ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ೮೧ ನೇ ಜನ್ಮೋತ್ಸವದ ನಿಮಿತ್ತ…
ಉಡುಪಿ ಶ್ರೀ. ಜಯತೀರ್ಥ ಆಚಾರ್ಯರು ಜ್ಯೋತಿಷಿಗಳಾಗಿದ್ದಾರೆ. ಅವರು ‘ರಾಘವೇಂದ್ರ ಸ್ವಾಮಿ ಉಡುಪಿ ಮಠದ ವ್ಯವಸ್ಥಾಪಕರೂ ಆಗಿದ್ದಾರೆ. ಅವರು ೧೯೯೬ ರಿಂದ ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ಜ್ಯೋತಿಷ್ಯ ಶಾಸ್ತ್ರದ ಅಧ್ಯಯನ ಮಾಡುತ್ತಿದ್ದಾರೆ. ೯.೪.೨೦೨೩ ರಂದು ನಾನು ಶ್ರೀ. ಜಯತೀರ್ಥರನ್ನು ಭೇಟಿಯಾದೆನು. ಆ ಸಮಯದಲ್ಲಿ ನಾನು ಅವರಿಗೆ ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರವನ್ನು ತೋರಿಸಿದಾಗ ಅದನ್ನು ನೋಡಿ ಅವರು ಪರಾತ್ಪರ ಗುರು ಡಾಕ್ಟರರ ಬಗ್ಗೆ ಹೇಳಿದ ವೈಶಿಷ್ಟ್ಯಪೂರ್ಣ ಅಂಶಗಳನ್ನು ಮುಂದೆ ಕೊಡುತ್ತಿದ್ದೇನೆ.
೧. ಪರಾತ್ಪರ ಗುರು ಡಾಕ್ಟರರು ಅಲೌಕಿಕರಾಗಿದ್ದಾರೆ.
೨. ಅವರ ಬಳಿ ಅನೇಕ ದೈವೀ ಶಕ್ತಿಗಳಿವೆ.
೩. ಪರಾತ್ಪರ ಗುರು ಡಾಕ್ಟರರ ಕಿವಿಗಳು ತುಂಬಾ ಉದ್ದವಾಗಿವೆ ಮತ್ತು ಅವರ ಹಣೆ ಅಗಲವಾಗಿದೆ, ಇದು ‘ಮಹಾಪುರುಷರ ಲಕ್ಷಣವಾಗಿದೆ.
೪. ‘ಭಗವಾನ ಶ್ರೀರಾಮ ಮತ್ತು ‘ಶ್ರೀಕೃಷ್ಣರಂತೆ ಪರಾತ್ಪರ ಗುರು ಡಾಕ್ಟರರು ಅವತಾರಿ ಪುರುಷರಾಗಿದ್ದಾರೆ.
೫. ಪರಾತ್ಪರ ಗುರು ಡಾಕ್ಟರರು ‘ಅಜಾನುಬಾಹು ಆಗಿದ್ದಾರೆ. ಇದರ ಒಂದು ಅರ್ಥ, ಯಾವ ವ್ಯಕ್ತಿಯ ಎರಡೂ ಕೈಗಳು ಮೊಣಕಾಲುಗಳವರೆಗೆ ಉದ್ದ ಇರುತ್ತವೆಯೋ, ಅವರಿಗೆ ‘ಅಜಾನುಬಾಹು, ಎಂದು ಹೇಳುತ್ತಾರೆ. ಈ ಶಬ್ದದ ಇನ್ನೊಂದು ಅರ್ಥ, ಯಾವ ವ್ಯಕ್ತಿಯ ಕೈ, ಕಾಲು, ಹಣೆ ಮೂಗು ಮತ್ತು ಶರೀರ ಅಗಲವಾಗಿರುತ್ತದೆಯೋ ಅವರಿಗೂ ‘ಅಜಾನುಬಾಹು, ಎಂದು ಹೇಳುತ್ತಾರೆ. ಈ ಅರ್ಥದಲ್ಲಿ ಪರಾತ್ಪರ ಗುರು ಡಾಕ್ಟರರು ‘ಅಜಾನುಬಾಹು ಆಗಿದ್ದಾರೆ.
