ಕುಸಿದಿರುವ ಸದ್ಯದ ಸ್ತ್ರೀಯರ ನೈತಿಕತೆ !

ಸ್ತ್ರೀಯರು ಪುರುಷರಿಗಿಂತ ಹೆಚ್ಚು ನೈತಿಕರಾಗಿರುತ್ತಾರೆ, ಇದರಲ್ಲಿ ಎರಡು ಮಾತಿಲ್ಲ; ಆದರೆ ಈಗ ಸ್ತ್ರೀಯರಲ್ಲಿ ಈ ನೈತಿಕತೆಯು ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತಿರುವ ದಯನೀಯ ಮತ್ತು ಮನಸ್ಸನ್ನು ಸ್ತಬ್ಧಗೊಳಿಸುವ ದೃಶ್ಯ ಕಂಡುಬರುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಪ್ರಿಯಕರನೊಂದಿಗೆ ನಾಚಿಕೆಯಿಲ್ಲದೇ ಪ್ರೇಮದಿಂದ ಮಾತನಾಡುವುದು, ವಿವಾಹದ ಮೊದಲು ದೈಹಿಕ ಸಂಬಂಧವನ್ನಿಡುವುದು, ‘ಬಾಯ ಫ್ರೆಂಡ್ನೊಂದಿಗೆ ನಿರ್ಭಯದಿಂದ ರಾತ್ರಿ-ಅಪರಾತ್ರಿ ತಿರುಗಾಡುವುದು, ತಂದೆ-ತಾಯಿಗೆ ತಿಳಿಯದಂತೆ ‘ಲಿವ್-ಇನ್- ರಿಲೇಶನಶಿಪ್ ನಲ್ಲಿ ಇರುವುದು. ಮನೆಯಿಂದ ಓಡಿ ಹೋಗಲು ಹಿಂದೆಮುಂದೆ ನೋಡದಿರುವುದು ಮೊದಲಾದವುಗಳ ಪ್ರಮಾಣವು ಯುವತಿಯರಲ್ಲಿ ಬಹಳ ಹೆಚ್ಚಾಗಿವೆ. ಪತಿಯಿಂದ ಮಕ್ಕಳಾಗಿದ್ದರೂ ಪ್ರಿಯಕರನೊಂದಿಗೆ ಓಡಿ ಹೋಗುವುದು, ಪ್ರಸಂಗ ಬಂದರೆ ಪ್ರಿಯಕರನ ಸಹಾಯದಿಂದ ಪತಿಯ ಕೊಲೆಯನ್ನೂ ಮಾಡುವುದು. ಇವುಗಳ ಹೆಚ್ಚುತ್ತಿರುವ ಪ್ರಮಾಣವನ್ನು ನೋಡಿದರೆ, ಸ್ತ್ರೀಯರು ತಮಗೆ ಜನ್ಮದಿಂದ ಬಂದಿರುವ ನೈತಿಕತೆಯಿಂದ ಉದ್ದೇಶಪೂರ್ವಕವಾಗಿ ದೂರ ಹೋಗುತ್ತಿರುವುದು ಕಂಡುಬರುತ್ತಿದೆ.

ಈಗ ಪುರುಷರಂತೆ ಅಧಿಕಾರಿ ಪದವಿಯಲ್ಲಿರುವ ಮಹಿಳೆಯರೂ ಲಂಚ ತೆಗೆದುಕೊಳ್ಳುತ್ತಿದ್ದಾರೆ. ಲಂಚವನ್ನು ತೆಗೆದುಕೊಳ್ಳುತ್ತಿರುವಾಗ ಅನೇಕ ಮಹಿಳೆಯರು ಸಿಕ್ಕಿಬಿದ್ದ ಅನೇಕ ಉದಾಹರಣೆಗಳಿವೆ. ಇಂತಹ ಸ್ತ್ರೀಯರು ತಮ್ಮ ಮಕ್ಕಳಲ್ಲಿ ಸುಸಂಸ್ಕಾರವನ್ನು ಮೂಡಿಸುವ ಅಪೇಕ್ಷೆಯನ್ನು ಇಡಬಹುದೇ ? ಒಂದು ಸಮೀಕ್ಷೆಯಲ್ಲಿ ಭಾರತೀಯ ಯುವತಿಯರಲ್ಲಿ ಮಾದಕ ದ್ರವ್ಯಸೇವನೆಯ ಪ್ರಮಾಣವೂ ಹೆಚ್ಚುತ್ತಿರುವುದು ಕಂಡುಬಂದಿದೆ. ವಿಶೇಷವಾಗಿ ನೌಕರಿ ಮಾಡುವ ಮಹಿಳೆಯರು ಮತ್ತು ಅಗರ್ಭ ಶ್ರೀಮಂತರ ಮನೆಯಲ್ಲಿನ ಹುಡುಗಿಯರಲ್ಲಿ ಈ ಪ್ರಮಾಣವು ಹೆಚ್ಚು ಕಂಡುಬಂದಿದೆ. ಪಬ್ ಅಥವಾ ರೇವ್ ಪಾರ್ಟಿಗಳ ಮೇಲೆ ಪೋಲಿಸರ ಆಕ್ರಮಣವಾದಾಗ ಮೈಮೇಲಿನ ತುಂಡು ಬಟ್ಟೆಗಳಲ್ಲಿ ಸರಾಯಿ ಅಥವಾ ಅಮಲು ಪದಾರ್ಥಗಳ ಗುಂಗಿನಲ್ಲಿ ಮೈಮರೆತು ಕುಣಿಯುತ್ತಿರುವ ಯುವತಿಯರ ಪ್ರಮಾಣವು ಯುವಕರಷ್ಟೇ ಕಂಡುಬಂದಿದೆ. ಹೊಸರೂಢಿ (ಫ್ಯಾಶನ್), ದುಃಸಂಗ. ಅತೀಹಣ, ಸಂಸ್ಕಾರ ಮತ್ತು ಪ್ರೇಮ ಇವುಗಳ ಅಭಾವದಿಂದಾಗಿ ಬಂದಿರುವ ನಿರಾಶೆ ಇತ್ಯಾದಿ ಅನೇಕ ಕಾರಣಗಳು ಹುಡುಗಿಯರ ಈ ವ್ಯಸನಕ್ಕೆ ಕಾರಣವಾಗಿವೆ.

ಭಾರತೀಯ ಸ್ತ್ರೀಯರ ಅಧಃಪತನದ ಈ ಕಥೆ ಮುಗಿಯುವಂತಹದ್ದಲ್ಲ; ಅವಳ ಈ ಅಧಃಪತನವನ್ನು ನೋಡಿ ‘ಯಾರಾಗಿದ್ದೆ ನೀನು, ಏನಾದೆ ನೀನು ? ಎಂಬ ಒಂದು ಪ್ರಶ್ನೆ ಸಹಜವಾಗಿಯೇ ಮನಸ್ಸಿನಲ್ಲಿ ಮೂಡುತ್ತದೆ ಮತ್ತು ಸಂವೇದನಾಶೀಲ ಮನಸ್ಸು ಅಸ್ವಸ್ಥವಾಗುತ್ತದೆ .