ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ವಾಸಿಸುತ್ತಿದ್ದ ಕೋಣೆಯ ಗೋಡೆಯ ಮೇಲೆ ಬೀಳುವ ಪ್ರಕಾಶ ೭ ವಿವಿಧ ಬಣ್ಣಗಳಲ್ಲಿ ಕಾಣಿಸುವುದರ ಹಿಂದಿನ ಅಧ್ಯಾತ್ಮಶಾಸ್ತ್ರ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಕು. ಮಧುರಾ ಭೋಸಲೆ

`ಗೋವಾದ ರಾಮನಾಥಿಯಲ್ಲಿನ ಸನಾತನ ಆಶ್ರಮದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ವಾಸಿಸುತ್ತಿದ್ದ ಕೋಣೆಯ ಪಶ್ಚಿಮ ದಿಕ್ಕಿನ ಗೋಡೆಯ ಮೇಲೆ ಟೆರೇಸ್‌ನ ಬಾಗಿಲಿನ ಮೂಲಕ ಪ್ರಕಾಶ ಬೀಳುತ್ತದೆ. ಈ ಪ್ರಕಾಶದಿಂದ ಗೋಡೆಯ ಮೇಲೆ ೭ ವಿವಿಧ ಬಣ್ಣಗಳು ಕಾಣಿಸುತ್ತವೆ. ೨೪.೩.೨೦೨೧ ರಂದು ಅವುಗಳ ಛಾಯಾಚಿತ್ರಗಳನ್ನು ತೆಗೆಯಲಾಯಿತು. ಗೋಡೆಯ ಮೇಲೆ ೭ ಬಣ್ಣಗಳು ಕಾಣಿಸುವುದರ ಹಿಂದಿನ ಅಧ್ಯಾತ್ಮ ಶಾಸ್ತ್ರ ಮುಂದಿನಂತಿದೆ.

ದೇವತೆಗಳ ಈ ತತ್ತ್ವ ಲಹರಿಗಳು ಪರಾತ್ಪರ ಗುರು ಡಾ. ಆಠವಲೆಯವರಲ್ಲಿ ಆವಶ್ಯಕತೆಗನುಸಾರ ವಿವಿಧ ರೀತಿಯ ತೇಜದ ಸ್ವರೂಪದಲ್ಲಿ

೧. ಸಪ್ತದೇವತೆಗಳ ತತ್ತ್ವಗಳು ಪರಾತ್ಪರ ಗುರು ಡಾ. ಆಠವಲೆಯವರ ಮಾಧ್ಯಮದಿಂದ ಕಾರ್ಯನಿರತವಾಗುವುದು

೧ ಅ. ಪರಾತ್ಪರ ಗುರು ಡಾ. ಆಠವಲೆಯವರ ವಿಶ್ವವ್ಯಾಪಿ ಕಾರ್ಯವನ್ನು ಮಾಡಲು ಸಪ್ತದೇವತೆಗಳ ತತ್ತ್ವಗಳು ಇಚ್ಛಾ, ಕ್ರಿಯಾ ಮತ್ತು ಜ್ಞಾನ ಈ ಮೂರು ಸ್ತರಗಳಲ್ಲಿ ಕಾರ್ಯನಿರತವಾಗುವುದು : ಪರಾತ್ಪರ ಗುರು ಡಾ. ಆಠವಲೆಯವರು `ವಿಶ್ವಗುರು’ಗಳಾಗಿದ್ದಾರೆ. ಆದುದರಿಂದ ಅವರಲ್ಲಿ ವಿಶ್ವದಲ್ಲಿನ ಎಲ್ಲ ದೈವೀ ಶಕ್ತಿಗಳು ಮತ್ತು ಸಪ್ತದೇವತೆಗಳ ತತ್ತ್ವಗಳು ಆವಶ್ಯಕತೆಗನುಸಾರ ಪ್ರಕಟವಾಗಿ ಇಚ್ಛಾ, ಕ್ರಿಯಾ ಮತ್ತು ಜ್ಞಾನ ಈ ಮೂರು ಸ್ತರಗಳಲ್ಲಿ ಕಾರ್ಯನಿರತವಾಗುತ್ತವೆ.

