ಕ್ರೂರಿ ಟಿಪ್ಪು ಸುಲ್ತಾನನ ಜಿಹಾದಿ ಕಟ್ಟರತೆಯ ಕುರಿತು ‘ಟಿಪ್ಪು’ ಸಿನೆಮಾ !

ಮುಂಬಯಿ – ಕರ್ನಾಟಕದ ಮೈಸೂರಿನ ಕ್ರೂರಿ ಟಿಪ್ಪು ಸುಲ್ತಾನ್‌ನಿನ ಸುಳ್ಳು ಶೌರ್ಯ, ಯುದ್ಧ ಪರಾಕ್ರಮ ಮತ್ತು ರಾಜಕೀಯ ತಂತ್ರಕ್ಕಾಗಿ ‘ಸುಲ್ತಾನ್’ ಎಂಬ ಬಿರುದನ್ನು ನೀಡಲಾಗಿತ್ತು. ಟಿಪ್ಪುವು ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಎಂದು ಪಠ್ಯಪುಸ್ತಕಗಳಲ್ಲಿ ಸುಳ್ಳು ಹೇಳಲಾಗಿದ್ದು ಆತನ ಕರಾಳ ವಾಸ್ತವತೆಯನ್ನು ಸಮಾಜದ ಮುಂದೆ ತರಬೇಕಾಗಿದೆ ಎಂದು ಮುಂಬರುವ ‘ಟಿಪ್ಪು(ದಿ ಸ್ಟೋರಿ ಆಫ್ ಅ ಫ್ಯಾನೆಟಿಕ್ ಸುತ್ಲಾನ್’)’ ಚಲನಚಿತ್ರದ ನಿರ್ಮಾಪಕ ಸಂದೀಪ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಮೇ ೪ ರಂದು ಅವರು ಟ್ವೀಟ್ ಮಾಡುವ ಮೂಲಕ ಈ ಸಿನೆಮಾದ ಬಗ್ಗೆ ಘೋಷಿಸಿದರು. ಸಿಂಗ್ ಸದ್ಯ ‘ಸ್ವಾತಂತ್ರ್ಯವೀರ್ ಸಾವರ್ಕರ್’ ಹೆಸರಿನ ಸಿನೆಮಾ ಮಾಡುತ್ತಿದ್ದಾರೆ.

೧. ಸಂದೀಪ ಸಿಂಗ್ ಮಾತನಾಡುತ್ತಾ, ‘ಟಿಪ್ಪು ಸುಲ್ತಾನ್ ಎಷ್ಟು ಕಟ್ಟರ ಮತ್ತು ಜಿಹಾದಿ ಆಗಿದ್ದ ಎಂಬುದು ಜನರಿಗೆ ತಿಳಿದಿಲ್ಲ, ಇತಿಹಾಸ ಪುಸ್ತಕಗಳು ಅವರ ಸಾಧನೆಗಳಿಂದ ತುಂಬಿವೆ; ಆದರೆ ಮುಂಬರುವ ಈ ಸಿನೆಮಾದ ಬರಹಗಾರ ರಜತ್ ಸೇಠಿ ಅವರು ಯಾವಾಗ ಈ ಸಿನೆಮಾದ ಕಥೆ ಬರೆದರು, ಆಗ ಅದನ್ನು ಓದಿದ ನಂತರ ನಾನು ಆಘಾತಕ್ಕೊಳಗಾಗಿದ್ದೆ. ಈ ಸಿನೆಮಾದ ಮೂಲಕ ಅವನ ಕರಾಳ ಇತಿಹಾಸವನ್ನು ಮುಂಬರುವ ಪೀಳಿಗೆಯು ಮುಂದೆ ತೆರೆದಿಡುವ ಅಗತ್ಯವಿದೆ’ ಎಂದು ಹೇಳಿದರು.

೨. ಈ ಸಿನೆಮಾದ ದಿನಾಂಕ, ಇದರಲ್ಲಿನ ನಟರ ಬಗ್ಗೆ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ. ಈ ಸಿನೆಮಾ ಹಿಂದಿ ಜೊತೆಗೆ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಟಿಪ್ಪು ಅಂದಿನ ಹಿಟ್ಲರ್ ! – ಚಲನಚಿತ್ರದ ನಿರ್ದೇಶಕ ಪವನ್ ಶರ್ಮಾ

ಚಲನಚಿತ್ರದ ನಿರ್ದೇಶಕ ಪವನ್ ಶರ್ಮಾ ಇವರು ಮಾತನಾಡುತ್ತಾ, ಒಬ್ಬ ಕಟ್ಟರ ಮುಸ್ಲಿಂ ರಾಜನ ರೂಪದಲ್ಲಿ ಅವನ ನೈಜತೆಯನ್ನು ನನಗೆ ತಿಳಿದಾಗ ಆಘಾತಕ್ಕೊಳಗಾಗಿ ನಿರಾಶೆಯಾಯಿತು. ಇತಿಹಾಸವನ್ನು ತಿರುಚಲಾಗಿದೆ. ಟಿಪ್ಪು ವಾಸ್ತವವಾಗಿ ಅನೇಕ ಜನರನ್ನು ಇಸ್ಲಾಂ ಧರ್ಮಕ್ಕೆ ಮತಾಂತರಿಸಿದ ಮತ್ತು ದೇವಸ್ಥಾನಗಳನ್ನು ಹಾಗೂ ಚರ್ಚ್‌ಗಳನ್ನು ನಾಶಪಡಿಸಿದನು. ಆತ ಆ ಕಾಲದ ಹಿಟ್ಲರ್‌ನಾಗಿದ್ದನು’, ಎಂದು ಹೇಳಿದರು.