೬. ಪರಾತ್ಪರ ಗುರು ಡಾಕ್ಟರರಂತಹ ವ್ಯಕ್ತಿತ್ವ ಭೂಮಿಯ ಮೇಲೆ ವಿರಳವಾಗಿದೆ ಅಥವಾ ಇಲ್ಲವೆನ್ನಬಹುದು. ಭಗವಾನ ಪರಶುರಾಮನು ಲಯದ ಕಾರ್ಯವನ್ನು ಮಾಡಿದ್ದನು, ಅದರಂತೆ ಕಲಿಯುಗದಲ್ಲಿ ಸದ್ಯ ಪರಾತ್ಪರ ಗುರು ಡಾಕ್ಟರರಿಂದ ಈ ಕಾರ್ಯವು ಸ್ವಲ್ಪ ಪ್ರಮಾಣದಲ್ಲಿ ಆಗಲಿಕ್ಕಿದೆ. ಅವರ ಚರಣಗಳಲ್ಲಿ ನನ್ನ ಸಾಷ್ಟಾಂಗ ನಮಸ್ಕಾರಗಳು !
ಜ್ಯೋತಿಷಿ ಶ್ರೀ ಜಯತೀರ್ಥ ಆಚಾರ್ಯರು ಪರಾತ್ಪರ ಗುರು ಡಾ. ಆಠವಲೆಯವರ ಬಗ್ಗೆ ಹೇಳಿದ ಭವಿಷ್ಯವಾಣಿಯಂತೆ ಕಾರ್ಯ ಘಟಿಸಲು ಪರಾತ್ಪರ ಗುರು ಡಾಕ್ಟರರು ಅವರ ಬಳಿ ಆಶೀರ್ವಾದ ಕೇಳುವುದು ಮತ್ತು ಅದಕ್ಕೆ ಶ್ರೀ. ಜಯತೀರ್ಥ ಇವರು ನೀಡಿದ ವಿನಮ್ರತಾಪೂರ್ವಕ ಉತ್ತರ !
‘೯.೪.೨೦೨೩ ರಂದು ಶ್ರೀ. ಜಯತೀರ್ಥ ಆಚಾರ್ಯರು ಪರಾತ್ಪರ ಗುರು ಡಾಕ್ಟರರ ಛಾಯಾಚಿತ್ರವನ್ನು ನೋಡಿ ಅವರ ಕೆಲವು ಆಧ್ಯಾತ್ಮಿಕ ವೈಶಿಷ್ಟ್ಯಗಳನ್ನು ಹೇಳಿದ್ದರು. ಅವುಗಳನ್ನು ಓದಿ ಪರಾತ್ಪರ ಗುರು ಡಾಕ್ಟರರು ಶ್ರೀ. ಜಯತೀರ್ಥ ಆಚಾರ್ಯರಿಗೆ ಮುಂದಿನ ಸಂದೇಶವನ್ನು ನೀಡಲು ಹೇಳಿದರು, ‘ಉಡುಪಿಯ ಜ್ಯೋತಿಷಿಗಳಾದ ಶ್ರೀ. ಜಯತೀರ್ಥ ಆಚಾರ್ಯರಿಗೆ ನನ್ನ ನಮಸ್ಕಾರಗಳನ್ನು ಹೇಳಬೇಕು ಮತ್ತು ಅವರ ಭವಿಷ್ಯಕ್ಕನುಸಾರ ನನ್ನಿಂದ ಕಾರ್ಯವಾಗಲು ಅವರ ಆಶೀರ್ವಾದ ಬೇಕು, ಎಂದೂ ಹೇಳಬೇಕು.
ಈ ಸಂದೇಶವನ್ನು ನಾನು ಶ್ರೀ. ಜಯತೀರ್ಥರಿಗೆ ನೀಡಿದೆ. ಆ ಸಮಯದಲ್ಲಿ ಅವರು ನನಗೆ ಪರಾತ್ಪರ ಗುರು ಡಾಕ್ಟರರನ್ನು ಉದ್ದೇಶಿಸಿ ಮುಂದಿನ ಸಂದೇಶವನ್ನು ನೀಡಿದರು, ‘ನಾನು ಓರ್ವ ವಿದ್ಯಾರ್ಥಿ ಆಗಿದ್ದೇನೆ. ಪರಾತ್ಪರ ಗುರು ಡಾಕ್ಟರರಿಗೆ ನಾನೆಂತಹ ಆಶೀರ್ವಾದ ಕೊಡಬಲ್ಲೆ ? ನೀವೇ ನನಗೆ ಆಶೀರ್ವಾದ ನೀಡಬೇಕು. ನನಗೆ ಭವಿಷ್ಯದಲ್ಲಿ ಸಮಷ್ಟಿಗೆ ಉಪಯೋಗವಾಗುವಂತಹ ಅಂಶಗಳೇನಾದರೂ ಹೊಳೆದರೆ ನಾನು ತಮಗೆ ನೀಡುತ್ತಾ ಹೋಗುವೆನು.
– ಶ್ರೀ. ಸೋಮನಾಥ ಮಲ್ಯಾ, ಉಡುಪಿ. (೧೩.೪.೨೦೨೩)