ಬಂಗಾಲದಲ್ಲಿ ‘ದಿ ಕೇರಳ ಸ್ಟೋರಿ’ ಚಲನಚಿತ್ರ ಮೇಲೆ ನಿಷೇಧ !

ತೃಣಮೂಲ ಕಾಂಗ್ರೆಸ್ ಸರಕಾರದ ಹಿಂದೂದ್ವೇಷ ಮತ್ತು ಜಿಹಾದಿ ಭಯೋತ್ಪಾದನೆಯನ್ನು ಮೆಚ್ಚುವ ನಿರ್ಧಾರ !

ಕೋಲಕಾತಾ (ಬಂಗಾಲ) – ಬಂಗಾಲದ ತೃಣಮೂಲ ಕಾಂಗ್ರೆಸ್ ಸರಕಾರವು ಲವ್ ಜಿಹಾದ್‌ನ ಭೀಕರತೆ ಮತ್ತು ಜಿಹಾದಿ ಭಯೋತ್ಪಾದನೆಯ ಪಿತೂರಿಯನ್ನು ಬಹಿರಂಗಪಡಿಸುವ ‘ದಿ ಕೇರಳ ಸ್ಟೋರಿ’ ಚಲನಚಿತ್ರದ ಪ್ರದರ್ಶನವನ್ನು ನಿಷೇಧಿಸಿದೆ. ಇದಕ್ಕಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗಿ, ಹಿಂಸಾಚಾರ ನಡೆಯುವ ಸಾಧ್ಯತೆ ಇದೆ ಎಂದು ಕಾರಣ ನೀಡಲಾಗಿದೆ.

‘ದಿ ಕೇರಳ ಸ್ಟೋರಿ’ ಒಂದು ವಿಕೃತ ಕಥೆಯಂತೆ ! – ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ಈ ಚಿತ್ರದ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇವರು,

1. ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ತೋರಿಸಲಾಗಿರುವ ಕಥೆ ಕಾಲ್ಪನಿಕವಾಗಿದೆ. ಇದರಲ್ಲಿ ಯಾವುದೇ ನೈಜತೆ ಇಲ್ಲ. (ಇದನ್ನು ಮಮತಾ ಬ್ಯಾನರ್ಜಿ ಹೇಗೆ ನಿರ್ಧರಿಸಿದರು ? ಈ ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರು 4 ವರ್ಷಗಳ ಕಾಲ ಸಂಶೋಧನೆ ನಡೆಸಿ ಸಾಕ್ಷ್ಯಾಧಾರಗಳ ಮೇಲೆ ಈ ಚಿತ್ರವನ್ನು ಮಾಡಿದ್ದಾರೆ. ಮಮತಾ ಬ್ಯಾನರ್ಜಿ ಅವರು ಯಾವ ಆಧಾರದ ಮೇಲೆ ‘ಈ ಚಿತ್ರ ನೈಜತೆ ಇಲ್ಲ’ ಎಂದು ಹೇಳುತ್ತಿದ್ದಾರೆ, ಇದನ್ನು ಅವರು ಸಾಕ್ಷ್ಯದೊಂದಿಗೆ ವಿವರಿಸಬೇಕು ! – ಸಂಪಾದಕರು)

