ಗ್ರಂಥಲೇಖನದ ಅದ್ವಿತೀಯ ಕಾರ್ಯವನ್ನು ಮಾಡುವ ಏಕೈಕ ಪರಾತ್ಪರ ಗುರು ಡಾ. ಜಯಂತ ಆಠವಲೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಗ್ರಂಥದ ಬಗ್ಗೆ ತಿಳಿಸುತ್ತಿರುವ ಪೂ. ಸಂದೀಪ ಆಳಶಿ

ಜ್ಞಾನವಂತಕೀ ಹೋ ಯಶವಂತಕೀ ಹೋ ಕೀರ್ತಿವಂತ | ಬಾಪ ಮಾಝಾ ಹೋ ಜ್ಞಾನವಂತ || (ಅರ್ಥ : ನನ್ನ ತಂದೆ ಅಂದರೆ ಗುರುಗಳು ಜ್ಞಾನವಂತ, ಯಶವಂತ, ಕೀರ್ತಿವಂತ ಆಗಿದ್ದಾರೆ)

ಈ ಮೇಲಿನ ಭಜನೆಯ ಪಂಕ್ತಿಗಳನ್ನು ಪ.ಪೂ. ಭಕ್ತರಾಜ ಮಹಾರಾಜರು ತಮ್ಮ ಗುರುಗಳ ಕುರಿತು ಬರೆದಿರುವುದಾಗಿದೆ. ಪ.ಪೂ. ಭಕ್ತರಾಜ ಮಹಾರಾಜರ ಉತ್ತಮ ಶಿಷ್ಯ ಹಾಗೂ ಸನಾತನದ ಎಲ್ಲ ಸಾಧಕರಿಗೆ ಪ್ರಾಣಪ್ರಿಯರಾಗಿರುವ ಪರಾತ್ಪರ ಗುರು ಡಾ. ಜಯಂತ ಆಠವಲೆಯವರಿಗೂ ಈ ಮೇಲಿನ ಸಾಲು ಅನ್ವಯವಾಗುತ್ತದೆ. ಅಖಿಲ ಮಾನವಜಾತಿಯ ಉದ್ಧಾರಕ್ಕಾಗಿ ಗ್ರಂಥಗಳ ಮೂಲಕ ಆಧ್ಯಾತ್ಮಿಕ ಜ್ಞಾನವನ್ನು ಸಮಾಜಕ್ಕೆ ತಲುಪಿಸುವ ಪರಾತ್ಪರ ಗುರು ಡಾ. ಜಯಂತ ಆಠವಲೆಯವರು `ಜ್ಞಾನವಂತ’ ಆಗಿದ್ದಾರೆ !

(ಪೂ.) ಶ್ರೀ. ಸಂದೀಪ ಆಳಶಿ,

ಸನಾತನದ ಗ್ರಂಥಗಳಲ್ಲಿನ ಜ್ಞಾನಾಮೃತದಿಂದ ಅಗಣಿತ ಜಿಜ್ಞಾಸುಗಳು ಸಾಧನಾಭಿಮುಖರಾಗಿದ್ದು, ೩೦ ಏಪ್ರಿಲ್ ೨೦೨೩ ರ ವರೆಗೆ ಸನಾತನದ ೧೧೯ ಸಾಧಕರು ಸಂತರಾಗಿದ್ದು, ೧೦೬೯ ಸಾಧಕರು ಸಂತರಾಗುವ ದಿಶೆಯಲ್ಲಿ ಮಾರ್ಗಕ್ರಮಣ ಮಾಡುತ್ತಿದ್ದಾರೆ. ಈ ದೃಷ್ಟಿಯಲ್ಲಿ ಪರಾತ್ಪರ ಗುರು ಡಾಕ್ಟರರು `ಯಶವಂತ’ರಾಗಿದ್ದಾರೆ !