ಅವನು ಕ್ರೂರ ರಾಕ್ಷಸನಾಗಿದ್ದನು ! – ಸಿನೆಮಾ ಲೇಖಕ ರಜತ್ ಸೇಠಿ

ಸಿನೆಮಾ ಲೇಖಕ ರಜತ್ ಸೇಠಿ ಇವರು ಮಾತನಾಡುತ್ತಾ, ‘ಇತಿಹಾಸ ಪುಸ್ತಕಗಳು ಮಾತ್ರವಲ್ಲದೇ ಜನಪ್ರಿಯ ಸಂಸ್ಕೃತಿ, ಸಿನೆಮಾಗಳು, ನಾಟಕಗಳು ಇತ್ಯಾದಿಗಳ ಮೂಲಕ, ಟಿಪ್ಪುವಿನ ನಿಜವಾದ ಮುಖವನ್ನು ಅತ್ಯಂತ ಕೌಶಲ್ಯದಿಂದ ಮತ್ತು ಸಮತೋಲಿತ ರೀತಿಯಲ್ಲಿ ಚಿತ್ರಿಸಲಾಗಿಲ್ಲ. ಈ ಚಲನಚಿತ್ರದ ಮೂಲಕ ಅದನ್ನು ಸುಧಾರಿಸುವ ನಮ್ಮದೊಂದು ಪ್ರಯತ್ನವಾಗಿದೆ. ಆತ ಒಬ್ಬ ಅತ್ಯಾಚಾರಿ ರಾಕ್ಷಸನಾಗಿದ್ದ. ಹಾಗಾಗಿ ಅವರ ಕರಾಳ ಕೃತ್ಯಗಳನ್ನು ಜಗತ್ತಿಗೆ ಬಹಿರಂಗಪಡಿಸಲು ಬಯಸುತ್ತೇನೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇವನಿಗೆ ‘ಸುಲ್ತಾನ್’ ಎಂದು ಕರೆಯುವ ಅರ್ಹತೆಯವನು ಅವನಿಲ್ಲ ಎಂದು ಹೇಳಿದ್ದಾರೆ.

ಟಿಪ್ಪುವಿನ ಭಯಾನಕ ವಾಸ್ತವವನ್ನು ಹೇಳುವ ವಿಡಿಯೋ ಪ್ರಸಾರ !

ನಿರ್ಮಾಪಕ ಸಂದೀಪ್ ಸಿಂಗ್ ಟ್ವೀಟ್ ಜೊತೆಗೆ ೫೦ ಸೆಕೆಂಡುಗಳ ಸಿನೆಮಾದ ವೀಡಿಯೊವನ್ನು ಸಹ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ, ‘೮ ಸಾವಿರ ದೇವಸ್ಥಾನಗಳು ಮತ್ತು ೨೭ ಚರ್ಚ್‌ಗಳನ್ನು ನಾಶಪಡಿಸಲಾಯಿತು. ೪ ಲಕ್ಷ ಹಿಂದೂಗಳನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಲಾಯಿತು ಮತ್ತು ಅವರ ಬಾಯಿಗೆ ಗೋಮಾಂಸವನ್ನು ಬಲವಂತವಾಗಿ ತುರುಕಲಾಯಿತು. ಒಂದು ಲಕ್ಷಕ್ಕೂ ಹೆಚ್ಚು ಹಿಂದೂಗಳನ್ನು ಜೈಲಿಗೆ ತಳ್ಳಲಾಯಿತು. ಕ್ಯಾಲಿಕತ್‌ನಲ್ಲಿ ೨ ಸಾವಿರ ಬ್ರಾಹ್ಮಣ ಕುಟುಂಬಗಳನ್ನು ಕೊಲ್ಲಲಾಯಿತು. ‘ಜಿಹಾದ್’ ಎಂಬ ಯುದ್ಧ ಘೋಷಣೆಯೊಂದಿಗೆ ಟಿಪ್ಪುವಿನ ಯುದ್ಧವನ್ನು ೧೭೮೩ ರಲ್ಲಿ ಪ್ರಾರಂಭಿಸಲಾಯಿತು’ ಎಂದು ತಿಳಿಸಲಾಗಿದೆ.

ಸಂಪಾದಕೀಯ ನಿಲುವು

  • ಟಿಪ್ಪು ಸುಲ್ತಾನಿನ ಕರಾಳ ಇತಿಹಾಸ ಜಗತ್ತಿನ ಮುಂದೆ ಬರಲಿದೆ, ಎಂಬ ವಿಚಾರದಿಂದ ನಸ್ರುದ್ದೀನ್ ಶಾಹ, ಜಾವೇದ್ ಅಖ್ತರ್ ಮೊದಲಾದವರಿಗೆ ಹೊಟ್ಟೆಯುರಿ ಬಂದರೆ ಇದರಲ್ಲಿ ಹೊಸದೆನಿಲ್ಲ !
  • ‘ದಿ ಕೇರಳ ಸ್ಟೋರಿ’ ಚಲನಚಿತ್ರ ಪ್ರದರ್ಶನಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಈಗ ಈ ಚಿತ್ರದ ಚಿತ್ರೀಕರಣವನ್ನೇ ಬ್ಯಾನ್ ಮಾಡಲು ಯತ್ನಿಸಿದರೆ ಆಶ್ಚರ್ಯಪಡಬೇಕಾಗಿಲ್ಲಾ !