`ಸಂಘ ಪರಿವಾರದ ರಾಜಕೀಯ ಲಾಭಕ್ಕಾಗಿ `ದಿ ಕೇರಳ ಸ್ಟೋರಿ’ ಸಿನೆಮಾ ಮಾಡಿದ್ದಾರಂತೆ – ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್

ಕೇರಳ ಮುಖ್ಯಮಂತ್ರಿ ವಿಜಯನ್ ಇವರ ಹುರುಳಿಲ್ಲದ ಆರೋಪ

ತಿರುವನಂತಪುರಮ್ (ಕೇರಳ) – ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇವರು ಕೇರಳ ರಾಜ್ಯದ ಕ್ರೈಸ್ತ ಮತ್ತು ಹಿಂದೂ ಯುವತಿಯರ ಸಂದರ್ಭದಲ್ಲಿ ನಿರ್ಮಿಸಿದ `ದಿ ಕೇರಳ ಸ್ಟೋರಿ’ ಈ ಹಿಂದಿ ಸಿನೆಮಾಗೆ `ಸಂಘ ಪರಿವಾರಕ್ಕೆ ಚುನಾವಣೆಯಲ್ಲಿ ರಾಜಕೀಯ ಲಾಭ ದೊರೆಯಬೇಕೆಂದು ನಿರ್ಮಿಸಲಾಗಿರುವ ಪ್ರಚಾರದ ಸಿನೆಮಾ’ ಎಂದು ಹೇಳಿ ಟೀಕಿಸಿದ್ದಾರೆ.

ಮುಖ್ಯಮಂತ್ರಿ ವಿಜಯನ್ ಮಾತನಾಡುತ್ತಾ,

1. ಧಾರ್ಮಿಕ ಧ್ರುವೀಕರಣದ ಉದ್ದೇಶದಿಂದ ಮತ್ತು ಕೇರಳದ ವಿರುದ್ಧ ದ್ವೇಷ ಹರಡಲು ಉದ್ದೇಶಪೂರ್ವಕವಾಗಿ `ದಿ ಕೇರಳ ಸ್ಟೋರಿ’ ಸಿನೆಮಾ ಮಾಡಲಾಗಿದೆ ಎನ್ನುವುದು ಅದರ ಟ್ರೇಲರ (ಚಲನಚಿತ್ರದ ಜಾಹೀರಾತು) ನೋಡಿ ಅರಿವಾಗುತ್ತದೆ. ಈ ಸಿನೆಮಾ ಜಾತ್ಯತೀತದ ಭೂಮಿಯಾಗಿರುವ ಕೇರಳದಲ್ಲಿ ಸಂಘ ಪರಿವಾರವನ್ನು ಪ್ರಚಾರ ಮಾಡುವಂತಹದ್ದಾಗಿದೆ. ಈ ಸಿನೆಮಾಗೆ ಭಾಜಪ ಮತ್ತು ಸಂಘದ ವೈಚಾರಿಕ ಬೆಂಬಲವಿದೆ.

2. ಕೇರಳದ ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯಲು ಸಂಘ ಪರಿವಾರದಿಂದ ವಿವಿಧ ಪ್ರಯತ್ನಗಳ ಹಿನ್ನೆಲೆಯಲ್ಲಿ ಇದು ಪ್ರಚಾರದ ಸಿನೆಮಾ ಆಗಿದೆ. ಇದು `ಲವ್ ಜಿಹಾದ ಅಸ್ತಿತ್ವದಲ್ಲಿದೆ’ ಎನ್ನುವ ಆರೋಪವನ್ನು ಪ್ರಬಲಗೊಳಿಸಲು ನಡೆಸಲಾಗುತ್ತಿರುವ ಕಾರ್ಯಗಳ ಪೈಕಿ ಇದು ಒಂದು ಭಾಗವಾಗಿದೆ.

