ಪೂ. ಶಿವಾಜಿ ವಟಕರ ಇವರು ತೆಗೆದುಕೊಂಡ ಸದ್ಗುರು ಡಾ. ವಸಂತ ಬಾಳಾಜಿ ಆಠವಲೆ ಇವರ ಸಂದರ್ಶನ
ಪೂ. ಶಿವಾಜಿ ವಟಕರ ಇವರು ತೆಗೆದುಕೊಂಡ ಸದ್ಗುರು ಡಾ. ವಸಂತ ಬಾಳಾಜಿ ಆಠವಲೆ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಹಿರಿಯ ಸಹೋದರರು) ಸಂದರ್ಶನವನ್ನು ಇಲ್ಲಿ ನೀಡಲಾಗಿದೆ. (ಈ ಸಂದರ್ಶನವು ಸದ್ಗುರು ಡಾ. ವಸಂತ ಆಠವಲೆ ಮತ್ತು ಪೂ. ಶಿವಾಜಿ ವಟಕರ ಇವರು ಸಂತರಾಗುವುದಕ್ಕಿಂತ ಮೊದಲಿನದ್ದಾಗಿದೆ. ಹಾಗಾಗಿ ಈ ಲೇಖನದಲ್ಲಿ ಸಂತರ ಹೆಸರಿನಲ್ಲಿ ಬದಲಾವಣೆ ಮಾಡಿಲ್ಲ.)
೧. ಶ್ರೀರಾಮನಂತೆ ಆದರ್ಶ ಮತು ಸರ್ವಗುಣಸಂಪನ್ನ ಪರಮಪೂಜ್ಯ ಡಾಕ್ಟರ !
ಶ್ರೀ ಶಿವಾಜಿ ವಟಕರ : ಅನೇಕ ಸಾಧಕರಿಗೆ ಪರಮಪೂಜ್ಯ ಡಾಕ್ಟರರಲ್ಲಿ ಶ್ರೀರಾಮ ಮತ್ತು ಶ್ರೀಕೃಷ್ಣನ ದರ್ಶನವಾಗಿದೆ. ಇದರ ಬಗ್ಗೆ ನೀವು ಏನು ಹೇಳುವಿರಿ ?
ತೀ. ಅಪ್ಪಾ ಕಾಕಾ :
೧ ಅ. ಆದರ್ಶ ಪುತ್ರ : ಪರಮಪೂಜ್ಯ ಡಾಕ್ಟರರು ತೀ. ದಾದಾ (ತಂದೆ,ಈಗಿನ ಪರಮಪೂಜ್ಯ (ದಿ.) ಬಾಳಾಜಿ ಆಠವಲೆ) ಮತ್ತು ತೀ. ತಾಯಿ (ಅಮ್ಮ, ಈಗಿನ ಪೂ.(ದಿ.) ಶ್ರೀಮತಿ ನಳಿನಿ ಆಠವಲೆ) ಇವರನ್ನು ಕೊನೆಯ ೧೦ – ೧೫ ವರ್ಷ ಮುಂಬಯಿಯಲ್ಲಿ ಸ್ವಂತ ಮನೆಯಲ್ಲಿ ಇಟ್ಟುಕೊಂಡು ಅವರ ಸೇವೆ ಸ್ವತಃ ಮಾಡಿದರು. ಸ್ವಲ್ಪ ಸಮಯದ ನಂತರ ಸನಾತನ ಸಂಸ್ಥೆಯ ಕಾರ್ಯ ಹೆಚ್ಚಾದ ನಂತರ ಸಂಸ್ಥೆಯ ಸಾಧಕರಿಂದ ತಾಯಿ ತಂದೆಯ ಸೇವೆ ಮಾಡಿಸಿಕೊಂಡರು.
