ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ರಸ್ತೆ ಅಡ್ಡಗಟ್ಟಿ ನಮಾಜು ಮಾಡುವುದು ಧಾರ್ಮಿಕವಲ್ಲ, ಶಕ್ತಿಪ್ರದರ್ಶನವೇ ಆಗಿದೆ, ಎಂದು ಹಿಂದೂಗಳಿಗೆ ಅನಿಸುತ್ತದೆ !
ಜಯಪುರ-ದೆಹಲಿ ಮಹಾಮಾರ್ಗದಲ್ಲಿ ಈದ್‌ನ ದಿನ ಮುಸಲ್ಮಾನರು ರಸ್ತೆಯಲ್ಲಿ ನಮಾಜು ಪಠಣಮಾಡಿದರು. ಅದರಿಂದ ೫ ಕಿಲೋಮೀಟರ್‌ನಷ್ಟು ದೂರ ರಸ್ತೆ ತಡೆಯಾಗಿತ್ತು. ಈ ವಿಷಯದಲ್ಲಿ ಪ್ರಸಾರವಾದ ಕೆಲವು ವಿಡಿಯೋಗಳಲ್ಲಿ ಉಪಸ್ಥಿತರ ಸಂಖ್ಯೆಯನ್ನು ನೋಡಿದರೆ ಇದು ಇರಾಕ್ ಅಥವಾ ಸಿರಿಯಾದಲ್ಲಿ ನಡೆಯುತ್ತಿದೆಯೇ ಎಂದು ಅನಿಸಬಹುದು; ಆದರೆ ಇದು ಭಾರತದಲ್ಲಿಯೇ ನಡೆಯುತ್ತಿದೆ, ಎಂಬುದನ್ನು ತಿಳಿದುಕೊಳ್ಳಬೇಕು. ಮೇರಠ್‌ನ (ಉತ್ತರಪ್ರದೇಶದ) ಈದ್ಗಾ ಚೌರಾಹದಲ್ಲಿಯೂ ರಸ್ತೆ ತಡೆಗಟ್ಟಿ ನಮಾಜು ಮಾಡಲಾಯಿತು. ವಿಶೇಷವೆಂದರೆ ಭಾರತದ ಅನೇಕ ಸ್ಥಳಗಳಲ್ಲಿ ನಮಾಜು ಮಾಡುವ ಇಂತಹ ಘಟನೆಗಳು ಕೇವಲ ಈದ್‌ನ ದಿನವೇ ಅಲ್ಲ, ಇತರ ದಿನಗಳಲ್ಲಿಯೂ ನಡೆಯುತ್ತದೆ. ಅದರ ವಾರ್ತೆ ಹಾಗೂ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತದೆ. ಕೆಲವರು ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾರೆ ಹಾಗೂ ಆ ಮೇಲೆ ಏನೂ ಆಗುವುದಿಲ್ಲ.
ಮುಸಲ್ಮಾನರ ‘ಹುಕೂಮತ್’ !