ಸುಮಾರು ೨೮ ವರ್ಷಗಳಲ್ಲಿ, ಅಂದರೆ ೧೯೯೫ ರಿಂದ ಏಪ್ರಿಲ್ ೨೦೨೩ ರ ವರೆಗೆ ೩೬೦ ಗ್ರಂಥ-ಕಿರುಗ್ರಂಥಗಳನ್ನು ರಚಿಸಿರುವ ಪರಾತ್ಪರ ಗುರು ಡಾಕ್ಟರರ ಗ್ರಂಥ-ರಚನಾ ಕ್ಷೇತ್ರದ ಕಾರ್ಯವು ಅಸಾಧಾರಣವಾಗಿದ್ದು ಇದರಿಂದಲೂ ಅವರ ಅಸಾಮಾನ್ಯ ಆಧ್ಯಾತ್ಮಿಕ ಸಾಮರ್ಥ್ಯದ ಪರಿಚಯವಾಗುತ್ತದೆ. ಈ ದೃಷ್ಟಿಯಲ್ಲಿ ಪರಾತ್ಪರ ಗುರು ಡಾಕ್ಟರರು `ಕೀರ್ತಿವಂತ’ರಾಗಿದ್ದಾರೆ !

ಪರಾತ್ಪರ ಗುರು ಡಾಕ್ಟರರ ಈ ಜ್ಞಾನಗಾಥಾ, ಯಶೋಗಾಥಾ ಹಾಗೂ ಕೀರ್ತಿಗಾಥಾ ಆಗಿರುವುದರ ಹಿಂದಿನ ಮುಖ್ಯ ಕಾರಣವೆಂದರೆ, ಅವರ ಗ್ರಂಥಕಾರ್ಯದ ನಾನಾವಿಧ ಅಂಗಗಳು ! ಈ ಅಂಗಗಳ ಮಾಹಿತಿಯನ್ನು ನೀಡುವ ಈ ಲೇಖನವನ್ನು ಅವರ ೮೧ ನೇ ಜನ್ಮದಿನದ ನಿಮಿತ್ತದಲ್ಲಿ ಪ್ರಕಾಶಿಸುತ್ತಿದ್ದೇವೆ. ಈ ಲೇಖನದಲ್ಲಿ ಕೊಟ್ಟಿರುವ ಸನಾತನದ ಗ್ರಂಥಗಳ ವೈಶಿಷ್ಟ್ಯಗಳನ್ನು ಓದಿ ಸನಾತನದ ಗ್ರಂಥಗಳ ಮತ್ತು ಅದರ ಮೂಲಕ ಪರಾತ್ಪರ ಗುರು ಡಾಕ್ಟರರ ಹಿರಿಮೆಯು ಅರಿವಾಗಬಹುದು.

ಸಂಕಲಕನಕಾರರು : (ಪೂ.) ಶ್ರೀ. ಸಂದೀಪ ಆಳಶಿ (ಸನಾತನದ ಗ್ರಂಥಗಳ ಸಂಕಲನಕಾರರಲ್ಲಿ ಒಬ್ಬರು), ಸನಾತನ ಆಶ್ರಮ, ರಾಮನಾಥಿ ಗೋವಾ. ಅಧ್ಯಾತ್ಮದಲ್ಲಿನ ಜಿಜ್ಞಾಸುಗಳಿಗೆ ಜ್ಞಾನದ ಒಂದು ವಿನೂತನ ಸ್ಥಾನವನ್ನು ಸೃಷ್ಟಿಸುವ ಸನಾತನದ ಗ್ರಂಥಗಳ ಅದ್ವಿತೀಯ ವೈಶಿಷ್ಟ್ಯಗಳು !

೧. `ಪುಸ್ತಕ’ವಲ್ಲ, `ಗ್ರಂಥ’ವಾಗಿದೆ !

