‘ಕ್ರೈಸ್ತ ಮಿಷನರಿಗಳ ಧರ್ಮಪ್ರಸಾರದಲ್ಲಿ ಅಕ್ರಮ ಏನೂ ಇಲ್ವಂತೆ !’ – ತಮಿಳುನಾಡು ದ್ರಮುಕ ಸರಕಾರ

  • ತಮಿಳುನಾಡು ದ್ರಮುಕ ಸರಕಾರದಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಮಾಣ ಪತ್ರ !

  • ಕ್ರೈಸ್ತ ಮಿಷನರಿಗಳು ತಾವು ಅಕ್ರಮವಾಗಿ ಏನನ್ನೂ ಮಾಡುತ್ತಿಲ್ಲ ಎಂದು ದಾವೆ !

(ದ್ರಮುಕ ಎಂದರೆ ದ್ರವಿಡ ಮುನ್ನೇತ್ರ ಕಳಗಂ – ದ್ರವಿಡ ಪ್ರಗತಿ ಸಂಘ)

ಚೆನ್ನೈ (ತಮಿಳುನಾಡು) – ತಮಿಳುನಾಡು ರಾಜ್ಯದಲ್ಲಿ ಹಲವು ವರ್ಷಗಳಿಂದ ಬಲವಂತದ ಮತಾಂತರದ ಘಟನೆ ನಡೆದಿಲ್ಲ. ಕ್ರೈಸ್ತ ಮಿಷನರಿಗಳ ಧರ್ಮಪ್ರಸಾರದಲ್ಲಿ ಏನೂ ಅಕ್ರಮ ಇಲ್ಲ. ಹಾಗೆ ಮಾಡಲು ಅವರು ಅಕ್ರಮ ಮಾರ್ಗಗಳನ್ನು ಆಶ್ರಯಿಸದ ಹೊರತು ಅದನ್ನು ತಪ್ಪು ಎಂದು ಕರೆಯಲಾಗುವುದಿಲ್ಲ. ಅಲ್ಲದೆ, ಜನರು ಯಾವ ಧರ್ಮವನ್ನು ಪಾಲಿಸಲು ಬಯಸಿದ್ದಾರೆಯೋ ಅದನ್ನು ಆರಿಸುವ ಹಕ್ಕಿದೆ, ಎಂದು ತಮಿಳುನಾಡಿನ ದ್ರಾವಿಡ್ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರತಿಜ್ಞಾಪತ್ರ ಸಲ್ಲಿಸಿದೆ, ಭಾಜಪದ ನಾಯಕ ಮತ್ತು ವಕೀಲ ಅಶ್ವಿನಿ ಉಪಾಧ್ಯಾಯ ಅವರು ಈ ಸಂಬಂಧ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಸರಕಾರವು ಮೇಲಿನ ನಿಲುವನ್ನು ಮಂಡಿಸಿತು.

(ಸೌಜನ್ಯ : ನ್ಯೂಸ್ 18)

೧. ನ್ಯಾಯವಾದಿ ಉಪಾಧ್ಯಾಯ ಇವರು ಬಲವಂತದ ಮತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಒತ್ತಾಯ ಮತ್ತು ಮತಾಂತರ ಮತ್ತು ಕಾನೂನು ಆಯೋಗದ ಮತಾಂತರ ವಿರೋಧಿ ಕಾನೂನಿನ ಸ್ವರೂಪ ನಿರ್ಮಿಸುವ ಬಗೆಗಿನ ಬೇಡಿಕೆಯನ್ನು ತಮಿಳುನಾಡು ಸರಕಾರ ವಿರೋಧಿಸಿದೆ.