೧ ಆ. ಆದರ್ಶ ಸಹೋದರ : ನಾನು ಮತ್ತು ನನ್ನ ಸಹೋದರ ಅನಂತ (ಈಗಿನ ಪೂ. ಅನಂತ ಬಾಳಾಜಿ ಆಠವಲೆ) ಮತ್ತು ಅವರ ಪತ್ನಿ ಸೌ. ಸುನೀತಿ (ನನ್ನ ಅತ್ತಿಗೆ) ಗೋವಾದ ರಾಮನಾಥಿ ಆಶ್ರಮದಲ್ಲಿ ವಾಸವಾಗಿದ್ದಾಗ ನಮ್ಮ ಎಲ್ಲಾ ವ್ಯವಸ್ಥೆ ಸರಿಯಾಗಿ ಆಗುತ್ತಿದೆ ಅಥವಾ ಇಲ್ಲವೋ ? ಇದರ ಕಡೆಗೆ ಪರಮಪೂಜ್ಯ ಡಾಕ್ಟರರ ಸಂಪೂರ್ಣ ಗಮನ ಇರುತ್ತಿತ್ತು. ಮಧ್ಯಾಹ್ನ ಮತ್ತು ರಾತ್ರಿ ಭೋಜನದ ಸಮಯದಲ್ಲಿ ನಾವು ಜೊತೆಯಾಗಿ ಭೋಜನ ಮಾಡುತ್ತಿದ್ದೆವು. ಆ ಸಮಯದಲ್ಲಿ ಪ್ರತಿಯೊಬ್ಬರ ಇಷ್ಟಾನಿಷ್ಟದ ಕಡೆಗೆ ಅವರೆಲ್ಲ ಗಮನವಿರುತ್ತಿತ್ತು. ನನ್ನ ಕಿರಿಯ ಸಹೋದರ (ದಿ.) ಡಾ. ಸುಹಾಸ ಮತ್ತು ಡಾ. ವಿಲಾಸ ಇವರನ್ನು ಹಿರಿಯ ಸಹೋದರನು ನೋಡಿಕೊಳ್ಳುವಂತೆ ಕಾಳಜಿ ವಹಿಸಿದರು. ಪರಮ ಪೂಜ್ಯ ಡಾಕ್ಟರಗಿಂತಲೂ ನಾನು ೧೦ ವರ್ಷ ಮತ್ತು ನನ್ನ ಎರಡನೆಯ ಸಹೋದರ ಅನಂತ (ಈಗಿನ ಪೂ. ಅನಂತ ಬಾಳಾಜಿ ಆಠವಲೆ) ೭ ವರ್ಷಕ್ಕಿಂತಲೂ ದೊಡ್ಡವನಾಗಿದ್ದರೂ ಪರಮಪೂಜ್ಯ ಡಾಕ್ಟರರು ಹಿರಿಯ ಸಹೋದರನಂತೆ ನಮ್ಮ ಕಾಳಜಿ ವಹಿಸುತ್ತಿದ್ದರು.
೧ ಇ. ಆದರ್ಶ ಪಿತಾ : ಪರಮ ಪೂಜ್ಯ ಡಾಕ್ಟರರಿಗೆ ತಮ್ಮ ಸ್ವಂತ ಮಕ್ಕಳು ಇಲ್ಲದಿದ್ದರೂ ಅವರು, ಅವರ ಗುರುಗಳು ಪರಮಪೂಜ್ಯ ಭಕ್ತರಾಜ ಮಹಾರಾಜರು, ನಿನಗೆ ಅನೇಕ ಮಕ್ಕಳಾಗುವರು ಎಂದು ಆಶೀರ್ವಾದ ನೀಡಿದ್ದರು. ಇಂದು ಸನಾತನದ ಎಲ್ಲಾ ಸಾಧಕರನ್ನು ಅವರು ತಮ್ಮ ಸ್ವಂತ ಮಕ್ಕಳಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಪರಮ ಪೂಜ್ಯ ಡಾಕ್ಟರರಿಗೆ ಚಿಕ್ಕ ಮಕ್ಕಳೆಂದರೆ ಬಹಳ ಇಷ್ಟ.
