ಜ್ಯೋತಿಷ್ಯಶಾಸ್ತ್ರದ ಮೂಲಕ ಬೆಳಕಿಗೆ ಬಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ವೈಶಿಷ್ಟ್ಯಗಳು !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಶ್ರೀ. ರಾಜ ಕರ್ವೆ

೧. ವ್ಯಕ್ತಿತ್ವದ ವಿಧಗಳು

ಜ್ಯೋತಿಷ್ಯಶಾಸ್ತ್ರಕ್ಕನುಸಾರ ಸಾಮಾನ್ಯವಾಗಿ ವ್ಯಕ್ತಿತ್ವದಲ್ಲಿ ೩ ವಿಧಗಳಿರುತ್ತವೆ.

೧ ಅ ೧. ಚರ ಸ್ವಭಾವ (ಚಲನೆಯಲ್ಲಿರುವ) : ಕೆಲವು ವ್ಯಕ್ತಿಗಳು ಜನ್ಮದಿಂದಲೇ ಗತಿಶೀಲ, ಕಾರ್ಯತತ್ಪರ, ಮಹತ್ವಾಕಾಂಕ್ಷಿ, ಸಾಹಸಿ, ನೇತೃತ್ವ ವಹಿಸುವವರು ಮತ್ತು ಶಾರೀರಿಕವಾಗಿ ಬಲಶಾಲಿಯಾಗಿರುತ್ತಾರೆ. ಇದಕ್ಕೆ ಜ್ಯೋತಿಷ್ಯಶಾಸ್ತ್ರದಲ್ಲಿ `ಚರ ಸ್ವಭಾವ’ ಎಂದು ಹೇಳುತ್ತಾರೆ. ಚರ ಸ್ವಭಾವವು ರಜೋಗುಣ-ಪ್ರಧಾನವಾಗಿದ್ದು `ಕ್ರಿಯಾಶಕ್ತಿ’ಗೆ ಸಂಬಂಧಿಸಿದೆ.

೧ ಅ ೨. ಸ್ಥಿರ ಸ್ವಭಾವ : ಕೆಲವು ವ್ಯಕ್ತಿಗಳು ಒಂದು ಜಾಗದಲ್ಲಿ ಸ್ಥಿರವಾಗಿರುವವರು, ಉನ್ನತ ಸ್ಥಾನಮಾನಕ್ಕಾಗಿ ಶ್ರಮಿಸುವವರು, ಅಧಿಕಾರಿವೃತ್ತಿ ಇರುವವರು, ವ್ಯಾವಹಾರಿಕವಾಗಿ ಕುಶಾಗ್ರಮತಿ ಮತ್ತು ಸುಖದಿಂದ ಇರುವವರಾಗಿರುತ್ತಾರೆ. ಇದಕ್ಕೆ `ಸ್ಥಿರ ಸ್ವಭಾವ’ ಎನ್ನುತ್ತಾರೆ. ಇದು ತಮೋಗುಣ-ಪ್ರಧಾನವಿದ್ದು `ಇಚ್ಛಾಶಕ್ತಿ’ ಗೆ ಸಂಬಂಧಿಸಿದೆ.

೧ ಅ ೩. ದ್ವಿಸ್ವಭಾವ : ಕೆಲವು ವ್ಯಕ್ತಿಗಳು ಕೆಲವೊಮ್ಮೆ ಗತಿಮಾನ, ಮತ್ತು ಕೆಲವೊಮ್ಮೆ ಸ್ಥಿರ; ತರ್ಕಶಕ್ತಿ ಲಭಿಸಿದ, ವಿಷಯದ ಆಳಕ್ಕೆ ಹೋಗುವವರು, ಜ್ಞಾನ ಪ್ರಾಪ್ತಮಾಡಿಕೊಳ್ಳಲು ಶ್ರಮಿಸುವವರು, ಬೌದ್ಧಿಕ ಬಲ ಇರುವವರು ಮತ್ತು ವಿರಕ್ತರಾಗಿರುತ್ತಾರೆ. ಇದಕ್ಕೆ `ದ್ವಿಸ್ವಭಾವ’ ಎಂದು ಹೇಳುತ್ತಾರೆ. ದ್ವಿಸ್ವಭಾವವು ಸತ್ತ್ವಗುಣ-ಪ್ರಧಾನ ವಾಗಿದ್ದು `ಜ್ಞಾನಶಕ್ತಿ’ಗೆ ಸಂಬಂಧಿಸಿದೆ.

