ಮಧ್ಯಪ್ರದೇಶದಲ್ಲಿ ‘ದಿ ಕೇರಳ ಸ್ಟೋರಿ’ ಸಿನೆಮಾಗೆ ಟ್ಯಾಕ್ಸ್ ಫ್ರೀ !

ಭೋಪಾಳ (ಮಧ್ಯಪ್ರದೇಶ) – ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ರಾಜ್ಯದಲ್ಲಿ ಟ್ಯಾಕ್ಸ್ ಫ್ರೀ ಮಾಡಲಾಗಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಘೋಷಿಸಿದ್ದಾರೆ. ಮುಖ್ಯಮಂತ್ರ ಚೌಹಾಣ ಇವರು, ಮಕ್ಕಳು ಮತ್ತು ಅವರ ಪೋಷಕರು ಈ ಚಿತ್ರವನ್ನು ಕಡ್ಡಾಯವಾಗಿ ವೀಕ್ಷಿಸಬೇಕು. ಈ ಚಲನಚಿತ್ರವು ‘ಲವ್ ಜಿಹಾದ್’ ಮತ್ತು ಮತಾಂತರವನ್ನು ಬಹಿರಂಗಪಡಿಸುತ್ತದೆ. ಶೈಕ್ಷಣಿಕ ಭಾವನೆಯಿಂದ ಹುಡುಗಿಯರುಲವ್ ಜಿಹಾದ್‌ನಲ್ಲಿ ಹೇಗೆ ಸಿಕ್ಕಿಹಾಕಿಕೊಳ್ಳುತ್ತಾರೆ ಮತ್ತು ಅವರ ಜೀವನವು ಹೇಗೆ ನಾಶವಾಗುತ್ತದೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಇದರಲ್ಲಿ ಭಯೋತ್ಪಾದಕರ ಸಂಚು ಕೂಡ ಬಯಲಾಗಿದೆ. ರಾಜ್ಯದಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನು ಮಾಡಿದ್ದೇವೆ; ಆದರೆ ಈ ಚಲನಚಿತ್ರವು ಲವ್ ಜಿಹಾದ್ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುತ್ತಿದೆ. ಅದಕ್ಕಾಗಿಯೇ ನಾವು ಅದನ್ನು ಟ್ಯಾಕ್ಸ್ ಫ್ರೀ ಮಾಡಿದ್ದೇವೆ ಎಂದು ಹೇಳಿದರು.