ಭಾರತದ ವಿಭಜನೆಗೆ ಶತ್ರುರಾಷ್ಟ್ರಗಳ ಮೇಲಿನ ನಿಷ್ಠೆ ಮತ್ತು ಆಗಿನ ನೇತಾರರ ನಿಷ್ಕ್ರಿಯತೆಯೇ ಕಾರಣವಾಯಿತು. ಈ ಸತ್ಯ ಇತಿಹಾಸವನ್ನು ಎಲ್ಲರಿಗೂ ಕಲಿಸಬೇಕು ! ಕಳೆದ ೧ ಸಾವಿರ ವರ್ಷಗಳಲ್ಲಿ ಭಾರತ ತನ್ನ ಸ್ವತ್ವವನ್ನು ಕಳೆದುಕೊಂಡಿತು. ಮೊದಲು ಇಸ್ಲಾಮೀ ದರೋಡೆಕೋರರು, ಆಮೇಲೆ ಧೂರ್ತ ಬ್ರಿಟಿಷರು ಭಾರತೀಯರ ಸರ್ವಸ್ವವನ್ನೇ ನಾಶ ಮಾಡಿದರು. ಸನಾತನ ಪ್ರಭಾತದ ಸಂಚಿಕೆ ೨೪/೩೨ ರಲ್ಲಿ ಪ್ರಕಟವಾದ ಲೇಖನದ ಪೂರ್ವಾರ್ಧದಲ್ಲಿ ನಾವು ‘ಐಡಿಯಾಲಾಜಿಕಲ್ ಸಬ್‌ವರ್ಜನ್, ಅಂದರೆ ಸಾಮಾಜಿಕ ವ್ಯವಸ್ಥೆಯನ್ನು ನಾಶ ಮಾಡಲು ಹಮ್ಮಿಕೊಂಡಿರುವ ವೈಚಾರಿಕ ಸ್ತರದ ಷಡ್ಯಂತ್ರವನ್ನು ಉಪಯೋಗಿಸಿ ಹಿಂದೂಗಳಲ್ಲಿ ಹೀನಭಾವನೆಯನ್ನು ಹೇಗೆ ನಿರ್ಮಾಣ ಮಾಡಿದರು, ಎಂಬುದನ್ನು ನೋಡಿದೆವು. ಇದರಿಂದ ಪಾಶ್ಚಾತ್ಯೀಕರಣವಾಗಿರುವ ಹೊಸ ಭಾರತೀಯ ಪೀಳಿಗೆಗಳು ಬ್ರಿಟಿಷರಿಗೆ ಹೇಗೆ ಸಹಾಯ ಮಾಡಿದವು ? ಮತ್ತು ಭಾರತದ ರಕ್ತರಂಜಿತ ವಿಭಜನೆಗೆ ಅವರು ಹೇಗೆ ಕಾರಣರಾದರು, ಎಂಬುದನ್ನು ಈ ವಾರದ ಲೇಖನದಿಂದ ತಿಳಿದುಕೊಳ್ಳೋಣ. ಈ ಎಲ್ಲ ಮಾಹಿತಿಯನ್ನು ‘ಪ್ರಾಚ್ಯಮ್ ಎಂಬ ರಾಷ್ಟ್ರನಿಷ್ಠ ಯೂಟ್ಯೂಬ್ ವಾಹಿನಿಯ ‘ಸಾಹೇಬ್ ಜೆ ಕಧೀ ಗೇಲೇಚ ನಾಹಿತ (ಸಾಹೇಬರು ಎಂದಿಗೂ ಹೋಗಿಯೇ ಇಲ್ಲ) !, ಈ ವೀಡಿಯೋದ ಮೂಲಕ ಪ್ರಸಾರ ಮಾಡಲಾಗಿದೆ. ಇಷ್ಟರವರೆಗೆ ೧೬ ಲಕ್ಷ ಜನರು ನೋಡಿರುವ ಈ ವೀಡಿಯೋದಲ್ಲಿನ ಅಧ್ಯಯನಪೂರ್ಣ ಮತ್ತು ಜಾಗೃತಿಯನ್ನು ಮೂಡಿಸುವ ಈ ಮಾಹಿತಿಯನ್ನು ನಮ್ಮ ವಾಚಕರಿಗಾಗಿ ಆಭಾರದೊಂದಿಗೆ ಪ್ರಕಾಶಿಸುತ್ತಿದ್ದೇವೆ. (ಉತ್ತರಾರ್ಧ)
೯. ಬ್ರಿಟಿಷ ಆಡಳಿತದ ವಿಶ್ವಾಸದಲ್ಲಿನ ನಸುಗಪ್ಪು (ಭಾರತೀಯರು) ಸಾಹೇಬರದ್ದೇ ಬ್ರಿಟಿಷರಿಗೆ ಆಧಾರ ಮತ್ತು ಅದರಿಂದಲೇ ಕಾಂಗ್ರೆಸ್ ಎಂಬ ‘ಸೇಫ್ಟಿ ನೆಟ್ನ ಸ್ಥಾಪನೆ !
ಇದೇ ಶತಮಾನದಲ್ಲಿ ಭಾರತದಲ್ಲಿ ಜಾತಿಭೇದದ ರೇಖೆಗಳನ್ನು ಶಾಶ್ವತವಾಗಿ ಎಳೆಯಲಾಯಿತು. ಬ್ರಿಟಿಷ್ ಸಾಮ್ರಾಜ್ಯದ ಸೂರ್ಯ ಯಾವಾಗಲಾದರು ಅಸ್ತವಾಗಬಹುದು, ಎಂಬ ಸ್ಥಿತಿ ಕಾಣಿಸುತ್ತಿರಲಿಲ್ಲ. ಈಗ ಜನಸಾಮಾನ್ಯರೂ ಅಪೇಕ್ಷೆಯನ್ನು ಬಿಟ್ಟು ಬಿಟ್ಟಿದ್ದರು. ೧೯೪೭ ರ ವರೆಗೆ ‘ಇಂಪೀರಿಯಲ್ ಲೆಜಿಸ್ಲೇಟಿವ್ ಕೌನ್ಸಿಲ್ ಬ್ರಿಟಿಷ್ ಆಡಳಿತದ ಪ್ರಮುಖ ಆಧಾರಸ್ತಂಭವಾಗಿತ್ತು. ‘ಶಾಹೀ ವಿಧಾನ ಪರಿಷತ್ತುನ್ನು ‘ಇಂಪೀರಿಯಲ್ ಲೆಜಿಸ್ಲೇಟಿವ್ ಕೌನ್ಸಿಲ್ನ ಎಂದು ಉತ್ತಮವಾಗಿ ಅನುವಾದಿಸಬಹುದು. ಈ ಕೌನ್ಸಿಲ್‌ನಲ್ಲಿ ಭಾರತೀಯರನ್ನು ಅನೌಪಚಾರಿಕ ರೀತಿಯಲ್ಲಿ ಸದಸ್ಯರೆಂದು ನೇಮಿಸಲಾಗುತ್ತಿತ್ತು. ದೇಶದ ಗಣ್ಯ ‘ನಸುಗಪ್ಪು ಸಾಹೇಬರು, ಜಮೀನುದಾರರು. ರಾಜಕುಮಾರರು, ನ್ಯಾಯವಾದಿಗಳು, ದಂಡಾಧಿಕಾರಿಗಳು ಮತ್ತು ವ್ಯಾಪಾರಿಗಳು ಅದರಲ್ಲಿ ಭಾಗವಹಿಸುತ್ತಿದ್ದರು. ಈ ಜನರ ಪ್ರಾಮಾಣಿಕತೆಯ ಬಗ್ಗೆ ಬ್ರಿಟಿಷ ಆಡಳಿತದವರಿಗೆ ಸಂಪೂರ್ಣ ವಿಶ್ವಾಸವಿತ್ತು, ಇದು ಎಲ್ಲರಿಗೂ ಗೊತ್ತಿದ್ದ ವಿಷಯವಾಗಿತ್ತು.
