ಪಾಕಿಸ್ತಾನದಲ್ಲಿ ಮಗಳ ಅತ್ಯಾಚಾರಕ್ಕೆ ವಿರೋಧಿಸಿದ ಹಿಂದೂ ತಂದೆಯ ಶಿರಚ್ಛೇದ ಮಾಡಿದ ಜಿಹಾದಿಗಳು !

ಇಸ್ಲಾಮಾಬಾದ – ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಅಲಮಾಖ ಭೀಲ ಹೆಸರಿನ ಒಬ್ಬ ಹಿಂದೂ ತಂದೆಯು ತನ್ನ ಪುತ್ರಿಯ ಮಾನಭಂಗ ಮಾಡಿದ ಜಿಹಾದಿಗಳನ್ನು ವಿರೋಧಿಸಿದ್ದರಿಂದ ಆಕ್ರೋಶಗೊಂಡ ಜಿಹಾದಿಗಳು ತಂದೆಯ ಶಿರಚ್ಛೇದ ಮಾಡಿದರು.

1. ಪಾಕಿಸ್ತಾನದ ಒಂದು ವಾರ್ತಾವಾಹಿನಿಯು ನೀಡಿರುವ ಮಾಹಿತಿಯನುಸಾರ ಸಿಂಧ್ ಪ್ರಾಂತ್ಯದ ಶಾಹದಾದಪುರದಲ್ಲಿ ಈ ಘಟನೆ ನಡೆದಿದ್ದು, ಕೆಲವು ಮುಸಲ್ಮಾನ ಯುವಕರು ಅಲಮಾಖ ಭೀಲನ ಮಗಳ ಮಾನಭಂಗ ಮಾಡಿದ್ದರು.

2. ಅಲಮಾಖ ಮುಸಲ್ಮಾನ ಯುವಕರ ವಿರುದ್ಧ ದೂರನ್ನು ದಾಖಲಿಸಲು `ಪಾಕಿಸ್ತಾನ ದರಾವರ ಇತ್ತೆಹಾದ’ ಈ ಹಿಂದೂ ಸಂಘಟನೆಯ ಸಹಾಯವನ್ನು ಪಡೆದಿರುವ ಮಾಹಿತಿ ದೊರೆಕುತ್ತಲೇ ಮುಸಲ್ಮಾನ ಯುವಕರು ಅಲಮಾಖ ಭೀಲನ ಶಿರಚ್ಛೇದನ ಮಾಡಿದರು. (ಭಾರತದಲ್ಲಿ ಮುಸಲ್ಮಾನರನ್ನು ಓಲೈಸುವ ಜಾತ್ಯತೀತವಾದಿಗಳು ಮತ್ತು ಪ್ರಗತಿಪರರು ಪಾಕಿಸ್ತಾನದಲ್ಲಿ ಹಿಂದೂಗಳು ತಮ್ಮ ಮೇಲೆ ನಡೆಯುತ್ತಿರುವ ಅತ್ಯಾಚಾರಗಳ ವಿರುದ್ಧ ದೂರನ್ನು ಕೂಡ ದಾಖಲಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ಗಮನಿಸಬೇಕು – ಸಂಪಾದಕರು)

3. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಆಕ್ರಮಣಗಳು ಮುಂದುವರಿಯುತ್ತಲೇ ಇದೆ. ಈ ಹಿಂದೆ ಮಾರ್ಚ 30, 2023 ರಂದು ಪಾಕಿಸ್ತಾನದ ಕರಾಚಿಯಲ್ಲಿ ಹಿಂದೂ ಡಾಕ್ಟರ ಬಿರಬಲ್ ಗೆನಾನಿಯವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಅದೇ ರೀತಿ ಮಾರ್ಚ 7, 2023 ರಂದು ಸಿಂಧ್ ಪ್ರಾಂತ್ಯದಲ್ಲಿ ಹೆಸರಾಂತ ಡಾಕ್ಟರ ಧರಮ್ ದೇವ್ ರಾಠಿಯವರನ್ನು ಹತ್ಯೆ ಮಾಡಲಾಗಿತ್ತು.

ಸಂಪಾದಕೀಯ ನಿಲುವು

ಪಾಕಿಸ್ತಾನದಲ್ಲಿ ಅಸುರಕ್ಷಿತ ಹಿಂದೂಗಳು !