
‘ನಾನು ೨೦೧೪ ರ ನಂತರ ೨-೩ ಲೇಖನಗಳ ಹೊರತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (ಪ.ಪೂ. ಡಾಕ್ಟರ್) ಇವರ ಬಗ್ಗೆ ಲೇಖನ ಬರೆಯಲಿಲ್ಲ ಅಥವಾ ಇತರ ಯಾವುದೇ ಲೇಖನಗಳನ್ನು ಬರೆಯಲಿಲ್ಲ. ಈ ಮೊದಲು ನಾನು ಪ.ಪೂ. ಡಾಕ್ಟರರೊಂದಿಗಿನ ಅಮೂಲ್ಯ ಭಾವಕ್ಷಣಗಳನ್ನು ಸಾಧಕರಿಗೆ ಹೇಳುತ್ತಿದ್ದೆನು; ಆದರೆ ಕೆಲವು ಕಾರಣಗಳಿಂದ ನನ್ನಿಂದ ಆ ಭಾವಕ್ಷಣದ ಬಗ್ಗೆ ಹೇಳುವುದೂ ಕಡಿಮೆ ಆಗುತ್ತ ಹೋಯಿತು.
ಪ.ಪೂ. ಡಾಕ್ಟರರು ನನಗೆ ಛಾಯಾಚಿತ್ರಗಳು ಮತ್ತು ಧ್ವನಿಚಿತ್ರಮುದ್ರಿಕೆಗಳನ್ನು ಪರಿಶೀಲಿಸುವ ಸೇವೆಯಲ್ಲಿನ ಸೂಕ್ಷ್ಮ ವಿಷಯಗಳನ್ನು (ಸಣ್ಣ ಪುಟ್ಟ ವಿಷಯಗಳನ್ನು) ಕಲಿಸಿದರು. ‘ಆ ಸಮಯದಲ್ಲಿ ಮತ್ತು ನಂತರವೂ ಇತರ ಸಮಯದಲ್ಲಿ ನನಗೆ ಅವರಿಂದ ಕಲಿಯಲು ಸಿಕ್ಕಿದ ಅಂಶಗಳು ಮತ್ತು ನನಗೆ ಬಂದ ಅನುಭೂತಿಗಳು ಅಥವಾ ಇತರ ವಿಷಯಗಳು’, ಇವುಗಳ ಬಗ್ಗೆ ಲೇಖನ ಬರೆಯಬೇಕು’, ಎಂದು ಪ.ಪೂ. ಡಾಕ್ಟರರು ತುಂಬಾ ಪ್ರಯತ್ನಿಸಿದರು. ‘ನಾನು ಲೇಖನ ಬರೆಯಬೇಕು’, ಎಂದು ಅವರು ಕೃತಿ ಮತ್ತು ಪ್ರಸಂಗಗಳ ಮಾಧ್ಯಮದಿಂದ ತುಂಬಾ ಪ್ರಯತ್ನಿಸಿದರು. ಅದರೊಂದಿಗೆ ಅವರು ನನ್ನ ಲೇಖನದಲ್ಲಿ ಬರುವ ಎಲ್ಲ ಅಡೆತಡೆಗಳನ್ನು ದೂರಗೊಳಿಸಿ ನನಗೆ ಬರೆಯಲು ಪ್ರೋತ್ಸಾಹಿಸಿದರು. ‘ಇದಕ್ಕಾಗಿ ಪ.ಪೂ. ಡಾಕ್ಟರರು ನನ್ನನ್ನು ಹೇಗೆ ರೂಪಿಸಿದರು ?’, ಎಂಬುದರ ಬಗ್ಗೆ ನಾನು ಪ್ರಸ್ತುತ ಲೇಖನದಲ್ಲಿ ನೀಡಿದ್ದೇನೆ.