ಭಾರತದಲ್ಲಿ ನಮಾಜು ಮಾಡಲು ಮಸೀದಿಗಳ ವಿಚಾರ ಮಾಡಿದರೆ, ಕೆಲವು ಕಡೆಗಳಲ್ಲಿ ಅವುಗಳ ಸಂಖ್ಯೆ ಅವರ ಜನಸಂಖ್ಯೆಯ ತುಲನೆಯಲ್ಲಿ ಹೆಚ್ಚು ಪ್ರಮಾಣದಲ್ಲಿದೆ. ವೆರಾವಳ ಹಾಗೂ ಪ್ರಯಾಗರಾಜ ಜಂಕ್ಶನ್ ಈ ರೈಲ್ವೇ ನಿಲ್ದಾಣಗಳ ಫ್ಲಾಟ್‌ಫಾರ್ಮ್‌ನಲ್ಲಿಯೆ ಮಸೀದಿಗಳಿವೆ. ಡ್ರೋನ್ ಕೆಮೆರಾದ ಮೂಲಕ ತೆಗೆದ ದೆಹಲಿಯಲ್ಲಿನ ಜಾಮಾ ಮಸೀದಿಯ ಛಾಯಾಚಿತ್ರಗಳಲ್ಲಿ ಮಸೀದಿಯ ಪರಿಸರದಲ್ಲಿ ಮತ್ತು ಒಳಗೆ ತುಂಬಾ ಸ್ಥಳವಿರುವುದು ಕಾಣಿಸುತ್ತದೆ, ಆದರೂ ಮುಸಲ್ಮಾನರು ದೊಡ್ಡ ಸಂಖ್ಯೆಯಲ್ಲಿ ಮಸೀದಿಯ ಪಕ್ಕದ ರಸ್ತೆಗಳಲ್ಲಿ ನಮಾಜು ಮಾಡುವುದು ಕಾಣಿಸುತ್ತದೆ. ಉತ್ತರ ಭಾರತದ ಒಂದು ರಾಜ್ಯದಲ್ಲಿ ಒಂದು ನಿವಾಸಿ ಸಂಕೀರ್ಣದಲ್ಲಿರುವ ಖಾಲಿ ಸ್ಥಳದಲ್ಲಿ ನಮಾಜು ಮಾಡಲಾಗುತ್ತಿತ್ತು, ಅಲ್ಲಿನ ನಿವಾಸಿಗಳು ಆಕ್ಷೇಪವೆತ್ತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರ ಅದನ್ನು ನಿಲ್ಲಿಸಲಾಯಿತು; ಜಮ್ಮು-ಕಾಶ್ಮೀರದಲ್ಲಿನ ಮಾರ್ತಂಡ ಸೂರ್ಯ ಮಂದಿರದಲ್ಲಿ ಹಿಂದೂಗಳಿಗೆ ಪೂಜೆ ಮಾಡಲು ಭಾರತೀಯ ಪುರಾತತ್ವ ವಿಭಾಗ ನಿರಾಕರಿಸಿತ್ತು; ಆದರೆ ಅಲ್ಲಿ ಈದ್‌ನ ದಿನ ಮತಾಂಧರು ಪಟಾಕಿಗಳನ್ನು ಸಿಡಿಸಿದರು.
ಮುಸಲ್ಮಾನರಿಗೆ ನಮಾಜು ಮಾಡಲಿಕ್ಕಿದೆಯೆ ಅಥವಾ ಅದರ ಮರೆಂiಲ್ಲಿ ಶಕ್ತಿಪ್ರದರ್ಶನ ಮಾಡಲಿಕ್ಕಿದೆಯೆ ? ಆಡಳಿತದವರು, ಪೊಲೀಸರು ಅವರ ಈ ವರ್ತನೆಯ ಬಗ್ಗೆ ಏನೂ ಆಕ್ಷೇಪವೆತ್ತುವುದಿಲ್ಲ; ಏಕೆಂದರೆ ಯಾರೂ ಆಕ್ಷೇಪವೆತ್ತುವುದಿಲ್ಲವೆಂದು ಅವರಿಗೂ ತಿಳಿದಿದೆ. ಆದ್ದರಿಂದ ಸಮೂಹಶಕ್ತಿಯ ಪ್ರಭಾವದಿಂದ ಇವೆಲ್ಲವೂ ನಡೆಯುತ್ತದೆ, ಎಂಬುದು ಬಹುಸಂಖ್ಯಾತ ಹಿಂದೂಗಳಿಗೆ ಅರಿವಾಗುತ್ತದೆ. ಭಾರತದಲ್ಲಿ ಮುಸಲ್ಮಾನರು ಕೇವಲ ಹೆಸರಿಗೆ ಮಾತ್ರ ಅಲ್ಪಸಂಖ್ಯಾತರಾಗಿದ್ದಾರೆ. ಇಲ್ಲಿ ಅವರ ಸ್ವೇಚ್ಛಾಚಾರ ಮುಚ್ಚುಮರೆಯಿಲ್ಲದೆ ನಡೆಯುತ್ತದೆ ಹಾಗೂ ಯಾರಾದರೂ ಅದಕ್ಕೆ ಆಕ್ಷೇಪವೆತ್ತಿದರೆ ಅವರ ಸಮಾಜದವರು ಒಗ್ಗಟ್ಟಾಗಿ ಹೊಡೆದಾಟಕ್ಕೂ ಸಿದ್ಧರಿದ್ದಾರೆ ! ರಾಮನವಮಿ, ಹನುಮಾನ ಜಯಂತಿ ಅಥವಾ ಇತರ ಧಾರ್ಮಿಕ ಉತ್ಸವಗಳ ಸಮಯದಲ್ಲಿ ಮಸೀದಿಯ ಸಮೀಪದಿಂದ ಮೆರವಣಿಗೆ ಸಾಗಿದರೂ ಮತಾಂಧರಿಗೆ ಅದು ಸಹನೆಯಾಗುವುದಿಲ್ಲ ಹಾಗೂ ಅವರು ಮೆರವಣಿಗೆಯ ಮೇಲೆ ಕಲ್ಲುತೂರಾಟ ಮಾಡುತ್ತಾರೆ, ಅಂಗಡಿಗಳಿಗೆ ಬೆಂಕಿ ಹಚ್ಚುತ್ತಾರೆ, ಮೂರ್ತಿಯ ವಿಡಂಬನೆ ಮಾಡುತ್ತಾರೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಕೇವಲ ಮಸೀದಿಯೆ ಅಲ್ಲ, ಅದರ ಸುತ್ತಮುತ್ತಲಿನ ಪರಿಸರದಲ್ಲಿಯೂ ತಮ್ಮದೇ ‘ಹುಕೂಮತ್’ ನಡೆಯುತ್ತದೆ, ಎಂಬುದನ್ನು ತೋರಿಸಲು ಅವರು ಪ್ರಯತ್ನಿಸುತ್ತಿದ್ದಾರೆಂದು ಅನಿಸುತ್ತದೆ.
ರಮ್ಝಾನ್‌ನಲ್ಲಿಯೂ ಅಪರಾಧ
ಒಂದೆಡೆ ‘ರಮ್ಝಾನ್‌ನ ಪವಿತ್ರ ತಿಂಗಳಾಗಿರುವರಿಂದ ಮುಸಲ್ಮಾನರು ಯಾವುದೇ ತಪ್ಪು ಕೃತಿ ಮಾಡುವುದಿಲ್ಲ’, ಎಂದು ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಅನಿಸುತ್ತದೆ; ಆದರೆ ರೋಜಾ (ಉಪವಾಸ) ನಡೆಯುತ್ತಿರುವಾಗ ದಿನಾಜಪುರ (ಬಂಗಾಲ)ದಲ್ಲಿ ಅಪ್ರಾಪ್ತ ವಯಸ್ಸಿನ ಹಿಂದೂ ಹುಡುಗಿಯನ್ನು ಅವಳ ಮುಸಲ್ಮಾನ ಮಿತ್ರ ಹಾಗೂ ಅವನ ಇತರ ಮಿತ್ರರು ಸಾಮೂಹಿಕವಾಗಿ ಬಲಾತ್ಕರಿಸಿ ಅವಳನ್ನು ಕ್ರೂರವಾಗಿ ಕೊಲೆ ಮಾಡಿದರು. ಬಂಗಾಲ ಪೊಲೀಸರು ಅವಳ ಶವವನ್ನು ಸರೋವರದಿಂದ ಹೊರಗೆ ತೆಗೆದು ಅದನ್ನು ನೇರವಾಗಿ ರಸ್ತೆಯ ಮೇಲೆ ಎಳೆಯುತ್ತಾ ತೆಗೆದುಕೊಂಡು ಹೋದರು. ಒಂದು ಹುಡುಗಿಯ ಮೇಲೆ ಮತಾಂಧರು ಬಲಾತ್ಕರಿಸಿ ಅವಳನ್ನು ಕೊಲೆ ಮಾಡಿರುವಾಗ ಅವಳ ಶವವನ್ನು ಹೀಗೆ ಎಳೆದುಕೊಂಡು ಹೋಗುವ ಬಂಗಾಲ ಪೊಲೀಸರ ಮಾನಸಿಕತೆ ಹೇಗಿರಬಹುದು ? ಮೃತದೇಹವನ್ನು ಹೇಗೆ ಸಾಗಿಸಬೇಕು ಎಂಬುದರ ತರಬೇತಿ ಪೊಲೀಸರಿಗಿಲ್ಲವೇ ? ‘ಇದು ಬಂಗಾಲ ಪೊಲೀಸರ ಅಮಾನವೀಯತೆ ಮಾತ್ರವಲ್ಲ; ಹಿಂದೂಗಳ ಕುರಿತಾಗಿರುವ ದ್ವೇಷ ಎಂದು ಹಿಂದೂಗಳಿಗೆ ಅನಿಸುತ್ತದೆ. ರಮ್ಝಾನ್‌ನ ತಿಂಗಳಲ್ಲಿಯೆ ಬಿಹಾರದಲ್ಲಿ ಶುಕ್ರವಾರದ ನಮಾಜಿನ ನಂತರ ‘ಅತೀಕ್-ಅಶ್ರಫ್ ಅಮರ ರಹೆ, ಯೋಗಿ ಮುರ್ದಾಬಾದ್’, ಎಂದು ಘೋಷಣೆ ನೀಡಲಾಯಿತು. ಕೇರಳದಲ್ಲಿ ಒಬ್ಬ ಮತಾಂಧನು ರೈಲ್ವೆಗೆ ಬೆಂಕಿ ಹಚ್ಚಿ ಕೆಲವು ಪ್ರವಾಸಿಗಳನ್ನು ಕೊಂದನು. ಸದ್ಯ ಒಂದು ಜಾಹೀರಾತು ಪ್ರಸಾರವಾಗುತ್ತಿದೆ. ಒಬ್ಬ ಮುಸಲ್ಮಾನ ಯುವಕ ನಮಾಜು ಮಾಡುವಾಗ ಸೀರೆ ಉಟ್ಟಿರುವ ಹಿಂದೂ ಹುಡುಗಿ ಅವನ ಸಮೀಪ ಬರುತ್ತಾಳೆ. ಆಗ ಅವನು ಅವಳಿಗೆ ಪಂಜಾಬಿ ಉಡುಪನ್ನು ನೀಡುತ್ತಾನೆ, ನಂತರದ ದೃಶ್ಯದಲ್ಲಿ ‘ಅವನು ಅವಳ ಹಣೆಯಲ್ಲಿದ್ದ ಟಿಕಲಿ (ಬೊಟ್ಟನ್ನು) ತೆಗೆಯುತ್ತಾನೆ ಹಾಗೂ ತಲೆಯ ಮೇಲೆ ಸೆರಗನ್ನು ಹಾಕಿಕೊಳ್ಳಲು ಹೇಳಿ ನಂತರ ಅವಳನ್ನು ಸ್ವೀಕರಿಸುತ್ತಾನೆ’, ಈ ರೀತಿ ತೋರಿಸಲಾಗಿದೆ. ಈ ಜಾಹೀರಾತನ್ನು ಈಗಲೇ ಏಕೆ ಪ್ರದರ್ಶಿಸಲಾಯಿತು ? ಇದರಿಂದ ಮತಾಂಧರಿಗೆ ‘ಈದ್‌ನ ಸಮಯದಲ್ಲಿ ಹಿಂದೂ ಹುಡುಗಿಯರನ್ನು ಪ್ರೇಮಜಾಲದಲ್ಲಿ ಸಿಲುಕಿಸಿ ಅವರನ್ನು ಮತಾಂತರಿಸಿ’, ಎಂಬ ಸಂದೇಶವನ್ನು ನೀಡಲಿಕ್ಕಿದೆಯೆ ?
ಮುಸಲ್ಮಾನರಿಗೆ ‘ನೀವು ರಸ್ತೆಯ ಮೇಲೆ ಏಕೆ ನಮಾಜು ಮಾಡುತ್ತೀರಿ ? ಎಂದು ಕೇಳಬೇಕು’, ಎಂದು ಮುಸಲ್ಮಾನ ವಿದ್ವಾಂಸ ಡಾ. ಸಯ್ಯದ್ ರಿಝವಾನ್ ಇವರು ಹೇಳಿದರು. ಇನ್ನೊಬ್ಬರು ವಿಚಾರವಂತರು ಹೇಳಿದರು, “ಭಾರತದಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮುಸಲ್ಮಾನರು ಈದ್ ಆಚರಿಸುತ್ತಾರೆ, ಆದರೆ ಯಾವ ಹಿಂದೂ ಕೂಡ ಅದಕ್ಕೆ ಆಕ್ಷೇಪವೆತ್ತಿದ ಅಥವಾ ಹಬ್ಬ ಆಚರಿಸಲು ಅಡಚಣೆ ಮಾಡಿರುವುದು ಕಾಣಿಸುತ್ತದೆಯೆ ?