೧ ಅ ೧. ವಿವಿಧ ವಿಧದ ಶಕ್ತಿಗಳಿಗೆ ಸಂಬಂಧಿಸಿದ ಬಣ್ಣಗಳು

ವಾಚಕರಿಗೆ ವಿನಂತಿ : `ಮುದ್ರಣದ ತಾಂತ್ರಿಕ ಅಡಚಣೆಯಿಂದಾಗಿ ಇಲ್ಲಿ ಪ್ರಕಟಿಸಿದ ಛಾಯಾಚಿತ್ರಗಳು ಇದ್ದ ಹಾಗೆ ಮುದ್ರಣವಾಗುವ ಸಾಧ್ಯತೆ ಇಲ್ಲ. ಹಾಗಾಗಿ ಛಾಯಾಚಿತ್ರದ ಕೆಟ್ಟ ಶಕ್ತಿಗಳ ಕಣ್ಣು ಮತ್ತು ಮುಖ ಸ್ಪಷ್ಟವಾಗಿ ಕಾಣಿಸಬೇಕು ಮತ್ತು ವಿಷಯ ತಿಳಿಯಬೇಕೆಂದು ಛಾಯಾಚಿತ್ರವನ್ನು ಗಣಕಯಂತ್ರದ ಸಹಾಯದಿಂದ ಇನ್ನಷ್ಟು ಎದ್ದು ಕಾಣುವಂತೆ ಮಾಡಲಾಗಿದೆ. ಮೂಲ ಛಾಯಾಚಿತ್ರವನ್ನು ನೋಡಲು ಸನಾತನ ಪ್ರಭಾತದ ಜಾಲತಾಣದ ಲಿಂಕ್‌ಗೆ bit.ly/3NnXTp3 ಭೇಟಿ ನೀಡಬೇಕೆಂದು ವಿನಂತಿ. (ಲಿಂಕ್‌ನ ಕೆಲವು ಅಕ್ಷರಗಳು ಕ್ಯಾಪಿಟಲ್ ಇವೆ)

೧ ಆ. ಸಪ್ತದೇವತೆಗಳ ತತ್ತ್ವಗಳು ಶ್ರೀವಿಷ್ಣುವಿನ ಧರ್ಮಸಂಸ್ಥಾಪನೆಯ ಕಾರ್ಯಕ್ಕೆ ಸಹಾಯ ಮಾಡಲು ವಿವಿಧ ರೀತಿಯ ತೇಜಗಳ ರೂಪದಲ್ಲಿ ಪ್ರಕಟವಾಗಿ ಕಾರ್ಯನಿರತವಾಗುವುದು : ಪರಾತ್ಪರ ಗುರು ಡಾ. ಆಠವಲೆ ಇವರು `ಧರ್ಮಗುರು’ಗಳಾಗಿದ್ದಾರೆ. ಪೃಥ್ವಿಯ ಮೇಲೆ ಸ್ಥೂಲದಲ್ಲಿ ಮತ್ತು ಸೂಕ್ಶ್ಮದಲ್ಲಿ çಹಿಂದೂ ರಾಷ್ಟದ ಸ್ಥಾಪನೆಯನ್ನು ಮಾಡಲು ಅವರ ಮಾಧ್ಯಮದಿಂದ ಶ್ರೀವಿಷ್ಣುವಿನ ಅವತಾರಿ ತತ್ತ್ವವು ಕಾರ್ಯನಿರತವಾಗುತ್ತದೆ. ಈ ಅವತಾರಿ ಕಾರ್ಯವನ್ನು ಪೂರ್ಣಗೊಳಿಸಲು ಸನಾತನ ಸಂಸ್ಥೆ ಮತ್ತು ಅದಕ್ಕೆ ಸಂಬಂಧಿತ ಇತರ ಸಂಸ್ಥೆಗಳ ಸಾಧಕರಿಗೆ ಸಪ್ತದೇವತೆಗಳ ಕೃಪಾಶೀರ್ವಾದ ಸಿಗುತ್ತದೆ. ಆದ್ದರಿಂದ ಧರ್ಮಪ್ರಸಾರ ಮತ್ತು ಧರ್ಮಸಂಸ್ಥಾಪನೆಯ ಕಾರ್ಯವನ್ನು ಮಾಡುತ್ತಿರುವಾಗ ವಿಷ್ಣುಸ್ವರೂಪ ಪರಾತ್ಪರ ಗುರುದೇವರಿಗೆ ಸಪ್ತದೇವತೆಗಳ ಬೆಂಬಲ ಲಭಿಸುತ್ತದೆ ಮತ್ತು ಅವರ ತತ್ತ್ವಲಹರಿಗಳು ಸನಾತನದ ಆಶ್ರಮಗಳಲ್ಲಿ, ಸೇವಾಕೇಂದ್ರಗಳಲ್ಲಿ ಮತ್ತು ಎಲ್ಲೆಲ್ಲಿ ಧರ್ಮಕಾರ್ಯ ನಡೆಯುತ್ತದೆಯೋ, ಅಲ್ಲಲ್ಲಿ ಆಶೀರ್ವಾದ ಸ್ವರೂಪದಲ್ಲಿ ಕಾರ್ಯನಿರತವಾಗುತ್ತವೆ. ದೇವತೆಗಳ ಈ ತತ್ತ್ವಲಹರಿಗಳು ಪರಾತ್ಪರ ಗುರು ಡಾ. ಆಠವಲೆಯವರಲ್ಲಿ ಆವಶ್ಯಕತೆಗನುಸಾರ ವಿವಿಧ ರೀತಿಯ ತೇಜದ ಸ್ವರೂಪದಲ್ಲಿ ಪ್ರಕಟವಾಗಿ ಕಾರ್ಯನಿರತವಾಗುತ್ತವೆ.

