ಹಾಸುಗಲ್ಲಿನ ಮೇಲಿನ ಪ್ರತಿಬಿಂಬ
ಕುರ್ಚಿಯ ಮೇಲೆ ಕಾಣಿಸುವ ಪ್ರತಿಬಿಂಬ
ಮೇಜಿನ ಮೇಲಿನ ಪ್ರತಿಬಿಂಬ
ಕಿಟಕಿಯ ಗಾಜಿನಲ್ಲಿ ಕನ್ನಡಿಯಂತೆ ಪ್ರತಿಬಿಂಬ ಕಾಣಿಸುವುದು ಮತ್ತು ಪಾರದರ್ಶಕತೆಯೂ ಇರುವುದು
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಗೋವಾದ, ರಾಮನಾಥಿಯಲ್ಲಿನ ಸನಾತನದ ಆಶ್ರಮದಲ್ಲಿ ವಾಸಿಸುವ ಕೋಣೆಯಲ್ಲಿನ ಹಾಸುಗಲ್ಲುಗಳು (ಟೈಲ್ಸ್) ಮತ್ತು ಕೋಣೆ ಯಲ್ಲಿನ ಇತರ ವಸ್ತುಗಳ ಮೇಲೆ ಬೀಳುವ ಸೂರ್ಯನ ಪ್ರಕಾಶವು ಬಹಳಷ್ಟು ಪ್ರಮಾಣದಲ್ಲಿ ಪ್ರತಿಫಲಿಸುತ್ತದೆ. ಯಾವ ರೀತಿ ಸೂರ್ಯಪ್ರಕಾಶದಿಂದ ಯಾವುದಾದರೊಂದು ವಸ್ತುವಿನ ನೆರಳು ಬೀಳುತ್ತದೆಯೋ, ಅದೇ ರೀತಿ ಪರಾವರ್ತನಗೊಂಡ (ಪ್ರತಿಬಿಂಬಿಸುವ) ಪ್ರಕಾಶದಿಂದಲೂ ಆ ವಸ್ತುವಿನ ನೆರಳು ಬೀಳುತ್ತದೆ. ಪರಾತ್ಪರ ಗುರು ಡಾಕ್ಟರರಂತೆ ಅವರ ಕೋಣೆಯೂ ಈಗ ನಿರ್ಗುಣದೆಡೆಗೆ ಹೋಗುತ್ತಿದೆ. ಆದುದರಿಂದ `ಗ್ರಹಿಸಿದ್ದನ್ನು ಪ್ರತಿಬಿಂಬಿಸುವುದು’, ಈ ಕೋಣೆಯ ಗುಣದಿಂದಾಗಿ ಈ ಕೋಣೆಯಲ್ಲಿರುವ ವಸ್ತುಗಳು ಪ್ರಕಾಶವನ್ನು ಬಹಳ ಹೆಚ್ಚು ಪ್ರತಿಫಲಿಸುತ್ತವೆ ಮತ್ತು ಇದರಿಂದ ಅವುಗಳಲ್ಲಿ ಪ್ರತಿಬಿಂಬ ಕಾಣಿಸುತ್ತದೆ. ಈ ವಿಷಯದ ಶಾಸ್ತçವನ್ನು ಇಲ್ಲಿ ನೀಡಲಾಗಿದೆ. ದೇವಾಸುರರ ನಡುವಿನ ಸೂಕ್ಷ್ಮ ಯುದ್ಧದ ಅಂತರ್ಗತ ಯಾವಾಗ ದೇವತೆಗಳ ತಕ್ಕಡಿ ಭಾರವಾಗುತ್ತದೆಯೋ, ಆಗ ಪಂಚಮಹಾಭೂತಗಳ ಮೇಲೆ ಅವರು ನಿಯಂತ್ರಣ ಪಡೆಯುತ್ತಾರೆ. ಇದರಿಂದ ಪಂಚಮಹಾಭೂತಗಳ ಮಾಧ್ಯಮದಿಂದ ದೈವೀ ಚೈತನ್ಯ ಸಹಜ ಕಾರ್ಯನಿರತವಾಗುತ್ತದೆ ಮತ್ತು ಇದರ ಪರಿಣಾಮ ಪಂಚಮಹಾಭೂತಗಳ ಸಂಪರ್ಕದಲ್ಲಿ ಬರುವ ಯಾವುದಾದರೊಬ್ಬ ವ್ಯಕ್ತಿ, ವಾಸ್ತು ಅಥವಾ ವಸ್ತು ಇವುಗಳಲ್ಲಿ ಆಗಿರುವ ದೈವೀ, ಅಂದರೆ ಒಳ್ಳೆಯ ಬದಲಾವಣೆಯ ಸ್ವರೂಪದಲ್ಲಿ ಕಾಣಿಸುತ್ತವೆ.