೧ ಈ. ಸಮಾಜಕ್ಕಾಗಿ ಆದರ್ಶ ಗುರು : ಸಮಾಜ ಸೇವೆ ಎಂದರೆ ಬಡವರಿಗೆ ಸಹಾಯ, ವೃದ್ಧರು ಮತ್ತು ರೋಗಿಗಳ ಸೇವೆ ಇದೆಲ್ಲವನ್ನು ಇತರ ಸಂತರು ಮಾಡುತ್ತಾರೆ. ಇದು ಪುಣ್ಯಕರ್ಮವೇ ಆಗಿದೆ; ಆದರೆ ಸಮಾಜಕ್ಕೆ ಧರ್ಮಾಚರಣೆ ಮತ್ತು ನಾಮಜಪ ಮುಂತಾದ ಸಾಧನೆ ಮಾಡಲು ಕಲಿಸಿ ಅವರಿಗೆ ಐಹಿಕ ಮತ್ತು ಪಾರಲೌಕಿಕ ಆಯುಷ್ಯದಲ್ಲಿ ಹೆಚ್ಚು ಸುಖ ಮತ್ತು ಸಮಾಧಾನ ಸಿಗುವ ಮಹಾನಕಾರ್ಯ ಪರಮಪೂಜ್ಯ ಡಾಕ್ಟರರು ಮಾಡುತ್ತಿದ್ದಾರೆ. ಪರಮಪೂಜ್ಯ ಡಾಕ್ಟರರ ಬಗ್ಗೆ ಎಲ್ಲಾ ಸಾಧಕರಿಗೆ ಅನೇಕ ಆಧ್ಯಾತ್ಮಿಕ ಅನುಭೂತಿಗಳು ಬಂದಿವೆ. ಪರಮ ಪೂಜ್ಯ ಡಾಕ್ಟರರು ಸಾಧಕರ ಮನೆಯ ವ್ಯಕ್ತಿಗಳನ್ನು ಆತ್ಮೀಯತೆಯಿಂದ ವಿಚಾರಿಸುತ್ತಾರೆ. ಪರಮಪೂಜ್ಯ ಡಾಕ್ಟರರು ಭೂ. ಭುರ್ವ, ಸ್ವರ್ಗ, ಮಹರ್, ಮತ್ತು ತಪಸ್ ಈ ಲೋಕಗಳ ವರೆಗಿನ (ಉನ್ನತ) ಜೀವಗಳಿಗೆ ಮಾರ್ಗದರ್ಶನ ಮಾಡುತ್ತಾರೆ. ಪರಮ ಪೂಜ್ಯ ಡಾಕ್ಟರರ ಸಂಕಲ್ಪದಿಂದ ಅನೇಕ ಸಾಧಕರಿಗೆ ಸೂಕ್ಷ್ಮ ಜ್ಞಾನ ದೊರೆಯುತ್ತಿದೆ.
೧ ಉ. ಆದರ್ಶ ಶಿಷ್ಯ : ಪರಮಪೂಜ್ಯ ಡಾಕ್ಟರರು ಸಂಕಲನ ಮಾಡಿರುವ ಶಿಷ್ಯ ಈ ಗ್ರಂಥದಲ್ಲಿ ಪರಮ ಪೂಜ್ಯ ಡಾಕ್ಟರರು ಶಿಷ್ಯಾವಸ್ಥೆಯಲ್ಲಿ ಇರುವಾಗ ಪರಮಪೂಜ್ಯ ಭಕ್ತರಾಜ ಮಹಾರಾಜರ ಸೇವೆ ಮಾಡಿ ಹೇಗೆ ಗುರುತ್ವ ಪಡೆದರು ಎಂಬುದರ ವರ್ಣನೆಯಿದೆ. ಆದರ್ಶ ಶಿಷ್ಯ ಹೇಗೆ ಇರಬೇಕು ? ಇದು ಅವರು ತಮ್ಮದೇ ಉದಾಹರಣೆಯಿಂದ ತೋರಿಸಿಕೊಟ್ಟಿದ್ದಾರೆ.
