ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಹಿಂದೂ ಜನಜಾಗೃತಿ ಸಮಿತಿ ಒತ್ತಾಯ
ಹಂಪಿ : ವಿಶ್ವವಿಖ್ಯಾತ ಹಂಪಿಯ ಯಂತ್ರೋದ್ಧಾರಕ ಆಂಜನೇಯಸ್ವಾಮಿ ದೇವಸ್ಥಾನದ ಎದುರಿನ ಪ್ರಭು ಶ್ರೀರಾಮ, ಸೀತಾ ಮಾತೆ, ಮಾರುತಿಯ ದೇವಸ್ಥಾನದ ಆವರಣದಲ್ಲಿ ಕಳೆದ ಮಂಗಳವಾರ ಕೆಲ ಮುಸಲ್ಮಾನರು ಮಾಂಸಾಹಾರ ಸೇವನೆ ಮಾಡುತ್ತಿರುವ ಖೇಧಕರ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯ ವಿಡಿಯೋ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಮೋಹನ್ ಗೌಡ ಇವರು ಟ್ವಿಟ ಮಾಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ಈ ಘಟನೆಯ ವಿರುದ್ಧ ಸಾವಿರಾರು ಹಿಂದೂಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಘಟನೆಯ ಬಗ್ಗೆ ಶ್ರೀ. ಗೌಡ ಇವರು, ಘಟನೆಗೆ ಸಂಬಂಧಪಟ್ಟ ತಪ್ಪಿತಸ್ಥರ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಬೇಕು ಹಾಗೂ ಹಿಂದೂ ದೇವಸ್ಥಾನಗಳಿಗೆ ಅನ್ಯಮತೀಯರಿಗೆ ಪ್ರವೇಶವನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಟ್ವಿಟ್ ಮೂಲಕ ವಿಜಯನಗರ ಜಿಲ್ಲಾ ಪೊಲೀಸ್ ಹಾಗೂ ಭಾರತ ಪುರಾತತ್ವ ಇಲಾಖೆಗೆ ಮನವಿ ಮಾಡಿದ್ದಾರೆ.
ವಿಜಯನಗರ ಸಾಮ್ರಾಜ್ಯದ ವಂಶದ ಶ್ರೀಕೃಷ್ಣದೇವರಾಜ ಇವರಿಂದ ವಿರೋಧ !ಅದಲ್ಲದೇ ಘಟನೆಗೆ ವಿಜಯನಗರ ಸಾರ್ಮಾಜ್ಯದ ವಂಶಜರಾದ ಶ್ರೀಕೃಷ್ಣದೇವರಾಯರು ಟ್ವಿಟ್ ಮಾಡಿ, ಈ ಘಟನೆಯನ್ನು ಖಂಡಿಸಿ, ಹಂಪಿಯ ಪಾವಿತ್ರ್ಯತೆ ಕಾಪಾಡಬೇಕು ಮತ್ತು ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ. |
The sanctity of the Temples in Hampi has to be maintained. Appropriate action has to be taken. https://t.co/qj5fVVVKfi
— Krishna Devaraya (@Krishnadr) April 24, 2023
ಈ ಘಟನೆಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಕೂಡಲೇ ಅಪರಾಧಿಗಳನ್ನು ಬಂಧಿಸಬೇಕು, ಅನ್ಯ ಸಮುದಾಯದವರಿಗೆ ಪ್ರವೇಶ ನಿರಾಕರಣೆ ಮಾಡಬೇಕು, , ವಸ್ತ್ರಸಂಹಿತೆ ಜಾರಿ ಮಾಡಬೇಕು ಹಾಗೂ ಹಂಪಿಯ ಪಾವಿತ್ರ್ಯವನ್ನು ಉಳಿಸಬೇಕು ಎಂದು ಆಗ್ರಹಿಸಿದ್ದಾರೆ.
Shocking news…
Today we visited Hampi & we found that Muslims are carrying, eating non veg, Biriyani in Chakradhar hanuman temple , Hampi, Karnataka.We request @VJNPOLICE@ASIGoI to take legal action against culprits & kindly prohibit non Hindus inside the temples of Hampi. pic.twitter.com/yBM44ngG7O
— 🚩Mohan gowda🇮🇳 (@Mohan_HJS) April 24, 2023
ಸಂಪಾದಕರ ನಿಲುವುದೇವಸ್ಥಾನಗಳ ಪಾವಿತ್ರ್ಯವನ್ನು ಹಾಳುಗೆಡವುವ ಘಟನೆಗಳು ಆಗಾಗ ನಡೆಯುತ್ತಿರುವುದು ಹಿಂದೂಗಳಿಗೆ ನಾಚಿಕೆಗೇಡು! ಹಿಂದೂಗಳು ಮಲಗಿರುವುದರಿಂದಲೇ ಯಾರೋ ಬಂದು ಹಿಂದೂಗಳ ಶ್ರದ್ಧಾಸ್ಥಾನಗಳ ಮೇಲೆ ದಾಳಿ ಮಾಡುತ್ತಾರೆ. ಮಸೀದಿ ಅಥವಾ ಚರ್ಚ್‌ಗಳಲ್ಲಿ ಇಂತಹ ಘಟನೆಗಳು ನಡೆಯುವುದನ್ನು ನೀವು ಎಂದಾದರೂ ಕೇಳಿದ್ದೀರಾ ? |