ಪ್ರಸಿದ್ಧ ಲೇಖಕರು ಮತ್ತು ಸಂಶೋಧಕರಾದ ಸಂದೀಪ ಬಾಳಕೃಷ್ಣ ಈ ವಿಷಯದ ಬಗ್ಗೆ ಮುಂದಿನಂತೆ ಹೇಳುತ್ತಾರೆ, “ನಿಮ್ಮ ಸಮೀಪದ ಯಾವ ವ್ಯಕ್ತಿ ನಿಮ್ಮ (ಭಾರತೀಯರ) ಮೇಲಾದ ಅತ್ಯಾಚಾರದ ಅಭ್ಯಾಸ ಮಾಡಿರುತ್ತಾನೆಯೋ, ಅವನು ಆ ಅತ್ಯಾಚಾರಕ್ಕೆ ಮಹತ್ವಪೂರ್ಣ ‘ಆಟದಲ್ಲಿನ ಗೊಂಬೆ ಆಗಿರುತ್ತಾನೆ. ಅವನು ನಿಮ್ಮ ಮೂಲ ಸಂಸ್ಕೃತಿಯ ಅಂಗವಾಗಿರುವುದರಿಂದ ಅವನು ‘ಆಟದಲ್ಲಿನ ಗೊಂಬೆಯ ಭೂಮಿಕೆಯನ್ನು ಮಾಡಬಹುದು. ಆದ್ದರಿಂದ ಯಾವ ಕಾರ್ಯವನ್ನು ವಿದೇಶದ ಯಾವುದೇ ವ್ಯಕ್ತಿಯೂ ಮಾಡಲು ಸಾಧ್ಯವಿಲ್ಲವೋ, ಅದನ್ನು ಈ ವ್ಯಕ್ತಿ (ನಸುಗಪ್ಪುಸಾಹೇಬ) ಸಹಜವಾಗಿ ಮಾಡಬಹುದು.
‘ಭಾರತದಲ್ಲಿನ ನಮ್ಮ ಆಡಳಿತ ಶಾಶ್ವತವಾಗಿ ಇರುವುದಿಲ್ಲ, ಇದು ಚತುರ ಬ್ರಿಟಿಷರಿಗೆ ಮೊದಲಿನಿಂದಲೇ ತಿಳಿದಿತ್ತು. ಆಡಳಿತದಲ್ಲಿ ಹೆಚ್ಚುತ್ತಿರುವ ಸ್ವೇಚ್ಛಾಚಾರವನ್ನು ನೋಡಿ ಎಲನ್ ಎಕ್ಟಾವಿಯನ್ ಹ್ಯೂಮ್ ಇವನು ಆಂಗ್ಲರ ಆಡಳಿತವನ್ನು ಉಳಿಸಲು ೧೮೮೫ ರಲ್ಲಿ ಕಾಂಗ್ರೆಸ್‌ಅನ್ನು ಸ್ಥಾಪಿಸಿದನು. ಚಿಕ್ಕಪುಟ್ಟ ಸೌಲಭ್ಯಗಳನ್ನು ನೀಡಿ ೧೮೫೭ ರಂತಹ ಪರಿಸ್ಥಿತಿ ಪುನಃ ಉದ್ಭವಿಸಬಾರದೆಂಬುದು ಹ್ಯೂಮ್ ಇವನ ಉದ್ದೇಶವಾಗಿತ್ತು. ಈ ‘ಸೇಫ್ಟಿ ನೆಟ್ನ (ರಾಜ್ಯಾಡಳಿತದ ಸಂರಕ್ಷಣೆಗಾಗಿ ಸಿದ್ಧಪಡಿಸಿದ ಸಂಘಟನೆಯ) ಮೊದಲ ಸದಸ್ಯ ಯಾರಾದರು ಗೊತ್ತೇ ? ಇದೇ ‘ಇಂಪೀರಿಯಲ್ ಕೌನ್ಸಿಲ್ನ ನಸಗಪ್ಪುಸಾಹೇಬರು !
ಹ್ಯೂಮ್‌ನ ಭಯ ಅನಾವಶ್ಯಕವಾಗಿರಲಿಲ್ಲ. ಆಂಗ್ಲರ ದಬ್ಬಾಳಿಕೆಯಿಂದ ಈಗ ಭಾರತಭೂಮಿಯಿಂದ ಧ್ವನಿ ಏಳಲು ಆರಂಭವಾಗಿತ್ತು. ‘ಛತ್ರಪತಿ ಶಿವಾಜಿ ಮಹಾರಾಜರ ಹಿಂದವೀ ಸ್ವರಾಜ್ಯ ೧೮೭೬ ರಲ್ಲಿ ಸ್ವಾಮಿ ದಯಾನಂದ ಸರಸ್ವತಿ ಇವರ ಲೇಖನಿಯಿಂದ ‘ಸ್ವರಾಜ್ಯ ಈ ಘೋಷಣೆಯ ರೂಪದಲ್ಲಿ ಅದು ಹೊರಬಂತು. ‘ಸ್ವರಾಜ್ಯ-ಭಾರತ ಮತ್ತು ಭಾರತೀಯರಿಗಾಗಿ !
೧೦. ಬ್ರಿಟಿಷರ ಹಿತೈಷಿ ‘ನಸುಗಪ್ಪು ಸಾಹೇಬರಿಂದ ‘ಸ್ವಾತಂತ್ರ್ಯ ಸೈನಿಕರರೂಪದಲ್ಲಿ ಸ್ವಾತಂತ್ರ್ಯ ಚಳುವಳಿಯಲ್ಲಿ ಸಹಭಾಗ !
ಬೆಝ್‌ಮೆನೋವ್ ಮುಂದೆ ಹೇಳುತ್ತಾರೆ, “ನಿಮಗೆ ಇನ್ನೂ ೧೫ ಅಥವಾ ೨೦ ವರ್ಷಗಳು ಬೇಕಾಗಬಹುದು, ಆ ಕಾಲಾವಧಿಯಲ್ಲಿ (ತಥಾಕಥಿತ) ರಾಷ್ಟ್ರನಿಷ್ಠೆಯ ಮತ್ತು ಸಾಮಾನ್ಯ ಜ್ಞಾನವಿರುವ ಪೀಳಿಗೆ (ಭವಿಷ್ಯದ ನಸುಗಪ್ಪುಸಾಹೇಬರು) ತಯಾರಾಗುವುದು. ಈ ಪೀಳಿಗೆ ಸಮಾಜದ ಪರವಾಗಿ ಕಾರ್ಯವನ್ನು ಮಾಡುವಂತಹದ್ದಾಗಿರುತ್ತದೆ. (ಅಂದರೆ ಹಾಗೆ ತೋರಿಸುವುದು).
