‘ದ ಕೇರಳ ಸ್ಟೋರಿ’ ಸಿನೆಮಾ ಭಯೋತ್ಪಾದಕರ ಷಡ್ಯಂತ್ರದ ಕಥೆ ! – ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

ಬೆಂಗಳೂರು – ಕಳೆದ ಕೆಲವು ವರ್ಷಗಳಲ್ಲಿ ಭಯೋತ್ಪಾದಕರ ಇನ್ನೊಂದು ಭಯಾನಕ ಸ್ವರೂಪ ನಿರ್ಮಾಣವಾಗಿದೆ. ಬಾಂಬ್, ಬಂದೂಕು ಮತ್ತು ಪಿಸ್ತೂಲ್ ನ ಧ್ವನಿ ಕೇಳುತ್ತಿದ್ದೆವು; ಆದರೆ ಸಮಾಜವನ್ನು ಕೊರೆಯುವ ಭಯೋತ್ಪಾದಕರ ಷಡ್ಯಂತ್ರದ ಧ್ವನಿ ಕೇಳುವುದಿಲ್ಲ, ಇಂತಹ ಒಂದು ಷಡ್ಯಂತ್ರದ ಬಗ್ಗೆ ಮಾಹಿತಿ ನೀಡುವ ಸಿನೆಮಾ ‘ದ ಕೇರಳ ಸ್ಟೋರಿ’ ಚರ್ಚೆಯಲ್ಲಿದೆ, ಎಂದು ಹೇಳುತ್ತಾ ‘ದ ಕೇರಳ ಸ್ಟೋರಿ’ ಕೇವಲ ಒಂದು ರಾಜ್ಯದಲ್ಲಿ ನಡೆದ ಭಯೋತ್ಪಾದಕರ ಧೋರಣೆಯ ಮೇಲೆ ಆಧರಿಸಿದೆ; ಆದರೆ ಇದು ಒಂದು ರಾಜ್ಯಕ್ಕೆ ಸಂಬಂಧಿಸಿದ ಸಿನೆಮಾ ಅಲ್ಲ ಬದಲಾಗಿ ಸಂಪೂರ್ಣ ಭಯೋತ್ಪಾದಕರ ಷಡ್ಯಂತ್ರದ ಕಥೆಯಾಗಿದೆ; ಅದು ಈ ಸಿನೆಮಾ ಬಹಿರಂಗಪಡಿಸಿದೆ, ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದರು. ರಾಜ್ಯದ ವಿಧಾನಸಭಾ ಚುನಾವಣೆಯ ಪ್ರಚಾರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಕಾಂಗ್ರೆಸ್ ‘ದ ಕೇರಳ ಸ್ಟೋರಿ’ ಯನ್ನು ನಿಷೇಧ ಹೇರುವ ಪ್ರಯತ್ನದಲ್ಲಿ !

ಪ್ರಧಾನಮಂತ್ರಿ ಮೋದಿ ಮಾತು ಮುಂದುವರಿಸಿ, ಸಮಾಜವನ್ನು ನಾಶಗೊಳಿಸುವ ಭಯೋತ್ಪಾದನೆಯ ವೃತ್ತಿಯನ್ನು ಬೆಂಬಲಕ್ಕೆ ಕಾಂಗ್ರೆಸ್ ನಿಲ್ಲುತ್ತದೆ ಇದು ದೇಶಕ್ಕೆ ದುರಾದೃಷ್ಟಕರವಾಗಿದೆ. ಅಷ್ಟೇ ಅಲ್ಲದೆ, ಇಂತಹ ಭಯೋತ್ಪಾದಕ ವೃತ್ತಿಯ ಜನರ ಜೊತೆ ಕಾಂಗ್ರೆಸ್ ಕವಲು ದಾರಿಯ ರಾಜಕೀಯ ಬೇಳೆ ಬೆಳೆಸಿಕೊಳ್ಳುತ್ತಿದೆ. ರಾಜ್ಯದಲ್ಲಿನ ಜನರು ಇದಕ್ಕಾಗಿ ಕಾಂಗ್ರೆಸ್ ನಿಂದ ಜಾಗರೂಕರಾಗಿರುವ ಅವಶ್ಯಕತೆ ಇದೆ. ಈ ಜನರು ‘ದ ಕೇರಳ ಸ್ಟೋರಿ’ ಸಿನೆಮಾವನ್ನು ನಿಷೇಧಿಸುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.