ಆದಿಶಕ್ತಿಗೆ ಸಲ್ಲಿಸುವ ಪ್ರಾರ್ಥನೆ !
‘ಹೇ ಭವಾನಿಮಾತೆ, ನೀನಿಲ್ಲದೇ ನಾನು ನಿರಾಶ್ರಿತನಾಗಿದ್ದೇನೆ. ನಿನ್ನ ಪ್ರೀತಿಯಲ್ಲಿರುವ ವಾತ್ಸಲ್ಯವು ಈ ಜಗತ್ತಿನಲ್ಲಿ ಯಾವುದೇ ವಿಷಯದಲ್ಲಿ ಅನುಭವಿಸಲು ಸಿಗುವುದಿಲ್ಲ. ನಿನ್ನ ಪ್ರೀತಿಯಿಲ್ಲದಿದ್ದರೆ ನನ್ನ ಜೀವನವೇ ವ್ಯರ್ಥವಾಗುವುದು. ಹೇ ಭವಾನಿಮಾತೆ, ನನ್ನ ಜನ್ಮವೂ ನಿನ್ನ ಕೃಪಾಶೀರ್ವಾದದಿಂದಾಗಿಯೇ ಆಗಿದೆ. ಒಂದು ಹೆಣ್ಣಿನ ದುಃಖವನ್ನು ನೀನೇ ತಿಳಿದುಕೊಳ್ಳಬಲ್ಲೆ; ಏಕೆಂದರೆ ಪ್ರತಿಯೊಬ್ಬ ಸ್ತ್ರೀಯು ನಿನ್ನದೇ ಅಂಶ, ನಿನ್ನದೇ ರೂಪವಾಗಿರುವುದರಿಂದ ಅವಳ ದುಃಖವನ್ನು ತಿಳಿದುಕೊಳ್ಳುವ ಕ್ಷಮತೆ ಕೇವಲ ನಿನ್ನಲ್ಲಿ ಮಾತ್ರ ಇದೆ. ಪ್ರತಿಯೊಬ್ಬ ಸ್ತ್ರೀಯಲ್ಲಿ ನಿನ್ನದೇ ವಾಸ್ತವ್ಯವಿರುವುದರಿಂದ ತ್ಯಾಗವನ್ನು ಮಾಡುವ ಕ್ಷಮತೆಯು ಅವಳಲ್ಲಿ ಅಧಿಕವಾಗಿರುತ್ತದೆ. ಹೇ ಮಾತೆ, ಪ್ರತಿಯೊಬ್ಬ ಸ್ತ್ರೀಗೆ ಈ ಕ್ಷಮತೆಯು ನಿನ್ನಿಂದಲೇ ಪ್ರಾಪ್ತವಾಗುತ್ತಿರುತ್ತದೆ. ಜಗತ್ತಿನ ಕಾರ್ಯವು ಸರಿಯಾಗಿ ನಡೆಯಲು ಶ್ರೀವಿಷ್ಣುವಿಗೆ ಆದಿಶಕ್ತಿಯ ಅವಶ್ಯಕತೆ ಇರುತ್ತದೆ. ನಿನ್ನ ಹೊರತು ಜಗತ್ತಿನ ಕಾರ್ಯವು ಪೂರ್ತಿಯಾಗಲು ಸಾಧ್ಯವಿಲ್ಲ.