(ಭಾಗ ೧)
೧. ಸಾಧಕಿಯು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಬರೆದ ಲೇಖನವನ್ನು ಓದಿ ಸಾಧಕರು ಭಾವಸ್ಥಿತಿಯನ್ನು ಅನುಭವಿಸುವುದು
೧ ಅ. ಸಾಧಕಿ ಬರೆದ ಲೇಖನವನ್ನು ಓದಿ ಸಾಧಕರಿಗೆ ಪ.ಪೂ. ಡಾಕ್ಟರರೊಂದಿಗೆ ಅನುಭವಿಸಿದ ಅಮೂಲ್ಯ ಭಾವಕ್ಷಣವನ್ನು ಪುನಃ ಅನುಭವಿಸಿದಂತೆ ಎನಿಸಿ ಅವರು ಸಾಧಕಿಗೆ ಅವರ ಬಗ್ಗೆ ಲೇಖನ ಬರೆಯಲು ಹೇಳುವುದು : ೨೦೧೪ ರಲ್ಲಿ ನಾನು ಪ.ಪೂ. ಡಾಕ್ಟರರ ಬಗ್ಗೆ ಲೇಖನ ಬರೆದಿದ್ದೆನು. ಆ ಲೇಖನವನ್ನು ಓದಿದ ಪ್ರಸಾರದಲ್ಲಿನ ಅನೇಕ ಸಾಧಕರು ರಾಮನಾಥಿ ಆಶ್ರಮವನ್ನು ನೋಡಲು ಬಂದ ನಂತರ ನನ್ನನ್ನು ತಪ್ಪದೇ ಭೇಟಿಯಾಗಿ, ”ಅಕ್ಕಾ, ನೀನು ಪ.ಪೂ. ಡಾಕ್ಟರರ ಬಗ್ಗೆ ಲೇಖನಗಳನ್ನು ಬರೆಯುತ್ತಿ. ಆ ಲೇಖನಗಳಿಂದ ನಮಗೆ ‘ಅವರನ್ನು ಅನುಭವಿಸಿದಂತಾಗುತ್ತದೆ. ನಿನ್ನ ಜಾಗದಲ್ಲಿ ನಮಗೆ ‘ನಾವೇ ಆ ಪ್ರಸಂಗವನ್ನು ಅವರೊಂದಿಗೆ ಅನುಭವಿಸುತ್ತಿದ್ದೇವೆ ಎಂದೆನಿಸುತ್ತದೆ’, ಎಂದು ಹೇಳಿದರು. ನನ್ನ ಸಹಸಾಧಕಿಯೂ ನನಗೆ ಹೀಗೆಯೇ ಹೇಳುತ್ತಿದ್ದಳು.
೧ ಆ. ಪ.ಪೂ. ಡಾ. ಆಠವಲೆಯವರ ಬಗ್ಗೆ ಸಾಧಕಿಯು ಮಾತನಾಡುವಾಗ ನಮ್ಮ ಜೊತೆಯಲ್ಲಿರುವ ಸಾಧಕರೂ ಭಾವವಿಶ್ವದಲ್ಲಿರುತ್ತಾರೆ’, ಎಂದು ಸಹಸಾಧಕಿ ಹೇಳುವುದು : ನಾನು ಸುಶ್ರೀ (ಕು.) ಸೋನಲ ಜೋಶಿ (೨೦೨೪ ರಲ್ಲಿನ ಆಧ್ಯಾತ್ಮಿಕ ಮಟ್ಟ ಶೇ. ೬೪ ಮತ್ತು ವಯಸ್ಸು ೪೪ ವರ್ಷ) ಇವಳಿಗೆ ಪ.ಪೂ. ಡಾಕ್ಟರರ ಬಗೆಗಿನ ಯಾವುದಾದರೊಂದು ಪ್ರಸಂಗವನ್ನು ಹೇಳಿದ ನಂತರ ಅವಳು ನನಗೆ, ”ಪೂನಮ್, ನೀನು ಪ.ಪೂ. ಡಾಕ್ಟರರ ಬಗ್ಗೆ ಹೇಳುತ್ತಿದ್ದರೆ, ಬೇರೆಯೇ ವಿಶ್ವಕ್ಕೆ ಹೋಗುತ್ತಿ ಮತ್ತು ನಿನ್ನ ಜೊತೆಯಲ್ಲಿರುವವರನ್ನೂ ಪ.ಪೂ. ಡಾಕ್ಟರರ ಭಾವವಿಶ್ವಕ್ಕೆ ಕರೆದುಕೊಂಡು ಹೋಗುವೆ. ಆದ್ದರಿಂದ ನೀನು ಪ.ಪೂ. ಡಾಕ್ಟರರ ಬಗೆಗಿನ ಲೇಖನವನ್ನು ಬರೆದುಕೊಡು” ಎಂದು ಹೇಳುತ್ತಿದ್ದಳು.