೨. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಮೂಲ ಪ್ರಕೃತಿ `ದ್ವಿಸ್ವಭಾವೀ’ ಆಗಿದೆ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮೂಲ ಪ್ರಕೃತಿ `ದ್ವಿಸ್ವಭಾವೀ’ಯಾಗಿದೆ. ಜಿಜ್ಞಾಸೆ, ಸಂಶೋಧಕವೃತ್ತಿ, ತರ್ಕಶಕ್ತಿ, ಬೌದ್ಧಿಕ ಬಲ ಇತ್ಯಾದಿ ವೈಶಿಷ್ಟ್ಯಗಳು ಅವರಲ್ಲಿ ಮೂಲದಲ್ಲಿಯೇ ಇದ್ದವು. ಪೂರ್ವಾಯುಷ್ಯದ ಜೀವನದಲ್ಲಿ ಅವರು `ಸಂಮ್ಮೋಹನ-ಉಪಚಾರ\ತಜ್ಞ’ರೆಂದು ಕಾರ್ಯವನ್ನು ಮಾಡಿದ್ದಾರೆ. ಅದನ್ನು ಮಾಡುತ್ತಿರುವಾಗ ಅವರು ಅದರಲ್ಲಿ ಹೊಸ ಹೊಸ(ನಾವಿನ್ಯಪೂರ್ಣ) ಸಂಶೋಧನೆಗಳನ್ನು ಮಾಡಿದರು. ಆಧುನಿಕ ವೈದ್ಯಕೀಯಶಾಸ್ತçದ ಮಿತಿ ಗಮನಕ್ಕೆ ಬಂದ ನಂತರ ಅವರು ಅಧ್ಯಾತ್ಮಶಾಸ್ತ್ರದ ಅಧ್ಯಯನ ಮತ್ತು ಪ್ರತ್ಯಕ್ಷ ಸಾಧನೆಯನ್ನು ಆರಂಭಿಸಿದರು. ಇದರಿಂದ ಅವರಲ್ಲಿನ ಜಿಜ್ಞಾಸುವೃತ್ತಿಯು ಗಮನಕ್ಕೆ ಬರುತ್ತದೆ. ಅವರಿಗೆ ಗುರುಪ್ರಾಪ್ತಿಯಾದ ನಂತರ ಅವರು ಗುರುಗಳಿಗೆ ಅಧ್ಯಾತ್ಮದ ಬಗ್ಗೆ ಅನೇಕ ಪ್ರಶ್ನೆಗಳನ್ನು ಕೇಳುತ್ತಿದ್ದರು ಮತ್ತು ಗುರುಗಳು ಹೇಳಿದ ಉತ್ತರಗಳನ್ನು ಅವರು ಬರೆದಿಟ್ಟುಕೊಳ್ಳುತ್ತಿದ್ದರು. ಇದರಿಂದ ಅವರ ಜ್ಞಾನಪ್ರಾಪ್ತಿಯ ತಳಮಳ ಗಮನಕ್ಕೆ ಬರುತ್ತದೆ. ನಂತರ ಅವರಿಗೆ ಗುರುಕೃಪೆಯಿಂದ ಅಂತರ್ಮನಸ್ಸಿನಿಂದ ಪ್ರಶ್ನೆಗಳಿಗೆ ಉತ್ತರಗಳು ಸಿಗತೊಡಗಿದವು. ದ್ವಿಸ್ವಭಾವವಿರುವ ವ್ಯಕ್ತಿಯು ಇತರರಿಗೆ ಜ್ಞಾನವನ್ನು ನೀಡಲು ತತ್ಪರನಾಗಿರುತ್ತಾನೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಅಧ್ಯಾತ್ಮದ ಮಹತ್ವ ಸಮಾಜಕ್ಕೆ ತಿಳಿಯಬೇಕೆಂದು, ಸಾಧನೆಗೆ ಸಂಬಂಧಿಸಿದ ಅಭ್ಯಾಸವರ್ಗಗಳನ್ನು ಆರಂಭಿಸಿದರು. ಅನಂತರ ಸಾಧನೆಗೆ ಸಂಬಂಧಿಸಿದ ಧ್ವನಿಸುರುಳಿಗಳು, ಗ್ರಂಥಗಳು ಮತ್ತು ನಿಯತಕಾಲಿಕೆಗಳನ್ನು ಪ್ರಕಾಶಿಸಿದರು. ದ್ವಿಸ್ವಭಾವೀ ವ್ಯಕ್ತಿಯು ಮಾಯೆಯಿಂದ ಅಲಿಪ್ತನಾಗಿರುತ್ತಾನೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಿದ್ಧಿ ಮತ್ತು ಪ್ರಸಿದ್ಧಿಗಳಿಂದ ದೂರವಿದ್ದು ಸಮಾಜಕ್ಕೆ ಕಾಲಕ್ಕನುಸಾರ ಯೋಗ್ಯ ಸಾಧನೆಯ ಶಿಕ್ಷಣವನ್ನು ನೀಡಿದರು. ಆದುದರಿಂದ ಇಲ್ಲಿಯವರೆಗೆ ಅವರ ನೂರಕ್ಕಿಂತ ಹೆಚ್ಚು ಸಾಧಕರು ಸಂತಪದವಿಯನ್ನು ಪ್ರಾಪ್ತಮಾಡಿಕೊಂಡಿದ್ದು, ನೂರಾರು ಸಾಧಕರು ಸಂತರಾಗುವಮಾರ್ಗದಲ್ಲಿದ್ದಾರೆ. ಇದೊಂದು ಅದ್ವಿತೀಯ ಘಟನೆಯಾಗಿದೆ. ಆಧ್ಯಾತ್ಮಿಕ ಸ್ತರದ ಜೀವನವನ್ನು ನಡೆಸುವ ಶಿಕ್ಷಣವನ್ನು ನೀಡುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆ !’

ಶ್ರೀ. ರಾಜ ಕರ್ವೆ, ಜ್ಯೋತಿಷ್ಯ ವಿಶಾರದ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೬.೨.೨೦೨೩)