೧ ಆ೧. ವಿವಿಧ ಪ್ರಕಾರದ ತೇಜಗಳ ಬಣ್ಣ 

೧ ಇ. ಪರಾತ್ಪರ ಗುರು ಡಾ. ಆಠವಲೆಯವರ ಮಾಧ್ಯಮದಿಂದ ವಿವಿಧ ಯೋಗಮಾರ್ಗಕ್ಕನುಸಾರ ಸಾಧನೆಯನ್ನು ಮಾಡುವ ಸಾಧಕರಿಗೆ ಮಾರ್ಗದರ್ಶನ ಮಾಡಲು ಸಪ್ತದೇವತೆಗಳ ತತ್ತ್ವ ಗಳು ಕಾರ್ಯ ನಿರತವಾಗುವುದು : ಪರಾತ್ಪರ ಗುರು ಡಾ. ಆಠವಲೆಯವರು `ಮೋಕ್ಷ ಗುರು’ಗಳಾಗಿದ್ದಾರೆ. ಆದ್ದರಿಂದ ಅವರು ಸಾಧಕರಿಗೆ ಅವರ ಯೋಗಮಾರ್ಗಕ್ಕನುಸಾರ ವ್ಯಷ್ಟಿ ಮತ್ತು ಸಮಷ್ಟಿ ಸ್ತರದಲ್ಲಿ ಸಾಧನೆಯನ್ನು ಮಾಡಲು ಮಾರ್ಗದರ್ಶನ ಮಾಡುತ್ತಾರೆ. ಆಗ ಪರಾತ್ಪರ ಗುರುದೇವರ ಮಾಧ್ಯಮದಿಂದ ಸಪ್ತದೇವತೆಗಳ ತತ್ತ್ವ ಲಹರಿಗಳು ಕಾರ್ಯನಿರತವಾಗಿ ವಿಶಿಷ್ಟ ಯೋಗಮಾರ್ಗಕ್ಕನುಸಾರ ಸಾಧಕರ ಆಧ್ಯಾತ್ಮಿಕ ಉನ್ನತಿಯಾಗಲು ಸಹಾಯ ಮಾಡುತ್ತವೆ.