ನಾಶಿಕ್‌ದಲ್ಲಿ ಪ.ಪೂ. ಬೇಜನ್ ಎನ್. ದೇಸಾಯಿ ಎಂಬ ಶ್ರೇಷ್ಠ ಸಂತರು ಆಗಿ ಹೋದರು. ೧೯೯೭ ರ ವರೆಗೆ ಸನಾತನದ ಹೆಚ್ಚು ಕಡಿಮೆ ೭-೮ ಗ್ರಂಥಗಳಷ್ಟೇ ಪ್ರಕಾಶನವಾಗಿದ್ದವು. ಪ.ಪೂ. ಬೇಜನ ಎನ್. ದೇಸಾಯಿ ಇವರು ಆಗ ಮುಂದಿನಂತೆ ಹೇಳಿದ್ದರು, `ಡಾ. ಜಯಂತ ಬಾಳಾಜಿ ಆಠವಲೆಯವರ ಎಲ್ಲ ಗ್ರಂಥಗಳಲ್ಲಿ ಅಧ್ಯಾತ್ಮಶಾಸ್ತ್ರದ ಸೈದ್ಧಾಂತಿಕ ಮತ್ತು ಕ್ರಿಯಾತ್ಮಕ ಈ ಎರಡೂ ಭಾಗಗಳನ್ನು ಮಂಡಿಸಲಾಗಿದೆ. ಅವುಗಳಲ್ಲಿ ಪ್ರತಿಪಾದಿಸಿರುವ ವಿಷಯಗಳ ಬಗ್ಗೆ ಸರ್ವತೋಮುಖವಾಗಿ ವಿಚಾರ ಮಾಡಲಾಗಿದ್ದು, ಅದಕ್ಕೆ ಅವರ ಆಳವಾದ ಅಭ್ಯಾಸದ ಆಧಾರವಿರುವುದರಿಂದ ಆ ಗ್ರಂಥಗಳು ಏನೂ ತಿಳಿಯದ ವ್ಯಕ್ತಿಯನ್ನು ಕೂಡ ಸಾಧನೆಗೆ ಉದ್ಯುಕ್ತಗೊಳಿಸುತ್ತವೆ, ಅದೇ ರೀತಿ ಪರಮಾರ್ಥಪಥದಲ್ಲಿರುವ ಸಾಧಕ, ಭಕ್ತ ಹಾಗೂ ಉಪಾಸಕನ ಶ್ರದ್ಧೆಯನ್ನು ಹೆಚ್ಚಿಸಿ ಅವನ ಧರ್ಮಾಚರಣೆಯ ದಾರಿಯ ಮಾರ್ಗಕ್ರಮಣವನ್ನು ದೃಢಗೊಳಿಸುತ್ತವೆ.’

ಪ.ಪೂ. ಬೇಜನ ದೇಸಾಯಿಯವರು ಹೇಳಿದಂತೆ ನಾವು ಸನಾತನದ ಪ್ರತಿಯೊಂದು ಪ್ರಕಾಶನಕ್ಕೆ `ಗ್ರಂಥ’ ಅಥವಾ `ಕಿರುಗ್ರಂಥ’, ಎಂದು ಹೇಳಲು ಆರಂಭಿಸಿದೆವು. ಅದಕ್ಕೂ ಮೊದಲು ನಾವು `ಪುಸ್ತಕ’ ಅಥವಾ `ಪುಸ್ತಿಕೆ’, ಎಂದು ಹೇಳುತ್ತಿದ್ದೆವು. ಲೌಕಿಕ ದೃಷ್ಟಿಯಿಂದ ನೋಡಿದರೆ ಭೌತಿಕ ವಿಷಯಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಯಾವುದು ನೀಡುತ್ತದೆಯೋ ಅದಕ್ಕೆ `ಪುಸ್ತಕ’ ಎನ್ನುತ್ತಾರೆ ಮತ್ತು ಪರಮಾರ್ಥದ ವಿಷಯಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಯಾವುದು ನೀಡುತ್ತದೆಯೋ, ಅದಕ್ಕೆ `ಗ್ರಂಥ’ ಎನ್ನುತ್ತಾರೆ. `ಪ.ಪೂ. ಬೇಜನ್ ದೇಸಾಯಿ ಇವರು ೧೯೯೭ ರಲ್ಲಿ ಸೂಚಿಸಿದ ನಾಮಾಭಿದಾನವು ಅತ್ಯಂತ ಯೋಗ್ಯವಾಗಿತ್ತು’, ಎಂಬುದು ಮುಂದೆ ಅರಿವಾಯಿತು.

೨. ವಿಶಿಷ್ಟ ಹಾಗೂ ಆಳವಾದ ಅಧ್ಯಾತ್ಮಶಾಸ್ತ್ರೀಯ ಜ್ಞಾನ !

