ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸರ್ವಜ್ಞತೆ !

ಎಲ್ಲ ಸಾಧಕರ ಆಧಾರವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಶ್ರೀ. ಅಭಿಷೇಕ ಪೈ

೧. ತಾಯಿಯವರು ಕನ್ನಡ ಭಾಷೆಯಲ್ಲಿ ದೇವತೆಗಳ ಹೆಸರುಗಳನ್ನು ಬರೆಯುವಾಗ ತಪ್ಪಾಗಿ ಬರೆಯುವುದು ಮತ್ತು ಈ ತಪ್ಪು ಮುಂದೆ ಹೆಸರುಗಳ ತಪಾಸಣೆ ಮಾಡಿದ ಸಾಧಕರ ಗಮನಕ್ಕೂ ಬಾರದಿರುವುದು

`ಒಂದು ಸಲ ನನಗೆ ಪರಾತ್ಪರ ಗುರು ಡಾ. ಆಠವಲೆಯವರ ಸತ್ಸಂಗವು ಲಭಿಸಿತು. ಆಗ ಅವರು ನನಗೆ “ಚೆನ್ನಾಗಿದ್ದೀರಾ ?” ಎಂದು ಕನ್ನಡ ಭಾಷೆಯಲ್ಲಿ ಕೇಳಿದರು. ಅನಂತರ ಅವರು, “ನನಗೆ ಇಷ್ಟೇ ಕನ್ನಡ ಬರುತ್ತದೆ”, ಎಂದು ಹೇಳಿದರು. ಆ ಸಮಯದಲ್ಲಿ ನನಗೆ ಮುಂದಿನ ಪ್ರಸಂಗದ ನೆನಪಾಯಿತು. `ಜೂನ್ ೨೦೦೦ ದಲ್ಲಿ ನಾನು ಮತ್ತು ನನ್ನ ತಾಯಿಯವರು ಸನಾತನ ಸಂಸ್ಥೆಯ ಸಂಪರ್ಕಕ್ಕೆ ಬಂದೆವು. ಸುಮಾರು ೨೦೦೧ ರಲ್ಲಿ ತಾಯಿಯವರು ಸೇವೆ ಆರಂಭಿಸಿದರು. ಆ ಸಮಯದಲ್ಲಿ ಸನಾತನ ಸಂಸ್ಥೆಯ ವತಿಯಿಂದ ಕನ್ನಡ ಭಾಷೆಯಲ್ಲಿ ದೇವತೆಗಳಸಾತ್ತ್ವಿಕ ನಾಮಪಟ್ಟಿಗಳನ್ನು ತಯಾರಿಸುವ ನಿಯೋಜನೆಯಿತ್ತು. ಆಗ ಶ್ರೀಮತಿ ಅಶ್ವಿನಿ ಪ್ರಭು ಇವರು ತಾಯಿಯವರಿಗೆ ಒಂದು ಸೇವೆಯನ್ನು ಕೊಟ್ಟರು. ಅದರಲ್ಲಿ ಕರ್ನಾಟಕದ ಕೆಲವು ಕುಲದೇವಿ ಮತ್ತು ಕುಲದೇವತೆಗಳ ಹೆಸರುಗಳನ್ನು (ನಾಮಜಪವನ್ನು) ಕನ್ನಡ ಲಿಪಿಯಲ್ಲಿ ಬರೆದು ಕೊಡಲು ಹೇಳಿದರು. ತಾಯಿಯವರು ತಮಗೆ ಗೊತ್ತಿದ್ದ ದೇವತೆಗಳ ನಾಮಜಪಗಳನ್ನು ಬರೆದುಕೊಟ್ಟರು. ಅವುಗಳನ್ನು ಬರೆಯುವಾಗ ಅವರಿಂದ ಒಂದು ತಪ್ಪಾಯಿತು. `ದೇವ್ಯೆöÊ’ ಹೀಗೆ ಯೋಗ್ಯಪದವಿದೆ; ಆದರೆ ತಾಯಿಯವರು ಬರೆಯುವಾಗ `ಐ’ ಒತ್ತು ಮೊದಲು ಬರೆದು ನಂತರ `ಯ’ ಒತ್ತು ಬರೆದರು. (ಅಂದರೆ ದೇವೈ ್ಯ) ಈ ತಪ್ಪು ಅವರ ಗಮನಕ್ಕೆ ಬರಲಿಲ್ಲ ಮತ್ತು ಮುಂದೆ ನಾಮ ಜಪವನ್ನು ತಪಾಸಣೆ ಮಾಡಿದ ಸಾಧಕರ ಗಮನಕ್ಕೂ ಬರಲಿಲ್ಲ.

