`ದಿ ಕೇರಳ ಸ್ಟೋರಿ’ ಈ ಚಲನಚಿತ್ರ ಸುಳ್ಳುತನದ ಪರಮೋಚ್ಚ ಸ್ಥಾನದಲ್ಲಿದೆಯಂತೆ !’ – ಜಿತೇಂದ್ರ ಆವ್ಹಾಡ

ರಾಷ್ಟ್ರವಾದಿ ಕಾಂಗ್ರೆಸ್ಸಿನ ಶಾಸಕ ಜಿತೇಂದ್ರ ಆವ್ಹಾಡರ ವಿಚಿತ್ರ ಶೋಧನೆ !

ರಾಷ್ಟ್ರವಾದಿ ಕಾಂಗ್ರೆಸ್ಸಿನ ಶಾಸಕ ಜಿತೇಂದ್ರ ಆವ್ಹಾಡ

ಠಾಣೆ – `ದಿ ಕೇರಳ ಸ್ಟೋರಿ’ ಈ ಚಲನಚಿತ್ರ ಸುಳ್ಳುತನದ ಪರಮೋಚ್ಚ ಸ್ಥಾನದಲ್ಲಿದೆ. ಪ್ರತ್ಯಕ್ಷದಲ್ಲಿ ಕೇರಳದ ಸತ್ಯ ಪರಿಸ್ಥಿತಿ ಪ್ರತ್ಯೇಕವಾಗಿದೆ. ವಿದೇಶದಿಂದ ಭಾರತಕ್ಕೆ ಬರುವ ಹಣದಲ್ಲಿ ಶೇ 36 ರಷ್ಟು ಹಣವನ್ನು ಕೇರಳ ನಾಗರಿಕರು ಕಳುಹಿಸುತ್ತಾರೆ. ಕಳೆದ ವರ್ಷ ಅವರು 2.36 ಲಕ್ಷ ಕೋಟಿ ಹಣವನ್ನು ಕಳುಹಿಸಿದ್ದರು. ಕೇರಳದ ಸಾಕ್ಷರತೆ ಶೇ. 96 ರಷ್ಟು ಇದ್ದೂ, ಭಾರತದ ಸಾಕ್ಷರತೆ ಶೇ. 76 ರಷ್ಟು ಇದೆಯೆಂದು ರಾಷ್ಟ್ರವಾದಿ ಕಾಂಗ್ರೆಸ್ಸಿನ ಶಾಸಕ ಜಿತೇಂದ್ರ ಆವ್ಹಾಡರು ಟ್ವೀಟ ಮೂಲಕ ತಿಳಿಸಿದ್ದಾರೆ. (ಕೇರಳದ ಸಾಕ್ಷರತೆ ಲವ್ ಜಿಹಾದ್ ಗೆ ಏನು ಸಂಬಂಧವಿದೆ ? ಸುಶಿಕ್ಷಿತ ಯುವತಿಯರೂ ಲವ್ ಜಿಹಾದ್ ಗೆ ಬಲಿಯಾಗುತ್ತಿರುವಾಗ ಇಂತಹ ವಿಚಿತ್ರ ತರ್ಕವನ್ನು ಮಾಡುವ ಜಿತೇಂದ್ರ ಆವ್ಹಾಡರು ತಮ್ಮನ್ನು ತಾವೇ ಹಾಸ್ಯಾಸ್ಪದವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ – ಸಂಪಾದಕರು)

ಸಂಪಾದರಕ ನಿಲುವು

  • ಚಲನಚಿತ್ರದ ಮಾಧ್ಯಮದಿಂದ ಹಿಂದೂ ಸಮಾಜ `ಲವ್ ಜಿಹಾದ’ ವಿರುದ್ಧ ಜಾಗೃತಗೊಳ್ಳುವುದು ಜಿತೇಂದ್ರ ಆವ್ಹಾಡರಿಗೆ ಮನಸ್ಸಿಗೆ ಚುಚ್ಚುತ್ತಿರುವುದರಿಂದ ಅವರು ಚಲನಚಿತ್ರ ಸುಳ್ಳಾಗಿದೆಯೆಂದು ನಂಬಿಸಲು ಬಹಳ ಶ್ರಮ ಪಡುತ್ತಿದ್ದಾರೆ ಎನ್ನುವುದು ಅರ್ಥವಾಗದಿರುವಷ್ಟು ಜನತೆ ಮುಗ್ಧರಲ್ಲ !
  • ಈ ಹಿಂದೆ ಜಿಹಾದಿ ಭಯೋತ್ಪಾದಕ ಇಶ್ರತ್ ಜಹಾ ಘರ್ಷಣೆಯಲ್ಲಿ ಹತ್ಯೆಗೀಡಾದಾಗ ಆವ್ಹಾಡರು ಅದನ್ನು ವಿರೋಧಿಸಿದ್ದರು. ನಿರಂತರವಾಗಿ ಮತಾಂಧರ ಪರವಹಿಸಿ ಅವರ ಮತಗಳಿಗಾಗಿ ರಾಷ್ಟ್ರವಿರೋಧಿ ವಿಚಾರಗಳನ್ನು ಮಂಡಿಸುವ ಆವ್ಹಾಡರಂತಹ ರಾಜಕಾರಣಿಗಳು ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ !
  • ಮಹಾರಾಷ್ಟ್ರದಿಂದ ಮಾರ್ಚನಲ್ಲಿ 2 ಸಾವಿರದ 200 ಹುಡುಗಿಯರು ನಾಪತ್ತೆಯಾದರು. ಹಾಗೆಯೇ ಉಲ್ಲಾಸನಗರದಿಂದ 1 ತಿಂಗಳಿನಲ್ಲಿ 6 ಹಿಂದೂ ಯುವತಿಯರು ಮುಸಲ್ಮಾನರೊಂದಿಗೆ ಓಡಿ ಹೋದರು. ಈ ಘಟನೆಯ ವಿಷಯದಲ್ಲಿ ಆವ್ಹಾಡರು ಏಕೆ ಬಾಯಿ ಮುಚ್ಚಿಕೊಂಡು ಸುಮ್ಮನಿದ್ದಾರೆ ?