ಆಧ್ಯಾತ್ಮಿಕ ವಿಷಯಗಳಲ್ಲಿನ ವಿವಿಧ ಗ್ರಂಥಗಳಲ್ಲಿ ಸುಮಾರು ಶೇ. ೩೦ ರಷ್ಟು ವಿಷಯವು ಇತರ ಗ್ರಂಥಗಳಿಂದ ಪಡೆದ ಆಧಾರವಾಗಿದ್ದು ಸುಮಾರು ಶೇ. ೨೦ ರಷ್ಟು ವಿಷಯವು ಸಾಧಕರಿಗೆ ಸೂಕ್ಶ್ಮದಿಂದ ಸಿಕ್ಕಿರುವ ಈಶ್ವರೀ ಜ್ಞಾನವಾಗಿದೆ ಹಾಗೂ ಶೇ. ೫೦ ರಷ್ಟು ವಿಷಯವು ಗ್ರಂಥಗಳ ಸಂಕಲಕನಕಾರರಾದ ಪರಾತ್ಪರ ಗುರು ಡಾ. ಆಠವಲೆಯವರಿಗೆ ಗುರುಗಳ ಆಶೀರ್ವಾದದಿಂದ ಆಂತರ್ಯದಿಂದ ಸ್ಫುರಿಸಿದ ವಿಷಯವಾಗಿದೆ.

೨ ಅ. ಪರಾತ್ಪರ ಗುರು ಡಾಕ್ಟರರ ಕೃಪೆಯಿಂದ ಕೆಲವು ಜ್ಞಾನ-ಪ್ರಾಪ್ತಕರ್ತಾ ಸಾಧಕರಿಗೆ ಸೂಕ್ಶ್ಮದಿಂದ ಸಿಗುವ ಆಳವಾದ ಅಧ್ಯಾತ್ಮಶಾಸ್ತ್ರೀಯ ಈಶ್ವರೀ ಜ್ಞಾನ ! : ಪರಾತ್ಪರ ಗುರು ಡಾಕ್ಟರರಿಗೆ ಅಧ್ಯಾತ್ಮವನ್ನು ಪರಿಪೂರ್ಣ ತಿಳಿದುಕೊಳ್ಳುವ ತೀವ್ರ ಜಿಜ್ಞಾಸೆಯು ಅವರು ಅಧ್ಯಾತ್ಮದಲ್ಲಿ ಬಂದಾಗಿನಿಂದ ಇತ್ತು. ಅವರಿಗೆ ಜ್ಞಾನಯೋಗ, ಕರ್ಮಯೋಗ, ಭಕ್ತಿಯೋಗ ಹೀಗೆ ವಿವಿಧ ಸಾಧನಾ ಮಾರ್ಗಗಳಲ್ಲಿನ ವಿಷಯಗಳಿಗೆ ಸಂಬಂಧಿಸಿದ ಗೂಢ ಪ್ರಶ್ನೆಗಳ ಉತ್ತರಗಳನ್ನು ಪಡೆಯಲಿಕ್ಕಿತ್ತು ಹಾಗೂ ಅಧ್ಯಾತ್ಮದಲ್ಲಿನ ವಿವಿಧ ವಿಷಯಗಳಲ್ಲಿನ ಶಾಸ್ತçವನ್ನು ತಿಳಿದುಕೊಳ್ಳಲಿಕ್ಕಿತ್ತು. ಅದಕ್ಕಾಗಿ ಅವರು ಅನೇಕ ಸಂತರಿಂದ ಮಾರ್ಗದರ್ಶವನ್ನು ಪಡೆಯತ್ತಿದ್ದರು ಹಾಗೂ ತಾನು ಸ್ವತಃ ಧ್ಯಾನದಿಂದ ಉತ್ತರವನ್ನು