೨. ಪ.ಪೂ. ಡಾಕ್ಟರರು ಲೇಖನ ಬರೆಯಲು ಹೇಳಿದರೂ ಲೇಖನವನ್ನು ಬರೆಯದಿರುವುದು
೨ ಅ. ‘ಲೇಖನ ಬರೆಯೋಣ’, ಎಂದು ನಿರ್ಧರಿಸಿದರೂ ಅದನ್ನು ಬರೆಯಲು ಸಾಧ್ಯವಾಗದಿರುವುದು : ನಂತರ ೧-೨ ವರ್ಷಗಳಿಂದ ಪ.ಪೂ. ಡಾಕ್ಟರರು ಸಹ, ‘ಎಷ್ಟೋ ವರ್ಷಗಳಿಂದ ನೀನು ಏನು ಬರೆಯಲ್ಲಿಲ್ಲ ಅಲ್ಲ ?” ಎಂದು ಹೇಳಿದ್ದರು. ಆದರೂ ನನಗೆ ಬರೆಯಲು ಸಾಧ್ಯವಾಗಲಿಲ್ಲ. ಸುಮಾರು ೨೦೧೯ ರಿಂದ ನನಗೆ ಸ್ವಲ್ಪ ಸ್ವಲ್ಪ ಆತ್ಮವಿಶ್ವಾಸ ಬರತೊಡಗಿತು. ‘ಲೇಖನವನ್ನು ಬರೆಯೋಣ’, ಎಂದು ಎನಿಸತೊಡಗಿತು; ಆದರೂ ನನಗೆ ಅದು ಸಾಧ್ಯವಾಗಲಿಲ್ಲ. ಅದಕ್ಕಾಗಿ ನಾನು ಕಿವಿ ಹಿಡಿದು ಪ.ಪೂ. ಡಾಕ್ಟರ ಮತ್ತು ಎಲ್ಲ ಸಾಧಕರಲ್ಲಿ ಕ್ಷಮೆ ಕೇಳುತ್ತೇನೆ.
೨ ಆ. ಸಾಧಕಿಯು ‘ಕಲಿಯಲು ಸಿಕ್ಕಿದ ಅಂಶಗಳನ್ನು ಬರೆದುಕೊಡ ಬೇಕು’, ಎಂದು ಪ.ಪೂ. ಡಾಕ್ಟರರು ಬೆಂಬತ್ತುವುದು : ೨೦೨೦ ರಲ್ಲಿ ಏನೋ ಬೇರೆ ಘಟಿಸಿತು. ಆ ಸಮಯದಲ್ಲಿ ಪ.ಪೂ. ಡಾಕ್ಟರರು ಪಣತೊಟ್ಟಿರುವಂತೆ ನನ್ನಿಂದ ಲೇಖನವನ್ನು ಬರೆದುಕೊಳ್ಳಲು ನಿರ್ಧರಿಸಿದ್ದರು. ಅವರು ನನಗೆ, ‘ಡಾಕ್ಟರರು ಸಾಧಕರಿಗೆ ಹೇಗೆ ಕಲಿಸಿದರು ?’, ಎಂಬುದರ ಬಗ್ಗೆ ಸಂದೀಪನಿಗೆ (ಪೂ. ಸಂದೀಪ ಆಳಶಿ (ಸನಾತನದ ೧೧ ನೇ (ಸಮಷ್ಟಿ) ಸಂತರಿಗೆ) ಗ್ರಂಥವನ್ನು ಬರೆಯಬೇಕಾಗಿದೆ. ಅದಕ್ಕಾಗಿ ಎಲ್ಲರಿಂದ ಬರವಣಿಗೆ ಬಂದರೂ ಪೂನಮ್‌ನಿಂದ ಮತ್ತು ಅವಳ ಜೊತೆಯಲ್ಲಿದ್ದು ಸೇವೆ ಮಾಡುತ್ತಿರುವ ಇತರ ಸಾಧಕರಿಂದಲೂ ಏನು ಬರವಣಿಗೆ ಬರಲಿಲ್ಲ’ ಎಂಬ ಸಂದೇಶವನ್ನು