2. ‘ದಿ ಕಾಶ್ಮೀರ ಫೈಲ್ಸ್’ ಹೇಗಿತ್ತು ? ಇದು ಒಂದು ಸಮುದಾಯವನ್ನು ಅವಮಾನಿಸುವ ಚಿತ್ರವಾಗಿತ್ತು. (ದಿ ಕಾಶ್ಮೀರ್ ಫೈಲ್ಸ್‌ನಲ್ಲಿನ ಪ್ರತಿಯೊಂದು ಪ್ರಸಂಗವು ನೈಜ ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿದ ಘಟನೆಗಳನ್ನು ಆಧರಿಸಿದೆ. ಹಿಂದೂಗಳ ನರಮೇಧದ ಹೃದಯವಿದ್ರಾವಕ ಘಟನೆಗಳನ್ನು ತೋರಿಸುತ್ತಿರುವಾಗ ಆ ಸಂತ್ರಸ್ತ ಹಿಂದೂಗಳನ್ನು ಅವಮಾನಿಸುವ ಮೂಲಕ ಮಮತಾ ಬ್ಯಾನರ್ಜಿ ಜಿಹಾದಿ ಭಯೋತ್ಪಾದಕರನ್ನು ಬೆಂಬಲಿಸುತ್ತಿದ್ದಾರೆ, ಎಂಬುದನ್ನು ಹಿಂದೂಗಳು ಯಾವಾಗಲೂ ನೆನಪಿಟ್ಟುಕೊಳ್ಳಬೇಕು ! – ಸಂಪಾದಕರು)

3. ‘ದಿ ಕೇರಳ ಸ್ಟೋರಿ’ಯಲ್ಲೇನಿದೆ ? ಇದೊಂದು ವಿಕೃತ ಕಥೆಯಾಗಿದೆ. ನಾವು ಬಂಗಾಲದಲ್ಲಿ ಈ ಚಿತ್ರವನ್ನು ನಿಷೇಧಿಸಿದ್ದೇವೆ. ಇದು ದ್ವೇಷ ಮತ್ತು ಹಿಂಸಾಚಾರದ ಘಟನೆಗಳನ್ನು ತಡೆಗಟ್ಟಲು ಮತ್ತು ರಾಜ್ಯದಲ್ಲಿ ಶಾಂತಿ ಸ್ಥಾಪಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. (ಮಮತಾ ಬ್ಯಾನರ್ಜಿಯವರಿಗೆ ಶ್ರೀರಾಮನ ಹೆಸರನ್ನು ಹೇಳಿದರೂ ಸಹಿಸಲು ಆಗುವುದಿಲ್ಲ, ಅವರಿಗೆ ಹಿಂದೂಗಳ ಮೇಲಿನ ದೌರ್ಜನ್ಯದ ಬಗ್ಗೆ ಎಂದಿಗೂ ಸಹಾನುಭೂತಿ ಇಲ್ಲ ಎಂಬುದು ಸ್ಪಷ್ಟವಾಗಿದೆ. ಬಂಗಾಲದ ಹಿಂದೂಗಳು ಇದನ್ನು ಗಣನೆಗೆ ತೆಗೆದುಕೊಂಡು, ‘ಭವಿಷ್ಯದಲ್ಲಿ ಬಂಗಾಲವು ಕಾಶ್ಮೀರದಂತೆಯಾದರೆ ಏನಾಗಬಹುದು’, ಎಂದು ಯೋಚಿಸಿ ಈಗಲೇ ಸಂಘಟಿತರಾಗಬೇಕು ! – ಸಂಪಾದಕರು)

(ಸೌಜನ್ಯ : CAPITAL TV)

ಸಂಪಾದಕೀಯ ನಿಲುವು

ತೃಣಮೂಲ ಕಾಂಗ್ರೆಸ್ ಸರಕಾರದ ಈ ನಿರ್ಧಾರದ ವಿರುದ್ಧ ದೇಶಾದ್ಯಂತ ಧರ್ಮಾಭಿಮಾನಿ ಮತ್ತು ರಾಷ್ಟ್ರ ಪ್ರೇಮಿ ಹಿಂದೂಗಳು ಧ್ವನಿ ಎತ್ತಬೇಕು. ಇದು ಹಿಂದೂಗಳ ಮೇಲಿನ ದಬ್ಬಾಳಿಕೆಯನ್ನು ಹತ್ತಿಕ್ಕುವ ಸರ್ವಾಧಿಕಾರದ ಸ್ವರೂಪವಾಗಿದೆ. ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಕಪಟ ಆಡಳಿತಗಾರರು ಪ್ರಜಾಪ್ರಭುತ್ವಕ್ಕೆ ಮಾಡಿದ ದ್ರೋಹವಾಗಿದೆ !