೧ ಊ. ಆದರ್ಶ ರಾಷ್ಟ್ರ ಭಕ್ತ : ತ್ರೇತಾಯುಗದಲ್ಲಿ ಶ್ರೀ ರಾಮನು ಆದರ್ಶ ರಾಜ್ಯಭಾರ ನಡೆಸಿದನು. ಪರಮಪೂಜ್ಯ ಡಾಕ್ಟರರು ಕಲಿಯುಗದಲ್ಲಿ ೨೦೨೫ ರ ನಂತರ ರಾಮರಾಜ್ಯ ಸ್ಥಾಪಿಸುವವರಿದ್ದಾರೆ. ಹಿಂದೂ ರಾಷ್ಟç ಅಲ್ಲ; ಧರ್ಮರಾಜ್ಯ, ಎಂದರೆ ಈಶ್ವರೀ ರಾಜ್ಯದ ಸ್ಥಾಪನೆಯ ಕಲ್ಪನೆ ಪರಮ ಪೂಜ್ಯ ಡಾಕ್ಟರರದ್ದೇ ಆಗಿದೆ ಮತ್ತು ಅವರು ಅದನ್ನು ಪ್ರತ್ಯಕ್ಷದಲ್ಲಿ ಸಾಕಾರಗೊಳಿಸಲು ಸಾಧಕರ ಮಾಧ್ಯಮದಿಂದ ಸತತ ಪ್ರಯತ್ನನಿರತರಾಗಿದ್ದಾರೆ.
೧ ಎ. ಆದರ್ಶ ಜಗದ್ಗುರು : ವಿಶ್ವ ಕಲ್ಯಾಣಕ್ಕಾಗಿ ಅನೇಕ ಗ್ರಂಥಗಳನ್ನು ರಚಿಸಿ ಭೂತಲದಲ್ಲಿ ಹಾಗೂ ೧೪ ಲೋಕಗಳಲ್ಲಿನ (ಸಪ್ತಲೋಕ ಮತ್ತು ಸಪ್ತಪಾತಾಳ) ಜೀವಗಳಿಗೆ ಆಧ್ಯಾತ್ಮಿಕ ಉನ್ನತಿಯ ಮಾರ್ಗ ತೋರಿಸುವವರು ಪರಮಪೂಜ್ಯ ಡಾಕ್ಟರರೇ ಆಗಿದ್ದಾರೆ. ವಿಶ್ವ ಶಾಂತಿಯ ಶಾಶ್ವತ ಮಾರ್ಗ ತೋರಿಸುವವರು ಪೂಜ್ಯ ಡಾಕ್ಟರರೇ ಆಗಿದ್ದಾರೆ.
೧ ಐ. ಆದರ್ಶಯೋಧ : ಸ್ಥೂಲದಿಂದ ಹೋರಾಡಲು ಎಂದರೆ ಶರೀರದಿಂದ ಹೋರಾಡುವುದು ಸುಲಭವಾಗಿದೆ. ಪರಮ ಪೂಜ್ಯ ಡಾಕ್ಟರರು ಸೂಕ್ಷ್ಮದಿಂದ ೭ ಪಾತಾಳದಲ್ಲಿನ ಕೆಟ್ಟ ಶಕ್ತಿಗಳ ಜೊತೆಗೆ ಸುಲಭವಾಗಿ ಹೋರಾಡಬಲ್ಲರು. ದೊಡ್ಡ ಕೆಟ್ಟ ಶಕ್ತಿಗಳಿಗೆ ಇವರ ಭಯ ಇದೆ. ತಮ್ಮ ಪ್ರೇರಣೆಯಿಂದ ಮತ್ತು ಬೋಧನೆಯಿಂದ ಅವರು ಸಾಧಕರಲ್ಲಿ ಕ್ಷಾತ್ರತೇಜವನ್ನು ಮೂಡಿಸುತ್ತಾರೆ.
