ಪಾಕಿಸ್ತಾನದ ಒಂದು ಶಾಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ 7 ಜನ ಶಿಕ್ಷಕರ ಹತ್ಯೆ

ಇಸ್ಲಾಮಾಬಾದ(ಪಾಕಿಸ್ತಾನ)- ಪಾಕಿಸ್ತಾನದ ಖೈಬರ ಪಖ್ತೂನಖ್ವಾ ಪ್ರಾಂತ್ಯದ ಖುರ್ರಮ್ ಜಿಲ್ಲೆಯಲ್ಲಿ ಭಯೋತ್ಪಾದಕರು ಒಂದು ಶಾಲೆಯ ಶಿಕ್ಷಕರ ಕೋಣೆಗೆ ನುಗ್ಗಿ ನಡೆಸಿದ ಗುಂಡಿನ ದಾಳಿಯಲ್ಲಿ 7 ಜನ ಶಿಕ್ಷಕರು ಮರಣ ಹೊಂದಿದರು. ಈ ಆಕ್ರಮಣದ ಹಿಂದಿನ ಕಾರಣ ಇದುವರೆಗೂ ಸ್ಪಷ್ಟವಾಗಿಲ್ಲ. ಅಲ್ಲಿಂದ ಹತ್ತಿರದಲ್ಲಿಯೇ ನಡೆದ ಮತ್ತೊಂದು ಗುಂಡಿನ ದಾಳಿಯಲ್ಲಿ 2 ಶಿಕ್ಷಕರು ಮರಣ ಹೊಂದಿದರು. ಯಾವುದೇ ಸಂಘಟನೆಯು ಈ ಎರಡೂ ಘಟನೆಗಳ ಜವಾಬ್ದಾರಿಯನ್ನು ಹೊತ್ತುಕೊಂಡಿಲ್ಲ. ಈ ಪ್ರಕರಣ ಶಿಯಾ-ಸುನ್ನಿ ವಿವಾದಕ್ಕೆ ಸಂಬಂಧಿಸಿದೆಯೆಂದು ಹೇಳಲಾಗುತ್ತಿದೆ. ಸಾವನ್ನಪ್ಪಿದ ಎಲ್ಲ ಶಿಕ್ಷಕರು ಶಿಯಾ ಸಮುದಾಯಕ್ಕೆ ಸೇರಿದವರಾಗಿದ್ದಾರೆಂದು ಹೇಳಲಾಗುತ್ತಿದೆ.