೧. ಪರಾತ್ಪರ ಗುರುಗಳ ಕಾರ್ಯದ ವ್ಯಾಪ್ತಿ ಮತ್ತು ನಿರ್ಗುಣದ ಗುಣಧರ್ಮ
ಪರಾತ್ಪರ ಗುರುಗಳ ಕಾರ್ಯ ವ್ಯಾಪಕವಾಗತೊಡಗಿದಾಗ, ಕಾರ್ಯದಲ್ಲಿನ ಸಗುಣತ್ವ ಮುಗಿದು ನಿರ್ಗುಣ ಆರಂಭವಾಗುತ್ತದೆ. ನಿರ್ಗುಣದ ಒಂದು ಗುಣಧರ್ಮವೆಂದರೆ, ಅದು ಏನನ್ನೂ ಕೊಡಬಹುದು, ಅಂದರೆ ಅದು ಏನನ್ನೂ ತ್ಯಾಗ ಮಾಡಬಹುದು. ಅದರಲ್ಲಿ ಎಲ್ಲವುಗಳ ಪ್ರತಿಬಿಂಬ ಶೇ. ೧೦೦ ರಷ್ಟು ಮೂಡುತ್ತದೆ.
೨. ನಿರ್ಗುಣದೆಡೆಗೆ ಪರಾತ್ಪರ ಗುರು ಡಾಕ್ಟರರ ಕೋಣೆಯ ಪ್ರವಾಸ ಆಗತೊಡಗುವುದು
ಪಂಚತತ್ತ್ವಗಳ ಸ್ತರದಲ್ಲಿ ಬರುವ ಅನುಭೂತಿಗಳಲ್ಲಿಯೂ ಸಾಧಾರಣ ಪೃಥ್ವಿತತ್ತ್ವದ ಜಡತ್ವ ಮುಗಿಯಲು ಆರಂಭವಾದಂತೆ ಸಗುಣದ ಪ್ರವಾಸವು ನಿರ್ಗುಣದೆಡೆಗೆ ಆಗ ತೊಡಗುತ್ತದೆ. ಪರಾತ್ಪರ ಗುರು ಡಾಕ್ಟರರ ಕೋಣೆಯ ಪ್ರವಾಸವೂ ಈಗ ನಿರ್ಗುಣದೆಡೆಗೆ ಆಗತೊಡಗಿದೆ.
೩. ಪರಾತ್ಪರ ಗುರು ಡಾಕ್ಟರರ ಕೋಣೆಯ ವಿಶೇಷತ್ವ ಮತ್ತು ಅದರ ಆಧ್ಯಾತ್ಮಿಕ ಗುಣಧರ್ಮಗಳು
೩ ಅ. ಎಲ್ಲ ರೀತಿಯ ಅನುಭೂತಿಗಳನ್ನು ನೀಡಬಹುದು : ನಿರ್ಗುಣದಲ್ಲಿ ಎಲ್ಲವೂ ಇರುವುದರಿಂದ ಅದು ಎಲ್ಲ ರೀತಿಯ ಅನುಭೂತಿಗಳನ್ನು ಆವಶ್ಯಕತೆಗನುಸಾರ ಕನಿಷ್ಠದಿಂದ ಗರಿಷ್ಠದವರೆಗೆ ತಕ್ಷಣ ಕೊಡಬಲ್ಲದು. ಪರಾತ್ಪರ ಗುರು ಡಾಕ್ಟರರ ಕೋಣೆಯೂ ಅದೇ ರೀತಿಯದ್ದಾಗಿದೆ.
೩ ಆ. ಆಪತ್ಕಾಲವು ಸಮೀಪಿಸುತ್ತಿರುವುದರಿಂದ ಅಗಾಧ ಪ್ರಮಾಣದಲ್ಲಿ ಪಂಚತತ್ತ್ವಗಳನ್ನು ಗ್ರಹಿಸುವುದು ಮತ್ತು ಪ್ರಕ್ಷೇಪಿಸುವುದು : ಈಗ ಆಪತ್ಕಾಲ ಸಮೀಪಿಸುತ್ತಿರುವುದರಿಂದ ಪರಾತ್ಪರ ಗುರು ಡಾಕ್ಟರರ ಕೋಣೆಯು ಈಶ್ವರೀ ಚೈತನ್ಯದ ಕಾರ್ಯವನ್ನು ಮಾಡುವ ಕ್ಷಮತೆಗನುಸಾರ ನಿರ್ಗುಣದಿಂದ ಸಮಷ್ಟಿಯ ಕಲ್ಯಾಣಕ್ಕಾಗಿ ಪಂಚತತ್ತ್ವಗಳನ್ನು ಗ್ರಹಿಸಿ ತಕ್ಷಣ ಪ್ರಕ್ಷೇಪಿಸತೊಡಗಿದೆ.
೩ ಇ. ತನ್ನ ಬಳಿ ಏನೂ ಇಟ್ಟುಕೊಳ್ಳದೇ `ಬಿಂಬ-ಪ್ರತಿಬಿAಬ’ ಈ ನ್ಯಾಯದಿಂದ ಎಲ್ಲವನ್ನೂ ಕೊಡುವುದು : `ತನ್ನ ಬಳಿ ಏನೂ ಇಟ್ಟು ಕೊಳ್ಳದೇ `ಬಿಂಬ-ಪ್ರತಿಬಿAಬ’ ಈ ನ್ಯಾಯದಿಂದ ಎಲ್ಲವನ್ನೂ ಕೊಡುವುದು’, ಇದು ನಿರ್ಗುಣದ ಸ್ಥಾಯಿಭಾವವೇ(ನಿಜಸ್ವರೂಪ) ಆಗಿರುವುದರಿಂದ ಪರಾತ್ಪರ ಗುರು ಡಾಕ್ಟರರ ಸಮಷ್ಟಿ ಕಲ್ಯಾಣದ ಕಾರ್ಯಕಾರಿ ಉದ್ದೇಶಕ್ಕನುಸಾರ ತ್ವರಿತ ಚೈತನ್ಯವನ್ನು ನೀಡುವ ಪ್ರಮಾಣವು ಕೋಣೆಯಲ್ಲಿ ಬಹಳಷ್ಟು ಹೆಚ್ಚಾಗಿದೆ, ಅದರಲ್ಲಿನ ಒಂದು ಗುಣಧರ್ಮವೆಂದರೆ ತೇಜದ ಗುಣಧರ್ಮ.
