ಭಾರತದಿಂದ ೧೪ ಮೊಬೈಲ್ ಅಪ್ಲಿಕೇಶನ್‌ಗಳ ಮೇಲೆ ನಿಷೇಧ !

ಜಿಹಾದಿ ಭಯೋತ್ಪಾದಕರಿಂದಾಗುತ್ತಿತ್ತು ಬಳಕೆ !

ನವದೆಹಲಿ : ಕೇಂದ್ರ ಸರಕಾರವು ೧೪ ಮೊಬೈಲ್ ಮೆಸೇಜಿಂಗ್ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದೆ. ಈ ಅಪ್ಲಿಕೇಶನ್‌ಗಳನ್ನು ಭಾರತದ ಜಿಹಾದಿ ಭಯೋತ್ಪಾದಕರು ಪಾಕಿಸ್ತಾನದಲ್ಲಿರುವ ತಮ್ಮ ಪ್ರಮುಖ ಭಯೋತ್ಪಾದಕರಿಂದ ಸಂದೇಶಗಳನ್ನು ಸ್ವೀಕರಿಸಲು ಬಳಸುತ್ತಿದ್ದರು. ಜಮ್ಮು ಮತ್ತು ಕಾಶ್ಮೀರದ ಭಯೋತ್ಪಾದಕ ಗುಂಪುಗಳು ಈ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದವು. ಈ ಹಿಂದೆ ಕೇಂದ್ರ ಸರಕಾರದಿಂದ ಚೀನಾದ ‘ಟಿಕ್‌ಟಾಕ್’ ಸೇರಿದಂತೆ ೨೦೦ ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳನ್ನು ನಿಷೇಧಿಸಿದೆ.