ಬಂಡಾಯದ ಅಗ್ನಿ ಒಳಗಿನಿಂದಲೇ ಸಂಪೂರ್ಣ ದೇಶ ದಲ್ಲಿ ಹರಡುತ್ತಿತ್ತು. ಲೋಕಮಾನ್ಯ ಬಾಲ ಗಂಗಾಧರ ಟಿಳಕ, ಅರವಿಂದ ಘೋಷ್, ಬಿಪಿನ್‌ಚಂದ್ರ ಪಾಲ ಇವರಂತಹ ತತ್ತ್ವಜ್ಞಾನಿಗಳ ಉದಯವಾಯಿತು. ರಾಷ್ಟ್ರವಾದಿ ವಿದ್ವಾಂಸರ ಸ್ವದೇಶಿ ಶೋಧಗಳನ್ನು ಓದಿ ಹೊಸ ಪೀಳಿಗೆಗಳು ‘ಡಿ ಮೋರಲೈಸೇಶನ್ನ ವಿರುದ್ಧ (ಆಚಾರಭ್ರಷ್ಟರಾಗುವುದರಿಂದ) ಜಾಗೃತವಾಗುತ್ತಿತ್ತು. ಭವಿಷ್ಯದಲ್ಲಿನ ಶ್ರೇಷ್ಠ ಕ್ರಾಂತಿಕಾರಿಗಳು ಇದೇ ವಿಚಾರಶೈಲಿಯ ವಾತಾವರಣದಲ್ಲಿ ಬೆಳೆದರು. ಕಾಲದ ದಿಶೆಯನ್ನು ಗುರುತಿಸಿ ‘ಇಂಪೀರಿಯಲ್ ಕೌನ್ಸಿಲ್ನ ‘ಸಜ್ಜನರು ಈಗ ಕಾಂಗ್ರೆಸ್ಸಿನ ಸದಸ್ಯರನ್ನು ಹೆಚ್ಚಿಸಲು ಪ್ರಯತ್ನಿಸತೊಡಗಿದರು. ‘ಭವ್ಯ ಬಂಗ್ಲೆ, ಇನಾಮಿನಲ್ಲಿ ಸಿಕ್ಕಿರುವ ಭೂಮಿ, ಇತರ ಸಂಪತ್ತನ್ನು ನಾವು ಬಲಿದಾನ ಮಾಡಿದೆವು, ಈ ರೀತಿಯಲ್ಲಿ ತಮ್ಮ ಬಗ್ಗೆ ಪ್ರಚಾರ ಮಾಡಿ ನಸುಗಪ್ಪುಸಾಹೇಬರು ಕುರ್ತಾ-ಪೈಜಾಮಾ ಧರಿಸಿದ ‘ಸ್ವಾತಂತ್ರ್ಯಸೈನಿಕರಾದರು.
ಬೆಝ್‌ಮೆನೋವಾ ಮುಂದೆ ಹೇಳುತ್ತಾನೆ, “ಈ ಸಮಯದಲ್ಲಿ ವಿದ್ಯಾರ್ಥಿಗಳನ್ನು (ಸಬ್‌ವರ್ಜನ್ನ ಆಟದ ಗೊಂಬೆಗಳನ್ನು) ಬ್ರಿಟನ್‌ನಿಂದ ಹಿಂದೆ ಕಳುಹಿಸಲಾಯಿತು. ಅವರಲ್ಲಿನ ಕೆಲವರು ಮೊದಲೆ ದೇಶದಲ್ಲಿದ್ದರು. (ಭಾರತದಲ್ಲಿ) ಅವರು ಅನಿರೀಕ್ಷಿತವಾಗಿ ತಲೆಯೆತ್ತಿದರು. ನಿಷ್ಕ್ರಿಯರಾಗಿದ್ದ ಈ ಜನರು ಕಾರ್ಯನಿರತರಾದರು.
ಒಂದು ಭಯಂಕರ ಬದಲಾವಣೆ ನಡೆದಿತ್ತು. ಸ್ವಾತಂತ್ರ್ಯ ಹೋರಾಟದಲ್ಲಿ ದೇಶಭಕ್ತ ಕ್ರಾಂತಿಕಾರಿಗಳ ಜೊತೆಗೆ ‘ಇಂಪೀರಿ ಯಲ್ ಕೌನ್ಸಿಲ್ನ ಬಿಳಿಯ ಸಾಹೇಬರೂ ಸೇರಿಕೊಂಡರು. ಆಂಗ್ಲರಿಗೂ ಸಹ ಇದು ಒಂದು ಒಳ್ಳೆಯ ಸುದ್ದಿ ಆಗಿತ್ತು. ಬೆಝ್‌ಮೆನೋವಾ (ಭಾರತದ) ಈ ಮಹತ್ವಪೂರ್ಣ ತಿರುವಿನ ಬಗ್ಗೆ ಮುಂದಿನಂತೆ ಹೇಳುತ್ತಾನೆ, “ಅವರು ೧೫-೨೦ ವರ್ಷ ಮಲಗಿದ್ದರು (ನಿಷ್ಕ್ರಿಯರಾಗಿದ್ದರು). ಈಗ ಅವರು ವಿವಿಧ ಗುಂಪುಗಳ ಮುಖಂಡರು, ಸಾಮಾಜಿಕ ವ್ಯಕ್ತಿತ್ವ ಮತ್ತು ಪ್ರಚಾರಕರಾದರು. ಅವರು ರಾಜಕೀಯ ಪ್ರಕ್ರಿಯೆಯ ಕ್ರಿಯಾಶೀಲ ಅಂಗವಾದರು.
೧೧. ಪಾಶ್ಚಾತ್ಯೀಕರಣದಿಂದ ತುಂಬಿ ಹೋದ ಭಾರತವಿರೋಧಿ ಮೋತೀಲಾಲ ನೆಹರು !
ಇದರಲ್ಲಿ ಅಲಾಹಾಬಾದದ ಅತ್ಯಂತ ಶ್ರೀಮಂತ ಮತ್ತು ಪ್ರಭಾವಶಾಲಿ ನೆಹರು ಕುಟುಂಬ ಎಲ್ಲರಿಗಿಂತ ಮುಂದೆ ಇತ್ತು ಮತ್ತು ಮೋತೀಲಾಲ ನೆಹರು ಅದರ ರಕ್ಷಕರಾಗಿದ್ದರು !