೨. ಸರಕಾರವು, ಮತಾಂತರ ವಿರೋಧಿ ಕಾನೂನನ್ನು ಅಲ್ಪಸಂಖ್ಯಾತರ ವಿರುದ್ಧ ದುರುಪಯೋಗಪಡಿಸಿಕೊಳ್ಳುವ ಭಯವಿದೆ ಎಂದು ಹೇಳಿದೆ. ಕಳೆದ ಕೆಲವು ವರ್ಷಗಳಿಂದ ತಮಿಳುನಾಡಿನಲ್ಲಿ ಬಲವಂತದ ಮತಾಂತರದ ಘಟನೆ ನಡೆದಿಲ್ಲ. ನ್ಯಾಯವಾದಿ ಉಪಾಧ್ಯಾಯ ಅವರು ಸಲ್ಲಿಸಿರುವ ಅರ್ಜಿಯು ಕ್ರೈಸ್ತ ಧರ್ಮ ಮತ್ತು ಸಿದ್ಧಾಂತಕ್ಕೆ ವಿರುದ್ಧವಾಗಿದೆ ಎಂದು ಹೇಳಿಕೊಂಡಿದೆ.

೩. ಪ್ರತಿಜ್ಞಾಪತ್ರದಲ್ಲಿ ಸರಕಾರವು, ಭಾರತದ ಸಂವಿಧಾನದಲ್ಲಿನ ೨೫ ನೇ ವಿಧಿಯು ಪ್ರತಿಯೊಬ್ಬ ಪ್ರಜೆಗೂ ತನ್ನ ಸ್ವಂತ ಧರ್ಮವನ್ನು ಪ್ರಚಾರ ಮಾಡುವ ಹಕ್ಕನ್ನು ನೀಡುತ್ತದೆ ಇದರಿಂದ ಕ್ರೈಸ್ತ ಧರ್ಮದ ಪ್ರಸಾರ ಮಾಡುವ ಮಿಷನರಿಗಳ ಕೆಲಸವನ್ನು ಕಾನೂನಿಗೆ ವಿರುದ್ಧವಾಗಿ ನೋಡಲಾಗುವುದಿಲ್ಲ ಎಂದು ಹೇಳಿದೆ.

ಸಂಪಾದಕರ ನಿಲುವು

  • ಇದು ನಾಸ್ತಿಕ ದ್ರಮುಕ ಸರಕಾರದ ಕ್ರೈಸ್ತ ಮಿಷನರಿಯವರ ಮೇಲೆ ಇರುವ ಪ್ರೀತಿಯೇ ಅನ್ನಬೇಕು ! ದೇಶದಲ್ಲಿ ಹಿಂದೂಗಳನ್ನು ಆಮಿಷವೊಡ್ಡಿ ಬಲವಂತವಾಗಿ ಮತಾಂತರ ಮಾಡುವಲ್ಲಿ ಕ್ರೈಸ್ತ ಮಿಷನರಿಗಳು ಮುಂದಿದ್ದಾರೆ. ಕಳೆದ ೫೦ ವರ್ಷಗಳಲ್ಲಿ ಈಶಾನ್ಯ ಭಾರತವು ಬಹುಸಂಖ್ಯಾತ ಕ್ರೈಸ್ತರಾಗಿರುವುದು ಗಮನಕ್ಕೆ ಬಂದಿರುವಾಗ ‘ರಾಜ್ಯದಲ್ಲಿ ಬಲವಂತದ ಮತಾಂತರವಾಗುತ್ತಿಲ್ಲ’ ಎಂದು ಪ್ರಮಾಣವಚನದಲ್ಲಿ ಹೇಳುವುದು, ಇದು ಯಾರನ್ನೂ ಒಪ್ಪಿಸಲು ಸಾಧ್ಯವೇ ಇಲ್ಲ !
  • ನಾಳೆ ತಮಿಳುನಾಡಿನಲ್ಲಿ ಹಿಂದೂಗಳ ಸಂಘಟನೆಗಳು ಜಾಗೃತಿ ಮೂಡಿಸುವ ಮೂಲಕ ಮತಾಂತರಗೊಂಡವರನ್ನು ಮರಳಿ ಹಿಂದೂ ಧರ್ಮಕ್ಕೆ ಕರೆತರುವ ಚಳುವಳಿಯನ್ನು ಆರಂಭಿಸಿದರೆ ಮತ್ತು ಅದನ್ನು ಯಾರಾದರೂ ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ, ಅದೇ ದ್ರಮುಕ ಸರಕಾರವು ಹಿಂದೂ ಸಂಘಟನೆಗಳನ್ನು ವಿರೋಧಿಸಬಹುದು ಎಂಬುದರಲ್ಲಿ ಯಾರಿಗೂ ಅನುಮಾನವಿಲ್ಲ !