೩ ಈ. ಕೋಣೆಯು ತೇಜತತ್ತ್ವದ ಸ್ತರದಲ್ಲಿ ಪ್ರತಿಬಿಂಬಿಸುವ ಮಾಧ್ಯಮದಿಂದ ಗರಿಷ್ಠ ಕಾರ್ಯವನ್ನು ಮಾಡುವುದು ಮತ್ತು ಈ ಕಾರ್ಯದ ಮಜಲುಗಳು : ಈಗ ಕೋಣೆಯಲ್ಲಿನ ಎಲ್ಲ ವಸ್ತುಗಳಿಂದ ಪ್ರಕಾಶವು ಪ್ರತಿಫಲಿಸತೊಡಗಿದೆ, ಅದು ಎಷ್ಟೊಂದು ಆಗತೊಡಗಿದೆ ಎಂದರೆ ಪ್ರಕಾಶ ಬಿದ್ದಕೂಡಲೇ, ಅದೆಲ್ಲವನ್ನೂ ತ್ಯಾಗ ಮಾಡುವ ಅಭೂತಪೂರ್ವ ಕ್ಷಮತೆಯು ಪ್ರತಿಯೊಂದು ವಸ್ತುವಿನಲ್ಲಿ ನಿರ್ಮಾಣವಾಗಿದೆ. ಆದುದರಿಂದಲೇ ಪ.ಪೂ. ಡಾಕ್ಟರರ ಕೋಣೆಯಲ್ಲಿನ ಕೋಟಾ ಹಾಸುಗಲ್ಲುಗಳು ಮತ್ತು ಟೈಲ್ಸ್ಗಳ ಮೇಲೆ ಬೀಳುವ ಬೆಳಕು ಎಷ್ಟೊಂದು ಪ್ರತಿಫಲಿಸುತ್ತದೆ ಎಂದರೆ ಸೂರ್ಯಪ್ರಕಾಶದಿಂದ ಯಾವುದಾದರೊಂದು ವಸ್ತುವಿನಿಂದ ಬೀಳುವ ನೆರಳಿನಂತೆ ಆ ಪ್ರತಿಫಲಿಸುವ ಪ್ರಕಾಶದಿಂದ ವಸ್ತುವಿನ ನೆರಳು ಬೀಳುತ್ತ್ತಿದೆ.
೩ ಈ. ೧. ಅಂತರ್ಬಾಹ್ಯ ಏಕತೆ ನಿರ್ಮಾಣವಾಗುವುದು : ಯಾವಾಗ ಅಂತರ್ಬಾಹ್ಯ ಏಕತೆ ನಿರ್ಮಾಣವಾಗುತ್ತದೆಯೋ, ಆಗ ಯಾವುದೇ ತತ್ತ್ವವನ್ನು ಗ್ರಹಿಸಿದ ಕೂಡಲೇ, ಅದೇ ಸಾಮರ್ಥ್ಯದಿಂದ ಪ್ರಕ್ಷೇಪಣೆ ಮಾಡುವ ಕ್ಷಮತೆಯೂ ಆ ವಸ್ತುವಿನಲ್ಲಿ ನಿರ್ಮಾಣವಾಗುತ್ತದೆ. ಅದೇ ರೀತಿ ಇಲ್ಲಿಯೂ ಆಗಿದೆ.
೩ ಈ ೨. ಪರಾತ್ಪರ ಗುರು ಡಾಕ್ಟರರ ಅವತಾರಿ ಕಾರ್ಯದಲ್ಲಿ `ಆತಾ ಉರಲೊ ಉಪಕಾರಾಪುರತಾ’, (ಈಗ ಉಳಿದಿದ್ದೇನೆ ಕೇವಲ ಉಪಕಾರಕ್ಕಾಗಿ (ಸಾಧನೆಯನ್ನು ಕಲಿಸಲು)) ಎಂಬ ಸುವಚನವೂ ತತ್ತ್ವತಃ ಸಿದ್ಧವಾಗಿದೆ : ಪರಾತ್ಪರ ಗುರು ಡಾಕ್ಟರರ ಅವತಾರಿ ಕಾರ್ಯದಲ್ಲಿ `ಆತಾ ಉರಲೊ ಉಪಕಾರಾಪುರತಾ’, (ಈಗ ಉಳಿದಿದ್ದೇನೆ ಕೇವಲ ಉಪಕಾರಕ್ಕಾಗಿ) ಎಂಬ ಸುವಚನವೂ ತತ್ತ್ವತಃ ಸಿದ್ಧವಾಗತೊಡಗಿದೆ, ಅಂದರೆ ಅವರ ಅವತಾರಿ ಕಾರ್ಯದ ಉದ್ದೇಶದಿಂದ ತುಂಬಿಕೊಂಡಿರುವ ವಸ್ತುಗಳೂ `ಈಗ ಈಗ ನಾವೂ ಉಳಿದಿದ್ದೇವೆ ಕೇವಲ ಉಪಕಾರಕ್ಕಾಗಿ’, ಎಂಬಂತಾಗಿದೆ.
