ಸ್ತ್ರೀಯರು ಅಂತ್ಯಸಂಸ್ಕಾರವನ್ನು ಏಕೆ ಮಾಡಬಾರದು ? 

ಪುತ್ರಸಂತಾನವಿಲ್ಲದ ವ್ಯಕ್ತಿಯೊಬ್ಬನು ಮೃತಪಟ್ಟಿದ್ದರೆ, ಅವನ ಕುಲದ ಯಾವುದಾದರೊಬ್ಬ ಪುರುಷನು ಅವನ ಅಂತ್ಯ ಸಂಸ್ಕಾರ ಮಾಡಬಹುದು. ಸ್ತ್ರೀಯರಿಗೆ ಅಂತ್ಯಸಂಸ್ಕಾರದ ಅಧಿಕಾರವಿಲ್ಲ; ಆದರೆ ಅದಕ್ಕೂ ಕೆಲವು ಅಪವಾದಗಳಿವೆ. ಉದಾಹರಣೆಗೆ ನೈಸರ್ಗಿಕ ಆಪತ್ತು ಅಥವಾ ಯುದ್ಧ ಇವುಗಳಿಂದ ಇಡೀ ಕುಲವೇ ನಾಶವಾಗಿದ್ದರೆ ಅಥವಾ ಕುಲದಲ್ಲಿನ ಪುರುಷ ವ್ಯಕ್ತಿ ದೂರದೇಶದಲ್ಲಿದ್ದರೆ, ಪತ್ನಿ ಮತ್ತು ಕುಟುಂಬದ ಇತರ ಸ್ತ್ರೀಯರಿಗೆ ಶಾಸ್ತ್ರವು ಅಂತ್ಯಸಂಸ್ಕಾರದ ಅಧಿಕಾರವನ್ನು ನೀಡಿದೆ. ಧರ್ಮಶಾಸ್ತ್ರಕ್ಕನುಸಾರ ಸ್ತ್ರೀಯರಿಗೆ ಮಂತ್ರಪಠಣದ ಅಧಿಕಾರವಿಲ್ಲ. ಸ್ತ್ರೀಯರ ಜನನೇಂದ್ರಿಯಗಳು ಕಿಬ್ಬೊಟ್ಟೆಯಲ್ಲಿರುತ್ತವೆ. ಮಂತ್ರಗಳನ್ನು ಉಚ್ಚರಿಸುವುದರಿಂದ ಅವಳ ಸಂತಾನೋತ್ಪತ್ತಿಯ ಕ್ಷಮತೆಯ ಮೇಲೆ ವಿಪರೀತ ಪರಿಣಾಮವಾಗಬಹುದು. ಆದುದರಿಂದ ‘ಅವಳು ಮಂತ್ರ ಪಠಿಸಬಾರದು, ಎನ್ನಲಾಗಿದೆ. ಹಿಂದಿನ ಕಾಲದಲ್ಲಿ ಮೈತ್ರೇಯಿ, ಗಾರ್ಗಿ ಇವರು ವೇದಪಠಣವನ್ನು ಮಾಡುತ್ತಿದ್ದರು; ಆದರೆ ಪೌರೋಹಿತ್ಯ ಸ್ವೀಕರಿಸುತ್ತಿರಲಿಲ್ಲ. ಅಂತ್ಯ ಸಂಸ್ಕಾರದ ವೇಳೆ ಮಂತ್ರಾಗ್ನಿ ಕೊಡುವಾಗ, ಮಂತ್ರೋಚ್ಚಾರಗಳಿರುತ್ತವೆ. ಅವುಗಳ ತೊಂದರೆಯು ಸ್ತ್ರೀಯರಿಗೆ ಆಗಬಾರದೆಂದು ಸ್ತ್ರೀಯರು ಮಂತ್ರಾಗ್ನಿ ಕೊಡಬಾರದು. (ದೈನಿಕ ಸನಾತನ ಪ್ರಭಾತ)

ಸ್ತ್ರೀಯರು ಸ್ಮಶಾನಕ್ಕೆ ಯಾಕೆ ಹೋಗಬಾರದು !

‘ಸ್ತ್ರೀಯರಲ್ಲಿ ಸಂತಾನೋತ್ಪತ್ತಿಯ ಕ್ಷಮತೆ ಇದ್ದು ಸಂತಾನೋತ್ಪತ್ತಿಯ ಪ್ರತೀಕವಾಗಿರುತ್ತಾರೆ. ಸ್ಮಶಾನದಲ್ಲಿ ಸದಾಲಯದ ಸ್ಪಂದನಗಳು ಕಾರ್ಯನಿರತವಾಗಿರುತ್ತವೆ. ಆದುದರಿಂದ ಅವರ ಸಂತಾನೋತ್ಪತ್ತಿಯ ಕ್ಷಮತೆಯ ಮೇಲೆ ಆ ಲಯದ ಸ್ಪಂದನಗಳ ವಿಪರೀತ ಪರಿಣಾಮವಾಗುವ ಸಾಧ್ಯತೆಯಿರುತ್ತದೆ. ಸ್ತ್ರೀಯರು ಸಂವೇದನಾಶೀಲರಾಗಿರುತ್ತಾರೆ. ಅದರಿಂದ ಮತ್ತು ಸ್ಮಶಾನದಲ್ಲಿ ತೊಂದರೆದಾಯಕ ಶಕ್ತಿಗಳು ಇರುವ ಸಾಧ್ಯತೆ ಇರುವುದರಿಂದ ಅವುಗಳಿಂದಲೂ ಸ್ತ್ರೀಯರ ಮೇಲೆ ಪರಿಣಾಮ ವಾಗುತ್ತದೆ. ಹಾಗಾಗಿ ‘ಸ್ತ್ರೀಯರು ಸ್ಮಶಾನಕ್ಕೆ ಹೋಗಬಾರದು.