ಅತ್ರಿ ನಾಡಿಭವಿಷ್ಯದಲ್ಲಿ, ‘ಹಿಂದೂ ರಾಷ್ಟ್ರದ ಸಂದರ್ಭದಲ್ಲಿ ಮುಂದಿನ ಆಂದೋಲನಗಳಲ್ಲಿ (ಚಳುವಳಿಯಲ್ಲಿ) ಪುರುಷರಿಗಿಂತ ಸ್ತ್ರೀಯರ ಸಹಭಾಗವೇ ಹೆಚ್ಚು ಪ್ರಮಾಣದಲ್ಲಿರುವುದು. ಸ್ತ್ರೀಯರೇ ಕ್ರಾಂತಿಯನ್ನು ಮಾಡುವರು ! ಎಂದು ಹೇಳಿದೆ. – ಅತ್ರಿ ನಾಡಿವಾಚಕರು ಶ್ರೀ. ವಿ. ಮುದಲಿಯಾರ (ಮಾಘ ಕೃಷ್ಣ ಪಕ್ಷ ತೃತಿಯ, ಕಲಿಯುಗ ವರ್ಷ ೫೧೧೪ (೨೮.೨.೨೦೧೩))
ಕ್ರಾಂತಿಯಲ್ಲಿ ಪುರುಷರ ತುಲನೆಯಲ್ಲಿ ಸ್ತ್ರೀಯರ ಸಹಭಾಗವು ಗಮನಾರ್ಹವಾಗಿರುವುದು !
೧. ಸ್ತ್ರೀಯರು ಭಾವನಾಪ್ರಧಾನರಾಗಿರುವುದರಿಂದ ಅವರ ಭಾವನೆಗಳು ಬೇಗನೇ ಉದ್ರೇಕಗೊಳ್ಳುತ್ತವೆ : ಸ್ತ್ರೀಯರಲ್ಲಿ ಭಾವನೆ ಅಧಿಕವಾಗಿರುವುದರಿಂದ ಕ್ರಾಂತಿಗಾಗಿ ಅವಶ್ಯಕವಿರುವ ಭಾವನೆಯ ಉದ್ರೇಕವು ಮೊದಲು ಸ್ತ್ರೀಯರಲ್ಲಿ ಆಗಲಿದೆ
೨. ಕಾಲಕ್ಕನುಸಾರ ಸ್ತ್ರೀಶಕ್ತಿಯು ಜಾಗೃತಗೊಳ್ಳಲಿರುವುದು : ಸ್ತ್ರೀಯರಲ್ಲಿ ಶ್ರೀ ದುರ್ಗಾದೇವಿಯ ಶಕ್ತಿಯು ಸುಪ್ತಾವಸ್ಥೆಯಲ್ಲಿರುವುದರಿಂದ ಅವರು ಸೌಮ್ಯ ರೂಪದಲ್ಲಿ ವ್ಯವಹರಿಸುತ್ತಾರೆ. ಕಾಲಕ್ಕನುಸಾರ ಸ್ತ್ರೀಶಕ್ತಿಯು ಜಾಗೃತಗೊಳ್ಳಲಿದೆ. ಆಗ ಸ್ತ್ರೀಯರಲ್ಲಿ ಅಡಗಿದ ಶ್ರೀದುರ್ಗಾದೇವಿಯ ಶಕ್ತಿಯು ಜಾಗೃತವಾಗಿ ಕಾರ್ಯನಿರತವಾಗುತ್ತದೆ, ಆಗ ಸ್ತ್ರೀಯರ ರೂಪವು ಉಗ್ರವಾಗುತ್ತದೆ. ಈ ಉಗ್ರ ರೂಪದಿಂದ ಕಾಲಕ್ಕನುಸಾರ ಅವಶ್ಯಕ ವಿರುವ ಕ್ಷಾತ್ರಧರ್ಮ ಸಾಧನೆಯಾಗುವುದು.
೩. ಆತ್ಮಶಕ್ತಿಯು ಜಾಗೃತಗೊಂಡಿರುವ ಸ್ತ್ರೀಯರೇ ಕ್ರಾಂತಿಯನ್ನು ಮಾಡಲು ಸಾಧ್ಯ : ಸ್ತ್ರೀಯರ ತುಲನೆಯಲ್ಲಿ ಪುರುಷರು ಧರ್ಮಾಚರಣೆಯನ್ನು ಮಾಡುವ ಪ್ರಮಾಣ ಕಡಿಮೆಯಿರುವುದರಿಂದ ಅವರ ಆತ್ಮಶಕ್ತಿಯು ಜಾಗೃತವಾಗುವುದಿಲ್ಲ. ಸ್ತ್ರೀಯರು ಧರ್ಮಾಚರಣೆಯನ್ನು ಮಾಡುತ್ತಿರುವುದರಿಂದ ಅವರ ಆತ್ಮಶಕ್ತಿಯು ಜಾಗೃತಗೊಳ್ಳುತ್ತದೆ. ಧರ್ಮಾಚರಣೆಯಿಂದ ಆತ್ಮಶಕ್ತಿಯು ಜಾಗೃತಗೊಂಡಿರುವ ಸ್ತ್ರೀಯರೇ ಕ್ರಾಂತಿಯನ್ನು ಮಾಡಲು ಸಾಧ್ಯ.
ಆದುದರಿಂದ ಪುರುಷರ ತುಲನೆಯಲ್ಲಿ ಸ್ತ್ರೀಯರ ಸಹಭಾಗವು ಕ್ರಾಂತಿಯಲ್ಲಿ ಗಮನಾರ್ಹವಾಗಿರುವುದು ಅಥವಾ ಸ್ತ್ರೀಶಕ್ತಿಯೇ ಕ್ರಾಂತಿ ಮಾಡುತ್ತದೆ.
– (ಪರಾತ್ಪರ ಗುರು) ಡಾ. ಆಠವಲೆ