೧ ಒ. ಕ್ಷಾತ್ರತೇಜ ಮತ್ತು ಬ್ರಾಹ್ಮತೇಜದ ಅಪ್ರತಿಮ ಸಂಯೋಜನೆ : ಸನಾತನದ ಗ್ರಂಥಗಳ ಮೂಲಕ ಬ್ರಹ್ಮಜ್ಞಾನದ ಪ್ರಸಾರ ಮಾಡುವುದು ಮತ್ತು ಕೆಟ್ಟ ಶಕ್ತಿಗಳ ವಿರುದ್ಧ ಸೂಕ್ಷ್ಮದಿಂದ ಹೋರಾಡುವ ಪ್ರೇರಣೆ ನೀಡುವವರು ಸಹ ಪ.ಪೂ. ಡಾಕ್ಟರರೇ ಆಗಿದ್ದಾರೆ.
೧ ಔ. ಪರಮಪೂಜ್ಯ ಡಾಕ್ಟರರ ಕುರಿತಾದ ಕೃತಜ್ಞತೆ ಶ್ರೀ. ಶಿವಾಜಿ ವಟಕರ : ನಿಮಗೆ ಇನ್ನೂ ಏನಾದರೂ ಹೇಳಲಿಕ್ಕಿದೆಯೇ ?
ತೀ. ಅಪ್ಪಾ ಕಾಕಾ : ಆಶ್ರಮದಲ್ಲಿನ ಮತ್ತು ಇತರ ಸಾಧಕರ ಗುಣ ಮತ್ತು ಶೀಘ್ರಗತಿಯಲ್ಲಿ ಅವರ ಆಧ್ಯಾತ್ಮಿಕ ಪ್ರಗತಿಯಾಗುತ್ತಿರುವುದನ್ನು ನೋಡಿ ನನಗೆ ಆನಂದವಾಗುತ್ತದೆ. ನಾನು ಸಂಸಾರದಲ್ಲಿ ಸಿಲುಕದೆ ಅನೇಕ ವರ್ಷಗಳ ಮೊದಲೇ ನನ್ನ ಸಂಪೂರ್ಣ ಕುಟುಂಬದ ಜೊತೆಗೆ ಪೂರ್ಣಕಾಲೀನ ಸಾಧಕರಾಗುವುದು ಅವಶ್ಯಕವಿತ್ತು ಎಂದು ನನ್ನ ಗಮನಕ್ಕೆ ಬಂತು.
೨. ಕೃತಜ್ಞತೆ
ನನ್ನ ಪೂರ್ವಜನ್ಮದ ಪುಣ್ಯದಿಂದ ಮತ್ತು ಪರಮ ಭಾಗ್ಯದಿಂದ ನನಗೆ ಈ ಜನ್ಮದಲ್ಲಿ ಪರಮ ಪೂಜ್ಯ ಡಾಕ್ಟರರಂತಹ ಸಹೋದರನು ಸಿಕ್ಕಿರುವುದು, ಇದು ನಿಶ್ಚಯವಾಗಿ, ಬಹಳ ವಿಳಂಬದಿಂದ ಆದರೂ ಸರಿಯೇ ನನಗೆ ಈಗ ತಿಳಿಯಿತು, ಇದು ಗುರುಗಳಾದ ಪರಮ ಪೂಜ್ಯ ಡಾಕ್ಟರರ ಕೃಪೆಯಿಂದಲೇ ಆಗಿದೆ. ಪರಮ ಪೂಜ್ಯ ಡಾಕ್ಟರರ ಇದೇ ರೀತಿಯ ಕೃಪಾದೃಷ್ಟಿ ನಮ್ಮೆಲ್ಲ ಕುಟುಂಬ ಮತ್ತು ಸಾಧಕರ ಮೇಲೆ ಸತತವಾಗಿರಲಿ. ಇದೇ ಭಗವಂತನಲ್ಲಿ ಪ್ರಾರ್ಥನೆ !