ಉಜ್ಜಯನಿಯ ಮಹಾಕಾಲೇಶ್ವರ ದೇವಸ್ಥಾನದಲ್ಲಿ ಶುಲ್ಕಪಾವತಿಸಿ ದರ್ಶನ ಪಡೆಯುವ ವ್ಯವಸ್ಥೆಯ ವಿರುದ್ಧ ಸಂತರಿಂದ ಪ್ರಧಾನಮಂತ್ರಿ ಮೋದಿಯವರಿಗೆ ಪತ್ರ !
ಉಜ್ಜಯನಿ (ಮಧ್ಯಪ್ರದೇಶ) – ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಮಹಾಕಾಲೇಶ್ವರ ದೇವಸ್ಥಾನದಲ್ಲಿ ನಡೆದಿರುವ ಶುಲ್ಕಪಾವತಿಸಿ ದರ್ಶನ ಪಡೆಯುವ ವ್ಯವಸ್ಥೆಯನ್ನು ಸ್ಥಗಿತಗೊಳಿಸುವಂತೆ ಸಂತರು ಮತ್ತು ಮಹಂತರು ಮನವಿ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ರಾಜ್ಯದ ಮುಖ್ಯಮಂತ್ರಿ ಶಿವರಾಜಸಿಂಹ ಚೌಹಾಣರಿಗೆ ಪತ್ರವನ್ನು ಬರೆದು ಈ ವ್ಯವಸ್ಥೆಯನ್ನು ಸ್ಥಗಿತಗೊಳಿಸುವಂತೆ ಮನವಿ ಮಾಡಿದ್ದಾರೆ. ಅವರು ಶುಲ್ಕವನ್ನು ಪಾವತಿಸಿ ದರ್ಶನ ಪಡೆಯುವ ವ್ಯವಸ್ಥೆ ಮೊಗಲರ ಕಾಲದ ಜಿಝಿಯಾ ತೆರಿಗೆಯಂತೆ ಇದೆಯೆಂದು ಹೇಳಿದ್ದಾರೆ. ಇಷ್ಟೇ ಅಲ್ಲ `ಪಾಕಿಸ್ತಾನದಲ್ಲಿ ಯಾವುದೇ ದೇವಸ್ಥಾನದಲ್ಲಿ ಹಿಂದೂಗಳಿಗೆ ಪ್ರವೇಶ ಸಿಗದಿದ್ದರೆ, ಅದನ್ನು ನಾವು ತಿಳಿದುಕೊಳ್ಳಬಲ್ಲೆವು; ಆದರೆ ಭಾರತದಲ್ಲಿ ದರ್ಶನಕ್ಕಾಗಿ ಹಿಂದೂಗಳೊಂದಿಗೆ ಭೇದಭಾವವನ್ನು ಮಾಡುವುದು ಬಹಳ ತಪ್ಪಾಗಿದೆ. ಧಾರ್ಮಿಕ ಸ್ಥಳಗಳ ಮೂಲಕ ಹಣವನ್ನು ಗಳಿಸುವುದು ವಿನಾಶದ ಲಕ್ಷಣವಾಗಿದೆ. ಇಂತಹ ಕೆಟ್ಟ ವ್ಯವಸ್ಥೆಯ ಮುಂದುವರಿದರೆ, ಅದರ ದುಷ್ಪರಿಣಾಮ ಆಡಳಿತಾಧಿಕಾರಿಗಳು ಅನುಭವಿಸಬೇಕಾಗುತ್ತದೆಯೆಂದು ಈ ಪತ್ರದ ಮೂಲಕ ಎಚ್ಚರಿಸಿದ್ದಾರೆ.