ಪಡೆಯುತ್ತಿದ್ದರು. ೨೦೦೩ ರಲ್ಲಿ ಒಮ್ಮೆ ಅವರ ಮನಸ್ಸಿನಲ್ಲಿ ವಿಚಾರ ಬಂತು, ಇಂತಹ ಉತ್ತರಗಳನ್ನು ಪಡೆಯಲು ಅನೇಕ ವರ್ಷಗಳು ಬೇಕಾಗುವುದು. ಅಧ್ಯಾತ್ಮದಲ್ಲಿನ ಎಲ್ಲ ಜ್ಞಾನವು ಅಖಿಲ ಮನುಕುಲಕ್ಕೆ ಬೇಗನೆ ತಲುಪಬೇಕು. ಈಗ ದೇವರೆ ಎಲ್ಲ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ನೀಡುವಂತೆ ಏನಾದರೂ ಆಗಬೇಕು. ಅನಂತರ ತಕ್ಷಣ ಸನಾತನದ ಸಾಧಕಿ ಸೌ. ಅಂಜಲಿ ಗಾಡಗೀಳ (ಈಗಿನ ಶ್ರೀಚಿತ್‌ಶಕ್ತಿ ಸೌ. ಅಂಜಲಿ ಮುಕುಲ ಗಾಡಗೀಳ) ಇವರಿಗೆ ಅಧ್ಯಾತ್ಮದಲ್ಲಿನ ಕೆಲವು ವಿಷಯಗಳಿಗೆ ತನ್ನಿಂತಾನೇ ಜ್ಞಾನ ಸ್ಫುರಿಸಿತು ! ಇದು ಕೇವಲ ಯೋಗಾಯೋಗವಾಗಿರಲಿಲ್ಲ ! ಪರಾತ್ಪರ ಗುರು ಡಾಕ್ಟರರ ಜಿಜ್ಞಾಸೆಯನ್ನು ದೇವರು ಈ ರೀತಿ ಪೂರ್ಣಗೊಳಿಸಿದ್ದರು ! ಕಾಲಾಂತರದಲ್ಲಿ ಇತರ ಸಾಧಕರಿಗೂ ಜ್ಞಾನ ಸ್ಫುರಿಸಲು ಆರಂಭವಾಯಿತು. ಸದ್ಯ ಶ್ರೀ. ರಾಮ ಹೊನಪ, ಕು. ಮಧುರಾ ಭೋಸಲೆ ಮತ್ತು ಶ್ರೀ. ನಿಷಾದ ದೇಶಮುಖ ಈ ಸಾಧಕರ ಮೂಲಕ ಅಧ್ಯಾತ್ಮದ ವಿವಿಧ ವಿಷಯಗಳಿಗೆ ಸೂಕ್ಶ್ಮದಿಂದ `ನ ಭೂತೋ ನ ಭವಿಷ್ಯತಿ’, ಯಂತಹ ಸವಿಸ್ತಾರವಾದ ಅಧ್ಯಾತ್ಮಶಾಸ್ತ್ರೀಯ ಜ್ಞಾನವು ಪ್ರತಿದಿನ ಅನೇಕ ಪುಟಗಳಷ್ಟು ಸಿಗುತ್ತವೆ ! ಇನ್ನೂ ಪರಾತ್ಪರ ಗುರು ಡಾಕ್ಟರರ ಮನಸ್ಸಿನಲ್ಲಿನ ನೂರಾರು ಪ್ರಶ್ನೆಗಳಿಗೆ ಉತ್ತರ ಸಿಗಬೇಕಾಗಿದೆ !