೩ ಈ ೩. ಪರಾತ್ಪರ ಗುರು ಡಾಕ್ಟರರ ಕೋಣೆಯಲ್ಲಿ ತೇಜತತ್ತ್ವವು ಗರಿಷ್ಠ ಪ್ರಮಾಣದಲ್ಲಿ ಪ್ರಕ್ಷೇಪಿಸಿ ಕಾರ್ಯವನ್ನು ಮಾಡುತ್ತಿರುವುದು : ರೂಪ ಅಥವಾ ಬಣ್ಣವನ್ನು ಪ್ರಕಟ ಮಾಡುವುದು ತೇಜತತ್ತ್ವದ ಗುಣಧರ್ಮವಾಗಿದೆ. ತೇಜವು ಗರಿಷ್ಠ ಪ್ರಮಾಣದಲ್ಲಿ ಪ್ರತಿಫಲಿಸ ತೊಡಗಿದರೆ ಅದು ತನ್ನ ಎರಡೂ ಪ್ರಕಾರದ ಸ್ಥಿರ ಭಾವವನ್ನು ಆಯಾ ಗುಣಧರ್ಮಗಳಿಂದ ಅತ್ಯಧಿಕ ಪ್ರಮಾಣದಲ್ಲಿ ಪ್ರಕಟಿಸುತ್ತದೆ, ಅಂದರೆ ಅದು ರೂಪವನ್ನೂ ತೋರಿಸುತ್ತದೆ, ಹಾಗೆಯೇ ಅದರ ಬಣ್ಣವನ್ನೂ ತೋರಿಸುತ್ತದೆ. ಹಾಗೆಯೇ ಪರಾತ್ಪರ ಗುರು ಡಾಕ್ಟರರ ಕೋಣೆಯಲ್ಲಿ ತೇಜವೂ ಗರಿಷ್ಠ ಪ್ರಮಾಣದಲ್ಲಿ ಪ್ರಕ್ಷೇಪಣೆಯಾಗಿ ಕಾರ್ಯವನ್ನು ಮಾಡತೊಡಗಿದುದರಿಂದ ಎಲ್ಲರಿಗೂ ಪ್ರತಿಯೊಂದು ವಸ್ತುವಿನ ಸಗುಣ ಆಕೃತಿಬಂಧ, ಅಂದರೆ ರೂಪವೂ ನೋಡಲು ಸಿಗುತ್ತಿದೆ, ಹಾಗೆಯೇ ಅದರ ಬಣ್ಣವೂ ತಿಳಿಯುತ್ತಿದೆ, ಅಲ್ಲಿನ ವಾತಾವರಣವು ಪಾರದರ್ಶಕ ತೇಜರೂಪಿ ನಿರ್ಗುಣ ತತ್ತ್ವದ ಮೇಲೆ ಕಾರ್ಯವನ್ನು ಮಾಡುತ್ತಾ ಹೋಗುವಂತಹದ್ದಾಗಿದೆ.
ಅ. ಬಣ್ಣ ಮತ್ತು ರೂಪ ಇವುಗಳ ಮಹತ್ವ, ಹಾಗೆಯೇ ಗುಣಧರ್ಮ : ಬಣ್ಣದಿಂದಾಗಿ ಆ ವಸ್ತುವಿನ ಟೊಳ್ಳಿನಲ್ಲಿನ ತೇಜವೂ ಪ್ರತಿಫಲಿತವಾಗುತ್ತದೆ ಮತ್ತು ರೂಪದಿಂದ ಕೇವಲ ಆಕೃತಿ ರೇಖೆಗಳಲ್ಲಿನ ತೇಜ ಪ್ರತಿಫಲಿಸುತ್ತದೆ. ಇಲ್ಲಿ ಆ ಎರಡೂ ಪ್ರಕಾರಗಳು ಆಗುತ್ತಿರುವುದರಿಂದ ತೇಜದ ಎರಡು ಪ್ರಕಾರದ ಗುಣಧರ್ಮಗಳು ಸಮಷ್ಟಿ ಕಲ್ಯಾಣಕ್ಕಾಗಿ ಪಾರದರ್ಶಕ ತತ್ತ್ವದ ಆಧಾರದಲ್ಲಿ ಕಾರ್ಯವನ್ನು ಮಾಡಿ ಪರಾತ್ಪರ ಗುರು ಡಾಕ್ಟರರ ಕೋಣೆಯು ತನ್ನ ಆಯಾ ಸ್ತರದಲ್ಲಿನ ಪರಿಪೂರ್ಣತ್ವವನ್ನು ಸಿದ್ಧಮಾಡಿ ತೋರಿಸಿದೆ.
