್ಕೆ ಭೇಟಿ ನೀಡಲು ಆಹ್ವಾನಿಸಿದರು. ಈ ಸಮಯದಲ್ಲಿ, ಸ್ವಾಮಿ ಬಾಲಕಾನಂದ ಗಿರಿ ಮಹಾರಾಜರು ಸನಾತನ ಸಂಸ್ಥೆಯ ಕಾರ್ಯವನ್ನು ತಿಳಿದುಕೊಂಡರು. ಅವರು ಸನಾತನ ಸಂಸ್ಥೆಯ ಆಧ್ಯಾತ್ಮಪ್ರಸಾರದ ಕಾರ್ಯವನ್ನು ಶ್ಲಾಘಿಸಿ ಸಂಸ್ಥೆಯ ಕಾರ್ಯಕ್ಕೆ ಆಶೀರ್ವಾದ ನೀಡಿದರು. ಹಾಗೂ ಅವರು ಗೋವಾದ ಸನಾತನ ಆಶ್ರಮಕ್ಕೂ ಬರುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ, ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯದ ಸದ್ಗುರು ಡಾ. ಮುಕುಲ ಗಾಡಗಿಳ್, ಸನಾತನದ ಧರ್ಮ ಪ್ರಚಾರಕರಾದ ಪೂ. ಪ್ರದೀಪ ಖೇಮಕಾ ಮತ್ತು ಅವರ ಪತ್ನಿ ಪೂ. (ಸೌ.) ಸುನೀತಾ ಖೇಮಕಾ ಅವರೂ ಉಪಸ್ಥಿತರಿದ್ದರು.