ಈ ನಿರ್ಧಾರದ ಹಿಂದಿನ ಕಾರಣ ವಸ್ತುನಿಷ್ಠತೆ ಇಲ್ಲ ಎಂದು ‘ಬ್ರಿಟಿಷ್ ಬೋರ್ಡ್ ಆಫ್ ಫಿಲ್ಮ್ ಕ್ಲಾಸಿಫಿಕೇಷನ್’ ಮೇಲೆ ಆರೋಪ !
ಲಂಡನ್ (ಯುನೈಟೆಡ್ ಕಿಂಗ್‌ಡಮ್) – ‘ದಿ ಕೇರಳ ಸ್ಟೋರಿ’ ಈ ಚಲನಚಿತ್ರದ ಮೂಲಕ ಪ್ರದರ್ಶಿಸಲಾದ ಸತ್ಯವನ್ನು ಭಾರತದ ಜಾತ್ಯತೀತ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಅರಗಿಸಿಕೊಳ್ಳಲಾಗದೆ, ಈಗ ಅದನ್ನು ಯಾವುದೇ ವಸ್ತುನಿಷ್ಠ ಕಾರಣ ನೀಡದೇ ಯುನೈಟೆಡ್ ಕಿಂಗ್‌ಡಂನಲ್ಲಿಯು ಪ್ರದರ್ಶನ ರದ್ದು ಮಾಡಲಾಗಿದೆ. ‘ಬ್ರಿಟಿಷ್ ಬೋರ್ಡ್ ಆಫ್ ಫಿಲ್ಮ್ ಕ್ಲಾಸಿಫಿಕೇಶನ್’ (ಬಿ.ಬಿ.ಎಫ್.ಸಿ.)ಯು ಇನ್ನೂ ಚಲನಚಿತ್ರ ಪ್ರದರ್ಶನದ ಪ್ರಮಾಣಪತ್ರವನ್ನು ನೀಡಿಲ್ಲ. ಈ ಚಲನಚಿತ್ರವು ಬ್ರಿಟನಿನ ೩೧ ಚಿತ್ರಮಂದಿರಗಳಲ್ಲಿ ಮೇ ೧೨ ರಂದು ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಬೇಕಿತ್ತು; ಆದರೆ ಚಿತ್ರದ ಎಲ್ಲಾ ವೆಬ್‌ಸೈಟ್‌ಗಳಲ್ಲಿ ಟಿಕೆಟ್‌ಗಳ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ ಮತ್ತು ಆಟಗಳನ್ನು (ಶೋ) ರದ್ದುಗೊಳಿಸಲಾಗಿದೆ.
#British cinemas cancel ‘#TheKeralaStory’ screening, say film yet to get age cert https://t.co/65POlSrNzY
— The Times Of India (@timesofindia) May 14, 2023
೧. ಈ ಕುರಿತು ಮಂಡಳಿಯು, ‘ದಿ ಕೇರಳ ಸ್ಟೋರಿ’ಗೆ ಪ್ರಮಾಣಪತ್ರ ನೀಡುವ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ ಎಂದು ಹೇಳಿದೆ. ‘ವಯಸ್ಸಿನ ಪ್ರಮಾಣ ಪತ್ರ’ (ವೀಕ್ಷಕರ ವಯಸ್ಸಿನ ಪ್ರಮಾಣ ಪತ್ರ) ಪಡೆದ ತಕ್ಷಣ ಯುನೈಟೆಡ್ ಕಿಂಗ್‌ಡಂನಲ್ಲಿ ಚಲನಚಿತ್ರವನ್ನು ಪ್ರದರ್ಶಿಸಲಾಗುವುದು.
೨. ಈ ನಿಟ್ಟಿನಲ್ಲಿ, ಚಿತ್ರಗಳ ವಿತರಕ ಮತ್ತು ‘ಟ್ವೆಂಟಿ ಫೋರ್ ಸೆವೆನ್ ಫ್ಲಿಕ್ಸ್ ಫಾರ್ ಯೂ’ ಸಂಸ್ಥೆಯ ನಿರ್ದೇಶಕ ಸುರೇಶ್ ವರಸಾನಿಯವರು, ಇದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಹಿಂದಿ, ತಮಿಳು ಮತ್ತು ಮಲಯಾಳಂ ಈ ಮೂರು ಭಾಷೆಗಳ ಆವೃತ್ತಿಗಳನ್ನು ಮೇ ೧೦ ರಂದೇ ಮಂಡಳಿಗೆ ಸಲ್ಲಿಸಿದ್ದೆ. ‘ಏಜ್ ಸರ್ಟಿಫಿಕೇಶನ್’ ಪ್ರಮಾಣಪತ್ರದ ಪ್ರಕ್ರಿಯೆಯೂ ಅದೇ ದಿನ ಪ್ರಾರಂಬಿಸಬೇಕಿತ್ತು ಆದರೆ ಇದರ ಹಿಂದಿನ ಕಾರಣವನ್ನು ಮಂಡಳಿಯನ್ನು ಕೇಳಿದಾಗ ಅವರ ಬಳಿ ಯಾವುದೇ ಸರಿಯಾದ ಕಾರಣವಿಲ್ಲ. ಈ ವಿಳಂಬದಿಂದ ನಮಗೆ ೫೦ ಲಕ್ಷ ರೂಪಾಯಿಗಳ ನಷ್ಟ ಉಂಟಾಗಿದೆ ಎಂದು ಹೇಳಿದ್ದಾರೆ.
೩. ಯುನೈಟೆಡ್ ಕಿಂಗ್‌ಡಮ್‌ನಲ್ಲಿ ೪೫ ಸಾವಿರ ಹಿಂದೂ ಮತ್ತು ಜೈನ ಸಮುದಾಯಗಳನ್ನು ಪ್ರತಿನಿಧಿಸುವ ‘ಹಿಂದೂ ಕಮ್ಯುನಿಟಿ ಆರ್ಗನೈಜೇಶನ್’ ಈ ಮಂಡಳಿಗೆ ಪತ್ರ ಬರೆದಿದ್ದು, ಶೀಘ್ರದಲ್ಲೇ ಈ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.
೪. ಅಮೇರಿಕಾ, ಭಾರತ, ಆಸ್ಟ್ರೇಲಿಯಾ, ಕೆನಡಾ ಮತ್ತು ಐರ್ಲೆಂಡ್ ಈ ದೇಶಗಳು ಚಿತ್ರವನ್ನು ಬಿಡುಗಡೆ ಮಾಡಲು ಪ್ರಾರಂಭಿಸಿವೆ.
ಸಂಪಾದಕೀಯ ನಿಲುವುಆರೋಪ ನಿಜವೇ ಆಗಿದ್ದಲ್ಲಿ ಇದರ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಪರಿಶೀಲಿಸಬೇಕಿದೆ. ಅದಲ್ಲದೆ ಪ್ರಪಂಚದಾದ್ಯಂತ ಹಿಂದೂಗಳು ಈ ನಿರ್ಧಾರದ ವಿರುದ್ಧ ಧ್ವನಿ ಎತ್ತಬೇಕು ಮತ್ತು ಚಲನಚಿತ್ರವನ್ನು ಪ್ರದರ್ಶಿಸಲು ಬ್ರಿಟಿಷ್ ಸರಕಾರವನ್ನು ಒತ್ತಾಯಿಸಬೇಕು ! |