ಕಳುಹಿಸಿದರು. ಆಗ ನಾನು ‘ಆ ಕುರಿತು ಹೇಗೆ ಬರೆಯೋಣ ?’, ಎಂದು ವಿಚಾರ ಮಾಡಿ ನನ್ನ ಜೊತೆಯಲ್ಲಿರುವ ಸಾಧಕರಿಗೆ ಕೇಳಿದೆನು, ‘ಕೆಲವರು ಅವರಿಗೆ ಕಲಿಯಲು ಸಿಕ್ಕಿರುವು ದನ್ನು ಬರೆದುಕೊಟ್ಟಿದ್ದರು’, ಎಂದು ತಿಳಿಯಿತು. ಆಗ, ‘ಪ.ಪೂ. ಡಾಕ್ಟರರು ಲೇಖನವನ್ನು ಬರೆದುಕೊಡುವ ಬಗ್ಗೆ ಇತರರಿಗೆ ಹೇಳದೇ ಈಗ ಅವರಿಗೆ ನನ್ನಿಂದಲೇ ಲೇಖನ ಹೋಗುವುದು ಅಪೇಕ್ಷಿತವಿದೆ’ ಎಂದು ನನ್ನ ಗಮನಕ್ಕೆ ಬಂದಿತು.
ಪುನಃ ಕೆಲವು ದಿನಗಳ ನಂತರ, ‘ಎಲ್ಲರ ಬರವಣಿಗೆಗಳು ಬಂದರೂ, ಕೇವಲ ಪೂನಮ್‌ನಿಂದ ಮಾತ್ರ ಬರವಣಿಗೆ ಬರಲಿಲ್ಲ’ ಎಂಬ ಸಂದೇಶವನ್ನು ಕಳುಹಿಸಿದರು. ‘ಬರವಣಿಗೆಯ ಎಲ್ಲಿಂದ ಮತ್ತು ಹೇಗೆ ಆರಂಭಿಸಬೇಕು ?’, ಎಂಬುದು ನನ್ನ ಗಮನಕ್ಕೆ ಬರುತ್ತಿರಲಿಲ್ಲ.
೨ ಇ. ಬರವಣಿಗೆ ಬರೆಯಲು ಪೂ. ಸಂದೀಪದಾದಾರವರು ನೀಡಿದ ಪ್ರೋತ್ಸಾಹ ! : ನಾನು ಪೂ. ಸಂದೀಪಾಣ್ಣನವರಿಗೆ ‘ಪ.ಪೂ. ಡಾಕ್ಟರರಿಂದ ಕಲಿಯಲು ಸಿಕ್ಕಿದ ಅಂಶಗಳ ಗ್ರಂಥವನ್ನು ಬರೆಯುತ್ತಿದ್ದೀರಾ ?’, ಎಂದು ಕೇಳಿದೆನು. ಸುಮಾರು ೨೦೧೮ ರಲ್ಲಿ ಪೂ. ಸಂದೀಪಾಣ್ಣನವರು ನನಗೆ ಅವರು ಬರೆದಿರುವ ಒಂದು ಲೇಖನವನ್ನು ಓದಲು ಕೊಟ್ಟರು ಮತ್ತು, ”ಪ.ಪೂ. ಡಾಕ್ಟರರು ಎಷ್ಟೊಂದು ಹೇಳುತ್ತಿದ್ದಾರೆ, ನೀನು ಈಗ ಬರೆಯಲು ಪ್ರಾರಂಭಿಸು. ನಿನಗೆ ಸಹಾಯ ಬೇಕಾದರೆ ಮಾಡೋಣ,” ಎಂದು ಹೇಳಿದರು. ಅವರು ನನಗೆ ತುಂಬಾ ಪ್ರೋತ್ಸಾಹ ನೀಡಿದರು. ಈ ಪ್ರಸಂಗದಿಂದ ನನ್ನಲ್ಲಿ ಧೈರ್ಯ ಮತ್ತು ಕೃತಜ್ಞತೆ ಹೆಚ್ಚಾಯಿತು.