(ಸೌಜನ್ಯ : ನ್ಯೂಸ್ 18)

3. `ಲವ್ ಜಿಹಾದ’ ಅನ್ನು ಈ ಹಿಂದೆ ತನಿಖಾ ದಳ, ನ್ಯಾಯಾಲಯ ಮತ್ತು ಕೇಂದ್ರೀಯ ಗೃಹ ಸಚಿವಾಲಯಗಳು ತಿರಸ್ಕರಿಸಿವೆ. ಆಗಿನ ಗೃಹ ರಾಜ್ಯ ಸಚಿವರಾಗಿದ್ದ ಜಿ. ಕಿಶನ ರೆಡ್ಡಿಯವರೀಗ ಕ್ಯಾಬಿನೆಟ ದರ್ಜೆಯ ಸಚಿವರಾಗಿದ್ದಾರೆ. ಅವರು ಸಂಸತ್ತಿನಲ್ಲಿ ಲಿಖಿತ ಉತ್ತರದಲ್ಲಿ `ಲವ್ ಜಿಹಾದ’ ಹೆಸರಿನ ಯಾವುದೇ ವಿಷಯ ಅಸ್ತಿತ್ವದಲ್ಲಿ ಇಲ್ಲ’. ಎಂದು ತಿಳಿಸಿದ್ದರು.

4. ಯಾವುದೇ ದಾಖಲೆಗಳು ಇಲ್ಲದೇ ಇರುವಾಗ ಸಂಘ ಪರಿವಾರ `ಲವ್ ಜಿಹಾದ’ ಇದೆಯೆಂದು ಮಿಥ್ಯಾರೋಪ ಮಾಡುತ್ತಿದೆ. ಕೇರಳದಲ್ಲಿ 32 ಸಾವಿರ ಮಹಿಳೆಯರು ಇಸ್ಲಾಮಿಕ ಸ್ಟೇಟನಲ್ಲಿ ಸಹಭಾಗಿಗಳಾಗಿದ್ದಾರೆ ಎನ್ನುವ ದೊಡ್ಡ ಅಸತ್ಯವನ್ನು ನಾವು ಈ ಚಲನಚಿತ್ರದ ಟ್ರೇಲರ್ ನಲ್ಲಿ ನೋಡಿದ್ದೇವೆ. ಈ ಸುಳ್ಳು ವಿಷಯವು ಸಂಘ ಪರಿವಾರದ ಅಸತ್ಯವನ್ನು ಆಧರಿಸಿರುವ ಕಾರ್ಖಾನೆಯ ಉತ್ಪಾದನೆಯಾಗಿದೆ ಎಂದು ಹೇಳಿದರು.

ಸಂಪಾದಕರ ನಿಲುವು

`ದಿ ಕೇರಳ ಸ್ಟೋರಿ’ ಸಿನೆಮಾ ಸತ್ಯ ಘಟನೆಯನ್ನು ಆಧರಿಸಿದೆ ಮತ್ತು ಅದರಿಂದ ಕೇರಳದ ಸತ್ಯ ಸ್ಥಿತಿ ಸಂಪೂರ್ಣ ಜಗತ್ತಿಗೆ ತಿಳಿಯಲಿರುವ ಕಾರಣದಿಂದ ಕೇರಳದ ಕಮ್ಯುನಿಸ್ಟ ಸರಕಾರ ಹೆದರಿದ್ದಾರೆ ಆದ್ದರಿಂದ ಮುಖ್ಯಮಂತ್ರಿಗಳು ಈ ರೀತಿ ಟೀಕಿಸುತ್ತಿದ್ದಾರೆಂದು ಗಮನಿಸಬೇಕು !

ಕೇರಳದ `ಲವ್ ಜಿಹಾದ’ನಲ್ಲಿ ಸಿಲುಕಿರುವ ಹಿಂದೂ ಮತ್ತು ಕ್ರೈಸ್ತ ಹುಡುಗಿಯರು ಸಿರಿಯಾದಂತಹ ದೇಶಗಳಿಗೆ ತಲುಪಿರುವುದು ಸತ್ಯವಿರುವಾಗ ಅದನ್ನು ಅಸತ್ಯವೆಂದು ಹೇಳುವ ಒಂದು ರಾಜ್ಯದ ಮುಖ್ಯಮಂತ್ರಿಗಳು ಪ್ರಜಾಪ್ರಭುತ್ವಕ್ಕೆ ಅಪಕೀರ್ತಿ ತರುತ್ತಾರೆ !