ಸೂರತ ಪುರಸಭೆಯ ಆಶ್ರಯಗೃಹವನ್ನು ನಡೆಸುತ್ತಿರುವ ಇಸ್ಲಾಮಿ ಸಂಸ್ಥೆಯಿಂದ ಹಿಂದೂ ಅವಲಂಬಿತರೊಂದಿಗೆ ತಾರತಮ್ಯದಿಂದ ವರ್ತನೆ !

ವಿಚಾರಣೆಯ ಬಳಿಕ ಪಾಲಿಕೆಯು ಸದರಿ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಿತು !

ಸೂರತ (ಗುಜರಾತ) – ಇಲ್ಲಿಯ ಗೋರಾಟ ಪ್ರದೇಶದ ಆಶ್ರಯಗೃಹದಲ್ಲಿ ಆಶ್ರಯ ಪಡೆದಿದ್ದ ಹಿಂದೂಗಳೊಂದಿಗೆ ತಾರತಮ್ಯದಿಂದ ನಡೆಸಿಕೊಳ್ಳುತ್ತಿದ್ದು, ಇದರ ವಿಚಾರಣೆಯನ್ನು ನಡೆಸಬೇಕು ಎಂದು ಸ್ಥಳೀಯ ನಗರಸೇವಕ ಕೇಯೂರ ಚಪಟವಾಲಾ ಇವರು ಕೋರಿದ್ದರು. ಈ ಆಶ್ರಯಗೃಹ `ಶಾಹಿದ ಮಸೀದ ಮೆಡಿಕಲ ಸರ್ವೆಂಟ ಸೊಸಾಯಟಿ’ ಈ ಸಂಸ್ಥೆ ನಡೆಸುತ್ತಿತ್ತು. ಅವರಿಂದ ಆಶ್ರಯ ಪಡೆದಿರುವ ಹಿಂದೂಗಳನ್ನು ಕೆಟ್ಟ ರೀತಿಯಲ್ಲಿ ನಡೆಸಿಕೊಳ್ಳುತ್ತಿದ್ದು, ಮುಸಲ್ಮಾನ ಆಶ್ರಿತರಿಗೆ ಉತ್ತಮವಾಗಿ ನೋಡಿಕೊಳ್ಳುತ್ತಿದ್ದಾರೆಂದು ನಗರಸೇವಕ ಚಪಟವಾಲಾ ಆರೋಪ ಮಾಡಿದ್ದರು. ಹಾಗೆಯೇ ಹಿಂದೂಗಳನ್ನು ಆಶ್ರಯಗೃಹವನ್ನು ಬಿಟ್ಟು ಹೋಗುವಂತೆ ಒತ್ತಡ ಹೇರಲಾಗುತ್ತಿದೆಯೆಂದೂ ಅವರು ಹೇಳಿದ್ದರು. ಈ ಆಶ್ರಯಗೃಹವನ್ನು ಸೂರತ ಪುರಸಭೆಯದಾಗಿದ್ದು, ಅವರು ಮೇಲಿನ ಸಂಸ್ಥೆಗೆ ನಡೆಸಲು ಕೊಟ್ಟಿದ್ದರು. ನಗರದಲ್ಲಿ ಇಂತಹ ಅನೇಕ ಆಶ್ರಯಗೃಹಗಳನ್ನು ಪಾಲಿಕೆಯು ಸ್ಥಾಪಿಸಿದ್ದು, ಅವುಗಳನ್ನು ಸ್ಥಳೀಯ ಸಂಸ್ಥೆಗಳಿಗೆ ನಡೆಸಲು ನೀಡಿದೆ. ನಗರಸೇವಕ ಚಪಟವಾಲಾ ಇವರು ಮಹಾಪೌರ ಹೇಮಾಲಿ ಬೋಧಾವಾಲಾರಿಗೆ ದೂರು ನೀಡಿದ ಬಳಿಕ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ.

ಮಹಾಪೌರ ಹೇಮಾಲಿ ಬೋಧಾವಾಲಾ ಇವರು ದೂರು ಸಿಕ್ಕ ಬಳಿಕ ಅವರು ತಕ್ಷಣವೇ ಆಶ್ರಯಗೃಹಕ್ಕೆ ಭೇಟಿ ನೀಡಿದರು. ಆ ಸಮಯದಲ್ಲಿ ಅನೇಕ ತಪ್ಪುಗಳು ನಡೆದಿರುವುದು ಗಮನಕ್ಕೆ ಬಂದಿತು. ತದನಂತರ ಆ ಸಂಸ್ಥೆಯಿಂದ ಆಶ್ರಯಗೃಹದ ವಿದ್ಯುತ್ ಬಿಲ್ಲು ಬಾಕಿ ಇರುವುದು ಕಂಡು ಬಂದಿದೆ. ಸಂಸ್ಥೆಯಿಂದ ಇಲ್ಲಿ 300 ಜನರು ಆಶ್ರಯ ಪಡೆದಿದ್ದಾರೆಂದು ಹೇಳಲಾಗಿತ್ತು. ಅದರಂತೆ ಮಹಾಪೌರರು ಅಲ್ಲಿ ಆಶ್ರಯ ಪಡೆದಿರುವವರ ರಜಿಸ್ಟರನ್ನು ಪರಿಶೀಲಿಸಿದಾಗ ಕೇವಲ 100 ಜನರು ಆಶ್ರಯಪಡೆದಿರುವುದು ಕಂಡು ಬಂದಿತು.

ಸಂಪಾದಕೀಯ ನಿಲುವು

ಸಾಮಾಜಿಕ ಕಾರ್ಯಗಳ ಹೆಸರಿನಡಿಯಲ್ಲಿ ಮತಾಂಧತೆಯನ್ನು ರಕ್ಷಿಸುವ ಜನರನ್ನು ಜೈಲಿಗಟ್ಟಬೇಕು ಮತ್ತು ಇಂತಹವರ ಸಂಸ್ಥೆಯನ್ನು ನಿರ್ಬಂಧಿಸಬೇಕು !