೩. ‘ಪ.ಪೂ. ಡಾಕ್ಟರರ ಬಗೆಗಿನ ಬರವಣಿಗೆ ಬರೆಯಬೇಕು’, ಎಂಬ ವಿಚಾರದಿಂದ ಹಗಲು-ರಾತ್ರಿ ಪ.ಪೂ. ಡಾಕ್ಟರರ ನೆನಪಾಗುವುದು
ಈ ಎಲ್ಲ ಘಟನೆಗಳಿಂದ ನನ್ನ ಗಮನಕ್ಕೆ ಬಂದಿರುವುದೇನೆಂದರೆ, ‘ಪ.ಪೂ. ಡಾಕ್ಟರರಿಗೆ ನಾನು ಯಾವುದರಲ್ಲಿ ಸಿಲುಕಿದ್ದೇನೆಯೋ, ಅದರಿಂದ ನನ್ನನ್ನು ಹೊರಗೆ ತೆಗೆಯಬೇಕಾಗಿದೆ’ ಎಂದೆನಿಸಿತು. ಪ.ಪೂ. ಡಾಕ್ಟರರ ಬಗೆಗಿನ ಲೇಖನವನ್ನು ಬರೆಯಬೇಕೆಂದು ನಿರ್ಧರಿಸಿದಾಗಿನಿಂದಲೂ ‘ಏನು ಬರೆಯಬೇಕು ? ಎಲ್ಲಿಂದ ಪ್ರಾರಂಭಿಸಬೇಕು ?’, ಎಂಬ ವಿಚಾರಗಳಲ್ಲಿ ನನಗೆ ರಾತ್ರಿ ಮತ್ತು ಹಗಲು ಹೇಗೆ ಕಳೆಯುತ್ತಿದ್ದೆನೋ ಗೊತ್ತಾಗುತ್ತಿರಲಿಲ್ಲ. ದೇವರು ನನ್ನಿಂದ ಎಂದಿನಂತಿರುವ ಕೆಲಸಗಳು ಮತ್ತು ಸೇವೆಯನ್ನು ಮಾಡಿಸಿಕೊಳ್ಳುತ್ತಿದ್ದನು; ಆದರೆ ನನ್ನ ಮನಸ್ಸು ಪ.ಪೂ. ಡಾಕ್ಟರರ ವಿಚಾರಗಳಿಂದ ಮತ್ತು ಅವರ ಜೊತೆಯಲ್ಲಿ ಅನುಭವಿಸಿದ ಪ್ರಸಂಗಗಳಿಂದ ಹೃದಯವು ಕೃತಜ್ಞತೆಯಿಂದ ತುಂಬಿ ಬರುತ್ತಿತ್ತು. ಬೆಳಗ್ಗೆ ಎದ್ದಾಗಿನಿಂದ ದಿನದಲ್ಲಿನ ಪ್ರತಿಯೊಂದು ಕೃತಿಯನ್ನು ಮಾಡುವಾಗ ಕೇವಲ ‘ಪರಮ ಪೂಜ್ಯ ಮತ್ತು ಪರಮ ಪೂಜ್ಯ’ರನ್ನೇ ನೆನಪಿಸುತ್ತಿದ್ದೆನು.
೪. ಲೇಖನ ಬರೆಯುವ ಸಂದರ್ಭದಲ್ಲಿನ ಪ.ಪೂ. ಡಾಕ್ಟರರ ಇಚ್ಛೆ ಪೂರ್ಣಗೊಳಿಸದಿರುವುದರಿಂದ ಸಾಧಕಿಗಾದ ಖೇದ !