೧ ಇ ೧. ವಿವಿಧ ಯೋಗಮಾರ್ಗಗಳಿಗೆ ಸಂಬಂಧಿಸಿದ ದೇವತೆಗಳು ಮತ್ತು ಅವರ ಸೂಕ್ಶ್ಮ ಬಣ್ಣ

೧ ಈ. ಸನಾತನ ಸಂಸ್ಥೆ ಮತ್ತು ಅದಕ್ಕೆ ಸಂಬಂಧಿಸಿದ ಸಂಸ್ಥೆಗಳ ಸಾಧಕರು ಧರ್ಮಸಂಸ್ಥಾಪನೆಯ ಕಾರ್ಯದಲ್ಲಿ ಸಹಭಾಗಿಗಳಾಗಿದ್ದರಿಂದ ಸಾಧಕರು ಮತ್ತು ಪರಾತ್ಪರ ಗುರು ಡಾ. ಆಠವಲೆಯವರನ್ನು ಅನಿಷ್ಟ ಶಕ್ತಿಗಳಿಂದ ರಕ್ಷಿಸಲು ಸಪ್ತದೇವತೆಗಳ ತತ್ತ್ವಗಳು ಕಾರ್ಯನಿರತವಾಗುವುದು : ಸನಾತನ ಸಂಸ್ಥೆ ಮತ್ತು ಅದಕ್ಕೆ ಸಂಬಂಧಿಸಿದ ಸಂಸ್ಥೆಗಳ ಸಾಧಕರು ಧರ್ಮಸಂಸ್ಥಾಪನೆಯ ಕಾರ್ಯದಲ್ಲಿ ಸಹಭಾಗಿಗಳಾಗಿದ್ದರಿಂದ ಸಾಧಕರು ಮತ್ತು ಪರಾತ್ಪರ ಗುರು ಡಾ. ಆಠವಲೆಯವರ ಮೇಲೆ ಪಾತಾಳದಲ್ಲಿನ ದೊಡ್ಡ ಅನಿಷ್ಟ (ಕೆಟ್ಟ) ಶಕ್ತಿಗಳು ಸೂಕ್ಶ್ಮದಿಂದ ಆಕ್ರಮಣಗಳನ್ನು ಮಾಡುತ್ತವೆ. ಅವರನ್ನು ಅನಿಷ್ಟ ಶಕ್ತಿಗಳಿಂದ ರಕ್ಷಿಸಲು ಸಪ್ತದೇವತೆಗಳ ತತ್ತ್ವಗಳು ಪೃಥ್ವಿಯ ಮೇಲಿನ ಸನಾತನದ ವಿವಿಧ ಆಶ್ರಮ, ಸೇವಾಕೇಂದ್ರ ಮತ್ತು ಸಾಧಕರ ಮನೆಗಳಲ್ಲಿ ಕಾರ್ಯನಿರತವಾಗಿ ಅವುಗಳಿಂದ ಪ್ರಕ್ಷೇಪಣೆಯಾಗುವ ಮಾರಕ ಶಕ್ತಿಯಿಂದ ಅನಿಷ್ಟ ಶಕ್ತಿಗಳು ನಾಶವಾಗಿ ಸಾಧಕರ ರಕ್ಷಣೆಯಾಗುತ್ತದೆ.

೧ ಉ. ೧೪ ವಿದ್ಯೆ, ೬೪ ಕಲೆ ಮತ್ತು ೬ ಶಾಸ್ತ್ರಗಳ ಬಗ್ಗೆ ಮಾರ್ಗ ದರ್ಶನ ಮಾಡಲು ಸಪ್ತದೇವತೆಗಳ ತತ್ತ್ವಗಳು ಪರಾತ್ಪರ ಗುರು ಡಾ. ಆಠವಲೆಯವರ ಮಾಧ್ಯಮದಿಂದ ಕಾರ್ಯನಿರತವಾಗಿವೆ : ಸನಾತನ ಸಂಸ್ಥೆ ಮತ್ತು ಅದಕ್ಕೆ ಸಂಬಂಧಿಸಿದ ಸಂಸ್ಥೆಗಳ ಸಾಧಕರಿಗೆ ೧೪ ವಿದ್ಯೆ, ೬೪ ಕಲೆ ಮತ್ತು ೬ ಶಾಸ್ತ್ರಗಳ ಬಗ್ಗೆ ಮಾರ್ಗದರ್ಶನ ಮಾಡಲು ಸಪ್ತದೇವತೆಗಳ ತತ್ತ್ವಗಳು ಪರಾತ್ಪರ ಗುರು ಡಾ. ಆಠವಲೆಯವರ ಮಾಧ್ಯಮದಿಂದ ಕಾರ್ಯನಿರತವಾಗಿವೆ. ಆದುದರಿಂದ ವಿವಿಧ ಕಲೆಗಳು ಮತ್ತು ವಿದ್ಯೆಗಳು ಜೋಪಾಸನೆಯಾಗಿ ಕಲೆಯ ಮಾಧ್ಯಮದಿಂದ ಕಲಾವಿದ ಸಾಧಕರ ಸಾಧನೆಯಾಗಿ ಈಶ್ವರಪ್ರಾಪ್ತಿಯ ದಿಕ್ಕಿನಲ್ಲಿ ಅವರ ಪ್ರಯಾಣ ಆರಂಭವಾಗಿದೆ.

