`ದಿ ಕೇರಳ ಸ್ಟೋರಿ’ ಚಲನಚಿತ್ರಕ್ಕೆ ವ್ಯಕ್ತವಾಗುತ್ತಿರುವ ವಿರೋಧದ ಹಿನ್ನೆಲೆಯಲ್ಲಿ ನಟಿ ಅದಾ ಶರ್ಮಾ ಇವರ ಸವಾಲು
ಮುಂಬಯಿ – ನಮ್ಮ ಚಲನಚಿತ್ರ ಯಾವುದೇ ಧರ್ಮವನ್ನು ವಿರೋಧಿಸುವುದಿಲ್ಲ; ಆದರೆ ಅದರಲ್ಲಿ ಭಯೋತ್ಪಾದಕ ಸಂಘಟನೆಯ ವಿಷಯದಲ್ಲಿ ಖಂಡಿತವಾಗಿಯೂ ವ್ಯಾಖ್ಯಾನಿಸಲಾಗಿದೆ. ನಮ್ಮ ಚಲನಚಿತ್ರದಲ್ಲಿ ಹುಡುಗಿಯರ ಮೇಲಿನ ಅತ್ಯಾಚಾರ, ಮಾದಕ ವಸ್ತುಗಳ ಸೇವನೆ, ಬ್ರೈನ್ ವಾಷ್, ಬಲಾತ್ಕಾರ, ಮಾನವ ಕಳ್ಳಸಾಗಾಣಿಕೆ ಮತ್ತು ಮೇಲಿಂದ ಮೇಲೆ ಜನರಿಂದ ಬಲಾತ್ಕಾರ ಮತ್ತು ಬಲವಂತವಾಗಿ ನಡೆಸಲಾಗುವ ಗರ್ಭಧಾರಣೆ ಹಾಗೆಯೇ ಮಗುವಿಗೆ ಜನ್ಮನೀಡಿದ ಬಳಿಕ ಅದನ್ನು ಕಸಿದುಕೊಳ್ಳುವುದು ಮತ್ತು ಬಳಿಕ ಅವಳನ್ನು ಆತ್ಮಾಹುತಿ ಬಾಂಬರ್ ಆಗಿ ಪರಿವರ್ತಿಸುವುದು ಇತ್ಯಾದಿ ಗಂಭೀರ ಸಮಸ್ಯೆಗಳ ವಿಷಯದಲ್ಲಿ ವ್ಯಾಖ್ಯಾನಿಸಲಾಗಿದೆ. ಹೀಗಿರುವಾಗ ಕೆಲವರು `ಇದು ಅಪಪ್ರಚಾರವಾಗಿದೆ’ ಎಂದು ಹೇಳುತ್ತಿದ್ದಾರೆ ಅಥವಾ ಕಣ್ಮರೆಯಾಗಿರುವ ಹುಡುಗಿಯರ ಅಂಕಿ-ಅಂಶಗಳ ವಿಷಯದಲ್ಲಿ ಚರ್ಚೆ ಮಾಡುವುದಿದ್ದರೆ, ಅದರ ಬದಲು ಹುಡುಗಿಯರು ಕಣ್ಮರೆಯಾಗಿರುವ ಬಗ್ಗೆ ಚರ್ಚಿಸಿರಿ.
(ಸೌಜನ್ಯ : Bharat Tak)
ಬಳಿಕ ಅಂಕಿ-ಅಂಶಗಳ ವಿಷಯದಲ್ಲಿ ಮಾತನಾಡಿರಿ ಎಂದು `ದಿ ಕೇರಳ ಸ್ಟೋರಿ’ ಈ ಚಲನಚಿತ್ರ ನಟಿ ಅದಾ ಶರ್ಮಾ ಇವರು ಟ್ವಿಟರ್ ನಲ್ಲಿ ವಿಡಿಯೋ ಪೋಸ್ಟ ಮಾಡಿ ಹೇಳಿಕೆ ನೀಡಿದ್ದಾರೆ. `ದಿ ಕೇರಳ ಸ್ಟೋರಿ’ ಚಲನಚಿತ್ರವು ಮೇ 5 ರಂದು ಪ್ರದರ್ಶನಗೊಳ್ಳಲಿದೆ. ಅದಕ್ಕೂ ಮೊದಲೇ ಈ ಚಲನಚಿತ್ರಕ್ಕೆ ವಿರೋಧವನ್ನು ವ್ಯಕ್ತಪಡಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವರು ಮಾತನಾಡುತ್ತಿದ್ದರು.