೪ ಅ. ಪ.ಪೂ. ಡಾಕ್ಟರರು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಬಗ್ಗೆ ಲೇಖನ ಬರೆಯಲು ಸೂಚಿಸುವುದು : ಈ ಎಲ್ಲ ವಿಚಾರಗಳು ಬರುತ್ತಲೇ ಇದ್ದವು, ಆದರೂ ಲೇಖನ ಬರೆಯುವುದೇ ಆಗುತ್ತಿರಲಿಲ್ಲ. ನನಗೆ ನನ್ನ ಬಗ್ಗೆಯೇ ಬೇಸರ ಬಂದಿತ್ತು. ಅದರಲ್ಲಿ ನನಗೆ ಇನ್ನೊಂದು ಘಟನೆಯು ಪದೇ ಪದೇ ನೆನಪಾಗುತ್ತಿತ್ತು. ನಾನು ಓರ್ವ ಸಾಧಕಿಯ ಬಗ್ಗೆ (ಗೆಳತಿಯ ಬಗ್ಗೆ) ಬರೆದಿರುವ ಲೇಖನವು ಪ.ಪೂ. ಡಾಕ್ಟರರಿಗೆ ತುಂಬಾ ಇಷ್ಟವಾಯಿತು. ಅವರು ನನಗೆ, ”ಇದೇ ರೀತಿ ಈಗ ಬಿಂದಾಅಕ್ಕನವರ ಬಗ್ಗೆ (ಈಗಿನ ಶ್ರೀಸತ್‌ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳ ಇವರ ಬಗ್ಗೆ) ಬರೆಯಬೇಕು” ಎಂದು ಹೇಳಿದರು.
೪ ಆ. ‘ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಬಗೆಗಿನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಸಾಧ್ಯವಾಗಲಿಲ್ಲ’ವೆಂದು ಇನ್ನೂವರೆಗೂ ನನ್ನ ಮನಸ್ಸಿಗೆ ಖೇದವೆನಿಸುವುದು : ನಾನು ಸೌ. ಬಿಂದಾ ಸಿಂಗಬಾಳ ಇವರ ಸಂದರ್ಭದಲ್ಲಿನ ಕೇವಲ ಅಂಶಗಳನ್ನು ಬರೆದು ಇಟ್ಟಿದ್ದೆನು. ಕೆಲವು ದಿನಗಳ ನಂತರ ೨-೩ ಸಾಧಕಿಯರು ಸೌ. ಬಿಂದಾಅಕ್ಕನವರ ಬಗ್ಗೆ ಲೇಖನವನ್ನು ಬರೆದಿದ್ದರು. ಆಗ ಪ.ಪೂ. ಡಾಕ್ಟರರು ದೈನಿಕ ‘ಸನಾತನ ಪ್ರಭಾತ’ದ ಸಂಪಾದಕರಿಗೆ, ಪೂನಮ್ ಬರೆದ ಲೇಖನವನ್ನು ಮೊದಲು ಮುದ್ರಿಸಬೇಕು ನಂತರ ಸಾಲಾಗಿ ಇತರರ ಲೇಖನಗಳನ್ನು ಮುದ್ರಿಸಬೇಕು, ಎಂದು ಸೂಚಿಸಿದ್ದರು. ಆಗಲೂ ನನ್ನಿಂದ ಆ ಲೇಖನವನ್ನು ಸಮಯಕ್ಕೆ ಸರಿಯಾಗಿ ಬರೆಯಲು ಆಗಲಿಲ್ಲ ಮತ್ತು ದೈನಿಕದ ಸಂಪಾದಕರು ಕೆಲವು ದಿನಗಳ ನಂತರ ಇತರ ಸಾಧಕರ ಲೇಖನವನ್ನು ಮುದ್ರಿಸಲು ಪ್ರಾರಂಭಿಸಿದರು. ‘ನಾನು ಪ.