‘ನೆಹರು ಮನೆತನದ ರಕ್ತದಲ್ಲಿ ಪಾಶ್ಚಾತ್ಯೀಕರಣ ಶೇ. ೧೦೦ ರಷ್ಟು ಸೇರಿಕೊಂಡಿತ್ತು. ೧೯೧೧ ರ ದೆಹಲಿ ದರಬಾರಿನಲ್ಲಿ ‘ಅತಿ ಗಣ್ಯ ವ್ಯಕ್ತಿ ಎಂದು ಸಿಕ್ಕಿದ ಗೌರವವಿರಲಿ ಅಥವಾ ‘ಸಿವಿಲ್ ಲೈನ್ಸ್ನ ಔತಣ ಕೂಟಗಳಿರಲಿ ! ಇವುಗಳ ಮೂಲಕ ಆಂಗ್ಲರು ಮೋತೀಲಾಲರಿಗೆ ಯಾವತ್ತೂ ಅವರ ನಸುಗಪ್ಪಿನ (ಭಾರತೀಯ) ಅರಿವಾಗಲು ಬಿಡಲಿಲ್ಲ. ಇತಿಹಾಸದ ಪುಸ್ತಕಗಳಲ್ಲಿ ಮತ್ತು ಚಲನಚಿತ್ರಗಳಲ್ಲಿ ಮೋತೀಲಾಲ ನೆಹರು ಇವರ ಹೆಸರು ‘ಓರ್ವ ಶ್ರೇಷ್ಠ ಸ್ವಾತಂತ್ರ್ಯ ಸೈನಿಕ ಎಂಬ ರೂಪದಲ್ಲಿ ಸಿಗುತ್ತದೆ. ಆದರೆ ಬ್ರಿಟಿಷರಿಗೆ ಇಷ್ಟು ಸಮೀಪದವರಾಗಲು ಅವರು ಅಂತಹ ಯಾವ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದರು ?
ಪ್ರಸಿದ್ಧ ಬ್ಯಾರಿಸ್ಟರ್ ಮೋತೀಲಾಲ ನೆಹರು ಇವರು ಯಾವುದಾದರೊಂದು ಕ್ರಾಂತಿಕಾರಿಗಳ ಖಟ್ಲೆಯನ್ನು ನಡೆಸಿರ ಬಹುದು. ‘ಕಾಕೋರಿ ಕಾಂಡದಲ್ಲಿ ರಾಮಪ್ರಸಾದ ಬಿಸ್ಮಿಲ ಮತ್ತು ಅಶಫಾಕ ಉಲ್ಲಾ ಖಾನ್ ಇವರಿಗೆ ಮೋತೀಲಾಲರ ಸಂಬಂಧಿಕರು ಮತ್ತು ಮಿತ್ರ ಜಗನ್ನಾರಾಯಣ ಮುಲ್ಲಾ ಇವರು ನೇಣುಕಂಬದ ಶಿಕ್ಷೆಯನ್ನು ಕೊಡಿಸಿದರು. ಮೋತೀಲಾಲರು ತಮ್ಮ ಮಗನ (ಜವಾಹರಲಾಲ ನೆಹರು) ಭವಿಷ್ಯದ ಬಗ್ಗೆ ಹೆಚ್ಚು ಚಿಂತಿಸುತ್ತಿದ್ದರು. ಮಗನ ಶಿಕ್ಷಣ ಮುಗಿಯುವ ಮೊದಲೆ ಬಹಳ ಚಾತುರ್ಯದಿಂದ ಅವರನ್ನು ಕಾಂಗ್ರೆಸ್ಸಿನ ಸೂತ್ರಧಾರರನ್ನಾಗಿ (ಕಿಂಗ್‌ಮೇಕರ್) ಮಾಡಿದರು.
೧೨. ಬ್ರಿಟಿಷರಿಗೆ ‘ಎಲ್ಲಕ್ಕಿಂತ ಕಡಿಮೆ ಅಪಾಯಕಾರಿ ನೇತಾರರೆಂದರೆ ಮಹಾತ್ಮಾ ಗಾಂಧಿ !
ಭಾರತೀಯರ ಜನಮನಸ್ಸಿಗೆ ‘ಸಬ್‌ವರ್ಜನನ ಬಗ್ಗೆ ತಿಳಿಯದೇ ಇರಬಹುದು, ಆದರೆ ಮೋಹನದಾಸ ಗಾಂಧಿ ಯವರ ನಿಲುವನ್ನು ನಿರಾಕರಿಸಲು ಬರುವುದಿಲ್ಲ. ಈ ಸಂದರ್ಭದಲ್ಲಿ ಸಂದೀಪ ಬಾಲಕೃಷ್ಣ ಇವರು ಹೀಗೆನ್ನುತ್ತಾರೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಅಸಂಖ್ಯ ಜನರು ಹೋರಾಡಿದರು. ಅವರ ಪೈಕಿ ಗಾಂಧಿ ಇವರು ಅತೀ ಕಡಿಮೆ ಅಪಾಯಕಾರಿ ಆಗಿದ್ದಾರೆಂದು ಬ್ರಿಟಿಷರು ಪತ್ತೆಹಚ್ಚಿದ್ದರು. ಗಾಂಧಿಯವರು ಸಂಪೂರ್ಣ ಸ್ವಾತಂತ್ರ್ಯ ಸಂಗ್ರಾಮದ ದಿಕ್ಕನ್ನೇ ಬದಲಾಯಿಸಿದರು. ಅವರ ಹಿಂದೆ ಬಹಳ ದೊಡ್ಡ ಜನಸಮೂಹವಿತ್ತು. ಅವರು ಎಲ್ಲ ಸಮಾಜದ ವಿವಿಧ ಸ್ತರದವವರಾಗಿದ್ದರು. ಆ ಕಾಲದಲ್ಲಿ ಇಂತಹ ಬೇರೆ ಯಾವುದೇ ಜನನಾಯಕನಿರಲಿಲ್ಲ !
ಮಾಜಿ ಸನದಿ ಅಧಿಕಾರಿ ಮತ್ತು ಲೇಖಕ ಸಂಜಯ ದಿಕ್ಷಿತ ಹೇಳುತ್ತಾರೆ, “ಯಾರಾದರೂ ಗಾಂಧಿಯವರ ‘ಹಿಂದ್ ಸ್ವರಾಜ್ಯ ಪುಸ್ತಕವನ್ನು ಓದಿದ್ದರೆ, ಅದೊಂದು ವಿಚಿತ್ರ ಪುಸ್ತಕವಾಗಿದೆ, ಅದರಲ್ಲಿ ಅವರು ತಮಗೆ ತಾವೇ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಮತ್ತು ತಾವೇ ಆ ಪ್ರಶ್ನೆಗಳಿಗೆ ಉತ್ತರಗಳನ್ನೂ ಕೊಡುತ್ತಿದ್ದಾರೆ. ಅವರ ಅಹಿಂಸೆಯ ವಿಷಯದ ಒಂದು ವಿಚಿತ್ರ ಸಂಕಲ್ಪನೆ ಇದೆ. ಈ ಸಂದರ್ಭದಲ್ಲಿ ಅವರು ಹೀಗೆ ಹೇಳುತ್ತಾರೆ, ‘ಕಳ್ಳನಿಗೆ ಹೊಡೆಯಬೇಡಿರಿ; ಏಕೆಂದರೆ, ಒಂದು ವೇಳೆ ನಿಮ್ಮ ತಂದೆಯೇ ನಿಮ್ಮ ಮನೆಗೆ ಕಳ್ಳತನ ಮಾಡಲು ಬಂದರೆ ನೀವು ಅವರಿಗೆ ಹೊಡೆಯುವಿರಾ ?, ಈ ತರ್ಕಶಾಸ್ತ್ರದ ಕಲ್ಪನೆಯನ್ನು ನನಗಂತೂ ಮಾಡಲು ಬರುವುದಿಲ್ಲ ! ಈ ರೀತಿಯ ತರ್ಕಶಾಸ್ತ್ರ ಗಾಂಧಿಯವರಿಗೇ ಸಾಧ್ಯವಾಗುತ್ತಿತ್ತು.