ಹಿಂದೂಗಳ ಉತ್ಸವಗಳ ಸಮಯದಲ್ಲಿ ಮಾತ್ರ ಹಾಗಾಗುವುದಿಲ್ಲ. ಭಾರತದ ಮುಸಲ್ಮಾನ ವಿದ್ವಾಂಸರು, ವಿಚಾರವಂತರಿಗೆ ಹಾಗನಿಸುತ್ತದೆ. ಅರಬ ಹಾಗೂ ಇತರ ಮುಸಲ್ಮಾನ ದೇಶಗಳಿಗೆ ಮಾತ್ರ ‘ಭಾರತದಲ್ಲಿ ಮುಸಲ್ಮಾನರು ಅಸುರಕ್ಷಿತರಾಗಿದ್ದಾರೆ’, ಎಂದು ಅನಿಸುತ್ತದೆ.”
ವಕ್ಫ್‌ನ ಭೂಮಿಯಲ್ಲಿ ನಮಾಜು ಮಾಡುವುದಿಲ್ಲವೇಕೆ ?
ಈಗ ವಕ್ಫ್ ಬೋರ್ಡ್‌ನ ವಶದಲ್ಲಿ ೮ ಲಕ್ಷಕ್ಕಿಂತಲೂ ಹೆಚ್ಚು ಎಕರೆ ಭೂಮಿ ಇದೆ. ಮುಸಲ್ಮಾನರಿಗೆ ಸ್ಥಳ ಕಡಿಮೆಯಾಗುತ್ತಿದ್ದರೆ, ಅವರು ವಕ್ಫ್‌ನ ಭೂಮಿಯಲ್ಲಿ ಈದ್‌ನ ನಮಾಜು ಯಾಕೆ ಮಾಡುವುದಿಲ್ಲ ? ಹಿಂದೂಗಳ ಲಕ್ಷಗಟ್ಟಲೆ ಸಾಮೂಹಿಕ ಸಮಾರಂಭಗಳು, ಉತ್ಸವಗಳು ಮೈದಾನದಲ್ಲಿ ನಡೆಯುತ್ತವೆ, ಎಲ್ಲಿಯೂ ರಸ್ತೆಗಳನ್ನು ಅಡ್ಡಗಟ್ಟಿ ನಡೆಯುವುದಿಲ್ಲ. ನಮಾಜು ಮಾಡುವ ನೆಪದಲ್ಲಿ ರಸ್ತೆಗಿಳಿದು ಶಕ್ತಿಪ್ರದರ್ಶನ, ಹಿಂದೂ ಹುಡುಗಿಯರ ಅತ್ಯಾಚಾರ, ಅವರ ಮತಾಂತರಿಸುವ ಪ್ರಯತ್ನ ಹಾಗೂ ಅಪರಾಧ ಮಾಡುವುದು, ಇದು ಹಿಂದೂಗಳ ಮೇಲಿನ ವಿವಿಧ ಆಘಾತಗಳಾಗಿವೆ. ಇದನ್ನು ಈಗಲೇ ತಡೆಯದಿದ್ದರೆ ನಾಳೆ ಹಿಂದೂಗಳಿಗೆ ನಡೆದಾಡಲು ಹಾಗೂ ಬದುಕಲೂ ಕಠಿಣವಾಗಬಹುದು, ಎಂಬುದನ್ನು ಗಮನಿಸಿ ಆಡಳಿತದವರು ಮತ್ತು ಪೊಲೀಸರು ಅವುಗಳಿಗೆ ಕಡಿವಾಣ ಹಾಕಿ ಮುಸಲ್ಮಾನರಿಗೆ ಅರಿವು ಮೂಡಿಸುವುದು ಆವಶ್ಯಕವಾಗಿದೆ !