ಪೂ. ಡಾಕ್ಟರರ ಇಚ್ಚೆಯನ್ನು ಪೂರ್ಣಗೊಳಿಸಲಿಲ್ಲ ಮತ್ತು ಸೌ. ಬಿಂದಾಅಕ್ಕನವರ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸಲಿಲ್ಲ’ವೆಂದು ನನ್ನ ಮನಸ್ಸಿಗೆ ಇಂದಿಗೂ ಖೇದವೆನಿಸುತ್ತಿದೆ ಮತ್ತು ಅಂತಹದರಲ್ಲಿ ಈಗ ಪ.ಪೂ. ಡಾಕ್ಟರರ ಬಗೆಗಿನ ಬರವಣಿಗೆಯೂ ನನ್ನಿಂದಾಗುತ್ತಿರಲಿಲ್ಲ. ಆಗ ನನಗೆ, ಗುರುಗಳ ಈ ಒಂದು ಸಣ್ಣ ಇಚ್ಛೆಯನ್ನೂ ನನ್ನಿಂದ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ, ಹೀಗಿರುವಾಗ ನಾನು ಕೇವಲ ಕಲ್ಯಾಣಸ್ವಾಮಿಗಳ ಆದರ್ಶವನ್ನು ಮುಂದೆ ಇಟ್ಟುಕೊಳ್ಳುವುದರಿಂದ ಏನು ಪ್ರಯೋಜನ ?’, ಎಂದೆನಿಸಿತು. (ಒಮ್ಮೆ ಸಮರ್ಥ ರಾಮದಾಸಸ್ವಾಮಿಯವರು ತಮ್ಮ ಶಿಷ್ಯರೊಂದಿಗೆ ಸಜ್ಜನಗಡದಲ್ಲಿ ಅಧ್ಯಾತ್ಮದ ಬಗ್ಗೆ ಮಾತನಾಡುತ್ತಿದ್ದರು. ಅವರ ಜೊತೆಗೆ ಕಲ್ಯಾಣವೆಂಬ ಶಿಷ್ಯನೂ ಇದ್ದನು. ಇದ್ದಕ್ಕಿದ್ದಂತೆ ಹೊರಗೆ ಒಣಹಾಕಿದ ಅವರ ಬಟ್ಟೆ ಗಾಳಿಗೆ ಕಣಿವೆಯೊಳಗೆ ಹಾರಿತು. ಆಗ ಸಮರ್ಥರು, ”ಕಲ್ಯಾಣಾ, ಬಟ್ಟೆ ಗಾಳಿಗೆ ಹಾರಿತು” ಎಂದು ಹೇಳಿದರು.
ಸಮರ್ಥರ ‘ಕಲ್ಯಾಣಾ ಬಟ್ಟೆ’ ಇಷ್ಟೇ ಶಬ್ದವನ್ನು ಕೇಳಿ ಹಿಂದೆಮುಂದಿನ ಯಾವುದೇ ವಿಚಾರವನ್ನು ಮಾಡದೇ ಕಲ್ಯಾಣನು ಕಣಿವೆಗೆ ಹಾರಿದನು ಮತ್ತು ಬಟ್ಟೆಯನ್ನು ಹಿಡಿದನು. ಎಲ್ಲ ಶಿಷ್ಯರು ಆ ಪ್ರಸಂಗವನ್ನು ಆಶ್ಚರ್ಯದಿಂದ ನೋಡುತ್ತಿದ್ದರು. ‘ಗುರುಗಳ ಆಜ್ಞಾಪಾಲನೆಯನ್ನು ಮಾಡುವಾಗ ಜೀವದ ವಿಚಾರವನ್ನು ಮಾಡದೇ ಶ್ರಮಪಟ್ಟು ಸೇವೆ ಮಾಡಿ ಜಗತ್ತಿನ ಮುಂದೆ ಆದರ್ಶವನ್ನಿಡುವ ಕಲ್ಯಾಣಸ್ವಾಮಿಗಳನ್ನು ಸಮರ್ಥರು ಎಲ್ಲರಿಗಿಂತ ಶ್ರೇಷ್ಠ ಶಿಷ್ಯನೆಂದು ಹೇಳುವುದರಲ್ಲಿ ಆಶ್ಚರ್ಯವೇನಿದೆ ? (ಕು. ಪೂನಮ್ ಸಾಳುಂಖೆ ಇವರ ಮುಂದೆ ಗುರುಸೇವೆಯನ್ನು ಮಾಡುವಾಗ ‘ಗುರುಗಳ ಆಜ್ಞೆಯನ್ನು ಜೀವವನ್ನು ಪಣಕ್ಕಿಟ್ಟು ಪಾಲಿಸುವ’ ಶಿಷ್ಯೋತ್ತಮ ಕಲ್ಯಾಣಸ್ವಾಮಿಗಳ ಆದರ್ಶವಿತ್ತು.)