೨. ೭ ಬಣ್ಣಗಳಿಗೆ ಸಂಬಂಧಿಸಿದ ಸಪ್ತದೇವತೆಗಳ ತತ್ತ್ವಗಳು, ಅವುಗಳ ಆವಿಷ್ಕಾರ ಮತ್ತು ಸೂಕ್ಶ್ಮ ಸ್ತರದಲ್ಲಿ ಆಗುವ ಅವುಗಳ ಕಾರ್ಯ ಯಾವಾಗ ಸಪ್ತದೇವತೆಗಳ ತತ್ತ್ವ ಲಹರಿಗಳು ಪರಾತ್ಪರ ಗುರುದೇವರ ದೇಹದಲ್ಲಿ ಕಾರ್ಯನಿರತವಾಗುತ್ತವೆಯೋ, ಆಗ ಅವರ ದೇಹದ ಮೇಲಿನ ಚರ್ಮ, ಕೂದಲು ಮತ್ತು ಉಗುರುಗಳಲ್ಲಿ ದೈವೀ ಬದಲಾವಣೆಯಾಗಿ ಅವರ ಮೇಲೆ ವಿವಿಧ ಬಣ್ಣಗಳು ಕಾಣಿಸುತ್ತವೆ. ಅದೇ ರೀತಿ ಯಾವಾಗ ದೇವತೆಗಳ ತತ್ತ್ವಲಹರಿಗಳು ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯಲ್ಲಿ ಕಾರ್ಯನಿರತವಾಗುತ್ತವೆಯೋ, ಆಗ ಅವರ ಕೋಣೆಯ ಗೋಡೆಯ ಮೇಲೆ ವಿವಿಧ ಬಣ್ಣಗಳು ಕಾಣಿಸುತ್ತವೆ. ಯಾವಾಗ ಬ್ರಹ್ಮಾಂಡದಿಂದ ಪರಾತ್ಪರ ಗುರುದೇವರ ಕೋಣೆಯಲ್ಲಿ ವಿವಿಧ ದೇವತೆಗಳ ಲಹರಿಗಳು ಬರುತ್ತವೆಯೋ, ಆಗ ಅವರ ಕೋಣೆಯಲ್ಲಿ ವಿವಿಧ ಬಣ್ಣಗಳ ಪ್ರಕಾಶಜ್ಯೋತಿಗಳು ಅಥವಾ ಪ್ರಕಾಶ ಕಿರಣಗಳು ಬರುವುದು ಕಾಣಿಸುತ್ತದೆ. ೭ ಬಣ್ಣಗಳಲ್ಲಿ ಗಾಢ ಕೆಂಪು, ಕಿತ್ತಳೆ, ಹಳದಿ, ಹಸಿರು, ನೀಲಿ, ಬೂದುಬಣ್ಣ ಮತ್ತು ನೇರಳೆಬಣ್ಣ ಈ ೭ ಬಣ್ಣಗಳು ಕಾರ್ಯನಿರತವಾಗಿರುತ್ತವೆ. ಈ ೭ ಬಣ್ಣಗಳಿಗೆ ಸಂಬಂಧಿಸಿದ ದೇವತೆಗಳ ತತ್ತ್ವಗಳು ಈ ಮುಂದಿನಂತಿವೆ.

೨ ಅ. ೭ ಬಣ್ಣಗಳ ಮೂಲಕ ಕಾರ್ಯನಿರತ ಸಪ್ತದೇವತೆಗಳ ತತ್ತ್ವಗಳು

– ಕು. ಮಧುರಾ ಭೋಸಲೆ ( ಸೂಕ್ಶ್ಮದಿಂದ ಸಿಕ್ಕಿದ ಜ್ಞಾನ) (ಆಧ್ಯಾತ್ಮಿಕ ಮಟ್ಟ ಶೇ. ೬೪) ಸನಾತನ ಆಶ್ರಮ, ರಾಮನಾಥಿ ಗೋವಾ. (೨೩.೫.೨೦೨೨)

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

*ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.