೧೩. ೧೯೨೮ ರಿಂದ ಕಾಂಗ್ರೆಸ್ಸಿನಲ್ಲಿ ಆರಂಭವಾದ ಕುಟುಂಬ ರಾಜಕೀಯ
೧೯೨೮ ರಲ್ಲಿ ಮೋತೀಲಾಲ ಇವರು ಗಾಂಧಿಯವರ ಸಹಾಯದಿಂದ ಪುತ್ರ ಜವಾಹರಲಾಲರನ್ನು ಕಾಂಗ್ರೆಸ್ಸಿನ ಅಧ್ಯಕ್ಷ ರನ್ನಾಗಿ ಮಾಡಿದರು. ಇಲ್ಲಿಂದಲೆ ಕಾಂಗ್ರೆಸ್ಸಿನಲ್ಲಿ ಕುಟುಂಬ ರಾಜಕೀಯದ ಶುಭಾರಂಭವೂ ಆಯಿತು. ಮ. ಗಾಂಧಿ ಯವರು ‘ಅತ್ಯಂತ ಶುದ್ಧ ವ್ಯಕ್ತಿತ್ವ ಮತ್ತು ಸಂಶಯಕ್ಕೆ ಆಸ್ಪದ ವಿಲ್ಲದ ಪ್ರಾಮಾಣಿಕರು ಎಂದು ಜವಾಹರಲಾಲ ನೆಹರು ರವರನ್ನು ಸಾರ್ವಜನಿಕರಿಗೆ ಪರಿಚಯ ಮಾಡಿಕೊಟ್ಟರು. ಇದಕ್ಕೂ ಮುಂದುವರಿದು ‘ನೆಹರುರವರ ಕೈಯಲ್ಲಿ ದೇಶ ಸುರಕ್ಷಿತವಾಗಿದೆ, ಎಂದು ಕೂಡ ಹೇಳಿದರು.
ಮೂಲತಃ ನೆಹರು ಇವರು ಓರ್ವ ‘ನಸುಗಪ್ಪುಸಾಹೇಬ ರೇ ಆಗಿದ್ದರು. ಅವರು ಭಾರತದ ಮೂಲ ವಾಸ್ತವದಿಂದ ತುಂಬಾ ದೂರವಿದ್ದರು. ಅವರು ‘ಫೆಬಿಯನ್ ಡೆಮೋಕ್ರಸಿಯ, ಅಂದರೆ ‘ಸಾಮಾಜಿಕ ಪ್ರಜಾಪ್ರಭುತ್ವದ ತತ್ತ್ವಗಳ ಕ್ರಾಂತಿಕಾರಿ ಮಾರ್ಗದಿಂದ ಬದಲಾವಣೆಗಳನ್ನು ಮಾಡಿ ಅಲ್ಲ, ಅವರು ‘ನಿಧಾನವಾಗಿ ಮತ್ತು ಸುಧಾರಣವಾದಿ ಪದ್ಧತಿಯನ್ನು ಅವಲಂಬಿಸುವುದು, ಈ ಪದ್ಧತಿಯನ್ನು ಪುರಸ್ಕರಿಸುವವರಾಗಿದ್ದರು. ಅಲಾಹಾಬಾದ್ ಮತ್ತು ಇಂಗ್ಲೆಂಡ್‌ನಲ್ಲಿ ಆಂಗ್ಲರ ವಾತಾವರಣದಲ್ಲಿ ಬೆಳೆದಿರುವ ನೆಹರು ಅಯೋಗ್ಯ ಸಮಯ ಮತ್ತು ಅಯೋಗ್ಯ ಸ್ಥಾನದಲ್ಲಿ ನಿಂತಿರುತ್ತಿದ್ದರು. ತಂದೆಯ ಪಕ್ಷದ ಅಧ್ಯಕ್ಷರಾಗಿ ಅವರು ದೇಶಕ್ಕೆ ‘ಸಂಪೂರ್ಣ ಸ್ವರಾಜ್ಯವನ್ನು ನೀಡುವ ನಾಯಕರಾಗುವ ಕನಸು ಕಾಣುತ್ತಿದ್ದರು; ಆದರೆ ಚದುರಂಗದ ಮೇಲಿನ ಆಡುವ ಗೊಂಬೆಗಳನ್ನು ಮಾತ್ರ ಬೇರೆ ಯಾರೋ (ಇಂಗ್ಲೆಂಡ್‌ನ ಆಗಿನ ಪ್ರಧಾನಿ ವಿನ್ಸ್ಟನ್ ಚರ್ಚಿಲ್) ಬದಲಾಯಿಸುತ್ತಿದ್ದರು. ಆಂಗ್ಲರ ಜಾಗತಿಕ ಆಡಳಿತದಲ್ಲಿ ಭಾರತವು ಅತೀ ದೊಡ್ಡ ವಜ್ರ ಆಗಿತ್ತು.
೧೪. ಮಹಮ್ಮದ ಅಲೀ ಜಿನ್ನಾ ಇವರ ರೂಪದಲ್ಲಿ ಭಾರತದ ವಿಭಜನೆಗೆ ಪ್ರೋತ್ಸಾಹ !
ಯಾವಾಗ ಸ್ವಾತಂತ್ರ್ಯ ಚಳವಳಿ ಒಂದು ನಿಶ್ಚಿತ ವಾಸ್ತವದಲ್ಲಿ ನಡೆಯುತ್ತಿದೆ ಎಂದು ಕಂಡುಬಂತೋ ಅದೇ ಸಮಯದಲ್ಲಿ ಆಂಗ್ಲರು ಪುನಃ ‘ಇಂಪೀರಿಯಲ್ ಕೌನ್ಸಿಲ್ನ ಇನ್ನೊಬ್ಬ ‘ನಸುಗೆಂಪು ಸಾಹೇಬನನ್ನು ಲಂಡನ್‌ನಲ್ಲಿ ಹುಟ್ಟು ಹಾಕಿದರು. ಅವರ ಹೆಸರು ಮಹಮ್ಮದ ಅಲೀ ಜಿನ್ನಾ ! ಸಂದೀಪ ಬಾಳಕೃಷ್ಣ ಈ ವಿಷಯದಲ್ಲಿ ಹೇಳುತ್ತಾರೆ, “ವಿನ್ಸ್ಟನ್ ಚರ್ಚಿಲ್ ಮತ್ತು ಇತರ ಕೆಲವು ಬ್ರಿಟಿಷ ನಾಯಕರು ಜಿನ್ನಾ ಇವರನ್ನು ವಿಶಿಷ್ಟ ಪದ್ಧತಿಯಲ್ಲಿ ಹುಟ್ಟುಹಾಕಿದರು. ‘ಇಂಡಿಯಾ ಹೌಸ್ನಂತಹ ಭಾರತೀಯ ಸಂಘಟನೆಗಳು ಇತ್ತೀಚೆಗಷ್ಟೆ ಜಿನ್ನಾ ಮತ್ತು ಚರ್ಚಿಲ್ ಇವರಲ್ಲಿನ ಪತ್ರವ್ಯವಹಾರವನ್ನು ಬೆಳಕಿಗೆ ತಂದಿವೆ.