೩. ಅಧ್ಯಾತ್ಮದ ಪ್ರತಿಯೊಂದು ವಿಷಯದಲ್ಲಿ `ಏಕೆ ಮತ್ತು ಹೇಗೆ’ ಎಂಬುದರ ಶಾಸ್ತ್ರೀಯ ಉತ್ತರಗಳು !

ಇಂದಿನ ವಿಜ್ಞಾನ ಯುಗದ ಪೀಳಿಗೆಗೆ ಅಧ್ಯಾತ್ಮದ ಪ್ರತಿಯೊಂದು ವಿಷಯದಲ್ಲಿ `ಏಕೆ ಮತ್ತು ಹೇಗೆ’ ಎಂಬುದನ್ನು ತಿಳಿದುಕೊಳ್ಳುವ ಜಿಜ್ಞಾಸೆ ಇರುತ್ತದೆ. ಅವರಿಗೆ ಅಧ್ಯಾತ್ಮದ ಯಾವುದೇ ಒಂದು ವಿಷಯದ ಹಿಂದಿನ ಶಾಸ್ತ್ರೀವನ್ನು ವಿವರಿಸಿ ಹೇಳಬೇಕು. ಇದರಿಂದ ಅವರಿಗೆ ಅಧ್ಯಾತ್ಮದ ಮೇಲೆ ಬೇಗನೆ ವಿಶ್ವಾಸ ಮೂಡುತ್ತದೆ ಹಾಗೂ ಅವರು ಸಾಧನೆಯತ್ತ ಹೊರಳುತ್ತಾರೆ. ಅದಕ್ಕಾಗಿ ಪರಾತ್ಪರ ಗುರು ಡಾಕ್ಟರರು ಆರಂಭದಿಂದಲೇ ಪ್ರತಿಯೊಂದು ಗ್ರಂಥದಲ್ಲಿ ಅಧ್ಯಾತ್ಮಶಾಸ್ತ್ರೀವನ್ನು ಹೇಳಲು ಒತ್ತು ಕೊಟ್ಟಿದ್ದಾರೆ. ಇದರ ಒಂದು ಉದಾಹರಣೆಯನ್ನು ಮುಂದೆ ಕೊಡಲಾಗಿದೆ. ಶಿವಲಿಂಗದ ಮೇಲೆ ಬಿಲ್ವಪತ್ರೆಯನ್ನು ಅರ್ಪಿಸುವ ಎರಡು ಪದ್ಧತಿಗಳಿವೆ. ಮೊದಲ ಪದ್ಧತಿಯೆಂದರೆ ಎಲೆಯ ತುದಿಯನ್ನು ನಮ್ಮತ್ತ ಮಾಡಿ ಅರ್ಪಿಸುವುದು ಹಾಗೂ ಇನ್ನೊಂದು ಪದ್ಧತಿಯೆಂದರೆ, ಎಲೆಯ ತೊಟ್ಟನ್ನು ನಮ್ಮತ್ತ ಮಾಡಿ ಅರ್ಪಿಸುವುದು. `ಎರಡು ಬೇರೆ ಬೇರೆ ಪದ್ಧತಿ ಏಕೆ ?’, ಎನ್ನುವ ಪ್ರಶ್ನೆ ಜಿಜ್ಞಾಸುಗಳ ಮನಸ್ಸಿನಲ್ಲಿ ಬರಬಹುದು. ಇದರ ಹಿಂದಿನ ಶಾಸ್ತ್ರೀ ಹೀಗಿದೆ – ಬಿಲ್ವಪತ್ರೆಯು ತಾರಕ ಶಿವತತ್ತ್ವದ ವಾಹಕವಾಗಿದೆ, ಆದರೆ ಬಿಲ್ವಪತ್ರೆಯ ತೊಟ್ಟು ಮಾರಕ ಶಿವತತ್ತ್ವದ ವಾಹಕವಾಗಿದೆ. ಸಾಮಾನ್ಯ ಉಪಾಸಕರ ಪ್ರಕೃತಿ ತಾರಕ ಸ್ವರೂಪದ್ದಾಗಿರುವುರಿಂದ ಶಿವನ ತಾರಕ ಉಪಾಸನೆಯು ಅವರ ಪ್ರಕೃತಿಗೆ ಹೊಂದಾಣಿಕೆಯಾಗುವಂತಹದ್ದು ಹಾಗೂ ಅವರ ಆಧ್ಯಾತ್ಮಿಕ ಉನ್ನತಿಗೆ ಪೂರಕವಾದುದಾಗಿರುತ್ತದೆ. ಅಂತಹವರು ಶಿವನ ತಾರಕ ತತ್ತ್ವದ ಲಾಭವನ್ನುಗಳಿಸಲು ಎಲೆಯ ತೊಟ್ಟನ್ನು ಲಿಂಗದ ಕಡೆಗೆ ಹಾಗೂ ಎಲೆಯ ತುದಿಯನ್ನು ತಮ್ಮತ್ತ ಮಾಡಿ ಅರ್ಪಿಸಬೇಕು. ತದ್ವಿರುದ್ಧ ಶಾಕ್ತಪಂಥೀಯರು (ಶಕ್ತಿಯ ಉಪಾಸಕರು) ಶಿವನ ಮಾರಕ ರೂಪದ ಉಪಾಸನೆ ಮಾಡುತ್ತಾರೆ. ಇಂತಹ ಉಪಾಸಕರು ಶಿವನ ಮಾರಕ ತತ್ತ್ವದ ಲಾಭವನ್ನುಗಳಿಸಲು ಬಿಲ್ವಪತ್ರದ ತುದಿಯನ್ನು ಲಿಂಗದ ಕಡೆಗೆ ಹಾಗೂ ತೊಟ್ಟನ್ನು ತಮ್ಮತ್ತ ಮಾಡಿ ಅರ್ಪಿಸಬೇಕು.

– ಪೂ. ಸಂದೀಪ ಆಳಶಿ.

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