ಮಾತೇ, ಜಗತ್ತಿನ ಕಾರ್ಯಕ್ಕಾಗಿ, ಅಂದರೆ ಉತ್ಪತ್ತಿಗಾಗಿ ನಿನ್ನ ಶಕ್ತಿರೂಪದಲ್ಲಿನ ತತ್ತ್ವದ ಅವಶ್ಯಕತೆಯು ಇದ್ದೇ ಇರುತ್ತದೆ. ‘ಜಗಜ್ಜನನಿ ಆಗಿರುವುದರಿಂದ ಕುಲದ ಉದ್ಧಾರಕ್ಕಾಗಿ ನೀನು ಪ್ರತಿಯೊಬ್ಬ ಸ್ತ್ರೀಗೆ ಶಕ್ತಿ ಕೊಡುತ್ತಿರುವೆ. ಹೇ ಭವಾನಿಮಾತೆ, ಪ್ರತಿಯೊಬ್ಬ ಸ್ತ್ರೀಯಲ್ಲಿ ನಿನ್ನ ವಾಸ್ತವ್ಯವು ಇರುವುದರಿಂದ ಬಾಲ್ಯದಿಂದ ವೃದ್ಧಾವಸ್ಥೆಯ ವರೆಗೂ ಆಂತರಿಕ ವಿಚಾರಪ್ರಕ್ರಿಯೆಯಲ್ಲಾಗುವ ಬದಲಾವಣೆಯು ಕೇವಲ ನಿನ್ನಿಂದಾಗಿಯೇ; ಏಕೆಂದರೆ ಪ್ರತಿಯೊಂದು ಸ್ತ್ರೀಯರಲ್ಲಿ ನಿನ್ನ ಪ್ರಕಟ-ಅಪ್ರಕಟ ಶಕ್ತಿಯು ಅಂತರ್ಮನಸ್ಸಿನಿಂದ ಸ್ತ್ರೀರೂಪವನ್ನು ಸಿದ್ಧಗೊಳಿಸುತ್ತಿರುತ್ತದೆ. ಆದುದರಿಂದ ಸಂಘರ್ಷ ಮತ್ತು ತ್ಯಾಗ ಮಾಡಿ ಒಂದು ಕುಟುಂಬದ ಕುಲದ ಉದ್ಧಾರ ಮಾಡಲು ಅವಳಿಗೆ ಯಶಸ್ಸು ಸಿಗುತ್ತದೆ. ಪ್ರತಿಯೊಂದು ಕುಲದ ಉದ್ಧಾರಕ್ಕಾಗಿ ಕುಲದೇವಿಯ ಅವಶ್ಯಕತೆಯಿರುತ್ತದೆ.
ಹೇ ಮಾತೆ, ನೀನೇ ನಮ್ಮಲ್ಲಿನ ದೇವಿತತ್ತ್ವವನ್ನು ಜಾಗೃತ ಗೊಳಿಸು. ನಮಗೆ ಶಕ್ತಿಯನ್ನು ಪ್ರದಾನಿಸು ಮತ್ತು ಈ ಸ್ತ್ರೀಜನ್ಮವು ಸಫಲವಾಗಲು ನಮ್ಮಿಂದ ಸಾಧನೆಯನ್ನು ಮಾಡಿಸು !
– ಓರ್ವ ಸಾಧಕಿ
ಸ್ತ್ರೀಯರೇ, ಸ್ವತಃದಲ್ಲಿನ ದೇವಿತತ್ತ್ವವನ್ನು ಜಾಗೃತಗೊಳಿಸಲು ಧರ್ಮಾಚರಣೆ ಮತ್ತು ಸಾಧನೆಯನ್ನು ಮಾಡಿ !
ಸ್ತ್ರೀಯು ಮನೆಯಲ್ಲಿನ ಚೈತನ್ಯವಾಗಿರುವಳು. ಅವಳಿಲ್ಲದ ಮನೆಯು ಖಾಲಿಖಾಲಿ ಎನಿಸುತ್ತದೆ. ಮನೆಯಲ್ಲಿ ಸ್ತ್ರೀ ಇದ್ದರೆ, ಆ ಮನೆಯು ತುಂಬಿದಂತೆ ಎನಿಸುತ್ತದೆ. ಅದರ ಹಿಂದಿನ ಕಾರಣವೆಂದರೆ, ಅವಳಲ್ಲಿನ ಪ್ರಕಟ-ಅಪ್ರಕಟ ಶಕ್ತಿಯಿಂದಾಗಿ ದೇವಿಯ ಅಸ್ತಿತ್ವದ ಅರಿವಾಗಿ ಮನೆಯಲ್ಲಿ ಶಾಂತಿ ಎನಿಸುತ್ತದೆ.
ಪ್ರತಿಯೊಬ್ಬ ಸ್ತ್ರೀಯರಲ್ಲಿ ದೇವಿತತ್ತ್ವವು ಇರುತ್ತದೆ. ಪ್ರತಿಯೊಬ್ಬ ಸ್ತ್ರೀಯು ತನ್ನಲ್ಲಿನ ದೇವಿಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹಿಂದೂ ಸಂಸ್ಕೃತಿಯಂತೆ ಆಚರಣೆ ಮಾಡಬೇಕು. ದೇವಿಯ ಆರಾಧನೆಯಿಂದ ತನ್ನಲ್ಲಿನ ದೇವಿತತ್ತ್ವವನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು. – ಓರ್ವ ಸಾಧಕಿ