ಯುದ್ಧ, ಹಿಂಸಾಚಾರ ಮತ್ತು ನೈಸರ್ಗಿಕ ವಿಪತ್ತುಗಳಿಂದ 2022 ರಲ್ಲಿ ಜಗತ್ತಿನಾದ್ಯಂತ 7 ಕೋಟಿ ಜನರು ನಿರಾಶ್ರಿತರು !

ನೈಸರ್ಗಿಕ ವಿಪತ್ತುಗಳಿಂದ ಭಾರತದಲ್ಲಿ 25 ಲಕ್ಷ ಜನರು ನಿರಾಶ್ರಿತರು

ಜಿನೇವ್ಹಾ (ಸ್ವಿಟ್ಝರಲ್ಯಾಂಡ) – ಯುದ್ಧ, ಹಿಂಸಾಚಾರ ಮತ್ತು ನೈಸರ್ಗಿಕ ವಿಪತ್ತುಗಳಿಂದ 2022 ರಲ್ಲಿ 7 ಕೋಟಿ 10 ಲಕ್ಷ ಜನರು ಜಗತ್ತಿನಾದ್ಯಂತ ನಿರಾಶ್ರಿತರಾಗಿದ್ದಾರೆಂದು `ಅಂತರಿಕ ನಿರಾಶ್ರಿತರ ತಪಾಸಣಾ ಕೇಂದ್ರ’ ಈ ಜಾಗತಿಕ ವರದಿಯಲ್ಲಿ ಮಾಹಿತಿ ನೀಡಲಾಗಿದೆ. ಇದರಲ್ಲಿ ಭಾರತದಲ್ಲಿ ನೈಸರ್ಗಿಕ ವಿಪತ್ತಿನಿಂದ 25 ಲಕ್ಷ ಜನರು ನಿರಾಶ್ರಿತರಾಗಿರುವ ಮಾಹಿತಿಯನ್ನು ನೀಡಲಾಗಿದೆ.

ಉಕ್ರೇನ ಮತ್ತು ರಷ್ಯಾ ನಡುವಿನ ಯುದ್ಧದಿಂದ ದೊಡ್ಡ ಪ್ರಮಾಣದಲ್ಲಿ ನಿರಾಶ್ರಿತರಾಗಿರುವುದಾಗಿ ಈ ವರದಿಯಲ್ಲಿ ಹೇಳಲಾಗಿದೆ. 2021 ರ ತುಲನೆಯಲ್ಲಿ ಈ ಪ್ರಮಾಣ ಶೇ. 20 ಕ್ಕಿಂತ ಹೆಚ್ಚಾಗಿದೆ. ನೆರೆಹಾವಳಿ ಕಾರಣದಿಂದ ಪಾಕಿಸ್ತಾನ, ನೈಜೇರಿಯಾ ಮತ್ತು ಬ್ರೇಝಿಲ್ ದೇಶಗಳಲ್ಲಿ ಅತ್ಯಧಿಕ ನಿರಾಶ್ರಿತರಾಗಿದ್ದಾರೆ. ಸೋಮಾಲಿಯಾ, ಕೆನಿಯಾ ಮತ್ತು ಇಥಿಯೋಪಿಯಾದಲ್ಲಿ ಬರಗಾಲದಿಂದ ನಿರಾಶ್ರಿತರಾಗಿದ್ದಾರೆ. 2021 ರ ತುಲನೆಯಲ್ಲಿ 2022 ರಲ್ಲಿ ನಿರಾಶ್ರಿತರ ಸಂಖ್ಯೆಯಲ್ಲಿ ಶೇ. 40 ರಷ್ಟು ಹೆಚ್ಚಳವಾಗಿದೆ.

ಸಂಪಾದಕೀಯ ನಿಲುವು

ಸಂತರು ಮತ್ತು ದ್ರಷ್ಟಾರರು ಹೇಳಿದಂತೆ ಭವಿಷ್ಯದಲ್ಲಿ ಈ ರೀತಿಯ ಸಂಕಟಗಳಲ್ಲಿ ಕೋಟಿಗಟ್ಟಲೇ ಜನರು ಸಾಯುವವರಿದ್ದಾರೆ. ಈ ಕಾಲಾವಧಿಯಲ್ಲಿ ಸ್ವಂತ ರಕ್ಷಣೆಗಾಗಿ ಸಾಧನೆಯನ್ನು ಮಾಡುವುದು ಆವಶ್ಯಕವಾಗಿದೆ !