ಆ. ಪ್ರತಿಫಲನವು ತೇಜತತ್ತ್ವದ ಕಾರ್ಯಕ್ಕೆ ಮತ್ತು ಪ್ರತಿಬಿಂಬವು ಆಪತತ್ತ್ವದ ಕಾರ್ಯಕ್ಕೆ ಸಂಬಂಧಿಸಿದೆ.
೪. ಪರಾತ್ಪರ ಗುರು ಡಾಕ್ಟರರ ಕೋಣೆಯು ಸಂಪೂರ್ಣ ಈಶ್ವರಾಧೀನವಾಗಿದೆ
ಯಾವಾಗ ಪೃಥ್ವಿತತ್ತ್ವರೂಪಿ ಜಡತ್ವದ ಅರಿವು ಯಾವುದಾದರೊಂದು ವಸ್ತುವಿಗೆ ಇರುತ್ತದೆಯೋ, ಆಗ ಬಹಳಷ್ಟು ಸಲ ಆ ವಸ್ತುವನ್ನು ತನ್ನ ಕೈಯಲ್ಲಿ ಇಟ್ಟುಕೊಳ್ಳುತ್ತದೆ, ಅಂದರೆ ಸ್ವಲ್ಪವಾದರೂ ಸಗುಣರೂಪಿ ಸ್ವೇಚ್ಛೆ ಅದರಲ್ಲಿರುತ್ತದೆ; ಆದರೆ ಯಾವಾಗ ಯಾವುದಾದರೊಂದು ವಸ್ತು, ಜೀವ ಅಥವಾ ವಾತಾವರಣ ಸಂಪೂರ್ಣ ಈಶ್ವರೇಚ್ಛೆಯ ಆಧೀನವಾಗುತ್ತದೆಯೋ, ಆಗ ಮಾತ್ರ ಅದು ನಿರ್ಗುಣದ ಆಧಾರದಲ್ಲಿ ಕಾರ್ಯವನ್ನು ಮಾಡತೊಡಗುತ್ತದೆ. ಅದಕ್ಕೆ ಸ್ವೇಚ್ಛೆಯೇ ಉಳಿಯುವುದಿಲ್ಲ, ಆಗ ಅದು ಒಳ್ಳೆಯದನ್ನು, ಕೆಟ್ಟದ್ದನ್ನು ಹೀಗೆ ಎಲ್ಲವನ್ನೂ ನಿರ್ಮಲವೆಂದೇ ತಿಳಿದುಕೊಳ್ಳುತ್ತದೆ ಮತ್ತು ಪಾರದರ್ಶಕ ತತ್ತ್ವದ ಮೇಲೆ ಪ್ರತಿಫಲಿಸತೊಡಗುತ್ತದೆ. ಅದೇ ರೀತಿ ಪರಾತ್ಪರ ಗುರು ಡಾಕ್ಟರರ ಕೋಣೆಯು ಈಗ ಎಲ್ಲ ರೀತಿಯಲ್ಲಿ ಈಶ್ವರಾಧೀನವಾಗಿದೆ.
– ಓರ್ವ ವಿದ್ವಾನರು (ಸೌ. ಅಂಜಲಿ ಗಾಡಗೀಳ (ಈಗಿನ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ) ಇವರ ಮಾಧ್ಯಮದಿಂದ, ೧೯.೯.೨೦೧೩)