ಸ್ವಾತಂತ್ರ್ಯ ಚಳವಳಿಯ ಈ ತಿರುವಿನ ವಿಷಯದಲ್ಲಿ ಬೆಝ್‌ಮೆನೋವಾ ಹೇಳುತ್ತಾನೆ, “೧೫ ವರ್ಷಗಳ ಹಿಂದೆ ಅವರು (ಜಿನ್ನಾರವರು) ಮಾಡಿದ ಅಯೋಗ್ಯ ಕೃತಿಗಳನ್ನು ಕಡೆಗಣಿಸಲಾಯಿತು, ಆದರೆ ಈಗ ಅವರು ಅದಕ್ಕೆ ಒಂದು ರಾಜಕೀಯ ಸಮಸ್ಯೆಯ ಸ್ವರೂಪವನ್ನು ನೀಡಿದರು. ಈಗ ಅವರು ಅಧಿಕೃತ ಮನ್ನಣೆ, ಆದರ, ಮಾನವಾಧಿಕಾರದ ಬೇಡಿಕೆಯನ್ನು ಮಾಡಲು ಆರಂಭಿಸಿದರು, ಹಾಗೆಯೇ ಅದಕ್ಕಾಗಿ ಅವರು ದೊಡ್ಡ ಜನಸಂಘಟನೆಯನ್ನು (ಮುಸಲ್ಮಾನರ ಸಂಘಟನೆ) ಮಾಡಿದರು. ಆದ್ದರಿಂದ ಅವರಲ್ಲಿ ಮತ್ತು ಪೊಲೀಸರಲ್ಲಿ ಹಿಂಸಾಚಾರ ಆಗ ತೊಡಗಿದವು. ಅವರ ಬೆಂಬಲಿಗರು (ಮುಸಲ್ಮಾನರು) ಮತ್ತು ಜನಸಾಮಾನ್ಯರು (ಹಿಂದೂ ಮತ್ತು ಸಿಕ್ಖ್) ಪರಸ್ಪರರ ಎದುರಿಗೆ ನಿಂತರು, ಇದಕ್ಕೆ ‘ಡಿಸ್ಟೇಬಿಲೈಸೇಶನ್ ಎನ್ನುತ್ತಾರೆ.
ಇತಿಹಾಸದ ಅಧ್ಯಯನಕಾರ ಮತ್ತು ಲೇಖಕರಾದ ಆಭಾಸ ಮಲದಿಯಾರ ಹೇಳುತ್ತಾರೆ, “ಈಗ ದ್ರಾವಿಡರ ಮತ್ತು ಖಲಿಸ್ತಾನವಾದಿಗಳ ಚಳುವಳಿಯ ಜನ್ಮವಾಗಿತ್ತು. ಇಸ್ಲಾಮೀ ಕಟ್ಟರವಾದವನ್ನು ಹೆಚ್ಚು ಮತಾಂಧತೆಯ ಕಡೆಗೆ ಬಾಗಿಸ ಲಾಯಿತು. ೧೯೨೦ ರಲ್ಲಿ ಮೋಪಲಾ ಬಂಡಾಯದ ಸಮಯದಲ್ಲಿ ಮುಸಲ್ಮಾನರನ್ನು ಖಲೀಫನಿಗಾಗಿ ಹೋರಾಡುವಂತೆ ಹುರಿದುಂಬಿಸಲಾಗಿತ್ತು. ನಿಜ ನೋಡಿದರೆ ತುರ್ಕಿಯರಿಗೂ ಖಲೀಫಾ ಬೇಡವಾಗಿದ್ದನು. ೧೯೪೦ ರ ಸಮಯದಲ್ಲಿ ಸಾಮ್ಯವಾದಿ ಚಳುವಳಿಯ ಮೂಲಕ ಮುಸಲ್ಮಾನ ಬಹುಸಂಖ್ಯಾತ ಪ್ರದೇಶಗಳನ್ನು ವಿಭಜಿಸುವ ಸಂದರ್ಭದಲ್ಲಿಯೂ ಧ್ವನಿಯೇಳುತ್ತಿತ್ತು. ಸಂಕ್ಷಿಪ್ತದಲ್ಲಿ ಹೇಳುವುದಾದರೆ ಆ ಕಾಲಾವಧಿಯಲ್ಲಿ ಅನೇಕ ಪ್ರತ್ಯೇಕತಾವಾದಿ ಚಳುವಳಿಗಳ ಉದ್ರೇಕವಾಗಿತ್ತು.
‘ಸಬ್‌ವರ್ಜನ್ನ ಕೊನೆಯ ಹಂತ – ಸಂಕಟ (ಕ್ರೈಸಿಸ್) !
೧೯೪೫ ಬರುವಷ್ಟರಲ್ಲಿ ಜೀನಾ ಮತ್ತು ಅವರ ಬೆಂಬಲಿಗರು ಭಾರತದ ಧಾರ್ಮಿಕ ಸ್ಥಿತಿಯನ್ನು ದೊಡ್ಡ ಪ್ರಮಾಣದಲ್ಲಿ ಕೆಡಿಸಿದ್ದರು. ಸಂಪೂರ್ಣ ದೇಶ ಸುಡುತ್ತಿತ್ತು. ಕಾಂಗ್ರೆಸ್ಸಿನ ಎಲ್ಲ ಆಂದೋಲನಗಳು ವಿಫಲವಾಗಿದ್ದವು. ‘ನಸುಗಪ್ಪುಸಾಹೇಬರು ಯೋಗ್ಯ ಸಮಯದಲ್ಲಿ ಅವರ ಬದಿಯನ್ನು ಬದಲಾಯಿಸಿದರು ಮತ್ತು ನೇತಾಜಿ ಸುಭಾಷ್ಚಂದ್ರ ಬೋಸ್ ಇವರ ಪ್ರಸಿದ್ಧಿಯ ಲಾಭವನ್ನು ಪಡೆದರು. ಬ್ರಿಟಿಷರು ದೊಡ್ಡ ಪ್ರಮಾದ ಮಾಡುತ್ತಾ ‘ಆಝಾದ್ ಹಿಂದ್ ಸೇನೆಯ ಸೈನ್ಯಾಧಿಕಾರಿಗಳ ಮೇಲೆ ದೇಶದ್ರೋಹದ ಖಟ್ಲೆಯನ್ನು ದಾಖಲಿಸಿದರು. ಆಝಾದ್ ಹಿಂದ್ ಸೇನೆಯ ಸೈನಿಕರಿಗಾಗಿ ಸಂಪೂರ್ಣ ದೇಶ ಒಂದಾಯಿತು. ಗೃಹಯುದ್ಧದ ಅಗ್ನಿ ನೇತಾಜಿಯವರ ಪ್ರಸಿದ್ಧಿಯ ಮುಂದೆ ಮಸುಕಾಯಿತು. ತದ್ವಿರುದ್ಧ ಆಂಗ್ಲರ ಆಡಳಿತವನ್ನು ಗುರಿ ಪಡಿಸಲಾಯಿತು. ಈ ಅಪಾಯವನ್ನು ಗುರುತಿಸಿ ಆಡಳಿತ ದವರು ಜಿನ್ನಾ ಇವರನ್ನು ಮುಂದೆ ಮಾಡಿದರು. ಈಗ ಸಮಯವೇ ‘ಸಬ್‌ವರ್ಶನ್‌ದ ಕೊನೆಯ, ಅಂದರೆ ಸಂಕಟದ (ಕ್ರೈಸಿಸ್‌ನ) ಹಂತವಾಗಿತ್ತು !