೧ ಅ. ಪರಾತ್ಪರ ಗುರು ಡಾ. ಆಠವಲೆಯವರು ಸಾಧಕಿಗೆ ಕನ್ನಡ ಬರವಣಿಗೆಯಲ್ಲಿನ ತಪ್ಪನ್ನು ಗಮನಕ್ಕೆ ತಂದು ಕೊಡುವುದು : ನಂತರ ಶ್ರೀಮತಿ ಅಶ್ವಿನಿ ಪ್ರಭು ಇವರು ಆ ನಾಮಜಪದ ಬರವಣಿಗೆಯನ್ನು ಪರಾತ್ಪರ ಗುರು ಡಾ. ಆಠವಲೆಯವರಿಗೆ ತೋರಿಸಿದರು. (ಸ್ಥೂಲದಲ್ಲಿ ನೋಡಿದರೆ ಪರಾತ್ಪರ ಗುರು ಡಾ. ಆಠವಲೆಯವರಿಗೆ ಕನ್ನಡ ಭಾಷೆಯು ಬರುವುದಿಲ್ಲ.) ಪರಾತ್ಪರ ಗುರು ಡಾ. ಆಠವಲೆಯವರು ಶ್ರೀಮತಿ ಅಶ್ವಿನಿ ಪ್ರಭು ಇವರನ್ನು, “ಇದರಲ್ಲಿ `ದೇವ್ಯೆöÊ’ನಲ್ಲಿನ `ಐ’ ಒತ್ತಕ್ಷರ (ಅವರಿಗೆ ಅದರಲ್ಲಿನ ಯಾವ ಅಕ್ಷರವಿದೆ, ಎಂದು ಸಹ ಗೊತ್ತಿರಲಿಲ್ಲ) ಇದು ಮೊದಲು ಬರಬೇಕೋ ಅಥವಾ ನಂತರವೋ ? ಎಂದು ಕೇಳಿದರು. ಕನ್ನಡ ವರ್ಣಮಾಲೆಯ ಅಧ್ಯಯನವಿಲ್ಲದಿರುವಾಗಲೂ ಆದ ತಪ್ಪನ್ನು ಗುರುತಿಸಿ ಪರಾತ್ಪರ ಗುರು ಡಾ. ಆಠವಲೆಯವರು ಈ ಪ್ರಶ್ನೆಯನ್ನು ಕೇಳುವುದು, ಇದು ಅವರ ಸರ್ವಜ್ಞತೆಯೇ ಆಗಿದೆ, ಆದರೂ ಅವರು, `ನನಗೆ ಕನ್ನಡ ಬರುವುದಿಲ್ಲ’, ಎಂದು ಹೇಳುತ್ತಾರೆ.

೨. ಪರಾತ್ಪರ ಗುರು ಡಾಕ್ಟರರು ಅಕ್ಷರಗಳ ತಪ್ಪು ಜೋಡಣೆಯಿಂದಾದ ಸ್ಪಂದನಗಳನ್ನು ಗುರುತಿಸುವುದು ಪರಾತ್ಪರ ಗುರು ಡಾಕ್ಟರರು ಯಾವಾಗಲೂ ಸ್ಪಂದನಗಳ ಮತ್ತು ಸೂಕ್ಷ್ಮ ಇವುಗಳ ಅಧ್ಯಯನ ಮಾಡಲು ಒತ್ತು ನೀಡಿದ್ದಾರೆ; ಏಕೆಂದರೆ ಸೂಕ್ಷ್ಮ ಜ್ಞಾನೇಂದ್ರಿಯಗಳು ಜಾಗೃತವಾದಾಗ ನಮಗೆ ಒಳಿತು-ಕೆಡುಕುಗಳ ಬಗ್ಗೆ ತಾನಾಗಿಯೇ ತಿಳಿಯುತ್ತದೆ. ಮೇಲಿನ ಪ್ರಸಂಗದಲ್ಲಿ ಅಕ್ಷರಗಳ ತಪ್ಪು ಜೋಡಿಸುವಿಕೆಯಿಂದಾದ ಅಯೋಗ್ಯ ಸ್ಪಂದನಗಳನ್ನು ಪರಾತ್ಪರ ಗುರು ಡಾಕ್ಟರರು ಗುರುತಿಸಿದರು ಮತ್ತು ಆ ತಪ್ಪನ್ನು ಸಾಧಕಿಯ ಗಮನಕ್ಕೆ ತಂದು ಕೊಟ್ಟರು.

– ಶ್ರೀ. ಅಭಿಷೇಕ ಅಣ್ಣಪ್ಪ ಪೈ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೨.೧೦.೨೦೨೧)