ನಾನು ಸಾಧನೆಯಲ್ಲಿ ಬಂದಾಗಿನಿಂದ ನನಗೆ, ಸಾಧನೆಯಲ್ಲಿ ಕೇವಲ ತನು, ಮನ, ಧನ, ಬುದ್ಧಿ ಮತ್ತು ಅಹಂ ಇಷ್ಟೇ ಅಲ್ಲದೇ, ಸಮಯ ಬಂದಾಗ ಪ್ರಾಣವನ್ನೂ (ಸರ್ವಸ್ವವನ್ನು) ಅರ್ಪಿಸುವ ಸಿದ್ಧತೆ ಇರಬೇಕು’, ಎಂದು ಅನಿಸುತ್ತದೆ.
೫. ಪ.ಪೂ. ಡಾಕ್ಟರರು ಇತರ ಸಾಧಕರ ಲೇಖನಗಳನ್ನು ಓದಲು ಇಡುವುದು ಮತ್ತು ‘ಅದನ್ನು ಓದಿದೆಯಾ ?’, ಎಂದು ಬೆಂಬೆತ್ತುವುದು
ನನ್ನ ಮನಸ್ಸಿನ ಸ್ಥಿತಿ ಅವರಿಗೆ ತಿಳಿದಿರಬೇಕು. ಅವರು ದೇವರೇ ಇದ್ದಾರಲ್ಲ ! ಅವರಿಗೆ ಎಲ್ಲವೂ ತಿಳಿಯುತ್ತದೆ. ನಾನು ಮನಸ್ಸಿನಿಂದ ಅವರಿಗೆ ಕೇವಲ ಕ್ಷಮೆಯಾಚನೆ ಮಾಡುತ್ತಿದ್ದೆನು ಮತ್ತು ಅವರು ಮಾತ್ರ ಸಾಧ್ಯವಾದಷ್ಟು ಜಿಗುಟುತನದಿಂದ ನನಗಾಗಿ ಪ್ರತಿದಿನ ಹೊಸ ಹೊಸ ಸಂದೇಶಗಳನ್ನು ಕಳುಹಿಸುತ್ತಿದ್ದರು. ಈ ಬಾರಿಯೂ ಅವರು ನನಗೆ ಇತರ ಸಾಧಕರ ಲೇಖನಗಳನ್ನು ಓದಲು ಇಟ್ಟರು. ಕನಿಷ್ಠಪಕ್ಷ ಅದನ್ನು ಓದಿದ ನಂತರ ನಾನು ಏನಾದರೂ ಬರೆಯಬೇಕು. ಅವರು ಅಷ್ಟಕ್ಕೆ ನಿಲ್ಲದೇ, ‘ಆ ಲೇಖನವು ನನಗೆ ಸಿಕ್ಕಿತೇ ? ನಾನು ಓದಿದ್ದೇನಾ ? ಈಗ ಹೇಗೆ ಬರೆಯಬೇಕು, ಎಂಬುದು ನನ್ನ ಗಮನಕ್ಕೆ ಬಂದಿದೆಯೇ ?’ ಇಷ್ಟೆಲ್ಲ ಪ್ರಶ್ನೆಗಳನ್ನು ಅವರು ನನಗೆ ಕೇಳಿದರು.’
(ಮುಂದುವರೆಯುವುದು)
– ಕು. ಪೂನಮ್ ಸಾಳುಂಖೆ (೨೦೨೪ ರಲ್ಲಿನ ಆಧ್ಯಾತ್ಮಿಕ ಮಟ್ಟ ಶೇ. ೬೧), ಸನಾತನ ಆಶ್ರಮ, ರಾಮನಾಥಿ, ಗೋವಾ.