ಬೆಝ್‌ಮೆನೋವಾ ಹೇಳುತ್ತಾನೆ, ‘ಡಿಸ್ಟೇಬಿಲೈಸೇಶನ್ನ ಪ್ರಕ್ರಿಯೆ ಸಾಮಾನ್ಯವಾಗಿ ಸಂಕಟದ ಪ್ರಕ್ರಿಯೆಯ ಕಡೆಗೆ ಪ್ರಯಾಣ ಮಾಡುತ್ತದೆ. ದೇಶವನ್ನು ಸಂಕಟದ ಹೊಸ್ತಿಲಿಗೆ ತಳ್ಳಲು ಕೇವಲ ೬ ವಾರಗಳು ಸಾಕಾಗುತ್ತವೆ.
೨೯ ಎಪ್ರಿಲ್ ೧೯೪೬ ರ ದಿನ ! ಗಾಂಧಿಯವರು ೧೯೨೮ ರಲ್ಲಿ ಮಾಡಿದ ತಪ್ಪನ್ನು ಮತ್ತೊಮ್ಮೆ ಮಾಡಿದರು, ಅದು ಸಂಪೂರ್ಣ ಭಾರತಕ್ಕೆ ದುಬಾರಿಯಾಗಲಿಕ್ಕಿತ್ತು. ಕೋಟಿಗಟ್ಟಲೆ ಜನರ ಬಲಿದಾನದಿಂದಾಗಿ ಸ್ವಾತಂತ್ರ್ಯದ ಹೋರಾಟ ಅಂತಿಮ ಹಂತದಲ್ಲಿತ್ತು. ಆ ಸಮಯದಲ್ಲಿ ಕಾಂಗ್ರೆಸ್ಸಿನ ಅಧ್ಯಕ್ಷರೆ ಸ್ವತಂತ್ರ ಭಾರತದ ಪ್ರಧಾನಮಂತ್ರಿ ಆಗುವವರಿದ್ದರು. ಆಗ ಸರದಾರ ವಲ್ಲಭಭಾಯಿ ಪಟೇಲ್ ಎಲ್ಲರಿಗೂ ಪ್ರಿಯರಾಗಿದ್ದರು !
ಹಿರಿಯ ಲೇಖಕರಾದ ಎಸ್.ಎಲ್. ಭೈರಪ್ಪನವರು ಹೇಳುತ್ತಾರೆ, “ಆ ಸಮಯದಲ್ಲಿ ೧೫ ಜನ ಪ್ರಮುಖ ಕಾಂಗ್ರೆಸ್ ನಾಯಕರ ಪೈಕಿ ೧೨ ಜನರು ಪಟೇಲರನ್ನು ಪ್ರಧಾನಮಂತ್ರಿ ಹುದ್ದೆಗಾಗಿ ಆರಿಸಿದ್ದರು. ನೆಹರು ಇವರಿಗೆ ಒಬ್ಬರೂ ಮತ ನೀಡಿರಲಿಲ್ಲ. ಜನರು ನೇತಾಜಿ ಬೋಸ್ ಅಥವಾ ಪಟೇಲ ರನ್ನು ಆರಿಸಿದ್ದರೂ, ಅವರು ಪದೇ ಪದೇ ನೆಹರೂ ಇವರನ್ನೇ ಮುಂದೆ ಬರುವುದು ನೋಡುತ್ತಿದ್ದರು, ನೆಹರುರವರ ರೂಪದಲ್ಲಿ ನಸುಗಪ್ಪುಸಾಹೇಬರಿಗೆ ‘ದ ಲಾಸ್ಟ್ ಇಂಗ್ಲಿಷ್ ಮ್ಯಾನ್ ಟು ರೂಲ್ ಇಂಡಿಯಾ (ಭಾರತವನ್ನು ಆಳುವ ಪಾಶ್ಚಾತ್ಯೀಕರಣವಾದ ಕೊನೆಯ ವ್ಯಕ್ತಿ) ಆಗಲಿಕ್ಕಿತ್ತು !
‘ಐಡಿಯಾಲಾಜಿಕಲ್ ಸಬ್‌ವರ್ಜನ್ನ ಈ ಹಂತದ ವಿಷಯವನ್ನು ಸ್ಪಷ್ಟಮಾಡುತ್ತಾ ಬೆಝ್‌ಮೆನೋವಾ ಹೇಳುತ್ತಾನೆ, “ಜನರಿಗೆ ಒಬ್ಬ ರಕ್ಷಕನ ಅವಶ್ಯಕತೆಯಿತ್ತು. ಜನರ ಸ್ಥಿತಿ ಮೊದಲೇ ಕೆಟ್ಟಿತ್ತು. ಆಗ ‘ಹಾರ್ವರ್ಡ್ ಅಥವಾ ಬರ್ಕ್‌ಲೆ ಇಂತಹ ವಿದ್ಯಾಪೀಠಗಳಲ್ಲಿ ಅಪೂರ್ಣ ಕಲಿತಿರುವ ಬುದ್ಧಿವಂತ ಮನುಷ್ಯನು ಎಲ್ಲರ ರಕ್ಷಕನಾಗಿ ಬಂದನು.
೧೬ ಆಗಸ್ಟ್ ೧೯೪೬ ! ಜಿನ್ನಾ ಇವರು ಡೈರೆಕ್ಟ್ ಏಕ್ಶನ್ ಡೇಯ (ಹಿಂದೂಗಳ ವಿರುದ್ಧ ನೇರ ಕೃತಿ ಮಾಡುವ ದಿನ) ಅಂತರ್ಗತ ಬಹಿರಂಗವಾಗಿ ಹಿಂದೂಗಳ ನರಸಂಹಾರ ಮಾಡಲು ಹೇಳಿದರು. ಸಂಪೂರ್ಣ ದೇಶ ಗೃಹಯುದ್ಧದಲ್ಲಿ ಸುಟ್ಟುಕೊಂಡಿತು. ಗೂಢಚಾರ ವಿಭಾಗದ ಸಂಚಾಲಕರು ಲಂಡನ್‌ನಲ್ಲಿ ಒಂದು ರಹಸ್ಯ ಲೇಖನದ ಮೂಲಕ, ‘ಗೇಮ್ ಸೋ ಫಾರ್ ಹ್ಯಾಸ್ ಬೀನ್ ವೆಲ್ ಪ್ಲೇಡ್! (ಇಲ್ಲಿಯ ವರೆಗಿನ ಎಲ್ಲ ಆಟ ಒಳ್ಳೆಯ ರೀತಿಯಲ್ಲಿ ನಡೆದಿದೆ) ಎಂದು ತಿಳಿಸಿದರು.