ಶ್ರೀ ಪಂಚಾಯತಿ ನಿರಂಜನಿ ಆಖಾಡಾದ ಪೀಠಾಧೀಶ್ವರ ಡಾ. ಸುಮನಾನಂದ ಗಿರಿ ಹಾಗೂ ಸ್ವಸ್ತಿಕ ಪೀಠಾಧೀಶ್ವರ ಪರಮಹಂಸ ಡಾ. ಅವಧೇಶ ಪುರಿ ಮಹಾರಾಜರು ಪ್ರಧಾನಮಂತ್ರಿ ಮೋದಿ ಮತ್ತು ಮುಖ್ಯಮಂತ್ರಿ ಶಿವರಾಜಸಿಂಹ ಚೌಹಾಣರಿಗೆ ಬರೆದಿರುವ ಪತ್ರದಲ್ಲಿ,
1. ದೇವಸ್ಥಾನ ಆಡಳಿತ ಮಂಡಳಿಯ ಭೇದಭಾವ ಮತ್ತು ಧಾರ್ಮಿಕಸ್ಥಳಗಳು ಹಣ ಗಳಿಸುವ ಕೇಂದ್ರಸ್ಥಾನ ಮಾಡಿದ್ದರಿಂದ ಅವುಗಳ ಅಪಕೀರ್ತಿಯಾಗುತ್ತಿದೆ. ಇದು ನಮ್ಮ ಯೋಗ್ಯ ಮುಖಂಡತ್ವ ಮತ್ತು ಜನಪ್ರಿಯತೆಯ ವಿರುದ್ಧವಾಗಿದೆ. ಇದರಿಂದ, ದೇವಸ್ಥಾನದ ಆಡಳಿತ ಮಂಡಳಿಯ ಒಂದೇ ಒಂದು ಉದ್ದೇಶವೆಂದರೆ ಹಣ ಗಳಿಸುವುದು ಆಗಿದೆ ಎಂಬುದು ಗಮನಕ್ಕೆ ಬರುತ್ತದೆ. ಇದರಿಂದ ದೇಶಾದ್ಯಂತವಿರುವ ಜನರ ಧಾರ್ಮಿಕ ಭಾವನೆ ನೋಯಿಸಲ್ಪಡುತ್ತಿದೆ. ಧರ್ಮದ ಮೇಲಿನ ವಿಶ್ವಾಸ ಕಡಿಮೆಯಾಗುತ್ತಿದೆ. ಈ ಸ್ಥಿತಿಯಿಂದ ಭಕ್ತರಿಗೆ ದೇವಸ್ಥಾನವನ್ನು ಸುಲಿಗೆ ಮಾಡುವ ಅಡ್ಡೆಯೆನ್ನಲು ಸಂಕೋಚವೆನಿಸುತ್ತಿಲ್ಲ. ಹೆದರಿಕೆಯಿಂದ ಅವರು ಹೀಗೆ ಹೇಳಲು ಮುಂದಾಗುತ್ತಿಲ್ಲ; ಆದರೆ ಇಂತಹ ಕೆಟ್ಟ ಆಡಳಿತ ಮಂಡಳಿ ಮುಂದುವರಿದರೆ, ಅದರ ದುಷ್ಪರಿಣಾಮ ಆಡಳಿತಾಧಿಕಾರಿಗಳಿಗೆ ಆಗಲಿದೆ.
2. ಭಕ್ತರಿಂದ ದರ್ಶನ ಶುಲ್ಕ, ಗರ್ಭಗೃಹದಲ್ಲಿ ಪ್ರವೇಶಕ್ಕಾಗಿ ಶುಲ್ಕ, ಭಸ್ಮಾರತಿಯ ದರ್ಶನಕ್ಕಾಗಿ ಶುಲ್ಕ ಮುಂತಾದ ಶುಲ್ಕವನ್ನು ವಸೂಲು ಮಾಡಲಾಗುತ್ತಿದೆ. ಭಕ್ತರಿಂದ ಶುಲ್ಕ ಪಡೆದರೆ ಅದನ್ನು ಅರಿಯಬಹುದು; ಆದರೆ ಸಾಧು, ಸಂತರಿಗೂ ದರ್ಶನಕ್ಕಾಗಿ ಅನುಮತಿ ಸಿಗುತ್ತಿಲ್ಲ.
3. ದೇವಸ್ಥಾನ ಆಡಳಿತ ಮಂಡಳಿಯು ಜಿಲ್ಲಾಧಿಕಾರಿ, ಪೊಲೀಸ ಅಧೀಕ್ಷಕರಿಗೆ ಕೆಲವು ಕೋಟಾಗಳನ್ನು (ಮೀಸಲು ಇರಿಸುವ ಕೆಲವು ಸ್ಥಾನ) ಕಾಯ್ದಿರಿಸಿದ್ದರೇ ಸಾಧು, ಸಂತರು, ಮಹಂತರಿಗೂ ಕೋಟಾ ಕಾಯ್ದಿರಿಸಬೇಕು. ಇದರಿಂದ ಅವರ ಶಿಷ್ಯಂದಿರು, ಭಕ್ತರು, ಅನುಯಾಯಿಗಳಿಗೆ ದೇವಸ್ಥಾನದಲ್ಲಿ ಸುಲಭವಾಗಿ ದರ್ಶನ ಸಿಗಬಹುದು. ಒಂದು ವೇಳೆ ಹೀಗೆ ಮಾಡದಿದ್ದರೆ, ಜಿಲ್ಲಾಧಿಕಾರಿ, ಪೊಲೀಸ ಅಧೀಕ್ಷಕರು ಮುಂತಾದವರ ಕೋಟಾವನ್ನು ಕೂಡ ರದ್ದುಗೊಳಿಸಬೇಕು ಎಂದು ಈ ಸಂತರು ತಮ್ಮ ಪತ್ರದಲ್ಲಿ ಮನವಿ ಮಾಡಿದ್ದಾರೆ.