ಮೂಲ ಸಂಭಾಜಿನಗರದ ಮತ್ತು ಈಗ ಗೋವಾದ ನಿವಾಸಿಯಾಗಿರುವ ಶ್ರೀ. ಸತ್ಯನಾರಾಯಣ ತಿವಾರಿ (ವಯಸ್ಸು ೭೪) ಸನಾತನದ ೧೨೪ ನೇಯ ಸಂತಪದವಿಯಲ್ಲಿ ವಿರಾಜಮಾನ !

ಪೂ. ಸತ್ಯನಾರಾಯಣ ತಿವಾರಿ

ಫೊಂಡಾ (ಗೋವಾ) – ಮೂಲ ಸಂಭಾಜಿನಗರದ ಮತ್ತು ಸದ್ಯ ಫೊಂಡಾ, ಗೋವಾದಲ್ಲಿ ವಾಸಿಸುವ ಸನಾತನದ ಸಾಧಕರಾದ ಶ್ರೀ. ಸತ್ಯನಾರಾಯಣ ತಿವಾರಿ (ವಯಸ್ಸು ೭೪) ಇವರು ೨೩ ಏಪ್ರಿಲ್ ೨೦೨೩ ರಂದು ವ್ಯಷ್ಟಿ ಸಂತಪದವಿಯಲ್ಲಿ ವಿರಾಜಮಾನರಾದರು. ಅವರು ಸನಾತನದ ಸಂತರ ಪಂಕ್ತಿಯಲ್ಲಿ ೧೨೪ ನೇ ಸಂತರತ್ನವಾಗಿ ವಿರಾಜಮಾನರಾದರು. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಅವರ ಮನೆಯಲ್ಲಿ ಅನೌಪಚಾರಿಕ ಭೇಟಿ ನೀಡಿ ಶ್ರೀ. ತಿವಾರಿಯವರೊಂದಿಗೆ ಮಾತನಾಡುತ್ತಿದ್ದರು. (ಸಂವಾದ ಸಾಧಿಸಿದರು.) ಅವರೊಂದಿಗೆ ಸಹಜವಾಗಿ ಮಾತನಾಡುವಾಗ ಅವರ ಆಂತರಿಕ ಸಾಧನೆಯ ರಹಸ್ಯವನ್ನು ತಿಳಿದುಕೊಂಡು ಅವರ ಸಂತಪದವಿಯನ್ನು ಘೋಷಿಸಿದರು.

ಪೂ. ಸತ್ಯನಾರಾಯಣ ತಿವಾರಿ ಇವರು ಕಳೆದ ೨ ವರ್ಷಗಳಿಂದ ತೀವ್ರ ಶಾರೀರಿಕ ತೊಂದರೆಗಳಿಂದ ಅನಾರೋಗ್ಯದಲ್ಲಿರುವುದರಿಂದ ಅವರಿಗೆ ಸತತವಾಗಿ ಮಲಗಿರಬೇಕಾಗುತ್ತದೆ, ಹಾಗೆಯೇ ಅವರಿಗೆ ಮೆದುಳಿನ ಕಾಯಿಲೆಯಿಂದ ವಿಸ್ಮೃತಿಯಾಗುತ್ತದೆ. ಇಂತಹ ಸ್ಥಿತಿಯಲ್ಲಿಯೂ ಅವರು ಆಂತರಿಕ ಸಾಧನೆಯ ಶಕ್ತಿಯಿಂದ ಸನಾತನ ಸಂಸ್ಥೆಯ ಸಂಸ್ಥಾಪಕರು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಕೃಪೆಯಿಂದ ಸಂತ ಪದವಿಯಲ್ಲಿ ತಲುಪಿದರು. ಫೋಂಡಾದ ಅವರ ನಿವಾಸ ಸ್ಥಳದಲ್ಲಿ ಈ ಸಂತಸನ್ಮಾನ ಸಮಾರಂಭವು ನೆರವೇರಿತು. ಈ ಸಮಯದಲ್ಲಿ ಸನಾತನದ ಶೇ. ೬೮ ರಷ್ಟು ಆಧ್ಯಾತ್ಮಿಕ ಮಟ್ಟದ ಸಾಧಕ ಆಧುನಿಕ ಪಶುವೈದ್ಯ ಅಜಯ ಜೋಶಿ ಇವರು ಪೂ. ತಿವಾರಿಕಾಕಾರವರಿಗೆ ಪುಷ್ಪಹಾರವನ್ನು ಹಾಕಿ, ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಉಡುಗೊರೆಯನ್ನು ನೀಡಿ ಸನ್ಮಾನ ಮಾಡಿದರು. ಈ ಸಮಯದಲ್ಲಿ ಪೂ. ತಿವಾರಿಕಾಕಾರವರ ಪತ್ನಿ ಸೌ. ಸವಿತಾ ತಿವಾರಿ, ಮಗಳು ಹೊಮಿಯೋಪಥಿ ವೈದ್ಯೆ (ಸುಶ್ರೀ (ಕು.)) ಆರತಿ ತಿವಾರಿ ಮತ್ತು ಸನಾತನದ ಸಾಧಕರು ಉಪಸ್ಥಿತರಿದ್ದರು. ಪೂ. ತಿವಾರಿಕಾಕಾರವರ ಕಿರಿಯ ಮಗಳು ಸೌ. ರಾಸೇಶ್ವರಿ (ಭಾರತಿ) ಲರ್ಕ್ಸ ಇವರು ಅಕೋಲಾದಿಂದ ಸಂಚಾರವಾಣಿಯ ಮೂಲಕ ಈ ಸಮಾರಂಭದ ಲಾಭವನ್ನು ಪಡೆದರು.