೧೬. ಭಾರತದಲ್ಲಿ ದಂಗೆಗಳಾಗುತ್ತಿರುವಾಗ ಶಿಮ್ಲಾದಲ್ಲಿ ಮೌಂಟ್‌ಬೇಟನ್‌ನ ಜೊತೆಗೆ ನೆಹರುರವರ ಔತಣಕೂಟ !
೨೦ ಫೆಬ್ರವರಿ ೧೯೪೭ ! ನೇತಾಜಿಯವರ ಬೆಂಬಲಕ್ಕಾಗಿ ಸಶಸ್ತ್ರ ಸೈನಿಕರ ಬಂಡಾಯದಿಂದ ಭಾರತದಲ್ಲಿರುವ ಎಲ್ಲ ಆಂಗ್ಲರ ಜೀವಕ್ಕೆ ಅಪಾಯವಿತ್ತು. ಬ್ರಿಟನ್‌ನ ಆಗಿನ ಪ್ರಧಾನಮಂತ್ರಿ ಕ್ಲೆಮೇಟ್ ಎಟಲಿಯು ಭಾರತವನ್ನು ಬಿಡುವ ದಿನವನ್ನು ನಿಶ್ಚಯಿಸಿದರು. ‘ಜೂನ್ ೧೯೪೮ !
೧೨ ಮಾರ್ಚ್ ೧೯೪೭ ! ಅಮೇರಿಕಾ ಸಾಮ್ಯವಾದ ಮತ್ತು ಸಾಮ್ರಾಜ್ಯವಾದವನ್ನು ಅಂತ್ಯಗೊಳಿಸಲು ಅದರ ಹೊಸ ವಿದೇಶ ನಿಲುವನ್ನು ಘೋಷಿಸಿತು. ಸಾವಿರಾರು ಅಬ್ಜ ರೂಪಾಯಿಗಳ ಸಾಲದಲ್ಲಿ ಸಿಲುಕಿರುವ ಬ್ರಿಟನ್‌ಗೆ ‘ಬಿಗ್ ಡ್ಯಾಡಿ ಅಮೇರಿಕಾದ ಮಾತನ್ನು ಕೇಳದೆ ಬೇರೆ ಪರ್ಯಾಯವಿರಲಿಲ್ಲ. ಅಮೇರಿಕಾ ಮತ್ತು ಬ್ರಿಟನ್ ಇವರ ಒಂದು ಭೂರಾಜಕೀಯ ಆಟ ಉದಯವಾಯಿತು ಮತ್ತು ಅದೆಂದರೆ ‘ಭಾರತದ ವಿಭಜನೆ !
ಗಡಿಬಿಡಿಯಿಂದ ಡಿಕೀ ಮೌಂಟ್‌ಬೇಟನ್‌ನನ್ನು ಭಾರತದ ‘ವ್ಹಾಯಿಸ್‌ರಾಯ್ ಮಾಡಲಾಯಿತು. ಅವನಿಗೆ ಒಂದು ಕಡತವನ್ನು ನೀಡಲಾಯಿತು. ಅದರ ಮೇಲೆ ‘ಆಪರೇಶನ್ ಮ್ಯಾಡ್ ಹೌಸ್ ಎಂದು ಬರೆಯಲಾಗಿತ್ತು !
೯ ಮೇ ೧೯೪೭ ! ನೆಹರು ಶಿಮ್ಲಾದಲ್ಲಿ ಮೌಂಟ್‌ಬೇಟನ್ ನನ್ನು ಭೇಟಿಯಾದರು. ಮೌಂಟ್‌ಬೇಟನ್ ನೆಹರುರವರಿಗೆ ವಿಭಜನೆಯ ಮೊದಲ ‘ಪ್ಲಾನ್ ತೋರಿಸಿದರು – ‘ಪ್ರೊಜೆಕ್ಟ್ ಬಾಲ್ಕನ್ ! ಭಾರತದ ನಿರ್ದಯ ವಿಭಜನೆಯ ‘ಪ್ಲ್ಯಾನ್ ನೋಡಿ ನೆಹರುಸಾಹೇಬರು ಒಮ್ಮೆಲೇ ಗಾಬರಿಯಾದರು; ಆದರೆ ಶಿಮ್ಲಾದ ನಿಸರ್ಗದಲ್ಲಿ ಅವರ ಗೆಳತಿ ಎಡ್ವಿನಾ ಅವರನ್ನು ಸಾವರಿಸಿದಳು ಮತ್ತು ಕೊನೆಗೆ ಅವರನ್ನು ಒಪ್ಪಿಸಿದಳು !
೧೭. ಭಾರತದ ಹೃದಯವಿದ್ರಾವಕ ವಿಭಜನೆ !
ಜೂನ್ ೧೯೪೭ ! ಮೌಂಟ್‌ಬ್ಯಾಟನ್ ಅನಿರೀಕ್ಷಿತವಾಗಿ ‘ಅಧಿಕಾರದ ಹಸ್ತಾಂತರವನ್ನು ಜೂನ್ ೧೯೪೮ ರ ಬದಲು ೧೫ ಆಗಸ್ಟ್ ೧೯೪೭ ರಂದು, ಅಂದರೆ ಕೇವಲ ೧೦ ವಾರಗಳಲ್ಲಿ ಆಗಿಹೋಗುವುದು, ಎಂದು ಘೋಷಿಸಿದನು. ಎಲ್ಲರೂ ಆಶ್ಚರ್ಯಚಕಿತರಾದರು. ಅದೇ ದಿನ ಸಾಯಂಕಾಲ ಆಕಾಶವಾಣಿಯಿಂದ ಭಾರತದ ವಿಭಜನೆ ಆಗಲಿಕ್ಕಿದೆ ಎಂದು ಘೋಷಣೆಯನ್ನು ಮಾಡಲಾಯಿತು. ಹಿಂದೂ-ಮುಸಲ್ಮಾನರಲ್ಲಿ ದಂಗೆಗಳು ಆರಂಭವಾದವು. ‘ನಸುಗಪ್ಪು ಸಾಹೇಬರನ್ನು ಮಧ್ಯಸ್ತರನ್ನಾಗಿ ಮಾಡಿ ಸ್ವಾತಂತ್ರ್ಯ ಚಳುವಳಿಯ ‘ಸಬ್‌ವರ್ಜನ್ ಈಗ ಪೂರ್ಣವಾಗಿತ್ತು. (ಆಧಾರ : ‘ಪ್ರಾಚ್ಯಮ್ ಯೂಟ್ಯೂಬ್ ವಾಹಿನಿ)